ETV Bharat / international

ಅಮೆರಿಕ ಪ್ರವಾಸಕ್ಕೂ ಮುನ್ನ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಜತೆ ಮೋದಿ ದ್ವಿಪಕ್ಷೀಯ ಮಾತುಕತೆ - MODI TALKS WITH US JD VANCE

ಪ್ರಧಾನಿ ಮೋದಿ ಫೆಬ್ರವರಿ 12-13 ರಂದು ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ. ಅಧ್ಯಕ್ಷ ಟ್ರಂಪ್ ತಮ್ಮ ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡ ನಂತರ ಉಭಯ ನಾಯಕರ ನಡುವಿನ ಮೊದಲ ಭೇಟಿ ಇದಾಗಲಿದೆ.

PM Modi holds bilateral talks with US Vice President JD Vance
ಅಮೆರಿಕ ಪ್ರವಾಸಕ್ಕೂ ಮುನ್ನ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಜತೆ ಮೋದಿ ದ್ವಿಪಕ್ಷೀಯ ಮಾತುಕತೆ (IANS)
author img

By ETV Bharat Karnataka Team

Published : Feb 12, 2025, 6:57 AM IST

ಪ್ಯಾರಿಸ್,ಫ್ರಾನ್ಸ್​: ಪ್ಯಾರಿಸ್​​ ನಲ್ಲಿ ಎಐ ಶೃಂಗಸಭೆ ನಡೆಯಿತು. ಪ್ರಧಾನಿ ಸಮಾವೇಶದ ಸಹ - ಅಧ್ಯಕ್ಷತೆ ವಹಿಸಿಕೊಂಡಿದ್ದರು. ಮಂಗಳವಾರ ನಡೆದ ಎಐ ಶೃಂಗಸಭೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು. ಉಭಯ ರಾಷ್ಟ್ರಗಳ ನಡುವಿನ ವ್ಯೂಹಾತ್ಮಕ ಪಾಲುದಾರಿಕೆ ಬಲಪಡಿಸುವ ಕುರಿತು ಉಭಯ ನಾಯಕರು ಚರ್ಚಿಸಿದರು.

ಪಿಎಂ ಮೋದಿ ಸಭೆಯ ಒಳನೋಟಗಳ ಬಗ್ಗೆ ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಯುಎಸ್ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ಅವರ ಕುಟುಂಬದೊಂದಿಗೆ ನಾವು ಅದ್ಭುತವಾದ ಸಭೆ ನಡೆಸಿದ್ದೇವೆ. ವಿವಿಧ ವಿಷಯಗಳ ಕುರಿತು ಉತ್ತಮವಾದ ಸಂಭಾಷಣೆ ನಡೆಸಿದ್ದೇವೆ. ಇದೇ ವೇಳೆ ಅವರ ಪುತ್ರ ವಿವೇಕ್ ಜನ್ಮ ದಿನ ಆಚರಿಸಿದ್ದು, ಸಂತಸ ತಂದಿದೆ ಎಂದು ತಮ್ಮ ಎಕ್ಸ್​ ಪೋಸ್ಟ​​ ನಲ್ಲಿ ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆಯಾಗಿ ಅಮೆರಿಕದ ನೂತನ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಪ್ರಧಾನಿ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಪ್ರಧಾನಿ ಮೋದಿ ಕರುಣೆ ಹಾಗೂ ಸಂತಸಕ್ಕೆ ಧನ್ಯವಾದಗಳು ನಮ್ಮ ಮಕ್ಕಳು ಮೋದಿ ಅವರ ಉಡುಗೊರೆಗಳನ್ನು ಆನಂದಿಸಿದ್ದಾರೆ. ಅದ್ಭುತ ಸಂಭಾಷಣೆಗಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ.

ಎಐ ಎಂದೂ ಮನುಷ್ಯರನ್ನು ಬದಲಿಸದು: ಇನ್ನು ಎಐ ಶೃಂಗದ ಬಗ್ಗೆ ಮಾತನಾಡಿರುವ ವ್ಯಾನ್ಸ್​, ಕೃತಕ ಬುದ್ಧಿಮತ್ತೆಯು ಎಂದಿಗೂ ಮನುಷ್ಯರನ್ನು ಬದಲಿಸಲು ಸಾಧ್ಯವಿಲ್ಲ. ಆದರೆ ಜನರನ್ನು ಹೆಚ್ಚು ಉತ್ಸಾಹಭರಿತರನ್ನಾಗಿ ಮಾಡುತ್ತದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನವನ್ನು ಅವರು ಶ್ಲಾಘಿಸಿದರು.

ಪ್ರಧಾನಿ ಮಾತು ಪ್ರಶಂಸಿದ ವ್ಯಾನ್ಸ್​: ಪ್ಯಾರಿಸ್‌ನಲ್ಲಿ ನಡೆದ ಎಐ ಆಕ್ಷನ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಮಾಡಿದ ಭಾಷಣದ ನಂತರ ಮಾತನಾಡಿದ ವ್ಯಾನ್ಸ್, ಪ್ರಧಾನಿ ಮೋದಿ ಅವರ ಅಭಿಪ್ರಾಯವನ್ನು ನಾನು ಪ್ರಶಂಸಿಸುತ್ತೇನೆ. ಎಐ, ಜನರಿಗೆ ಹಾದಿಯನ್ನು ಸುಗಮಗೊಳಿಸುತ್ತದೆ ಮತ್ತು ಹೆಚ್ಚು ಉತ್ಪಾದಕರನ್ನಾಗಿ ಮಾಡುತ್ತದೆ ಎಂದು ನಾನು ನಂಬುತ್ತೇನೆ. ಇದು ಮನುಷ್ಯರನ್ನು ಬದಲಿಸುವುದಿಲ್ಲ. ಅದು ಎಂದಿಗೂ ಮನುಷ್ಯರನ್ನು ಬದಲಾಯಿಸಲು ಸಾಧ್ಯವೂ ಇಲ್ಲ ಎಂದರು.

AI ಅತ್ಯುತ್ತಮವಾಗಿ ಬಳಕೆ ಮಾಡಿಕೊಳ್ಳಬೇಕು: ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ AI ಆಕ್ಷನ್ ಶೃಂಗಸಭೆಯ ಸಹ - ಅಧ್ಯಕ್ಷತೆ ವಹಿಸಿದ ಪಿಎಂ ಮೋದಿ, AI ರಾಜಕೀಯ, ಆರ್ಥಿಕತೆ, ಭದ್ರತೆ ಮತ್ತು ಸಮಾಜವನ್ನು ಮರುರೂಪಿಸಲು ನೆರವಾಗುತ್ತಿದೆ ಎಂದು ಪ್ರತಿಪಾದಿಸಿದರು. AI ಈ ಶತಮಾನದಲ್ಲಿ ಮಾನವೀಯತೆಯ ಸಂಕೇತವನ್ನು ಬರೆಯುತ್ತಿದೆ. ಆದರೆ, ಇದು ಮಾನವ ಇತಿಹಾಸದಲ್ಲಿ ಇತರ ತಂತ್ರಜ್ಞಾನದ ಮೈಲಿಗಲ್ಲುಗಳಿಗಿಂತ ಬಹಳ ಭಿನ್ನವಾಗಿರಲಿದೆ ಎಂದೂ ಹೇಳಿದರು.

ಆರೋಗ್ಯ, ಕೃಷಿ, ಶಿಕ್ಷಣ ಮತ್ತು ಇತರ ಕ್ಷೇತ್ರಗಳನ್ನು ಸುಧಾರಿಸುವ ಮೂಲಕ ಲಕ್ಷಾಂತರ ಜನರ ಜೀವನವನ್ನು ಪರಿವರ್ತಿಸಲು AI ಸಹಾಯ ಮಾಡುತ್ತದೆ ಎಂದು ಪ್ರಧಾನಿ ಎಐನ ಬಗ್ಗೆ ವಿವರಣೆಯನ್ನೂ ನೀಡಿದರು.

ಎಐ ಬಗ್ಗೆ ಹೆದರಬೇಕಿಲ್ಲ: AI ನಿಂದ ಉದ್ಯೋಗ ನಷ್ಟವಾಗಲಿದೆ ಎಂಬ ಭೀತಿ ಇದೆ. ಆದರೆ ತಂತ್ರಜ್ಞಾನದಿಂದಾಗಿ ಕೆಲಸವು ಕಣ್ಮರೆಯಾಗುವುದಿಲ್ಲ ಎಂದು ಇತಿಹಾಸವು ತೋರಿಸಿಕೊಟ್ಟಿದೆ. ಅದರ ಸ್ವಭಾವವು ಬದಲಾಗುತ್ತದೆ ಮತ್ತು ಹೊಸ ರೀತಿಯ ಉದ್ಯೋಗಗಳು ಸೃಷ್ಟಿಯಾಗುತ್ತವೆ. AI- ಚಾಲಿತ ಭವಿಷ್ಯಕ್ಕಾಗಿ ನಮ್ಮ ಜನರನ್ನು ಕೌಶಲ್ಯ ಮತ್ತು ಮರು-ಕೌಶಲ್ಯಕ್ಕಾಗಿ ಸನ್ನದ್ಧ ಮಾಡಬೇಕು ಹಾಗೂ ಹೂಡಿಕೆ ಮಾಡಬೇಕಾಗಿದೆ ಎಂದು ಪ್ರಧಾನಿ ಹೇಳಿದರು.

ಇಂದಿನಿಂದ ಪ್ರಧಾನಿ ಅಮೆರಿಕ ಪ್ರವಾಸ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಫೆಬ್ರವರಿ 12-13 ರಂದು ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ. ಅಧ್ಯಕ್ಷ ಟ್ರಂಪ್ ತಮ್ಮ ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡ ನಂತರ ಉಭಯ ನಾಯಕರ ನಡುವಿನ ಮೊದಲ ಭೇಟಿ ಇದಾಗಲಿದೆ.

ಇದನ್ನು ಓದಿ: ವಿದೇಶಿ ಅಧಿಕಾರಿಗಳಿಗೆ ಲಂಚ ನಿಷೇಧಿಸುವ ಕಾನೂನಿಗೆ ನಿರ್ಬಂಧ ಹೇರಿದ ಟ್ರಂಪ್

ಪ್ಯಾರಿಸ್​​​​ ನಲ್ಲಿ ಮೋದಿ: ಫ್ರೆಂಚ್​ ಅಧ್ಯಕ್ಷ ಎಮ್ಯಾನುಯೆಲ್​ ಮ್ಯಾಕ್ರನ್​​​​​​​​ ಭೇಟಿ, ಮಾತುಕತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.