ಇಡೀ ಭಾರತೀಯ ಚಿತ್ರರಂಗ ಬಹುನಿರೀಕ್ಷೆಯೊಂದಿಗೆ ಕಾಯುತ್ತಿರುವ ಸಿನಿಮಾ 'ಟಾಕ್ಸಿಕ್'. ರಾಕಿಂಗ್ ಸ್ಟಾರ್ ಯಶ್ ಮುಖ್ಯಭೂಮಿಕೆಯ ಈ ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬ ಮಾಹಿತಿ ಇದೆ. ಚಿತ್ರತಂಡ ಇನ್ನೂ ಸಂಪೂರ್ಣ ತಾರಾಗಣವನ್ನು ಘೋಷಿಸಿಲ್ಲವಾದರೂ, ಕಿಯಾರಾ ಅಡ್ವಾಣಿ ನಟಿಸುತ್ತಿರೋದು ಬಹುತೇಕ ಪಕ್ಕಾ ಆಗಿದೆ.
ನಿರಂತರವಾಗಿ ಚಿತ್ರೀಕರಣದಲ್ಲಿ, ಪ್ರಮೋಶನ್ನಂತಹ ತಮ್ಮ ಸಿನಿಮಾ ಈವೆಂಟ್ಗಳಲ್ಲಿ ಭಾಗಿಯಾದ ಹಿನ್ನೆಲೆ, ಸ್ಟಾರ್ ನಟಿಯ ಆರೋಗ್ಯದಲ್ಲಿ ಕೊಂಚ ಏರುಪೇರಾಗಿದೆ. ಹಾಗಾಗಿ ಕಿಯಾರಾ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ದಾಖಲು ಎಂಬ ಸುದ್ದಿ ಹರಿದಾಡುತ್ತಿದ್ದು, ನಟಿ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಈಟಿವಿ ಭಾರತಕ್ಕೆ ಲಭ್ಯವಾಗಿದೆ.
ಬಹುನಿರೀಕ್ಷಿತ ಟಾಕ್ಸಿಕ್ ಚಿತ್ರದ ಮುಖ್ಯಭೂಮಿಕೆಯಲ್ಲಿ ಕೆಜಿಎಫ್ ಸ್ಟಾರ್ ಯಶ್ ನಟಿಸುತ್ತಿದ್ದಾರೆಂಬುದಷ್ಟೇ 2023ರ ಅಂತ್ಯದಲ್ಲಿ ಘೋಷಣೆಯಾಗಿತ್ತು. ಅದಾದ ನಂತರ ನಟಿಯರ ಕುರಿತು ವದಂತಿಗಳು ಹಬ್ಬಿದವು. ಯಶ್ ಜೊತೆ ಕೇಳಿಬಂದ ಹೆಸರುಗಳ ಪೈಕಿ ಕಿಯಾರಾ ಅಡ್ವಾಣಿ ಕೂಡಾ ಒಂದು. ಬಳಿಕ, 2024ರ ನವೆಂಬರ್ 10ರಂದು ಸ್ಟಾರ್ ಕಲಾವಿದರು ಮುಂಬೈನ ವರ್ಸೋವಾ ಬೀಚ್ ಬಳಿ ಒಟ್ಟಿಗೆ ಕಾಣಿಸಿಕೊಂಡ ಹಿನ್ನೆಲೆ, ಈ ಸಿನಿಮಾದಲ್ಲಿ ತೆರೆಹಂಚಿಕೊಂಡಿರೋದು ಬಹುತೇಕ ಪಕ್ಕಾ ಆಗಿದೆ. ಅದು ಚಿತ್ರೀಕರಣದ ಸ್ಥಳವಾಗಿತ್ತು.
ಪ್ರಸ್ತುತ, 'ಗೇಮ್ ಚೇಂಜರ್' ಪ್ರಮೋಶನ್ನಲ್ಲಿ ಭಾಗಿಯಾಗಿರುವ ನಟಿ ಕಿಯಾರಾ ಅಡ್ವಾಣಿ ನಿಜವಾಗಿಯೂ ಆಸ್ಪತ್ರೆಗೆ ದಾಖಲಾಗಿದ್ದಾರೆಯೇ?. ಇಂದು, (ಜನವರಿ 4) ಮುಂಬೈನಲ್ಲಿ 'ಗೇಮ್ ಚೇಂಜರ್' ಪ್ರಚಾರಕ್ಕಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈವೆಂಟ್ನಲ್ಲಿ ರಾಮ್ ಚರಣ್ ಮತ್ತು ಕಿಯಾರಾ ಅಡ್ವಾಣಿ ಸೇರಿದಂತೆ ತಂಡದ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದ್ರೆ, ಇಂದು ಬೆಳಗ್ಗೆ ಕಿಯಾರಾ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಸುದ್ದಿ ಹರಡಿತು. ಆದ್ರೆ ಈ ಬಗ್ಗೆ ಅವರ ಪಿಆರ್ಒ ಸ್ಪಷ್ಟನೆ ನೀಡಿದೆ.
ಕಿಯಾರಾ ಅಡ್ವಾಣಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿಲ್ಲ ಎಂದು ಮಾಹಿತಿ ಒದಗಿಸಿದ್ದಾರೆ. ನಿರಂತರ ಕೆಲಸ ಮಾಡಿದ್ದರಿಂದ ಆಯಾಸಗೊಂಡಿರುವ ನಟಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಅದರಂತೆ ಅವರು ಮನೆಯಲ್ಲಿ ರೆಸ್ಟ್ ತೆಗೆದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಸಂಧ್ಯಾ ಥಿಯೇಟರ್ ಪ್ರಕರಣ: ನಟ ಅಲ್ಲು ಅರ್ಜುನ್ಗೆ ಜಾಮೀನು ಮಂಜೂರು
ಕಿಯಾರಾ ಆರೋಗ್ಯದಲ್ಲಿ ಏರುಪೇರಾಗಿರುವ ಕಾರಣ ಇಂದಿನ 'ಗೇಮ್ ಚೇಂಜರ್' ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ನಟ ನಿತಿನ್ ತಿಳಿಸಿದ ಹಿನ್ನೆಲೆ ಕಿಯಾರಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವದಂತಿ ಹರಡಿತು.
ಇದನ್ನೂ ಓದಿ: ಟಾಕ್ಸಿಕ್, ಕಾಂತಾರ 2, ಸಂಜು ವೆಡ್ಸ್ ಗೀತಾ 2..: 2025ರಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಚಿತ್ರಗಳಿವು
ರಾಮ್ ಚರಣ್ ಮತ್ತು ಕಿಯಾರಾ ಅಡ್ವಾಣಿ ಅಭಿನಯದ 'ಗೇಮ್ ಚೇಂಜರ್' ಇನ್ನೇನು ಕೆಲವೇ ದಿನಗಳಲ್ಲಿ ತೆರೆಗಪ್ಪಳಿಸಲಿದೆ. ಶಂಕರ್ ನಿರ್ದೇಶನದ ಈ ಪೊಲಿಟಿಕಲ್ ಡ್ರಾಮಾ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಚಿತ್ರ ತನ್ನ ಸೆನ್ಸಾರ್ಶಿಪ್ ಪ್ರಕ್ರಿಯೆ ಪೂರ್ಣಗೊಳಿಸಿದೆ. ಕೆಲ ಬದಲಾವಣೆಗಳ ನಂತರ, ಸೌತ್ ಸೂಪರ್ ಸ್ಟಾರ್ನ ಸಿನಿಮಾ ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣ ಪತ್ರ ಸ್ವೀಕರಿಸಿದೆ. ಚಿತ್ರದ ರನ್ಟೈಮ್ 2 ಗಂಟೆ 45 ನಿಮಿಷಗಳು. 'ಗೇಮ್ ಚೇಂಜರ್' ಇದೇ ಜನವರಿ 10ರಂದು ಬಿಡುಗಡೆಗೆಯಾಗಲಿದೆ.