ETV Bharat / state

ವಿಧಾನಸೌಧ ಆವರಣದಲ್ಲಿ ಮೂರು ದಿನ ಪುಸ್ತಕ, ಆಹಾರ ಮೇಳ: ಸ್ಪೀಕರ್ ಯು.ಟಿ.ಖಾದರ್ - BOOK AND FOOD FAIR

ವಿಧಾನಸೌಧ ಆವರಣದಲ್ಲಿ ಮೂರು ದಿನಗಳ ಕಾಲ ಪುಸ್ತಕ ಹಾಗೂ ಆಹಾರ ಮೇಳಗಳನ್ನು ಆಯೋಜನೆ ಮಾಡಲಾಗುತ್ತಿದೆ.

u t khader
ಯು.ಟಿ.ಖಾದರ್ (ETV Bharat)
author img

By ETV Bharat Karnataka Team

Published : Jan 24, 2025, 4:38 PM IST

ಬೆಂಗಳೂರು: ವಿಧಾನಸೌಧದ ಆವರಣದಲ್ಲಿ ಪುಸ್ತಕ ಮೇಳ ಹಾಗೂ ಆಹಾರ ಮೇಳ ನಡೆಸಲು ಸ್ಪೀಕರ್ ಯು.ಟಿ.ಖಾದರ್ ತೀರ್ಮಾನಿಸಿದ್ದಾರೆ. ಈ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾಹಿತಿ ನೀಡಿದ್ದಾರೆ.

ಕರ್ನಾಟಕ ವಿಧಾನಸಭೆ ಸಚಿವಾಲಯದ ವತಿಯಿಂದ‌ ಪುಸ್ತಕ ಮೇಳ ಹಾಗೂ ಸಾಹಿತ್ಯ ಮೇಳ ಮಾಡಲು ತೀರ್ಮಾನಿಸಲಾಗಿದೆ. ವಿಧಾನಸೌಧದ ಆವರಣದಲ್ಲಿ ಪುಸ್ತಕ ಮೇಳ ನಡೆಸಲಾಗುತ್ತದೆ. ಫೆ.28ರಿಂದ ಮಾರ್ಚ್ 3ರವರೆಗೆ ಪುಸ್ತಕ ಮೇಳ ಹಾಗೂ ಸಾಹಿತ್ಯ ಮೇಳ ಕೈಗೊಳ್ಳಲಾಗುವುದು. ಸಿಎಂ ಸಿದ್ದರಾಮಯ್ಯ ಪುಸ್ತಕ ಮೇಳ ಉದ್ಘಾಟನೆ ಮಾಡಲಿದ್ದಾರೆ ಎಂದು ಸ್ಪೀಕರ್ ತಿಳಿಸಿದರು.

ಸಾಹಿತಿಗಳು, ಪುಸ್ತಕಪ್ರಿಯರು, ವಿದ್ಯಾರ್ಥಿಗಳನ್ನು ವಿಧಾನಸೌಧದ ಹತ್ತಿರಗೊಳಿಸಲು ಇದು ಸಹಕಾರಿಯಾಗಲಿದೆ. ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಾಗಾರ, ಪುಸ್ತಕ ಬಿಡುಗಡೆ ಹಾಗೂ ಉತ್ತಮ ಪುಸ್ತಕಕ್ಕೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮಾಡಲಾಗುವುದು. ಶಾಸಕರು ತಮ್ಮ ನಿಧಿಯಿಂದ‌ ಮೂರು ಲಕ್ಷ ರೂ‌. ಬಳಸಿ ಪುಸ್ತಕ ಖರೀದಿಸಿ ಅವರ ಕ್ಷೇತ್ರದ ಲೈಬ್ರರಿಗೆ ಕೊಡಬಹುದಾಗಿದೆ. ಕಡಿಮೆ ದರದಲ್ಲಿ ಪುಸ್ತಕ ಸಿಗುವಂತೆ ಮಾಡಲಾಗುವುದು ಎಂದರು.

ಪುಸ್ತಕ ಮೇಳದ ಜೊತೆ ಆಹಾರ ಮೇಳ: ಪುಸ್ತಕ ಮೇಳದ ಜೊತೆಗೆ ಆಹಾರ ಮೇಳವನ್ನೂ ವಿಧಾನಸೌಧದಲ್ಲಿ ಆಯೋಜಿಸಲಾಗುವುದು. ಸಂಜೆ ಸಮಯ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಪುಸ್ತಕ ಮೇಳಕ್ಕೆ ಬಂದವರಿಗೆ ಆಹಾರ ಮೇಳವನ್ನೂ ಆಯೋಜಿಸಲಾಗಿದೆ ಎಂದು ಇದೇ ವೇಳೆ ಯು.ಟಿ. ಖಾದರ್​ ತಿಳಿಸಿದರು.

ಇದನ್ನೂ ಓದಿ: ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ: ಇಂದು ಜನಿಸಿದ ಹೆಣ್ಣು ಶಿಶುವಿಗೆ ಸರಕಾರದಿಂದ ಸ್ಪೆಶಲ್ ಗಿಫ್ಟ್

ಪುಸ್ತಕ ಮೇಳಕ್ಕೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಇರಲಿದೆ. ಶಾಲಾ ಕಾಲೇಜುಗಳ ಮಕ್ಕಳಿಗೆ ಹೆಚ್ಚಿನ ಅವಕಾಶ ನೀಡಲಾಗುವುದು. ಕನ್ನಡ ಪುಸ್ತಕ ಪ್ರಾಧಿಕಾರ, ಖಾಸಗಿ ಮುದ್ರಣದವರು ಸೇರಿ ಯಾವೆಲ್ಲ ಪುಸ್ತಕಗಳು, ಸಂವಾದ, ಗೋಷ್ಠಿಗಳನ್ನು ಮಾಡುವ ಬಗ್ಗೆ ತೀರ್ಮಾನಿಸಲಿದ್ದಾರೆ ಎಂದರು.

ಯಾರೆಲ್ಲಾ ಸಾಹಿತಿಗಳನ್ನು ಕರೆಸುತ್ತೀರಿ ಎಂಬ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಮಗೆ ಎಡವೂ ಇಲ್ಲ, ಬಲವೂ ಇಲ್ಲ, ನಮ್ಮದು ಸ್ಟ್ರೇಟ್. ಗೇಟ್​​ನ ಹೊರಗಡೆ ಎಡ, ಬಲ ಇರಲಿ‌. ಆದರೆ ಒಳಗೆ ಬಂದ ಬಳಿಕ ನೇರವಾಗಿ ಇರಲಿ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ಇದನ್ನೂ ಓದಿ: 2 ಲಕ್ಷ ಹೂವುಗಳಲ್ಲಿ ಐಫೆಲ್​ ಟವರ್​, ಎಲೆಗಳಿಂದ ಕಂಬಳ ಕೋಣ: ಗಮನ ಸೆಳೆದ ಮಂಗಳೂರು ಫಲಪುಷ್ಪ ಪ್ರದರ್ಶನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.