ETV Bharat / entertainment

ಅನುಮತಿಯಿಲ್ಲದೇ ತ್ರಿವಿಕ್ರಮ್ ಮಾತು: ಬಿಗ್​ ಬಾಸ್​ ವೇದಿಕೆಯಿಂದ ಹೊರನಡೆದ ಸುದೀಪ್​​ - BBK 11

ವೀಕೆಂಡ್​​​ನಲ್ಲಿ ಚರ್ಚೆ ನಡೆಸುವ ಸಂದರ್ಭ ಸಹಜವಾಗಿ ಸ್ಪರ್ಧಿಗಳು ಕೈ ಎತ್ತಿ, ಸುದೀಪ್​ ಅವರಿಂದ ಅನುಮತಿ ಪಡೆದ ಬಳಿಕವೇ ಮಾತಿಗಿಳಿಯುತ್ತಾರೆ. ಆದರೆ ಹನುಮಂತು ಮಾತನಾಡುತ್ತಿದ್ದಂತೆ ತ್ರಿವಿಕ್ರಮ್​ ಮಾತು ಆರಂಭಿಸಿದ ಹಿನ್ನೆಲೆ ಕಿಚ್ಚ ಕೆರಳಿ, ವೇದಿಕೆಯಿಂದ ಹೊರನಡೆದಿದ್ದಾರೆ.

Sudeep
ನಟ ಸುದೀಪ್ (Photo: ANI)
author img

By ETV Bharat Entertainment Team

Published : Jan 4, 2025, 5:28 PM IST

ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಬಿಗ್​ ಬಾಸ್​​ ಕನ್ನಡ ಸೀಸನ್​ 11' ಫಿನಾಲೆ ಹೊಸ್ತಿಲಿನಲ್ಲಿದೆ. ಈ ವಾರ ದೊಡ್ಮನೆ ಬಹಳ ಭಾವುಕ ಕ್ಷಣಗಳಿಂದ ಕೂಡಿತ್ತು. ಸದ್ಯ ಉಳಿದುಕೊಂಡಿರುವ ಸ್ಪರ್ಧಿಗಳ ಕುಟುಂಬಸ್ಥರು ಬಂದು ಹೋಗಿದ್ದಾರೆ. ಹಾಗಾಗಿ ಈ ವಾರ ಮನೆಯಲ್ಲಿ ದೊಡ್ಡ ಮಟ್ಟದ ಗಲಾಟೆ ಏನೂ ನಡೆದಿಲ್ಲ. ಆದ್ದರಿಂದ, ವಾರಾಂತ್ಯ ಯಾವ ವಿಷಯದ ಮೇಲೆ ಚರ್ಚೆ ನಡೆಯಲಿದೆ ಎಂಬುದರ ಬಗ್ಗೆ ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸಿದ್ದರು.

ಫೈನಲಿ, ಇಂದಿನ ಸಂಚಿಕೆಯ ಪ್ರೋಮೋ ಹೊರಬಿದ್ದಿದೆ. ಚರ್ಚೆ ನಡೆಯುವಾಗ ಅನುಮತಿ ಪಡೆಯದೇ ಸ್ಪರ್ಧಿ ಮಾತನಾಡಿದ್ದಾರೆ. ಇದು ಕಿಚ್ಚನ ಕೋಪಕ್ಕೆ ಗುರಿಯಾಗಿದೆ. ಅಸಮಾಧಾನಗೊಂಡ ನಿರೂಪಕ ಸುದೀಪ್​ ಸೀದಾ ವೇದಿಕೆ ಬಿಟ್ಟು ಹೋಗಿದ್ದಾರೆ. ಇದರ ಒಂದು ನೋಟ 'ಸ್ಪರ್ಧಿಗಳ ಕೊಸರಾಟಕ್ಕೆ ಕಿಚ್ಚ ಗರಂ!' ವಾರದ ಕಥೆ ಕಿಚ್ಚನ ಜೊತೆ, ಇಂದು ರಾತ್ರಿ 9ಕ್ಕೆ ಪ್ರಸಾರ ಎಂಬ ಶೀರ್ಷಿಕೆಯಡಿ ಅನಾವರಣಗೊಂಡಿರುವ ಪ್ರೋಮೋದಲ್ಲಿ ಕಾಣಬಹುದು. ಮುಂದೇನು, ಕಿಚ್ಚನ ಕಿಚ್ಚು ತಣ್ಣಗಾಯ್ತಾ? ಎಂಬ ಪ್ರಶ್ನೆ ಅಭಿಮಾನಿಗಳಲ್ಲಿದೆ.

ಸುದೀಪ್​ ಪ್ರಶ್ನೆಯಿಂದ ಪ್ರೋಮೋ ಆರಂಭಗೊಂಡಿದೆ. ಗ್ರಾಸರಿ ಟಾಸ್ಕ್​​​ಗೆ ಬರೋಣ. ಭವ್ಯಾ ಅವರೊಂದು ರೀಸನ್​ ಕೊಡ್ತಾರೆ. ಎಂಟರ್​​ಟೈನ್ಮೆಂಟ್​ ವಿಚಾರದಲ್ಲಿ ಹನುಮಂತಣ್ಣ ಇದರೊಳಗಿದ್ರೆ ಬೆಟರ್​ ಅನ್ಸುತ್ತೆ ಎಂದು ಭವ್ಯಾ ಹೇಳಿದ್ದ ಮಾತನ್ನು ನೆನಪಿಸಿದ್ದಾರೆ. ಸುದೀಪ್​ ಪ್ರಶ್ನೆಗೆ ಉತ್ತರಿಸಿದ ಭವ್ಯಾ, ನನಗಿಂತ ಬೆಸ್ಟ್​ ಅವರಿದ್ದಾರೆ ಎಂದು ತಿಳಿಸಿದ್ದಾರೆ. ಸುದೀಪ್​ ಪ್ರತಿಕ್ರಿಯಿಸಿ, ಎಲ್ಲಾ ವಿಷಯದಲ್ಲೂ ಸಾಮರ್ಥ್ಯ ಇರೋರು ಈ ಕಪ್​ ಗೆಲ್ಬೇಕು ಭವ್ಯಾ. ಹಾಗಾಗಿ, ನೀವು ಫಿಟ್​ ಇಲ್ಲ ಎಂಬುದನ್ನು ನೀವೇ ಡಿಕ್ಲೇರ್​ ಮಾಡಿದ್ರಿ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ತನ್ನೂರಿನ ಶಾಲೆಗೆ ಹೊಸ ರೂಪ ಕೊಟ್ಟ ಡಾಲಿ ಧನಂಜಯ್​: ಮದುವೆ ಸಂದರ್ಭವನ್ನು ಸಾರ್ಥಕಗೊಳಿಸಿದ ನಟ

ನಂತರ ಮಂಜು ಮಾತು ಆರಂಭವಾಗಿದೆ. ತ್ರಿವಿಕ್ರಮ್​ ಒಂದು ಸ್ಟೇಟ್​ಮೆಂಟ್​ ಕೊಡ್ತಾರೆ. ನಾನೇನು ಅನ್ನೋದನ್ನು ಸಾಬೀತುಪಡಿಸಿದ್ದೇನೆ. ಅಪ್ಪರ್​ ಹ್ಯಾಂಡ್. ನೀವೇನು ಅನ್ನೋದನ್ನು ಪ್ರೂವ್​ ಮಾಡಿ ಅನ್ನೋ ಮಾತು ಬಂದಿದೆ ಎಂದು ಮಂಜು ತಿಳಿಸಿದ್ದಾರೆ. ಬಳಿಕ ಮಾತು ಆರಂಭಿಸಿದ ಹನುಮಂತು, ಇಷ್ಟು ವಾರ ಊಟ ಹಾಕಿದ್ದೀವಿ, ಈಗ ಗೆದ್ದು ನೀವು ಊಟ ಹಾಕ್ರಿ ಅನ್ನೋ ಮಾತು ಬಂದಿದೆ ಅಂತಾ ತಿಳಿಸಿದ್ದಾರೆ.

ಇದನ್ನೂ ಓದಿ: ಟಾಕ್ಸಿಕ್​​​, ಕಾಂತಾರ 2, ಸಂಜು ವೆಡ್ಸ್ ಗೀತಾ 2..​​: 2025ರಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಚಿತ್ರಗಳಿವು

ಹನುಂತು ಮಾತನಾಡುತ್ತಿದ್ದಂತೆ ತ್ರಿವಿಕ್ರಮ್​ ಮಾತು ಆರಂಭಿಸಿದ್ದಾರೆ. ಎಂದಿನಂತೆ ಸುದೀಪ್​ ಅವರಿಂದ ಅನುಮತಿ ಪಡೆದಿಲ್ಲ. ಆ ಸ್ಟೇಟ್​ಮೆಂಟೇ ಕೊಟ್ಟಿಲ್ಲ ನಾನು ನಿಮಗೆ ಎಂದು ತ್ರಿವಿಕ್ರಮ್​ ತಿಳಿಸಿದ್ದಾರೆ. ಅಸಮಾಧಾನಗೊಂಡ ಸುದೀಪ್​, ಹಲೋ... ಒಂದ್​ ಕೆಲ್ಸ ಮಾಡಿ, ನೀವ್​ ನೀವೇ ಮಾತಾಡ್ಕೊಳಿ ಎಂದು ತಿಳಿಸಿ ಸೀದಾ ವೇದಿಕೆಯಿಂದ ಹೊರನಡೆದಿದ್ದಾರೆ. ಆ ಕೂಡಲೇ ತ್ರಿವಿಕ್ರಮ್​ ಕೈ ಎತ್ತಿ ಸಾರಿ ಅಣ್ಣಾ, ಸಾರಿ ಎಂದು ತಿಳಿಸಿದ್ದಾರೆ. ಸುದೀಪ್​ ಹೊರನಡೆದಿದ್ದು, ವಾಪಸ್​ ಬರ್ತಾರಾ ಅನ್ನೋದು ಕೋಟ್ಯಂತರ ಪ್ರೇಕ್ಷಕರ ಪ್ರಶ್ನೆಯಾಗಿದೆ. ಸಂಪೂರ್ಣ ಸಂಚಿಕೆ ವೀಕ್ಷಿಸಲು ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.