ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್ ಕನ್ನಡ ಸೀಸನ್ 11' ಫಿನಾಲೆ ಹೊಸ್ತಿಲಿನಲ್ಲಿದೆ. ಮನೆಯಲ್ಲಿ ಉಳಿದುಕೊಂಡಿರುವ ಮತ್ತು ಹೊರಹೋಗಿರುವ ಪ್ರತಿ ಸ್ಪರ್ಧಿಗಳು ತಮ್ಮದೇ ಆದ ಜನಪ್ರಿಯತೆ ಸಂಪಾದಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುವಲ್ಲಿ ಯಶ ಕಂಡಿದ್ದಾರೆ. ಅದರಲ್ಲಿ ಗೋಲ್ಡ್ ಸುರೇಶ್ ಕೂಡಾ ಒಬ್ಬರು.
ಮಾಜಿ ಸ್ಪರ್ಧಿ ಗೋಲ್ಡ್ ಸುರೇಶ್ ಅವರು ಸದ್ಯ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡಿರುವ ಧನರಾಜ್ ಆಚಾರ್ ಮತ್ತು ಹನುಮಂತು ಅವರೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದರು. ಅವರನ್ನು ಮಾವ ಅಂತಲೇ ಕರೆಯುತ್ತಿದ್ದರು. ಇದೀಗ ಮಾವನಾಗಿ, ಕಂದಮ್ಮನಿಗೆ ತೊಟ್ಟಿಲು ಉಡುಗೊರೆ ನೀಡೋ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಈ ಭೇಟಿಯ ಫೋಟೋ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ವಿಡಿಯೋದಲ್ಲಿ, ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ ಧನರಾಜ. ಮನೆಗೆ ಹೋಗ್ತೀನಿ ಅಂತಾ ಹೇಳಿದ್ದೆ. ಬಂದಿದ್ದೇನೆ ಎಂದು ಗೋಲ್ಡ್ ಸುರೇಶ್ ತಿಳಿಸಿದ್ದಾರೆ. ಧನರಾಜ್ ಮನೆಯವರೊಂದಿಗೆ ಮಾತನಾಡುತ್ತಾ, ಅವನು ತೊಟ್ಟಿಲನ್ನು ಸೋದರಮಾವ ಕೊಡಬೇಕೆಂದು ತಿಳಿಸಿದ್ದ. ನಿನಗೆ ಕೊಡಕ್ಕೆ ಬರುತ್ತೋ ಇಲ್ವೋ ಎಂಬುದನ್ನು ನೋಡು ಎಂದೂ ಕೂಡಾ ಹೇಳಿದ್ದ. ಅದಕ್ಕೆ ನಾನೇ ಸೋದರ ಮಾವ ಆಗುತ್ತೇನೆಂದು ಹೇಳ್ಬಿಟ್ಟು ಬಂದಿದ್ದೆ ಎಂದು ತಿಳಿಸಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ಧನರಾಜ್ ಮಗಳನ್ನು ಎತ್ತಿ ಮುದ್ದಾಡಿರೋದನ್ನು ಕಾಣಬಹುದು.
ಇದನ್ನೂ ಓದಿ: ತನ್ನೂರಿನ ಶಾಲೆಗೆ ಹೊಸ ರೂಪ ಕೊಟ್ಟ ಡಾಲಿ ಧನಂಜಯ್: ಮದುವೆ ಸಂದರ್ಭವನ್ನು ಸಾರ್ಥಕಗೊಳಿಸಿದ ನಟ
ಬಿಗ್ ಬಾಸ್ ಕನ್ನಡ ಈಗಾಗಲೇ 90 ದಿನಗಳನ್ನು ಪೂರ್ಣಗೊಳಿಸಿಕೊಂಡಿದೆ. 12ನೇ ವಾರದ ಶುರುವಿನಲ್ಲೇ ಗೋಲ್ಡ್ ಸುರೇಶ್ ಅವರ ಆಟಕ್ಕೆ ಬ್ರೇಕ್ ಬಿತ್ತು. ಅವರನ್ನು ಈ ಕೂಡಲೇ ಮನೆಗೆ ಹೊರಡುವಂತೆ ಬಿಗ್ ಬಾಸ್ ಸೂಚಿಸಿದ್ದರು. ಅದರಂತೆ, ಅವರು ಆಟ ನಿಲ್ಲಿಸಿ ಮನೆಯಿಂದ ಹೊರಬಂದ್ರು. ಅವರ ವ್ಯವಹಾರದಲ್ಲಿ ಕೊಂಚ ಏರುಪೇರಾದ ಹಿನ್ನೆಲೆ, ಬಿಗ್ ಬಾಸ್ ಈ ನಿರ್ಧಾರ ಕೈಗೊಂಡಿದ್ರು.
ಇದನ್ನೂ ಓದಿ: ಅನುಮತಿಯಿಲ್ಲದೇ ತ್ರಿವಿಕ್ರಮ್ ಮಾತು: ಬಿಗ್ ಬಾಸ್ ವೇದಿಕೆಯಿಂದ ಹೊರನಡೆದ ಸುದೀಪ್
ಅಂದಿನ ಸಂಚಿಕೆಯಲ್ಲಿ ನಿಖರ ಕಾರಣ ಕೊಡದ ಹಿನ್ನೆಲೆ ಸಾಮಾಜಿಕ ಜಾಲತಾಣದಲ್ಲಿ ಇಲ್ಲಸಲ್ಲದ ವದಂತಿಗಳು ಹರಡಿತ್ತು. ಗೋಲ್ಡ್ ಸುರೇಶ್ ಕುಟುಂಬದಲ್ಲಿ ಮರಣ ಎಂಬ ವದಂತಿ ಹುಟ್ಟಿಕೊಂಡಿತ್ತು. ಆದರೆ ಅಂಥ ಯಾವುದೇ ದುರ್ಘಟನೆ ಸಂಭವಿಸಿಲ್ಲ. ವ್ಯವಹಾರದಲ್ಲಿ ಕೊಂಚ ಏರುಪೇರಾದ ಹಿನ್ನೆಲೆ, ಈ ಕ್ರಮ ಕೈಗೊಳ್ಳಬೇಕಾಯಿತು ಎಂಬುದು ಬಿಗ್ ಬಾಸ್ ವೇದಿಕೆಯಲ್ಲೇ ಸ್ಪಷ್ಟಪಡಿಸಲಾಯಿತು. ವಾರಾಂತ್ಯದ ಸಂಚಿಕೆ ಒಂದಕ್ಕೆ ಅವರನ್ನು ಕರೆಸಿ ವೇದಿಕೆಯಲ್ಲಿ ಸುದೀಪ್ ಅವರು ಈ ಬಗ್ಗೆ ಮಾತನಾಡಿದ್ದರು. ಬ್ಯುಸಿನೆಸ್ ವಿಷಯ ಎಂಬುದನ್ನು ಗೋಲ್ಡ್ ಸುರೇಶ್ ಅವರೇ ಸ್ಪಷ್ಟಪಡಿಸಿದರು.