ETV Bharat / international

ಸುಂದರ್​ ಪಿಚೈ ಜತೆ ಪ್ರಧಾನಿ ಸಂವಾದ: ಭಾರತದಲ್ಲಿ AIನ ನಂಬಲಸಾಧ್ಯವಾದ​​​​ ಅವಕಾಶಗಳ ಕುರಿತು ಚರ್ಚೆ - SUNDAR PICHAI MEET PM MODI

ಪ್ರಧಾನಿ ಮೋದಿ ಅವರು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ AI ಆಕ್ಷನ್ ಶೃಂಗಸಭೆಯ ಸಹ-ಅಧ್ಯಕ್ಷತೆ ವಹಿಸಿದ್ದರು.

Google CEO Sundar Pichai 'delighted' to meet PM Modi, discusses "incredible" opportunities
ಸುಂದರ್​ ಪಿಚೈ ಜತೆ ಪ್ರಧಾನಿ ಸಂವಾದ: ಭಾರತದಲ್ಲಿ AIನ ಇನ್​​​​​ ಕ್ರೆಡಿಬಲ್​​​​ ಅವಕಾಶಗಳ ಬಗ್ಗೆ ಚರ್ಚೆ (IANS)
author img

By ETV Bharat Karnataka Team

Published : Feb 12, 2025, 7:21 AM IST

ಪ್ಯಾರಿಸ್, ಫ್ರಾನ್ಸ್​: ಪ್ಯಾರಿಸ್‌ನಲ್ಲಿ ನಡೆದ ಎಐ ಆಕ್ಷನ್ ಶೃಂಗಸಭೆಯ ಹಿನ್ನೆಲೆಯಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಕೃತಕ ಬುದ್ಧಿಮತ್ತೆ (ಎಐ) ಭಾರತಕ್ಕೆ ತರಲಿರುವ ಇನ್​​ ಕ್ರೆಡಿಬಲ್​ ಅವಕಾಶಗಳೇನು ಎಂಬುದನ್ನು ವಿವರಿಸಿದ್ದಾರೆ.

ದೇಶದ ಡಿಜಿಟಲ್ ರೂಪಾಂತರವನ್ನು ಮುನ್ನಡೆಸಲು ಗೂಗಲ್ ಮತ್ತು ಭಾರತದ ನಡುವಿನ ನಿಕಟ ಸಹಯೋಗದ ಸಾಮರ್ಥ್ಯವನ್ನು ಸಹ ಆಲ್ಫಾಬೆಟ್ CEO ಗಮನಿಸಿದ್ದಾರೆ ಎಂದು ಪಿಚೈ ಹೇಳಿದ್ದಾರೆ. ಎಕ್ಸ್​​​​​ ನಲ್ಲಿ ಈ ಬಗ್ಗೆ ಪೋಸ್ಟ್​ ಮಾಡಿರುವ ಅವರು, ಎಐ ಆಕ್ಷನ್ ಶೃಂಗಸಭೆಗಾಗಿ ಇಂದು ಪ್ಯಾರಿಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದು ಸಂತಸ ತಂದಿದೆ. ಭಾರತಕ್ಕೆ AI ತರುವ ಅದ್ಭುತ ಅವಕಾಶಗಳು ಮತ್ತು ಭಾರತದ ಡಿಜಿಟಲ್ ರೂಪಾಂತರದಲ್ಲಿ ನಾವು ಒಟ್ಟಿಗೆ ಕೆಲಸ ಮಾಡುವ ವಿಧಾನಗಳ ಬಗ್ಗೆ ನಾವು ಚರ್ಚಿಸಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ಬೆಳವಣಿಗೆ ಮತ್ತು ಹೂಡಿಕೆ ಹೆಚ್ಚಳದ ವಿಶ್ವಾಸ: ಇದಕ್ಕೂ ಮುನ್ನ ಮಂಗಳವಾರ ಪ್ಯಾರಿಸ್‌ನಲ್ಲಿ ಭಾರತ - ಫ್ರಾನ್ಸ್ ಸಿಇಒಗಳ ವೇದಿಕೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಆರ್ಥಿಕ ಸಂಬಂಧಗಳನ್ನು ಬಲಪಡಿಸುವಲ್ಲಿ ಮತ್ತು ನಾವೀನ್ಯತೆ ಪೋಷಿಸುವಲ್ಲಿ ಈ ವೇದಿಕೆಯು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು. ಪ್ರಮುಖ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಲು ಭಾರತ ಮತ್ತು ಫ್ರಾನ್ಸ್‌ನ ವ್ಯಾಪಾರ ನಾಯಕರು ಒಟ್ಟಾಗಿ ಬರುತ್ತಿದ್ದಾರೆ ಎಂಬುದನ್ನು ಅವರು ಇದೇ ವೇಳೆ ಗಮನಿಸಿದರು, ಇದು ಭವಿಷ್ಯದ ಪೀಳಿಗೆಗೆ ಬೆಳವಣಿಗೆ ಮತ್ತು ಹೂಡಿಕೆಯನ್ನು ಹೆಚ್ಚಿಸುತ್ತದೆ ಎಂದು ನೀರಿಕ್ಷೆ ಹೊಂದಿದ್ದಾರೆ.

ಪ್ರಕಾಶಮಾನವಾದ ಮನಸುಗಳ ಜೋಡಣೆ: ಸಿಇಒಗಳ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಇದು ಕೇವಲ ವ್ಯಾಪಾರೋದ್ಯಮದ ಕಾರ್ಯಕ್ರಮವಲ್ಲ - ಇದು ಭಾರತ ಮತ್ತು ಫ್ರಾನ್ಸ್‌ನ ಪ್ರಕಾಶಮಾನವಾದ ಮನಸ್ಸುಗಳ ಜೋಡಣೆಯಾಗಿದೆ. ನೀವು ನಾವೀನ್ಯತೆ, ಸಹಯೋಗ ಮತ್ತು ಉನ್ನತಿಯ ಮಂತ್ರವನ್ನು ಅಳವಡಿಸಿಕೊಳ್ಳುತ್ತಿದ್ದೀರಿ, ಉದ್ದೇಶದೊಂದಿಗೆ ಪ್ರಗತಿಯನ್ನು ಕಾಣುತ್ತಿದ್ದೀರಿ. ಬೋರ್ಡ್‌ರೂಮ್ ಸಂಪರ್ಕಗಳನ್ನು ಹೊರತುಪಡಿಸಿ, ನೀವು ಭಾರತ ಮತ್ತು ಫ್ರಾನ್ಸ್ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಸಕ್ರಿಯವಾಗಿ ಬಲಪಡಿಸುತ್ತಿದ್ದೀರಿ ಎಂದು ಬಣ್ಣಿಸಿದರು.

ನಮ್ಮ ಸಂಬಂಧ ಆಳವಾದ ನಂಬಿಕೆ ಹೊಂದಿದೆ: ಭಾರತ ಮತ್ತು ಫ್ರಾನ್ಸ್ ಆಳವಾದ ನಂಬಿಕೆ ಮತ್ತು ಸಾಮಾನ್ಯ ಮೌಲ್ಯಗಳನ್ನು ಹೊಂದಿದ್ದು, ಅವುಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತವೆ. ಭಾರತ ಮತ್ತು ಫ್ರಾನ್ಸ್ ಕೇವಲ ಪ್ರಜಾಪ್ರಭುತ್ವದ ಮೌಲ್ಯಗಳಿಂದ ಸಂಪರ್ಕ ಹೊಂದಿಲ್ಲ. ಆಳವಾದ ನಂಬಿಕೆ, ನಾವೀನ್ಯತೆ ಮತ್ತು ಜನರ ಸೇವೆ ನಮ್ಮ ಸ್ನೇಹದ ಆಧಾರ ಸ್ತಂಭಗಳಾಗಿವೆ. ನಮ್ಮ ಸಂಬಂಧವು ಕೇವಲ ನಮ್ಮ ಎರಡು ರಾಷ್ಟ್ರಗಳಿಗೆ ಸೀಮಿತವಾಗಿಲ್ಲ. ಒಟ್ಟಿಗೆ, ನಾವು ಜಾಗತಿಕ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸಲು ಶ್ರಮಿಸುತ್ತಿದ್ದೇವೆ ಎಂದು ಪ್ರಧಾನಿ ಬಣ್ಣನೆ ಮಾಡಿದ್ದಾರೆ.

ಪ್ರಧಾನಿ ಮೋದಿ ಅವರು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ AI ಆಕ್ಷನ್ ಶೃಂಗಸಭೆಯ ಸಹ-ಅಧ್ಯಕ್ಷತೆ ವಹಿಸಿದ್ದರು.

ಒಂದು ವಾರದ ಅವಧಿಯ ಶೃಂಗಸಭೆಯು ಜಾಗತಿಕ ನಾಯಕರು, ನೀತಿ ನಿರೂಪಕರು ಮತ್ತು ಉದ್ಯಮ ತಜ್ಞರು ಭಾಗವಹಿಸಿದ ಉನ್ನತ ಮಟ್ಟದ ವಿಭಾಗದೊಂದಿಗೆ ಮುಕ್ತಾಯಗೊಂಡಿತು. ತಂತ್ರಜ್ಞಾನ ಮತ್ತು ಆವಿಷ್ಕಾರದಲ್ಲಿ ಭಾರತ ಮತ್ತು ಫ್ರಾನ್ಸ್ ನಡುವೆ ಬೆಳೆಯುತ್ತಿರುವ ಸಹಯೋಗವನ್ನು ಈ ಶೃಂಗ ಎತ್ತಿ ತೋರಿಸುತ್ತಿದೆ.

ಇದನ್ನು ಓದಿ: ಅಮೆರಿಕ ಪ್ರವಾಸಕ್ಕೂ ಮುನ್ನ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಜತೆ ಮೋದಿ ದ್ವಿಪಕ್ಷೀಯ ಮಾತುಕತೆ

ವಿದೇಶಿ ಅಧಿಕಾರಿಗಳಿಗೆ ಲಂಚ ನಿಷೇಧಿಸುವ ಕಾನೂನಿಗೆ ನಿರ್ಬಂಧ ಹೇರಿದ ಟ್ರಂಪ್

ಪ್ಯಾರಿಸ್​​​​ ನಲ್ಲಿ ಮೋದಿ: ಫ್ರೆಂಚ್​ ಅಧ್ಯಕ್ಷ ಎಮ್ಯಾನುಯೆಲ್​ ಮ್ಯಾಕ್ರನ್​​​​​​​​ ಭೇಟಿ, ಮಾತುಕತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.