ರಾಯಚೂರು: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ನಡೆದಿರುವ ದಾಳಿ ಆಘಾತ ಮೂಡಿಸಿದೆ ಎಂದು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹೇಳಿದ್ದಾರೆ.
ರಾಯಚೂರಿನಲ್ಲಿ ಖಾಸಗಿ ಜ್ಯುವೆಲ್ಲರಿ ಶಾಪ್ ಉದ್ಘಾಟಿಸಲು ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆಯಿಂದ ಶಾಕ್ ಆಗಿದ್ದೇನೆ. ಅವರು ಚೇತರಿಸಿಕೊಂಡು ಬೇಗ ಗುಣಮುಖವಾಗಲಿದ್ದಾರೆ. ಮುಂಬೈ ಪೊಲೀಸರು ಈ ಘಟನೆಗೆ ಕಾರಣನಾದವರನ್ನು ಪತ್ತೆ ಹಚ್ಚಿ ಬಂಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕನ್ನಡದ ಸಿನಿಮಾಗಳಲ್ಲಿ ನಟಿಸಲು ಅತ್ಯಂತ ಉತ್ಸುಕಳಾಗಿದ್ದೇನೆ. ಎರಡು ಸಿನಿಮಾಗಳು ನನ್ನ ಮುಂದೆ ಇವೆ. ಡೆವಿಲ್ ಹಾಗೂ ಕೆಡಿ ಚಿತ್ರಗಳಲ್ಲಿ ನಟಿಸಲಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ: ಸೈಫ್ ಅಲಿ ಖಾನ್‌ಗೆ ಇರಿತ: ಕರೀನಾ ಮಾಜಿ ಗೆಳೆಯ ಶಾಹಿದ್ ಕಪೂರ್ ಪ್ರತಿಕ್ರಿಯೆ - ವಿಡಿಯೋ ಇಲ್ಲಿದೆ