ಕರ್ನಾಟಕ

karnataka

ETV Bharat / entertainment

96ನೇ ಆಸ್ಕರ್ ಪ್ರಶಸ್ತಿ ನಾಮನಿರ್ದೇಶನ: ರೇಸ್‌ನಲ್ಲಿ ಭಾರತದ ಸಾಕ್ಷ್ಯಚಿತ್ರ 'ಟು ಕಿಲ್ ಎ ಟೈಗರ್‌' - ಟು ಕಿಲ್ ಎ ಟೈಗರ್‌

Oscar Nominations 2024: ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯ ನಾಮನಿರ್ದೇಶನ ಪಟ್ಟಿ ಬಿಡುಗಡೆಯಾಗಿದೆ.

Oscar Nominations 2024
ಆಸ್ಕರ್ ನಾಮನಿರ್ದೇಶನ ಪಟ್ಟಿ

By ETV Bharat Karnataka Team

Published : Jan 24, 2024, 10:53 AM IST

ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆ್ಯಂಡ್ ಸೈನ್ಸ್ ಮಂಗಳವಾರ 96ನೇ ಆಸ್ಕರ್ ನಾಮನಿರ್ದೇಶನಗಳನ್ನು ಅನಾವರಣಗೊಳಿಸಿತು. ಕ್ರಿಸ್ಟೋಫರ್ ನೋಲನ್‌ ಅವರ 'ಒಪನ್‌ಹೈಮರ್' ಅತ್ಯುತ್ತಮ ಸಿನಿಮಾ ಮತ್ತು ಅತ್ಯುತ್ತಮ ನಿರ್ದೇಶಕ ಸೇರಿದಂತೆ 13 ನಾಮನಿರ್ದೇಶನಗಳೊಂದಿಗೆ ಆಸ್ಕರ್ ರೇಸ್‌ನಲ್ಲಿ ಅಗ್ರಸ್ಥಾನದಲ್ಲಿದೆ. ಸ್ಯಾಮ್ಯುಯೆಲ್ ಗೋಲ್ಡ್‌ವಿನ್ ಥಿಯೇಟರ್‌ನಿಂದ ಆಸ್ಕರ್​ ನಾಮನಿರ್ದೇನಗಳನ್ನು ಘೋಷಿಸಿದ್ದು, 2024ರ ಸಮಾರಂಭಕ್ಕೆ ಕೌಂಟ್‌ಡೌನ್ ಶುರುವಾಗಿದೆ.

'ಟು ಕಿಲ್ ಎ ಟೈಗರ್‌': ದೆಹಲಿಯಲ್ಲಿ ಜನಿಸಿದ ಮತ್ತು ಟೊರೊಂಟೊ ಮೂಲದ ನಿರ್ದೇಶಕಿ ನಿಶಾ ಪಹುಜಾ ತಮ್ಮ 'ಟು ಕಿಲ್ ಎ ಟೈಗರ್‌'ಗಾಗಿ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದಾರೆ. ಒಂದು ಸಣ್ಣ ಭಾರತೀಯ ಹಳ್ಳಿಯ ಹಿನ್ನೆಲೆಯಲ್ಲಿ ನಿರ್ಮಾಣಗೊಂಡ ಈ ಸಾಕ್ಷ್ಯಚಿತ್ರ 2022ರ ಟೊರೊಂಟೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮೊದಲ ಪ್ರದರ್ಶನ ಕಂಡಿತು. ಚಿತ್ರೋತ್ಸವದಲ್ಲಿ ಆಂಪ್ಲಿಫೈ ವಾಯ್ಸ್ ಪ್ರಶಸ್ತಿಯನ್ನೂ ಗೆದ್ದುಕೊಂಡಿತ್ತು.

'2018: ಎವ್ರಿಒನ್​ ಈಸ್​ ಎ ಹೀರೋ'ಗೆ ನಿರಾಸೆ: ಪ್ರಸಕ್ತ ಅಕಾಡೆಮಿ ಅವಾರ್ಡ್ಸ್‌ನಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಭಾರತದಿಂದ ಮಲಯಾಳಂ ಸಿನಿಮಾ '2018: ಎವ್ರಿಒನ್​ ಈಸ್​ ಎ ಹೀರೋ' ಎಂಟ್ರಿ ಕೊಟ್ಟಿತ್ತು. 15 ಸಿನಿಮಾಗಳ ಶಾರ್ಟ್‌ಲಿಸ್ಟ್ ವೇಳೆ ಈ ಸಿನಿಮಾ ಹೊರಬಿದ್ದಿದೆ. ಕೇರಳ ಪ್ರವಾಹ ಕುರಿತ ಈ ಚಿತ್ರ 2023ರ ಸೆಪ್ಟೆಂಬರ್​ನಲ್ಲಿ ಆಸ್ಕರ್​ ರೇಸ್ ಪ್ರವೇಶಿಸಿದೆ ಎಂದು ಘೋಷಿಸಲಾಯಿತು. ಆದರೆ ಡಿಸೆಂಬರ್​ ಕೊನೆಗೆ ಭಾರತದ ಸಿನಿಮಾ ಶಾರ್ಟ್​​ಲಿಸ್ಟ್ ಪ್ರವೇಶಿಸಿಲ್ಲ ಎಂಬುದು ಬಹಿರಂಗಗೊಂಡು, ನಿರ್ದೇಶಕ ಜೂಡ್​ ಆ್ಯಂಥನಿ ಜೋಸೆಫ್​ ಭಾರತೀಯರಲ್ಲಿ ಕ್ಷಮೆ ಯಾಚಿಸಿದ್ದರು.

95ನೇ ಆಸ್ಕರ್​ನಲ್ಲಿ ಭಾರತೀಯ ಸಿನಿಮಾಗಳ ಸದ್ದು​​: 95ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ 'ಆರ್​ಆರ್​ಆರ್'​ ಮತ್ತು 'ದಿ ಎಲಿಫೆಂಟ್ ವಿಸ್ಪರರ್ಸ್' ಅತ್ಯುನ್ನತ ಗೌರವಕ್ಕೆ ಪಾತ್ರವಾಗಿತ್ತು. ಈ ಎರಡೂ ಭಾರತೀಯ ಚಿತ್ರಗಳು ಅತ್ಯುತ್ತಮ ಮೂಲ ಹಾಡು ಮತ್ತು ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದುಕೊಂಡವು. ಆದಾಗ್ಯೂ, ಗುಜರಾತಿ ಚಲನಚಿತ್ರ ಛೆಲ್ಲೋ ಶೋ ಅಂತಿಮ ನಾಮನಿರ್ದೇಶನ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿತ್ತು. ಕೊನೆ ಕ್ಷಣದಲ್ಲಿ ನಾಮಿನೇಶನ್‌ನಿಂದ ಹೊರಬಿದ್ದಿತ್ತು.

ಈ ಸಲದ ಆಸ್ಕರ್​ ಎಲ್ಲಿ, ಯಾವಾಗ?: 96ನೇ ಅಕಾಡೆಮಿ ಪ್ರಶಸ್ತಿ ಮಾರ್ಚ್ 10ರಂದು ಲಾಸ್ ಏಂಜಲೀಸ್‌ನಲ್ಲಿ ನಡೆಯಲಿವೆ.

2024ರ ಆಸ್ಕರ್ ನಾಮನಿರ್ದೇಶನಗಳ ಪಟ್ಟಿ:

ಅತ್ಯುತ್ತಮ ಪೋಷಕ ನಟಿ:

  • ಎಮಿಲಿ ಬ್ಲಂಟ್ - ಒಪನ್‌ಹೈಮರ್
  • ಡೇನಿಯಲ್ ಬ್ರೂಕ್ಸ್ - ದಿ ಕಲರ್ ಪರ್ಪಲ್
  • ಅಮೇರಿಕಾ ಫೆರೆರಾ - ಬಾರ್ಬಿ
  • ಜೋಡಿ ಫೋಸ್ಟರ್ - ನ್ಯಾಡ್
  • ಡವೈನ್ ಜಾಯ್ ರಾಂಡೋಲ್ಫ್ - ದಿ ಹೋಲ್ಡೋವರ್ಸ್

ಕಾಸ್ಟ್ಯೂಮ್​ ಡಿಸೈನ್​​:

  • ಬಾರ್ಬಿ
  • ಕಿಲ್ಲರ್ಸ್ ಆಫ್​ ದಿ ಫ್ಲವರ್​ ಮೂನ್​​
  • ನೆಪೋಲಿಯನ್
  • ಒಪನ್‌ಹೈಮರ್
  • ಪೂವರ್ ಥಿಂಗ್ಸ್

ಸೌಂಡ್​:

  • ದಿ ಕ್ರಿಯೇಟರ್​
  • ಮಾಯೆಸ್ಟ್ರೋ
  • ಮಿಶನ್ ಇಂಪಾಸಿಬಲ್​: ಡೆಡ್​ ರೆಕೊನಿಂಗ್ ಪಾರ್ಟ್ ಒನ್
  • ಒಪನ್‌ಹೈಮರ್
  • ದಿ ಝೋನ್​ ಆಫ್ ಇಂಟ್ರೆಸ್ಟ್

ಒರಿಜಿನಲ್​ ಸ್ಕೋರ್:

  • ಅಮೇರಿಕನ್ ಫಿಕ್ಷನ್
  • ಇಂಡಿಯಾನಾ ಜೋನ್ಸ್ ಆ್ಯಂಡ್ ಡಯಲ್ ಆಫ್ ಡೆಸ್ಟಿನಿ
  • ಕಿಲ್ಲರ್ಸ್ ಆಫ್​ ದಿ ಫ್ಲವರ್​ ಮೂನ್​​
  • ಒಪನ್‌ಹೈಮರ್
  • ಪೂವರ್ ಥಿಂಗ್ಸ್

ಅಡಾಪ್ಟೆಡ್​​ ಸ್ಕ್ರೀನ್​ ಪ್ಲೇ:

  • ಅಮೇರಿಕನ್ ಫಿಕ್ಷನ್
  • ಬಾರ್ಬಿ
  • ಒಪನ್‌ಹೈಮರ್
  • ಪೂವರ್ ಥಿಂಗ್ಸ್
  • ದಿ ಝೋನ್​ ಆಫ್ ಇಂಟ್ರೆಸ್ಟ್

ಒರಿಜಿನಲ್​ ಸ್ಕ್ರೀನ್​ಪ್ಲೇ:

  • ಅನಾಟಮಿ ಆಫ್ ಎ ಫಾಲ್​
  • ದಿ ಹೋಲ್ಡೋವರ್ಸ್
  • ಮಾಯೆಸ್ಟ್ರೋ
  • ಮೇ ಡಿಸೆಂಬರ್
  • ಪಾಸ್ಟ್ ಲೈವ್ಸ್

ಲೈವ್ ಆ್ಯಕ್ಷನ್ ಶಾರ್ಟ್ ಫಿಲ್ಮ್:

  • ದಿ ಆಫ್ಟರ್
  • ಇನ್​ವಿನ್ಸಿಬಲ್
  • ನೈಟ್ ಆಫ್ ಫಾರ್ಚೂನ್
  • ರೆಡ್, ವೈಟ್​, ಆ್ಯಂಡ್​ ಬ್ಲ್ಯೂ
  • ದಿ ವಂಡರ್​ಫುಲ್​ ಸ್ಟೋರಿ ಆಫ್​​ ಹೆನ್ರಿ ಶುಗರ್

ಅನಿಮೇಟೆಡ್ ಶಾರ್ಟ್ ಫಿಲ್ಮ್:

  • ಲೆಟರ್​ ಟು ಎ ಪಿಗ್​​
  • ನೈಂಟಿಫೈವ್ ಸೆನ್ಸೆಸ್
  • ಅವರ್ ಯೂನಿಫಾರ್ಮ್
  • ಪ್ಯಾಚಿಡರ್ಮ್
  • ವಾರ್ ಈಸ್​ ಓವರ್! ಇನ್​​ಸ್ಪೈರ್ಡ್ ಬೈ ತಹೆ ಮ್ಯೂಸಿಕ್ ಆಫ್​ ಜಾನ್ ಆ್ಯಂಡ್​ ಯೋಕೋ

ಪೋಷಕ ನಟ:

  • ಸ್ಟರ್ಲಿಂಗ್ ಕೆ. ಬ್ರೌನ್ - ಅಮೇರಿಕನ್ ಫಿಕ್ಷನ್
  • ರಾಬರ್ಟ್ ಡೆ ನಿರೋ - ಕಿಲ್ಲರ್ಸ್ ಆಫ್​ ಫ್ಲವರ್ ಮೂನ್
  • ರಾಬರ್ಟ್ ಡೌನಿ ಜೂನಿಯರ್ - ಒಪೆನ್‌ಹೈಮರ್
  • ರ್ಯಾನ್ ಗೊಸ್ಲಿಂಗ್ - ಬಾರ್ಬಿ
  • ಮಾರ್ಕ್ ರಫಲೋ - ಪೂವರ್ ಥಿಂಗ್ಸ್

ಒರಿಜಿನಲ್​​ ಸಾಂಗ್​:

  • ಫ್ಲಾಮಿನ್ ಹಾಟ್ ಸಿನಿಮಾದ ದಿ ಫೈರ್ ಇನ್‌ಸೈಡ್
  • ಬಾರ್ಬಿ ಚಿತ್ರದ ಐ ಆ್ಯಮ್​​ ಜಸ್ಟ್ ಕೇನ್
  • ಅಮೇರಿಕನ್​ ಸಿಂಫನಿ ಸಿನಿಮಾದ ಇಟ್​​ ನೆವರ್​​ ವೆಂಟ್​ ಅವೇ
  • ಕಿಲ್ಲರ್ಸ್ ಆಫ್​ ದಿ ಫ್ಲವರ್​ ಮೂನ್​​​ ಚಿತ್ರದ 'ಎ ಸಾಂಗ್​ ಫಾರ್ ಮೈ ಪೀಪಲ್​'
  • ಬಾರ್ಬಿ ಸಿನಿಮಾದ ವಾಟ್​ ವಾಸ್ ಐ ಮೇಡ್​ ಫಾರ್ ಸಾಂಗ್

ಡಾಕ್ಯುಮೆಂಟರಿ ಫೀಚರ್​ ಫಿಲ್ಮ್:

  • ಬೋಬಿ ವೈನ್: ದಿ ಪೀಪಲ್ಸ್ ಪ್ರೆಸಿಡೆಂಟ್
  • ಎಟರ್ನಲ್ ಮೆಮೊರಿ
  • ಫೋರ್ ಡಾಟರ್ಸ್
  • ಟು ಕಿಲ್​​ ಎ ಟೈಗರ್
  • 20 ಡೇಸ್​ ಇನ್ ಮರಿಯುಪೋಲ್‌

ಡಾಕ್ಯುಮೆಂಟರಿ ಫೀಚರ್ ಫಿಲ್ಮ್

  • ದಿ ಎಬಿಸಿ'ಸ್ ಆಫ್​ ಬುಕ್​​ ಬ್ಯಾನಿಂಗ್
  • ದಿ ಬಾರ್ಬರ್ ಆಫ್ ಲಿಟಲ್ ರಾಕ್
  • ಐಸ್ಲ್ಯಾಂಡ್​​ ಇನ್​​ ಬಿಟ್​​​ವೀನ್​​
  • ದಿ ಲಾಸ್ಟ್ ರಿಪೈರ್ ಶಾಪ್​
  • Nǎi Nai & Wài Pó

ಇಂಟರ್​ನ್ಯಾಷನಲ್​ ಫೀಚರ್​ ಫಿಲ್ಮ್:

  • ಐಓ ಕ್ಯಾಪಿಟಾನೊ (ಇಟಲಿ)
  • ಪರ್ಫೆಕ್ಟ್ ಡೇಸ್ಟ್ (ಜಪಾನ್)
  • ಸೊಸೈಟಿ ಆಫ್ ದಿ ಸ್ನೋ (ಸ್ಪೇನ್)
  • ದಿ ಟೀಚರ್ಸ್ ಲಾಂಜ್​ (ಜರ್ಮನಿ)
  • ದಿ ಝೋನ್​​ ಆಫ್​​ ಇಂಟ್ರೆಸ್ಟ್ (ಯುನೈಟೆಡ್ ಕಿಂಗ್‌ಡಮ್)

ಅನಿಮೇಟೆಡ್ ಫೀಚರ್ ಫಿಲ್ಮ್:

  • ದಿ ಬಾಯ್​ ಆ್ಯಂಡ್​​ ಹೆರಾನ್
  • ಎಲಿಮೆಂಟಲ್
  • ನಿಮೋನಾ
  • ರೋಬೋಟ್ ಡ್ರೀಮ್ಸ್
  • ಸ್ಪೈಡರ್ ಮ್ಯಾನ್: ಅಕ್ರಾಸ್​ ದ ಸ್ಪೈಡರ್ ವರ್ಸ್
  • ಬಾರ್ಬಿ

ಮೇಕಪ್ ಮತ್ತು ಹೇರ್​ಸ್ಟೈಲ್​:

  • ಗೋಲ್ಡಾ
  • ಮಾಯೆಸ್ಟ್ರೋ
  • ಒಪನ್‌ಹೈಮರ್
  • ಪೂವರ್ ಥಿಂಗ್ಸ್
  • ಸೊಸೈಟಿ ಆಫ್ ದಿ ಸ್ನೋ

ಪ್ರೊಡಕ್ಷನ್​ ಡಿಸೈನ್​:

  • ಬಾರ್ಬಿ
  • ಕಿಲ್ಲರ್ಸ್ ಆಫ್​​ ದಿ ಫ್ಲವರ್ ಮೂನ್​
  • ನೆಪೋಲಿಯನ್
  • ಒಪನ್‌ಹೈಮರ್
  • ಪೂವರ್ ಥಿಂಗ್ಸ್

ಫಿಲ್ಮ್ಸ್ ಎಡಿಟಿಂಗ್​:

  • ಅನಾಟಮಿ ಆಫ್ ಎ ಫಾಲ್​
  • ದಿ ಹೋಲ್ಡೋವರ್ಸ್
  • ಕಿಲ್ಲರ್ಸ್ ಆಫ್​ ದಿ ಫ್ಲವರ್ ಮೂನ್​​
  • ಒಪನ್‌ಹೈಮರ್
  • ಪೂವರ್ ಥಿಂಗ್ಸ್

ಸಿನಿಮಾಟೋಗ್ರಫಿ:

  • ಎಲ್ ಕಾಂಡೆ
  • ಕಿಲ್ಲರ್ಸ್ ಆಫ್​ ದಿ ಫ್ಲವರ್ ಮೂನ್​​
  • ಮಾಯೆಸ್ಟ್ರೋ
  • ಒಪನ್‌ಹೈಮರ್
  • ಪೂವರ್ ಥಿಂಗ್ಸ್

ವಿಷ್ಯುವಲ್ ಎಫೆಕ್ಟ್ಸ್:

  • ದಿ ಕ್ರಿಯೇಟರ್​​
  • ಗಾಡ್ಜಿಲ್ಲಾ ಮೈನಸ್ ಒನ್
  • ಗ್ಯಾಲಾಕ್ಸಿ ಆಫ್​ ಗಾರ್ಡಿಯನ್ಸ್: 3
  • ಮಿಷನ್ ಇಂಪಾಸಿಬಲ್
  • ನೆಪೋಲಿಯನ್

ಲೀಡಿಂಗ್​ ರೋಲ್​ ಆ್ಯಕ್ಟರ್:

  • ಬ್ರಾಡ್ಲಿ ಕೂಪರ್ - ಮಾಯೆಸ್ಟ್ರೋ
  • ಕೋಲ್ಮನ್ ಡೊಮಿಂಗೊ - ರಸ್ಟಿನ್
  • ಪೌಲ್ ಗಿಯಾಮಟ್ಟಿ - ದಿ ಹೋಲ್ಡೋವರ್ಸ್
  • ಸಿಲಿಯನ್ ಮರ್ಫಿ - ಒಪನ್‌ಹೈಮರ್
  • ಜೆಫ್ರೆ ರೈಟ್ - ಅಮೇರಿಕನ್ ಫಿಕ್ಷನ್

ಲೀಡಿಂಗ್​ ರೋಲ್​ ಆ್ಯಕ್ಟ್ರೆಸ್​:

  • ಆನೆಟ್ ಬೆನಿಂಗ್ - ನ್ಯಾಡ್
  • ಲಿಲಿ ಗ್ಲ್ಯಾಡ್‌ಸ್ಟೋನ್ - ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್
  • ಸ್ಯಾಂಡ್ರಾ ಹಲ್ಲರ್ - ಅನಾಟಮಿ ಆಫ್ ಎ ಫಾಲ್
  • ಕಾರೆ ಮುಲ್ಲಿಗನ್ - ಮಾಯೆಸ್ಟ್ರೋ
  • ಎಮ್ಮಾ ಸ್ಟೋನ್ - ಪೂವರ್ ಥಿಂಗ್ಸ್

ನಿರ್ದೇಶನ:

  • ಜಸ್ಟಿನ್ ಟ್ರೈಟ್ - ಅನಾಟಮಿ ಆಫ್ ಎ ಫಾಲ್
  • ಮಾರ್ಟಿನ್ ಸ್ಕಾರ್ಸೆಸೆ - ಕಿಲ್ಲರ್ಸ್ ಆಫ್​ ದಿ ಫ್ಲವರ್​ ಮೂನ್​​
  • ಕ್ರಿಸ್ಟೋಫರ್ ನೋಲನ್ - ಒಪನ್‌ಹೈಮರ್
  • ಯೋರ್ಗೋಸ್ ಲ್ಯಾಂಥಿಮೋಸ್ - ಪೂವರ್ ಥಿಂಗ್ಸ್
  • ಜೊನಾಥನ್ ಗ್ಲೇಜರ್ - ದಿ ಝೋನ್​ ಆಫ್​ ಇಂಟ್ರೆಸ್ಟ್

ಬೆಸ್ಟ್ ಪಿಕ್ಚರ್:

  • ಅಮೆರಿಕನ್ ಫಿಕ್ಷನ್
  • ಅನಾಟಮಿ ಆಫ್​ ಎ ಫಾಲ್​​
  • ಬಾರ್ಬಿ
  • ಹೋಲ್ಡೋವರ್ಸ್
  • ಕಿಲ್ಲರ್ಸ್ ಆಫ್​ ದಿ ಫ್ಲವರ್​ ಮೂನ್​​
  • ಮಾಯೆಸ್ಟ್ರೋ
  • ಒಪನ್‌ಹೈಮರ್
  • ಪಾಸ್ಟ್ ಲೈವ್ಸ್
  • ಪೂವರ್ ಥಿಂಗ್ಸ್
  • ದಿ ಝೋನ್​ ಆಫ್​​ ಇಂಟ್ರೆಸ್ಟ್

ಇದನ್ನೂ ಓದಿ:ಗ್ರ್ಯಾಂಡ್‌ ಫಿನಾಲೆ ಹೊಸ್ತಿಲಲ್ಲಿ ಬಿಗ್‌ ಬಾಸ್ ಕನ್ನಡ: ಟ್ರೋಫಿ ಗೆಲ್ಲುವ ಸ್ಪರ್ಧಿ ಯಾರು?

ABOUT THE AUTHOR

...view details