Sunil Gavaskar: ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಇಂದಿಗೆ ಅಂತ್ಯವಾಗಿದೆ. ಈ ರೋಚಕ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ ಭಾರತವನ್ನು 3-1 ಅಂತರದಿಂದ ಮಣಿಸುವ ಮೂಲಕ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಈ ಮೂಲಕ ಭಾರತ ತಂಡ 10 ವರ್ಷಗಳ ನಂತರ ಮೊದಲ ಬಾರಿಗೆ ಬಾರ್ಡರ್-ಗವಾಸ್ಕರ್ ಸರಣಿ ಟ್ರೋಫಿಯನ್ನು ಕಳೆದುಕೊಂಡಿತು.
ಏತನ್ಮಧ್ಯೆ, ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದಿದ್ದ ಸರಣಿಯ ಅಂತಿಮ ಟೆಸ್ಟ್ ಪಂದ್ಯದ ಬಳಿಕ ಭಾರತದ ಕ್ರಿಕೆಟ್ ದಂತಕಥೆ ಸುನೀಲ್ ಗವಾಸ್ಕರ್ ಅವರಿಗೆ ಕ್ರಿಕೆಟ್ ಆಸ್ಟ್ರೇಲಿಯಾ ದೊಡ್ಡ ಅವಮಾನ ಮಾಡಿದ್ದು ಹೆಚ್ಚಿನ ಜನರು ಈ ನಡೆಯನ್ನು ಖಂಡಿಸಿದ್ದಾರೆ. ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ 6 ವಿಕೆಟ್‌ಗಳಿಂದ ಸೋಲನುಭವಿಸಿತು. ಸರಣಿ ನಿರ್ಣಾಯಕ ಟೆಸ್ಟ್‌ನಲ್ಲಿ ಕೇವಲ 163 ರನ್‌ಗಳ ಸಾಧಾರಣ ಗುರಿಯನ್ನು ಪಡೆದಿದ್ದ ಆಸ್ಟ್ರೇಲಿಯಾ ಸುಲಭವಾಗಿ ಗುರಿ ತಲುಪಿತು.
ಪಂದ್ಯದ ಬಳಿಕ ಆಸ್ಟ್ರೇಲಿಯಾ ಆಟಗಾರರಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿ ಹಸ್ತಾಂತರಿಸುವ ವೇಳೆ ಭಾರತೀಯ ದಿಗ್ಗಜ ಕ್ರಿಕೆಟರ್ ಸುನೀಲ್ ಗವಾಸ್ಕರ್ ಅವರಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಅವಮಾನ ಮಾಡಿದೆ. ಹೌದು, ಟ್ರೋಫಿ ಹಸ್ತಾಂತರಕ್ಕಾಗಿ ಸುನೀಲ್ ಗವಾಸ್ಕರ್ ಅವರಿಗೆ ವೇದಿಕೆಗೆ ಕರೆಯದೆ ಕೇವಲ ಅಲೇನ್ ಬಾರ್ಡರ್ ಮೂಲಕ ಆಸೀಸ್ ಆಟಗಾರರಿಗೆ ಟ್ರೋಫಿ ಹಸ್ತಾಂತರಿಸಲಾಗಿದೆ.
ಈ ಬಗ್ಗೆ ಸ್ವತಃ ಸುನೀಲ್ ಗವಾಸ್ಕರ್ ಕೂಡ ಅಸಮಾಧಾನ ಹೊರಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, 'ಪ್ರಶಸ್ತಿ ವಿತರಣಾ ಸಮಾರಂಭದ ವೇಳೆ ಅಲ್ಲಿದ್ದರೇ ನನಗೆ ಖುಷಿಯಾಗುತ್ತಿತ್ತು. ಇದು ಬಾರ್ಡರ್-ಗವಾಸ್ಕರ್ ಟ್ರೋಫಿ ಅಂದರೆ ಆಸ್ಟ್ರೇಲಿಯಾ-ಭಾರತಕ್ಕೆ ಸಂಬಂಧಿಸಿದ ಪಂದ್ಯವಾಗಿದೆ. ಆಸ್ಟ್ರೇಲಿಯಾಕ್ಕೆ ಟ್ರೋಫಿ ಕೊಟ್ಟರೂ ಪರವಾಗಿಲ್ಲ. ಅವರು ಉತ್ತಮವಾಗಿ ಕ್ರಿಕೆಟ್ ಆಡಿ ಗೆದ್ದಿದ್ದಾರೆ. ಆದರೆ, ಭಾರತೀಯನಾಗಿ ನನ್ನ ಸ್ನೇಹಿತ ಅಲೆನ್ ಬಾರ್ಡರ್ ಅವರೊಂದಿಗೆ ಕೂಡಿ ಟ್ರೋಫಿಯನ್ನು ಹಸ್ತಾಂತರಿಸಿದ್ದರೇ ನನಗೆ ಹೆಚ್ಚಿನ ಖುಷಿಯಾಗುತಿತ್ತು ಎಂದು ಅಸಮಾಧಾನ ಹೊರಹಾಕಿದರು. ಇದಕ್ಕೆ ಫ್ಯಾನ್ಸ್ ಭಾರತೀಯರು ಕೂಡ ಆಕ್ರೋಶ ಹೊರಹಾಕಿದ್ದಾರೆ.
ಅಲೇನ್ ಬಾರ್ಡರ್ ಮತ್ತು ಸುನೀಲ್ ಗವಾಸ್ಕರ್ ಹೆಸರಲ್ಲಿ ಈ ಸರಣಿ ನಡೆಯುತ್ತದೆ. ಅಂತದರಲ್ಲಿ ಪ್ರಶಸ್ತಿ ಪ್ರದಾನ ವೇಳೆ ಇಬ್ಬರು ಅಲೇನ್ ಬಾರ್ಡ್ರ್ ಮತ್ತು ಗವಾಸ್ಕರ್ ಒಟ್ಟಿಗೆ ಪ್ರಶಸ್ತಿ ಹಸ್ತಾಂತರಿಸಬೇಕು. ಆದ್ರೆ ಆಸ್ಟ್ರೇಲಿಯಾ ಕ್ರಿಕೆಟ್ ಭಾರತೀಯ ದಿಗ್ಗಜ ಕ್ರಿಕೆಟರ್ಗೆ ಅಪಮಾನ ಮಾಡಿದೆ ಎಂದು ಸಾಮಾಜಿಕ ಜಾಲತಾಣದ ಮೂಲಕ ಅಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಕನ್ನಡಿಗ ಮಾಡಿದ 'ಆ ಒಂದು ಕೆಲಸಕ್ಕೆ' ಶ್ರೀಲಂಕಾ ಟೆಸ್ಟ್ವರೆಗೂ ಕಾಯಬೇಕಾದ ಸ್ಟೀವ್ ಸ್ಮಿತ್!