ETV Bharat / entertainment

ತನ್ನೂರಿನ ಶಾಲೆಗೆ ಹೊಸ ರೂಪ ಕೊಟ್ಟ ಡಾಲಿ ಧನಂಜಯ್​: ಮದುವೆ ಸಂದರ್ಭವನ್ನು ಸಾರ್ಥಕಗೊಳಿಸಿದ ನಟ - DAALI DHANANJAY

ಸ್ಯಾಂಡಲ್​ವುಡ್​ ಸೂಪರ್​ ಸ್ಟಾರ್ ಡಾಲಿ ಧನಂಜಯ್​​ ತಮ್ಮ ಜೀವನದ ವಿಶೇಷ ಸಂದರ್ಭದಲ್ಲಿದ್ದು, ಸಮಾಜ ಮೆಚ್ಚುವಂತಹ ಕಾರ್ಯ ಕೈಗೊಂಡಿದ್ದಾರೆ.

Daali Dhananjay social work
ತನ್ನೂರಿನ ಶಾಲೆಗೆ ಹೊಸ ರೂಪ ಕೊಟ್ಟ ಡಾಲಿ ಧನಂಜಯ್​ (Photo: ETV Bharat)
author img

By ETV Bharat Entertainment Team

Published : Jan 4, 2025, 4:14 PM IST

ಸಾಮಾನ್ಯವಾಗಿ ವಿವಾಹ ಮಹೋತ್ಸವ ಅಂದಾಕ್ಷಣ ಮನೆ ಸರಿ ಮಾಡಿಸೋದು, ಮನೆಗೆ ಸುಣ್ಣ ಬಣ್ಣ ಒಡಿಸೋದು, ಅಚ್ಚುಕಟ್ಟಾಗಿ ಶೃಂಗಾರಗೊಳಿಸೋದು ಸರ್ವೇ ಸಾಮಾನ್ಯ. ಆದ್ರೆ ಕನ್ನಡ ಚಿತ್ರರಂಗದ ನಟರಾಕ್ಷಸ ಖ್ಯಾತಿಯ ನಟ ಡಾಲಿ ಮಾತ್ರ ಈ ವಿಚಾರದಲ್ಲಿ ಸಖತ್‌ ಡಿಫ್ರೆಂಟ್‌. ಕಳೆದ ವರ್ಷ ಮದುವೆ ಫಿಕ್ಸ್‌ ಆಯ್ತು, ಅಭಿಮಾನಿಗಳಿಗಾಗಿ ಅನೌನ್ಸ್​ಮೆಂಟ್​ ಕುಡಾ ನಡೆಯಿತು, ನಿಶ್ಚಿತಾರ್ಥವೂ ನೆರವೇರಿತು, ಫೈನಲಿ ಮ್ಯಾರೇಜ್​ ಡೇಟ್‌ ಕೂಡಾ ಕನ್ಫರ್ಮ್‌. ಮುಂದಿನ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಸ್ಯಾಂಡಲ್​ವುಡ್​ನ ಸೂಪರ್​ ಸ್ಟಾರ್. ತಮ್ಮ ಜೀವನದ ಮಹತ್ತರ ಘಟ್ಟದಲ್ಲಿರುವ ಚಂದನವನದ ಬಹುಬೇಡಿಕೆ ನಟ ತಾನು ಬೆಳೆದು ಬಂದ ತನ್ನೂರಿಗೆ ಮಾಡಬೇಕಾದ ಸೇವೆಯನ್ನು ಮಾತ್ರ ಮರೆತಿಲ್ಲ.

ಕನ್ನಡ ಕಲಾವಿದರ ಸಾಲಿನಲ್ಲಿ ವಿಶೇಷವಾಗಿ ನಿಲ್ಲುವ ನಟ ಡಾಲಿ ಧನಂಜಯ್​​. ಇದೀಗ ಆ ಶಾಲೆಯಲ್ಲಿ ಓದದೇ ಇದ್ದರೂ ತವರೂರಿನ ಶಾಲೆಗೆ ಹೊಸ ರೂಪ ನೀಡುತ್ತಿದ್ದಾರೆ. ಅದು ಕೂಡಾ ತಮ್ಮ ಮದುವೆ ಸಂದರ್ಭದಲ್ಲಿ ಅನ್ನೋದು ವಿಶೇಷ. ತನ್ನೂರಿನ ಶಾಲೆಗೆ ಹೊಸ ರೂಪ ಕೊಡುವ ಮೂಲಕ ಮದುವೆ ಸಂದರ್ಭವನ್ನು ಸಾರ್ಥಕಗೊಳಿಸಿ ಇತರರಿಗೆ ಮಾದರಿಯಾಗಿದ್ದಾರೆ.

ತನ್ನೂರಿನ ಶಾಲೆಗೆ ಹೊಸ ರೂಪ ಕೊಟ್ಟ ಡಾಲಿ ಧನಂಜಯ್​ (ETV Bharat)

ಫೆಬ್ರವರಿ 16ರಂದು ಸೂಪರ್​ ಸ್ಟಾರ್ ಡಾಲಿ ಧನಂಜಯ್​ ಡಾಕ್ಟರ್‌ ಧನ್ಯತಾ ಜೊತೆ ಸಪ್ತಪದಿ ತುಳಿಯಲಿದ್ದಾರೆ. ಈಗಾಗಲೇ ಮದುವೆ ತಯಾರಿ ಶುರುವಾಗಿದೆ. ಸಿನಿರಂಗ ಸೇರಿದಂತೆ ರಾಜಕೀಯ ಗಣ್ಯರು, ಮಠಾಧೀಶರಿಗೆ ಮದುವೆ ಆಹ್ವಾನ ಪತ್ರಿಕೆ ನೀಡುತ್ತಿರುವ ಡಾಲಿ ತಮ್ಮ ಬ್ಯುಸಿ ಶೆಡ್ಯೂಲ್​​ ನಡುವೆಯೂ ತಮ್ಮೂರಿನ ಸರ್ಕಾರಿ ಶಾಲೆಗೆ ಹೊಸ ರೂಪ ನೀಡುವ ಸಂಕಲ್ಪ ತೊಟ್ಟಿದ್ದಾರೆ.

ಇದನ್ನೂ ಓದಿ: ರಾಕಿಂಗ್​​ ಸ್ಟಾರ್​ನ ಟಾಕ್ಸಿಕ್ ಬೆಡಗಿ ಕಿಯಾರ ಅಡ್ವಾಣಿ ಆಸ್ಪತ್ರೆಗೆ ದಾಖಲು ಸುದ್ದಿ: ಅಸಲಿ ವಿಷಯವೇನು?

ತಮ್ಮ ಊರಾದ ಕಾಳೇನಹಳ್ಳಿಯಲ್ಲಿ 1-7ನೇ ತರಗತಿವರೆಗಿನ ಸರ್ಕಾರಿ ಪ್ರಾಥಮಿಕ ಶಾಲೆಗೆ ಹೈಟೆಕ್ ಸ್ಪರ್ಶ ನೀಡಲು ಮುಂದಾಗಿದ್ದಾರೆ. ಶಾಲೆಯಲ್ಲಿ ಹಾಲಿ 80 ಮಕ್ಕಳಿದ್ದಾರೆ. ತಮ್ಮ ಮದುವೆಯನ್ನು ಅರ್ಥಪೂರ್ಣಗೊಳಿಸಲು ಇಡೀ ಶಾಲೆಗೆ ಹೊಸ ರೂಪ ನೀಡುವ ಮೂಲಕ ಸರ್ಕಾರಿ ಶಾಲೆ ಉಳಿಸಲು ಮುಂದಾಗಿದ್ದಾರೆ. ಇಡೀ ಶಾಲೆಯ ನೆಲಕ್ಕೆ ಟೈಲ್ಸ್, ಬಣ್ಣಮಾಸಿದ ಶಾಲೆಯ ಎಲ್ಲಾ ಗೋಡೆಗಳಿಗೆ ಪೇಂಟ್, ಬಿರುಕು ಬಿಟ್ಟಿದ್ದ ಗೋಡೆ, ಅಂತಸ್ತಿನ ದುರಸ್ತಿ, ಗೇಟ್ ದುರಸ್ತಿ, ಶಿಕ್ಷಕರ ಕೊಠಡಿಗೆ ಹೊಸ ರೂಪ, ಶೌಚಾಲಯಕ್ಕೆ ಸುಸ್ಥಿತಿ, ಅಚ್ಚುಕಟ್ಟು ಅಡುಗೆ ಮನೆ, ಕುಡಿಯುವ ನೀರಿನ ವ್ಯವಸ್ಥೆ ಹೀಗೆ ತನ್ನೂರಿನ ಶಾಲೆಗೆ ನವ ರೂಪ ನೀಡುತ್ತಿದ್ದಾರೆ. ಕೆಲಸಗಳು ಬಹುತೇಕ ನಡೆದಿವೆ.

ಇದನ್ನೂ ಓದಿ: ನಡೆಯೇ ನುಡಿಯಾಗಲು ಅವಕಾಶ ಮಾಡಿಕೊಟ್ಟ ಐಶ್ವರ್ಯಾ - ಅಭಿಷೇಕ್​: ಬಚ್ಚನ್ಸ್ ವಿಡಿಯೋ ನೋಡಿ

ತಾವು ಈ ಶಾಲೆಯಲ್ಲಿ ಓದದೇ ಇದ್ದರೂ ಕೂಡಾ ತಮ್ಮೂರಿನ ಶಾಲೆ ಚೆನ್ನಾಗಿರಬೇಕು ಹಾಗೂ ಮಕ್ಕಳು ಉತ್ತಮ ವಾತಾವರಣದಲ್ಲಿ ಕಲಿಯಬೇಕು ಅನ್ನೋದು ಡಾಲಿ ಅವರ ಉದ್ದೇಶ. ನಟನ ಈ ಕೆಲಸಕ್ಕೆ ಊರಿನ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತಿದ್ದು, ಹಣದ ಬಗ್ಗೆ ತಲೆ ಕೆಡಿಸಿಕೊಳ್ಳದೇ ಶಾಲೆಗೆ ಬೇಕಿರೋ ಎಲ್ಲಾ ರೀತಿಯ ವ್ಯವಸ್ಥೆ ಮಾಡಿ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.