ಬಾಲಿವುಡ್ ನಟ ಶಾಹಿದ್ ಕಪೂರ್ ಅಭಿನಯದ ಮುಂಬರುವ ಬಹುನಿರೀಕ್ಷಿತ ಚಿತ್ರ 'ದೇವ' ಚಿತ್ರದ ಟ್ರೇಲರ್ ಇಂದು ಅನಾವರಣಗೊಂಡಿದೆ. ಈ ಟ್ರೇಲರ್ ಸೇಡು ಮತ್ತು ನ್ಯಾಯದ ಒಂದು ರೋಮಾಂಚಕಾರಿ ಕಥೆಯನ್ನು ಸಿನಿಮಾ ಒಳಗೊಂಡಿದೆ ಎಂಬ ಸುಳಿವು ನೀಡಿದೆ. ರೋಶನ್ ಆಂಡ್ರ್ಯೂಸ್ ನಿರ್ದೇಶನದ ಚಿತ್ರ ಜನವರಿ 31 ರಂದು ಚಿತ್ರಮಂದಿರ ಪ್ರವೇಶಿಸಲಿದೆ. ಜೀ ಸ್ಟುಡಿಯೋಸ್ ಮತ್ತು ಸಿದ್ಧಾರ್ಥ್ ರಾಯ್ ಕಪೂರ್ ನಿರ್ಮಾಣದ ಚಿತ್ರದ ಮೂಲಕ ಬಾಲಿವುಡ್ನ ಬಹುಬೇಡಿಕೆ ನಟ ಶಾಹಿದ್ ಸುಮಾರು ಒಂದು ವರ್ಷದ ನಂತರ ಬಿಗ್ ಸ್ಕ್ರೀನ್ಗೆ ಮರಳುತ್ತಿದ್ದಾರೆ.
ಟ್ರೇಲರ್ ಶಾಹಿದ್ ಕಪೂರ್ ಅವರ ಸೇಡಿನ ಡೈಲಾಗ್ ಮೂಲಕ ಶುರುವಾಗಿದೆ. ಭಯೋತ್ಪಾದಕರು ಅಧಿಕಾರಿಯನ್ನು ಕೊಂದಿದ್ದಾರೆ, ಹಾಗಾಗಿ ಈಗ ಮುಂಬೈ ಪೊಲೀಸರು ಸೇಡು ತೀರಿಸಿಕೊಳ್ಳಲು ಹೊರಟಿದ್ದಾರೆ ಎಂಬ ಡೈಲಾಗ್ ಇದಾಗಿದೆ. ಶಾಹಿದ್ ಒಬ್ಬ ಅಪರಾಧಿಗೆ "ನಾನು ಮಾಫಿಯಾ" ಎಂದು ಹೇಳಿದ್ದು, ಇದು ಅವರ ಪಾತ್ರದ 'ಮಾಸ್ ವ್ಯಕ್ತಿತ್ವ'ದ ಒಂದು ನೋಟವನ್ನು ಒದಗಿಸಿದೆ. ಈ ಟ್ರೇಲರ್ ಮರಾಠಿ ಡೋಲ್ ಸಂಗೀತದಿಂದ ಕೂಡಿದ್ದು, ಶಾಹಿದ್ ಅವರ ಡ್ಯಾನ್ಸ್ ಸ್ಟೆಪ್ ಅನ್ನೂ ಕಾಣಬಹುದು. 'ದೇವ' ಸಿನಿಮಾ ಆ್ಯಕ್ಷನ್ ಜೊತೆಗೆ ಭಾವನಾತ್ಮಕ ಅಂಶವನ್ನೂ ಹೊಂದಿದೆ. ಶಾಹಿದ್ ಕಪೂರ್ ಅವರ ಮಾಸ್ ಲುಕ್ ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.
ಇದನ್ನೂ ಓದಿ: ಸೈಫ್ ಐಸಿಯುನಿಂದ ಹೊರಕ್ಕೆ, ತನಿಖೆಗೆ 20 ಪೊಲೀಸ್ ತಂಡಗಳ ರಚನೆ: ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್
ಚಿತ್ರರಂಗದಲ್ಲಿ ತಮ್ಮದೇ ಬೇಡಿಕೆ ಹೊಂದಿರುವ ಶಾಹಿದ್ ಕಪೂರ್ ಕೊನೆಯದಾಗಿ 'ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ' ಚಿತ್ರದಲ್ಲಿ ಕಾಣಿಸಿಕೊಂಡರು. 2024ರ ಫೆ.9ರಂದು ತೆರೆಕಂಡ ಈ ಸಿನಿಮಾ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿತ್ತು. ಕೃತಿ ಸನೋನ್ ಜೊತೆ ಶಾಹಿದ್ ಕಪೂರ್ ಮೊದಲ ಬಾರಿ ತೆರೆಹಂಚಿಕೊಂಡಿದ್ದರು. ಅಮಿತ್ ಜೋಶಿ ಮತ್ತು ಆರಾಧಾನ ಶಾ ಆ್ಯಕ್ಷನ್ ಕಟ್ ಹೇಳಿದ್ದ ಸಿನಿಮಾದಲ್ಲಿ ಧರ್ಮೇಂದ್ರ ಮತ್ತು ಡಿಂಪಲ್ ಕಪಾಡಿಯಾ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇದೀಗ ಬಿಡುಗಡೆಗೆ ಎದುರು ನೋಡುತ್ತಿರುವ 'ದೇವ' ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ.
ಇದನ್ನೂ ಓದಿ: 'ಉಪ್ಪಿನಕಾಯಿ ವಿಷಯಕ್ಕೆ ಗೌತಮಿ.....': ಕೆಟ್ಟ ಘಟನೆ ನೆನಪಿಸಿಕೊಂಡ ಗೋಲ್ಡ್ ಸುರೇಶ್
ಕಬೀರ್ ಸಿಂಗ್ ಚಿತ್ರದಲ್ಲಿ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದ ಶಾಹಿದ್ ಕಪೂರ್, ಮತ್ತೊಮ್ಮೆ ಮಾಸ್ ಆ್ಯಕ್ಷನ್ ಚಿತ್ರಕ್ಕೆ ಸಜ್ಜಾಗಿದ್ದಾರೆ. ನಿರೀಕ್ಷೆಯಂತೆ ಈ ಚಿತ್ರದ ಟ್ರೇಲರ್ ಪ್ರೇಕ್ಷಕರ ಕುತೂಹಲ ಕೆರಳಿಸುವಲ್ಲಿ ಯಶಸ್ವಿಯಾಗಿದೆ. ತನ್ನ ಶತ್ರುಗಳನ್ನು ಒಬ್ಬೊಬ್ಬರಂತೆ ಕೊಲ್ಲತ್ತಾ ಬಂದಿದ್ದಾರೆ. ಶಾಹಿದ್ ಓರ್ವ ಪೊಲೀಸ್ ಅಧಿಕಾರಿಯಾಗಿದ್ದರೂ, ತನ್ನದೇ ರೀತಿಯಲ್ಲಿ ಅಧಿಕಾರ ಚಲಾಯಿಸುತ್ತಾರೆ. ಮತ್ತೊಮ್ಮೆ ನಿರ್ಭೀತ, ಅತ್ಯಂತ ಕೋಪಗೊಂಡ ಮತ್ತು ಅಪಾಯಕಾರಿ ಪಾತ್ರದಲ್ಲಿ ಪ್ರೇಕ್ಷಕರಿಗೆ ದರ್ಶನ ಕೊಡಲು ಸಜ್ಜಾಗಿದ್ದಾರೆ. ಕಬೀರ್ ಸಿಂಗ್ ಚಿತ್ರದ ಮಾಸ್ ಅವತಾರವನ್ನೂ ಮೀರಿಸುವಂತಿದೆ ಶಾಹಿದ್ ಕಪೂರ್ ಅವರ 'ದೇವ' ಟ್ರೇಲರ್.