ಕೆಜಿಎಫ್ ಸರಣಿ ಸಿನಿಮಾಗಳ ಮೂಲಕ ಅಭೂತಪೂರ್ವ ಯಶಸ್ಸು ಕಂಡಿರುವ ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಅವರೀಗ ತಮ್ಮ ಮುಂಬರುವ 'ಟಾಕ್ಸಿಕ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಗೀತು ಮೋಹನ್ ದಾಸ್ ನಿರ್ದೇಶನದ ಚಿತ್ರ ಸದ್ಯ ಗೋವಾದಲ್ಲಿ ಭರದ ಶೂಟಿಂಗ್ ನಡೆಸುತ್ತಿದೆ. ಹೊಸ ಅಪ್ಡೇಟ್ ಪ್ರಕಾರ, ಗೋವಾದಲ್ಲಿ ಸಾಂಗ್ ಶೂಟಿಂಗ್ ನಡೆಯುತ್ತಿದೆ ಎಂಬ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ.
ಗೋವಾದಲ್ಲಿ ಡ್ಯಾನ್ಸ್ ಶೂಟಿಂಗ್: ಕೆಜಿಎಫ್ ಸ್ಟಾರ್ ಯಶ್ ಹಾಗೂ ಮಲಯಾಳಂನ ಸ್ಟಾರ್ ಲೇಡಿ ಡೈರೆಕ್ಟರ್ ಗೀತು ಮೋಹನ್ ದಾಸ್ ಕಾಂಬಿನೇಷನ್ನಲ್ಲಿ ಬರುತ್ತಿರುವ ಟಾಕ್ಸಿಕ್ ಸುತ್ತ ಹಲವು ಅಂತೆಕಂತೆಗಳು ಕೇಳಿಬಂದಿವೆ. ಇತ್ತೀಚೆಗಷ್ಟೇ ಯಶ್ ಜನ್ಮದಿನದಂದು ಆಕರ್ಷಕ ಗ್ಲಿಂಪ್ಸ್ ರಿಲೀಸ್ ಆಯ್ತು ಅನ್ನೋದು ಬಿಟ್ರೆ ನಾಯಕ ನಟಿ ಸೇರಿದಂತೆ ಚಿತ್ರಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಇನ್ನಷ್ಟೇ ಅಧಿಕೃತವಾಗಿ ಘೋಷಣೆಯಾಗಬೇಕಿದೆ. ಆದ್ರೀಗ ಗೋವಾದಲ್ಲಿ ಸಿನಿಮಾದ ಸಾಂಗ್ ಒಂದು ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿದೆ ಅನ್ನೋ ಗುಸುಗುಸು ಕೇಳಿ ಬಂದಿದೆ.
— Yash Trends ™ (@YashTrends) January 23, 2025
ಡೊಡ್ಡ ಮಟ್ಟದಲ್ಲಿ ಚಿತ್ರೀಕರಣ: ಜನವರಿ 8ರಂದು ಅನಾವರಣಗೊಂಡ ಯಶ್ ಬರ್ತ್ಡೇ ಪೀಕ್ ಈಗಾಗಲೇ ಅಭಿಮಾನಿಗಳು ಮತ್ತು ವಿಮರ್ಶಕರಿಂದ ಗಮನಾರ್ಹ ಪ್ರತಿಕ್ರಿಯೆ ಸ್ವೀಕರಿಸಿದೆ. ಸಿನಿಮಾದ ಸುತ್ತಲಿನ ಸುದ್ದಿಗಳು ತೀವ್ರಗೊಳ್ಳುತ್ತಿದ್ದಂತೆ, ಚಿತ್ರೀಕರಣಕ್ಕೆ ಸಂಬಂಧಿಸಿದ ಸುದ್ದಿಯೊಂದು ಇದೀಗ ಭಾರಿ ಸುದ್ದಿ ಮಾಡುತ್ತಿದೆ. ಬಾಲಿವುಡ್ ಬಹುಬೇಡಿಕೆ ನಟಿ ಕಿಯಾರಾ ಅಡ್ವಾಣಿ ಜೊತೆ ಅತ್ಯಾಕರ್ಷಕ ಡ್ಯಾನ್ಸ್ನ ಚಿತ್ರೀಕರಣ ಡೊಡ್ಡ ಮಟ್ಟದಲ್ಲೇ ನಡೆಯುತ್ತಿದೆಯಂತೆ. ಅದಾಗ್ಯೂ, ಅಭಿಮಾನಿಗಳು ಚಿತ್ರತಂಡದಿಂದ ಅಧಿಕೃತ ಘೋಷಣೆಗೆ ನಿರೀಕ್ಷಿಸಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ವಿಭಿನ್ನ ಸ್ಟಾರ್ಡಮ್ ಹೊಂದಿರುವ ರಾಕಿಂಗ್ ಸ್ಟಾರ್ ಯಶ್ ಜೊತೆ ಯಾರು ತೆರೆ ಹಂಚಿಕೊಳ್ಳಲಿದ್ದಾರೆ ಅನ್ನೋ ಕುತೂಹಲ ಪ್ರೇಕ್ಷಕರಲ್ಲಿ ಮನೆ ಮಾಡಿದೆ. ಕಿಯಾರಾ ಅಡ್ವಾಣಿ ಜೊತೆ ಸೌತ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಅವರ ಹೆಸರೂ ಕೇಳಿಬಂದಿದೆ. ಚಿತ್ರತಂಡದಿಂದ ಇನ್ನಷ್ಟೇ ಅಧಿಕೃತವಾಗಿ ಘೋಷಣೆಯಾಗಬೇಕಿದೆ.
ವದಂತಿಗಳ ಬೆನ್ನಲ್ಲೇ 2024ರ ನವೆಂಬರ್ 10ರಂದು ಮುಂಬೈನ ವರ್ಸೋವಾ ಬೀಚ್ ಬಳಿ ಕಿಯಾರಾ ಅಡ್ವಾಣಿ ಹಾಗೂ ಕೆಜಿಎಫ್ ಸ್ಟಾರ್ ಯಶ್ ಕಾಣಿಸಿಕೊಂಡ ಹಿನ್ನೆಲೆ ಇವರಿಬ್ಬರು ತೆರೆ ಹಂಚಿಕೊಂಡಿರೋದು ಬಹುತೇಕ ಪಕ್ಕಾ ಆಗಿದೆ.
ಇದನ್ನೂ ಓದಿ: 2025ರ ಬಹುನಿರೀಕ್ಷಿತ ಸಿನಿಮಾ: ಸಲ್ಮಾನ್ ಸಿಕಂದರ್ or ಯಶ್ ಟಾಕ್ಸಿಕ್; ಯಾವುದು ನಂ.1?
ಟಾಕ್ಸಿಕ್ ಚಿತ್ರೀಕರಣ 2024ರ ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ಪ್ರಾರಂಭವಾಯಿತು. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್‌ಗಳ ಅಡಿಯಲ್ಲಿ ವೆಂಕಟ್ ಕೆ.ನಾರಾಯಣ್ ಹಾಗೂ ನಾಯಕ ನಟ ಯಶ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಖ್ಯಾತ ನಿರ್ದೇಶಕಿ ಗೀತು ಮೋಹನ್‌ದಾಸ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.