ಅಂಚೆ ಇಲಾಖೆಯು ಹಲವು ಉಳಿತಾಯ ಯೋಜನೆಗಳನ್ನು ಹೊಂದಿದ್ದು, ಇಲ್ಲಿಯೂ ಸಹ ಹೂಡಿಕೆ ಮಾಡುವ ಮೂಲಕ ಹೂಡಿಕೆಗಾರರು ಉತ್ತಮ ಆದಾಯವನ್ನು ಪಡೆಯಬಹುದು. ದೀರ್ಘಾವಧಿಗೆ ಉಳಿತಾಯ ಮಾಡಲು ಯೋಜಿಸುವವರಿಗೆ ಅಂಚೆ ಕಚೇರಿ ಉಳಿತಾಯ ಯೋಜನೆಗಳು ಉತ್ತಮ.
ಇದು ಹೆಚ್ಚು ಸುರಕ್ಷಿತವೂ ಕೂಡ ಹೌದು. ಅಂಚೆ ಕಚೇರಿಯ ಆರ್‌ಡಿ (RD - ರಿಕರಿಂಗ್ ಡೆಪಾಸಿಟ್) ಯೋಜನೆಯು ಉತ್ತಮ ಆದಾಯ ತಂದಕೊಡಬಲ್ಲ ದಾರಿಯಾಗಿದ್ದರಿಂದ ನೀವು ತಿಂಗಳಿಗೆ ಕನಿಷ್ಠ 100 ರೂ.ಗಳಿಂದ ಹೂಡಿಕೆ ಮಾಡಬಹುದಾಗಿದೆ. ಉದ್ಯೋಗದಲ್ಲಿರುವವರು/ವ್ಯವಹಾರ ನಡೆಸುತ್ತಿರುವವರು ಅಂಚೆ ಕಚೇರಿಯ ಆರ್‌ಡಿ ಯೋಜನೆಯಲ್ಲಿ ಪ್ರತಿ ತಿಂಗಳು ರೂ. 5,000 ಠೇವಣಿ ಇಟ್ಟರೆ, ಕೆಲವು ವರ್ಷಗಳ ನಂತರ ಅದು ರೂ. 8.54 ಲಕ್ಷವಾಗುತ್ತದೆ. ಅದು ಹೇಗೆ ಎಂದು ಈ ಲೇಖನದಲ್ಲಿ ನೋಡೋಣ.
ತಿಂಗಳಿಗೆ ರೂ. 5,000 ಠೇವಣಿ ಇಟ್ಟರೆ ಏನಾಗುತ್ತದೆ? ಉದಾಹರಣೆಗೆ, ನೀವು ಅಂಚೆ ಕಚೇರಿಯ ಆರ್‌ಡಿ ಯೋಜನೆಯಲ್ಲಿ ಪ್ರತಿ ತಿಂಗಳು ರೂ. 5,000 ಠೇವಣಿ ಇಡುತ್ತೀರಿ ಎಂದು ಭಾವಿಸೋಣ. ಇದು ವರ್ಷಕ್ಕೆ 60,000 ರೂ.ಗಳನ್ನು ಆಗುತ್ತದೆ. ಐದು ವರ್ಷಗಳಲ್ಲಿ ಇದು 3 ಲಕ್ಷ ರೂ.ಗಳಾಗುತ್ತದೆ. ಇವುಗಳ ಮೇಲೆ ಐದು ವರ್ಷಗಳಲ್ಲಿ ನಿಮಗೆ ಶೇ. 6.7 ರಷ್ಟು ಬಡ್ಡಿ ಆದಾಯ ಸಿಗುತ್ತದೆ. ಅದೇ ಸರಿಸುಮಾರು ರೂ.56,830 ಆಗಿರುತ್ತದೆ. ಒಂದು ವೇಳೆ ನೀವು ಈ ಯೋಜನೆಯನ್ನು ಇನ್ನೂ ಐದು ವರ್ಷಗಳ ಕಾಲ ಮುಂದುವರಿಸಿದರೆ, ನಿಮಗೆ ಇನ್ನೂ ಹೆಚ್ಚಿನ ಪ್ರಯೋಜನಗಳು ಸಿಗುತ್ತವೆ. ಒಟ್ಟು 10 ವರ್ಷಗಳಲ್ಲಿ ನೀವು ಈ ಯೋಜನೆಯಲ್ಲಿ ಠೇವಣಿ ಇಟ್ಟಿರುವ ಮೊತ್ತ 6 ಲಕ್ಷ ರೂ.ಗಳನ್ನು ತಲುಪುತ್ತದೆ. ಶೇ. 6.7 ರಷ್ಟು ಬಡ್ಡಿ ಸೇರಿದಂತೆ, ನಿಮ್ಮ ಕೈಯಲ್ಲಿ 8,54,272 ರೂ.ಗಳು ಸಿಗುತ್ತದೆ. ಇದು ಸಾಧ್ಯಾನಾ ಅಂತಾ ನಿಮಗನಿಸಬಹುದು, ಖಂಡಿತ ಸಾಧ್ಯವಿದೆ.
ಸಾಲವನ್ನೂ ನೀವು ಪಡೆದುಕೊಳ್ಳಬಹುದು: ಈ ಅಂಚೆ ಕಚೇರಿಯ ಆರ್‌ಡಿ ಯೋಜನೆಯಲ್ಲಿ ನೀವು ಠೇವಣಿ ಇಟ್ಟಿರುವ ಮೊತ್ತದ 50 ಪ್ರತಿಶತವನ್ನು ಸಾಲವಾಗಿ ತೆಗೆದುಕೊಳ್ಳಬಹುದು. ಅದು ಖಾತೆಯು ಒಂದು ವರ್ಷದವರೆಗೆ ಸಕ್ರಿಯವಾದ ನಂತರ. ಈ ಸಾಲದ ಮೇಲಿನ ಬಡ್ಡಿ ದರವು ನೀವು ಮರುಕಳಿಸುವ ಠೇವಣಿಯ ಮೇಲೆ ಪಡೆಯುವ ಬಡ್ಡಿಗಿಂತ ಶೇ. 2 ರಷ್ಟು ಮಾತ್ರ ಹೆಚ್ಚಾಗಿರುತ್ತದೆ. ಆದಾಗ್ಯೂ, ಈ ಯೋಜನೆಯಲ್ಲಿ ಕನಿಷ್ಠ ಕೆಲವು ವರ್ಷಗಳ ಕಾಲ ಮುಂದುವರಿದ ನಂತರವೇ ಸಾಲ ಪಡೆಯುವ ಅವಕಾಶ ಲಭ್ಯವಿದೆ. ಆದರೆ, ಬಯಸಿದಾಗಲೆಲ್ಲಾ ಈ ಯೋಜನೆಯಿಂದ ಹೊರಬರಲು ಸಾಧ್ಯವಿಲ್ಲ. ಕನಿಷ್ಠ ಮೂರು ವರ್ಷಗಳ ನಂತರವೇ ಈ ಯೋಜನೆಯಿಂದ ಹಿಂದೆ ಸರಿಯುವ ಅವಕಾಶ ಇಲ್ಲಿದೆ.
ಮಕ್ಕಳಿಗಾಗಿ ಸೂಪರ್ ಯೋಜನೆ: ಮಕ್ಕಳ ಭವಿಷ್ಯದ ಅಗತ್ಯಗಳನ್ನು ಪೂರೈಸಲು ಭಾರತೀಯ ಅಂಚೆ ಕಚೇರಿ ಪರಿಚಯಿಸಿದ ಈ ಯೋಜನೆಯ ಹೆಸರು 'ಬಾಲ್ ಜೀವನ್ ಬಿಮಾ ಯೋಜನೆ'. ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಇಚ್ಛಿಸುವವರು ತಮ್ಮ ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ದಿನಕ್ಕೆ ಕನಿಷ್ಠ 6 ರೂ.ಗಳಿಂದ ಗರಿಷ್ಠ 18 ರೂ.ಗಳವರೆಗೆ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಪೋಷಕರು ತಮ್ಮ ಮಕ್ಕಳ ಹೆಸರಿನಲ್ಲಿ ಉಳಿತಾಯ ಮಾಡಬಹುದು. ಮಕ್ಕಳ ಜೀವ ವಿಮಾ ಯೋಜನೆಯಲ್ಲಿ, 5 ರಿಂದ 20 ವರ್ಷದೊಳಗಿನ ಮಕ್ಕಳ ಹೆಸರಿನಲ್ಲಿ ಉಳಿತಾಯ ಮಾಡಬಹುದು. ಆದಾಗ್ಯೂ, ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಪೋಷಕರ ವಯಸ್ಸು 45 ವರ್ಷಗಳನ್ನು ಮೀರಬಾರದು.