ಕರ್ನಾಟಕ

karnataka

ETV Bharat / entertainment

ಸೈಫ್ ಅಲಿ ಖಾನ್ ಪ್ರಕರಣದಲ್ಲಿ ಯಾರನ್ನೂ ವಶಕ್ಕೆ ಪಡೆಯಲಾಗಿಲ್ಲ: ಮುಂಬೈ ಪೊಲೀಸರು ಸ್ಪಷ್ಟನೆ - SAIF ALI KHAN

ಬಾಲಿವುಡ್​ ನಟನಿಗೆ ಚಾಕುವಿನಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತನೋರ್ವನನ್ನು ವಶಕ್ಕೆ ಪಡೆಯಲಾಗಿತ್ತು ಎಂದು ವರದಿಗಳಾಗಿತ್ತು. ಆದ್ರೆ ಮುಂಬೈ ಪೊಲೀಸರು ಈವರೆಗೆ ಯಾರನ್ನೂ ವಶಕ್ಕೆ ಪಡೆದಿಲ್ಲ ಎಂದು ತಿಳಿಸಿದ್ದಾರೆ.

Saif Ali Khan case
ಸೈಫ್ ಅಲಿ ಖಾನ್ ಪ್ರಕರಣ (Photo: ANI)

By ETV Bharat Entertainment Team

Published : Jan 17, 2025, 4:10 PM IST

ಮುಂಬೈ (ಮಹಾರಾಷ್ಟ್ರ): ಬಾಲಿವುಡ್​ ನಟ ಸೈಫ್ ಅಲಿ ಖಾನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಯಾರನ್ನೂ ವಶಕ್ಕೆ ಪಡೆಯಲಾಗಿಲ್ಲ ಎಂದು ಮುಂಬೈ ಪೊಲೀಸರು ಇಂದು ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಬಾಂದ್ರಾ ಪೊಲೀಸ್ ಠಾಣೆಗೆ ವಿಚಾರಣೆಗಾಗಿ ಓರ್ವ ವ್ಯಕ್ತಿಯನ್ನು ಕರೆತರಲಾಗಿದೆ ಎಂದು ವರದಿಯಾಗಿತ್ತು. ವಿಡಿಯೋ ಕೂಡಾ ವೈರಲ್​ ಆಗಿತ್ತು. ಆದ್ರೀಗ ಪೊಲೀಸರು, ಆ ವ್ಯಕ್ತಿ ಸೈಫ್ ಅಲಿ ಖಾನ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಯಾವುದೇ ಸಂಬಂಧ ಹೊಂದಿಲ್ಲ ಎಂದು ಹೇಳಿದ್ದಾರೆ.

ಯಾವುದೇ ಗ್ಯಾಂಗ್ ಭಾಗಿಯಾಗಿಲ್ಲ: ಸಚಿವ ಯೋಗೇಶ್ ಕದಮ್ ಮಾತನಾಡಿ, ಈ ಘಟನೆಯಲ್ಲಿ ಯಾವುದೇ ಗ್ಯಾಂಗ್ ಭಾಗಿಯಾಗಿಲ್ಲ ಎಂದು ಹೇಳಿದ್ದಾರೆ. ಇದು ಕೇವಲ ಕಳ್ಳತನದ ಪ್ರಯತ್ನವಾಗಿತ್ತು. ಘಟನೆಯಲ್ಲಿ ಯಾವುದೇ ಗ್ಯಾಂಗ್ ಭಾಗಿಯಾಗಿಲ್ಲ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.

ಕಳ್ಳತನದ ಉದ್ದೇಶದಿಂದಲೇ ಮನೆಗೆ ಪ್ರವೇಶ...ಸೈಫ್ ಅಲಿ ಖಾನ್ ಎಂದಿಗೂ ಯಾವುದೇ ಭದ್ರತೆಯನ್ನು ಕೇಳಿಲ್ಲ. ಈ ದಾಳಿ ಯಾವುದೇ ಗ್ಯಾಂಗ್‌ನ ಭಾಗವಾಗಿರಲಿಲ್ಲ. ಆರೋಪಿ ಕಳ್ಳತನದ ಉದ್ದೇಶದಿಂದಲೇ ಮನೆಗೆ ಪ್ರವೇಶಿಸಿದ್ದನು. ಸೈಫ್ ಅಲಿ ಖಾನ್ ಮತ್ತು ಆರೋಪಿ ನಡುವೆ ಜಗಳ ನಡೆದಿದ್ದು, ಘಟನೆಯಲ್ಲಿ ನಟ ಗಾಯಗೊಂಡಿದ್ದಾರೆ ಎಂದು ತಿಳಿಸಿದರು.

ಐಸಿಯುನಿಂದ ವಿಶೇಷ ಕೊಠಡಿಗೆ ಸ್ಥಳಾಂತರ:ಬಾಲಿವುಡ್ ಬಹುಬೇಡಿಕೆ ನಟನ ಆರೋಗ್ಯದ ಬಗ್ಗೆ ಕಳವಳ ವ್ಯಕ್ತವಾದ ಬೆನ್ನಲ್ಲೇ, ಲೀಲಾವತಿ ಆಸ್ಪತ್ರೆಯ ವೈದ್ಯ ನಿತಿನ್ ಡಾಂಗೆ ಮಾತನಾಡಿ, ನಟ ಸುರಕ್ಷಿತವಾಗಿದ್ದಾರೆ. ಚೇತರಿಸಿಕೊಳ್ಳುತ್ತಿದ್ದಾರೆ ಎಂದು ದೃಢಪಡಿಸಿದರು. ಸೈಫ್ ಅಲಿ ಖಾನ್ ಅವರನ್ನು ಐಸಿಯುನಿಂದ ವಿಶೇಷ ಕೊಠಡಿಗೆ ಸ್ಥಳಾಂತರಿಸಲಾಗಿದೆ.

ಇದನ್ನೂ ಓದಿ:ಸೈಫ್​ ಐಸಿಯುನಿಂದ ಹೊರಕ್ಕೆ, ಶಂಕಿತ ವಶಕ್ಕೆ; 20 ಪೊಲೀಸ್​ ತಂಡಗಳ ರಚನೆ, ಇಲ್ಲಿದೆ ಕಂಪ್ಲೀಟ್​ ಡೀಟೆಲ್ಸ್​

ನಟ ಸೈಫ್ ಅಲಿ ಖಾನ್ ಗಾಯಗೊಂಡ ಮೊದಲ ಒಂದು ಗಂಟೆಯೊಳಗೆ ಅವರನ್ನು ಭೇಟಿ ಮಾಡಿದ ವೈದ್ಯರು ತಾವು ಎಂದು ಡಾ.ನೀರಜ್ ಉತ್ತಮಣಿ ಹೇಳಿಕೊಂಡರು. "ಅವರ ಮೈಯೆಲ್ಲಾ ರಕ್ತಸಿಕ್ತವಾಗಿತ್ತು. ಆದ್ರೆ ಅವರು ತಮ್ಮ ಚಿಕ್ಕ ಮಗುವಿನೊಂದಿಗೆ ಸಿಂಹದಂತೆ ನಡೆದು ಬಂದರು. ಅವರು ನಿಜವಾದ ಹೀರೋ. ಪ್ರಸ್ತುತ ಅವರ ಸ್ಥಿತಿ ಸುಧಾರಿಸಿದೆ. ಐಸಿಯುನಿಂದ ವಿಶೇಷ ಕೋಣೆಗೆ ಅವರನ್ನು ಸ್ಥಳಾಂತರಿಸಲಾಗಿದೆ. ಅವರು ವಿಶ್ರಾಂತಿ ಪಡೆಯಬೇಕಿದೆ ಎಂದು ಹೇಳಿದರು. ನಟನಿಗೆ ವಿಶ್ರಾಂತಿ ಪಡೆಯಲು ಸೂಚಿಸಲಾಗಿದೆ ಎಂದು ಡಾ.ಡಾಂಗೆ ತಿಳಿಸಿದ್ದಾರೆ.

ಇದನ್ನೂ ಓದಿ:100 ಹೊಲಿಗೆಗಳಿಂದ ಹಿಡಿದು ಕೆಲ ಶಸ್ತ್ರಚಿಕಿತ್ಸೆಗಳವರೆಗೆ: 5 ಬಾರಿ ಗಾಯಗೊಂಡ ಸೈಫ್ ಅಲಿ ಖಾನ್

ಇಂದು ಮುಂಜಾನೆ, ಸೈಫ್ ಅವರ ಬೆನ್ನಿನಿಂದ ಹೊರತೆಗೆದ ಬ್ಲೇಡ್‌ನ ಒಂದು ಭಾಗವನ್ನು ವಶಪಡಿಸಿಕೊಂಡಿದ್ದೇವೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಉಳಿದ ಭಾಗವನ್ನು ಪಡೆಯುವ ಪ್ರಯತ್ನಗಳು ನಡೆಯುತ್ತಿವೆ. ದಾಳಿಯಲ್ಲಿ ಭಾಗಿಯಾಗಿರುವ ಆರೋಪಿ ಬಾಂದ್ರಾ ರೈಲು ನಿಲ್ದಾಣದ ಬಳಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದಾನೆ. ಅವರನ್ನು ಬಂಧಿಸಲು ಶೋಧ ನಡೆಯುತ್ತಿದೆ. ಘಟನೆಯ ನಂತರ, ಶಂಕಿತನು ಬೆಳಿಗ್ಗೆ ಮೊದಲ ಸ್ಥಳೀಯ ರೈಲನ್ನು ಹಿಡಿದು ವಸೈ ವಿರಾರ್ ಕಡೆಗೆ ಹೋಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಮುಂಬೈ ಪೊಲೀಸ್ ತಂಡಗಳು ವಸೈ, ನಲಸೋಪಾರ ಮತ್ತು ವಿರಾರ್ ಪ್ರದೇಶಗಳಲ್ಲಿ ಶೋಧ ನಡೆಸುತ್ತಿವೆ. (ANI)

ABOUT THE AUTHOR

...view details