ETV Bharat / sports

ಈವರೆಗೂ RCB ಮುನ್ನಡೆಸಿದ ನಾಯಕರ ಪಟ್ಟಿ: ಇದರಲ್ಲಿ ಇಬ್ಬರು ಕನ್ನಡಿಗರು - RCB CAPTAINS LIST

RCB Captains List: ಕಳೆದ 17 ಆವೃತ್ತಿಗಳಲ್ಲಿ ಆರ್​ಸಿಬಿ ತಂಡವನ್ನು ಮುನ್ನಡೆಸಿದ ನಾಯಕರು ಮತ್ತು ಸೋಲು-ಗೆಲುವಿನ ಅಂಕಿಅಂಶಗಳು ಇಲ್ಲಿವೆ.

IPL 2025  RAJAT PATIDAR  RCB NEW CAPTAIN  RCB CAPTAINS LIST
ಆರ್‌ಸಿಬಿ ಆಟಗಾರರು (IANS)
author img

By ETV Bharat Sports Team

Published : Feb 13, 2025, 7:04 PM IST

RCB Captains List: ಇಂದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡಕ್ಕೆ ನೂತನ ನಾಯಕನನ್ನು ನೇಮಿಸಲಾಯಿತು. ಐಪಿಎಲ್​ 2025ರಲ್ಲಿ ಆರ್​ಸಿಬಿ ಮುನ್ನಡೆಸುವ ಜವಾಬ್ದಾರಿ ಯುವ ಆಟಗಾರ ರಜತ್​ ಪಾಟಿದಾರ್ ಹೆಗಲಿಗೆ ಬಿದ್ದಿದೆ. ಇವರು ಈ ತಂಡ ಮುನ್ನಡೆಸುತ್ತಿರುವ 8ನೇ ನಾಯಕ.

2008ರಿಂದ 2023ರವರೆಗೆ ಒಟ್ಟು ಏಳು ಆಟಗಾರರು ಆರ್​ಸಿಬಿ ಮುನ್ನಡೆಸಿದ್ದರು. ಇದರಲ್ಲಿ ಇಬ್ಬರು ಕನ್ನಡಿಗರಿದ್ದಾರೆ. ಹಾಗಾದ್ರೆ, ಆ ಏಳು ಆಟಗಾರರು ಯಾರು ಎಂಬುದನ್ನು ನೋಡೋಣ.

IPL 2025  RAJAT PATIDAR  RCB NEW CAPTAIN  RCB CAPTAINS LIST
ವಿಜಯ್‌ ಮಲ್ಯ ಜೊತೆ ರಾಹುಲ್​ ದ್ರಾವಿಡ್​ (Getty Images)

1.ರಾಹುಲ್​ ದ್ರಾವಿಡ್​ (Rahul Dravid): ಟೀಂ ಇಂಡಿಯಾದ ಮಾಜಿ ಕೋಚ್​ ರಾಹುಲ್​ ದ್ರಾವಿಡ್​ ಆರ್​ಸಿಬಿಯ ಮೊದಲ ನಾಯಕ. 2008ರ ಐಪಿಎಲ್​ ಚೊಚ್ಚಲ ಋತುವಿನಲ್ಲಿ ಎಲ್ಲಾ 14 ಪಂದ್ಯಗಳಲ್ಲಿ ನಾಯಕನಾಗಿ ಆರ್​ಸಿಬಿಯನ್ನು ಮುನ್ನಡೆಸಿದ್ದರು. ಆದರೆ ಇವರ ನಾಯಕತ್ವದಲ್ಲಿ ತಂಡ ಹೇಳಿಕೊಳ್ಳುವ ಪ್ರದರ್ಶನ ನೀಡಿರಲಿಲ್ಲ. ಕೇವಲ 4 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿ 7ನೇ ಸ್ಥಾನಕ್ಕೆ ತಲುಪಿತ್ತು.

ಕೆವಿನ್​ ಪೀಟರ್ಸನ್​ (AFP)

2.ಕೆವಿನ್​ ಪೀಟರ್ಸನ್​ (Kevin Petersen): ಚೊಚ್ಚಲ ಆವೃತ್ತಿಯಲ್ಲಿ ಆರ್​ಸಿಬಿ ಕಳಪೆ ಪ್ರದರ್ಶನ ನೀಡಿದ್ದರಿಂದ ದ್ರಾವಿಡ್‌ರನ್ನು ನಾಯಕತ್ವದಿಂದ ಕೆಳಗಿಳಿಸಿ, ಇಂಗ್ಲೆಂಡ್​ನ ಕೆವಿನ್​ ಪೀಟರ್ಸನ್​ ಅವರನ್ನು ಎರಡನೇ ಆವೃತ್ತಿಗೆ ನಾಯಕನಾಗಿ ನೇಮಿಸಲಾಯಿತು. ಆದಾಗ್ಯೂ, ಇವರ ನಾಯಕತ್ವದ ಅವಧಿ ಹೆಚ್ಚು ಕಾಲ ಉಳಿಯಲಿಲ್ಲ. ಕೇವಲ 6 ಪಂದ್ಯಗಳಲ್ಲಿ ಮಾತ್ರ ತಂಡ ಮುನ್ನಡೆಸಿ 2 ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

ಅನಿಲ್​ ಕುಂಬ್ಳೆ (AFP)

3.ಅನಿಲ್​ ಕುಂಬ್ಳೆ (Anil Kumble): ಕೆವಿನ್​ ಪೀಟರ್ಸ​ನ್​ ನಾಯಕತ್ವದಲ್ಲಿಯೂ ನಿರೀಕ್ಷಿತ ಫಲಿತಾಂಶ ಬಾರದ ಕಾರಣ 2009ರ ಆವೃತ್ತಿಯ ನಡುವೆ ಅವರನ್ನು ಕೆಳಗಿಳಿಸಿ ಅನಿಲ್​ ಕುಂಬ್ಳೆಗೆ ನಾಯಕ ಪಟ್ಟ ನೀಡಲಾಯಿತು. ಮೊದಲಾರ್ಧದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ತಂಡ, ಕುಂಬ್ಳೆ ಚಾರ್ಜ್​ ತೆಗೆದುಕೊಳ್ಳುತ್ತಿದ್ದಂತೆ ಪುಟಿದೆದ್ದು ಗೆಲುವಿನ ಟ್ರ್ಯಾಕ್​ಗೆ ಮರಳಿತು. ಅಲ್ಲದೇ ಫೈನಲ್​ಗೂ ತಲುಪಿತು. ಆದರೆ ಡೆಕ್ಕನ್​ ಚಾರ್ಜಸ್​ ವಿರುದ್ಧ ಸೋಲುಂಡಿತು.

2010ರಲ್ಲೂ ತಂಡವನ್ನು ಸೆಮಿಫೈನಲ್​ಗೆ ಕೊಂಡೊಯ್ಯುವಲ್ಲಿ ಕುಂಬ್ಳೆ ಯಶಸ್ವಿಯಾಗಿದ್ದರು. ಇವರು ನಾಯಕನಾಗಿ ಒಟ್ಟು 35 ಪಂದ್ಯಗಳಲ್ಲಿ ತಂಡ ಮುನ್ನಡೆಸಿದ್ದಾರೆ. ಇದರಲ್ಲಿ 19 ಪಂದ್ಯಗಳಲ್ಲಿ ಗೆಲುವು ಸಿಕ್ಕಿದೆ. ಆದರೆ 2011ರ ಐಪಿಎಲ್​ ಮೆಗಾ ಹರಾಜಿಗೂ ಮುನ್ನವೇ ಕುಂಬ್ಳೆ ಎಲ್ಲಾ ವಿಧದ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು.

ಡೇನಿಯಲ್​ ವೆಟ್ಟೋರಿ (AFP)

4.ಡೇನಿಯಲ್​ ವೆಟ್ಟೋರಿ (Daniel Vettori): ಕುಂಬ್ಳೆ ಬಳಿಕ ಮುಂದಿನ ಎರಡು ಆವೃತ್ತಿಯಲ್ಲಿ ಡೇನಿಯಲ್​ ವೆಟ್ಟೋರಿ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ವೆಟ್ಟೋರಿ ನೇತೃತ್ವದಲ್ಲಿ 2011ರ ಐಪಿಎಲ್‌ ಪಾಯಿಂಟ್‌ ಪಟ್ಟಿಯಲ್ಲಿ ಟೀಂ ಅಗ್ರಸ್ಥಾನದಲ್ಲಿದ್ದು ಫೈನಲ್‌ಗೆ ಎಂಟ್ರಿ ಕೊಟ್ಟಿತ್ತು. ಆದರೆ ಎಂ.ಎಸ್.ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತಿತು. 2012ರ ಋತುವಿನಲ್ಲಿ, ಆರ್‌ಸಿಬಿ ಪ್ಲೇಆಫ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು. ವೆಟ್ಟೋರಿ ನಾಯಕತ್ವದಲ್ಲಿ ಆರ್​ಸಿಬಿ 28 ಪಂದ್ಯಗಳ ಪೈಕಿ 18ರಲ್ಲಿ ಗೆಲುವು ಸಾಧಿಸಿದೆ.

ವಿರಾಟ್​​ ಕೊಹ್ಲಿ (AFP)

5.ವಿರಾಟ್​ ಕೊಹ್ಲಿ (Virat Kohli): 2013ರಲ್ಲಿ ವಿರಾಟ್ ಕೊಹ್ಲಿ ಅವರನ್ನು ಆರ್‌ಸಿಬಿ ನಾಯಕರನ್ನಾಗಿ ನೇಮಿಸಲಾಯಿತು. ನಾಯಕನಾಗಿ ಕೊಹ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಆದರೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. 36 ವರ್ಷದ ಕೊಹ್ಲಿ 143 ಪಂದ್ಯಗಳಲ್ಲಿ ಆರ್‌ಸಿಬಿಯನ್ನು ಮುನ್ನಡೆಸಿದ್ದಾರೆ. ಇದರಲ್ಲಿ 66 ಪಂದ್ಯಗಳಲ್ಲಿ ಗೆಲುವು ಸಿಕ್ಕಿದೆ. 2016ರಲ್ಲಿ ತಂಡವನ್ನು ಫೈನಲ್‌ವರೆಗೂ ಮುನ್ನಡೆಸಿದ್ದರು. ಆದರೆ ಡೇವಿಡ್ ವಾರ್ನರ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲಾಯಿತು. 2021ರಲ್ಲಿ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದರು. ಆದಾಗ್ಯೂ, ಐಪಿಎಲ್ 2023ರಲ್ಲಿ ಅವರು 3 ಪಂದ್ಯಗಳಿಗೆ ನಾಯಕರಾಗಿದ್ದರು.

6.ಶೇನ್ ವ್ಯಾಟ್ಸನ್ (Shane Watson): 2017ರಲ್ಲಿ ವಿರಾಟ್ ಕೊಹ್ಲಿ ಗಾಯದಿಂದಾಗಿ ಮೂರು ಪಂದ್ಯಗಳನ್ನು ತಪ್ಪಿಸಿಕೊಂಡ ನಂತರ, ಆರ್‌ಸಿಬಿಯ ಹಂಗಾಮಿ ನಾಯಕನಾಗಿ ಶೇನ್ ವ್ಯಾಟ್ಸನ್ ಅವರನ್ನು ನೇಮಿಸಲಾಗಿತ್ತು. ಇವರು ಮೂರು ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದು ಕೇವಲ 1 ಪಂದ್ಯ ಮಾತ್ರ ಗೆಲ್ಲಲು ಸಾಧ್ಯವಾಗಿತ್ತು.

ವಿರಾಟ್​ ಕೊಹ್ಲಿ ಮತ್ತು ಫಾಪ್​ ಡು ಪ್ಲೆಸಿಸ್​ (ANI)

7.ಫಾಫ್ ಡು ಪ್ಲೆಸಿಸ್ (Faf du Plessis): ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ನಂತರ, ಆರ್‌ಸಿಬಿ 2021ರ ಐಪಿಎಲ್ ಮೆಗಾ ಹರಾಜಿನಲ್ಲಿ ಫಾಫ್ ಡು ಪ್ಲೆಸಿಸ್‌ರನ್ನು ಖರೀದಿಸಿ ನಾಯಕನನ್ನಾಗಿಸಿತು. ಇವರು ಮುಂದಿನ ಮೂರು ಋತುಗಳಲ್ಲಿ ತಂಡ ಮುನ್ನಡೆಸಿದರು. ಇವರ ನಾಯಕತ್ವದಲ್ಲಿ ಆರ್‌ಸಿಬಿ 42 ಪಂದ್ಯಗಳಲ್ಲಿ 21 ಪಂದ್ಯವನ್ನು ಗೆದ್ದುಕೊಂಡಿತು. ಇದರೊಂದಿಗೆ ಎರಡು ಬಾರಿ ಪ್ಲೇಆಫ್ ತಲುಪಿತು. ಆದರೆ, ವಯಸ್ಸಿನ ಕಾರಣದಿಂದಾಗಿ ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ಮೆಗಾ ಹರಾಜಿಗೆ ಮುಂಚಿತವಾಗಿಯೇ ಅವರನ್ನು ಆರ್‌ಸಿಬಿ ತಂಡದಿಂದ ಬಿಡುಗಡೆ ಮಾಡಿತು.

ಇದನ್ನೂ ಓದಿ: ವಿರಾಟ್​ ಕೊಹ್ಲಿಗೆ RCB ನಾಯಕನ ಸ್ಥಾನ ಸಿಗದಿರಲು ಕಾರಣವೇನು? ಬಯಲಾಯ್ತು ಸತ್ಯ!

ಇದನ್ನೂ ಓದಿ: RCB ನಾಯಕನ ಬಗ್ಗೆ ಕೊಹ್ಲಿ ಫಸ್ಟ್​ ರಿಯಾಕ್ಷನ್​: ಆ ಒಂದು ಮಾತಿಗೆ ಫ್ಯಾನ್ಸ್​ ಫಿದಾ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.