ETV Bharat / state

ಬಿಎಸ್​​ವೈ ವಿರುದ್ಧ ಮಾತನಾಡುವ ಭಿನ್ನಮತಿಯರನ್ನು ಪಕ್ಷದಿಂದಲೇ ಉಚ್ಛಾಟಿಸಲು ಮಾಜಿ ಶಾಸಕರ ಆಗ್ರಹ - FORMER MLAS DEMAND EXPULSION

ಮಾಜಿ ಸಿಎಂ ಯಡಿಯೂರಪ್ಪ ಬಗ್ಗೆ ಹಗುರವಾಗಿ ಮಾತನಾಡಿದರೆ ಸುಮ್ಮನಿರಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ರೇಣುಕಾಚಾರ್ಯ ಭಿನ್ನರಿಗೆ ತಿರುಗೇಟು ನೀಡಿದ್ದಾರೆ.

former-mlas-demand-expulsion-of-dissenters-from-the-party-itself
ಯಡಿಯೂರಪ್ಪ ವಿರುದ್ಧ ಮಾತನಾಡುವ ಭಿನ್ನಮತಿಯರನ್ನು ಪಕ್ಷದಿಂದಲೇ ಉಚ್ಛಾಟಿಸಲು ಮಾಜಿ ಶಾಸಕರ ಆಗ್ರಹ (ETV Bharat)
author img

By ETV Bharat Karnataka Team

Published : Jan 17, 2025, 9:49 PM IST

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ದ ಅನಗತ್ಯವಾಗಿ ಟೀಕೆ ಮಾಡುವುದನ್ನು ಮುಂದುವರೆಸಿದರೆ ಯಾವುದೇ ಕಾರಣಕ್ಕೂ ನಾವು ಸಹಿಸುವುದಿಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಮುಖಂಡ ಎಂ.ಡಿ. ಲಕ್ಷ್ಮಿನಾರಾಯಣ ಸೇರಿದಂತೆ ಮಾಜಿ ಶಾಸಕರು ಭಿನ್ನಮತೀಯ ನಾಯಕರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

ಸದಾಶಿನಗರದಲ್ಲಿರುವ ಮಾಜಿ ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು ಅವರ ನಿವಾಸದಲ್ಲಿ ಇಂದು ಮಾಜಿ ಶಾಸಕರಾದ ವೈ.ಸಂಪಂಗಿ, ಚಂದ್ರಪ್ಪ, ಮುನಿಶ್ಯಾಮಪ್ಪ ಸೇರಿದಂತೆ ಮತ್ತಿತರ ಜೊತೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಯಡಿಯೂರಪ್ಪ ಮೊದಲಿಗರು. ಅವರ ವಿರುದ್ಧ ರಮೇಶ್ ಜಾರಕಿಹೊಳಿ ಸೇರಿದಂತೆ ಯಾರೇ ಮಾತನಾಡಿದರೂ ನಾವು ಸುಮ್ಮನಿರುವುದಿಲ್ಲ ಗುಡುಗಿದರು.

ಹೈಕಮಾಂಡ್ ನಲ್ಲೂ ಈ ಬಗ್ಗೆ ಮನವಿ ಮಾಡಿದ್ದೇವೆ: ಎಂ.ಡಿ.ಲಕ್ಷ್ಮೀನಾರಾಯಣ ಅವರು ಮಾತನಾಡಿ, ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅವರು, ಯಾರೂ ಪತ್ರಿಕಾ ಹೇಳಿಕೆ ಕೊಡಬಾರದು ಎಂದು ಹೇಳಿದ್ದಾರೆ. ಆದಾಗ್ಯೂ ಕೆಲವರು ಮಾತನಾಡುತ್ತಿದ್ದಾರೆ. ಅವರ ಮೇಲೆ ಕ್ರಮ ಆಗಬೇಕು. ಹೈಕಮಾಂಡ್ ನಲ್ಲೂ ಈ ಬಗ್ಗೆ ಮನವಿ ಮಾಡಿದ್ದೇವೆ. ಯಾರಿಗಾದರೂ ಭಿನ್ನಾಭಿಪ್ರಾಯ ಇದ್ದರೂ ಪಕ್ಷದೊಳಗೆ ಚರ್ಚೆ ಮಾಡಿ. ಪಕ್ಷದ ಕಚೇರಿಗೆ ಬರದೇ ಎಲ್ಲೋ ಕುಳಿತು ಹೇಳಿಕೆ ನೀಡುವುದನ್ನು ಸಹಿಸುವುದಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಕೆಲವರು ಪಕ್ಷದ ಬಗ್ಗೆ, ಯಡಿಯೂರಪ್ಪ ಬಗ್ಗೆ ಮಾತನಾಡುತ್ತಾರೆ. ಕಾರ್ಯಕರ್ತರು ಇದನ್ನು ಸಹಿಸಲು ಸಾಧ್ಯವಿಲ್ಲ. ಬೀದರ್ ನಿಂದ ಚಾಮರಾಜನಗರದ ವರೆಗೆ ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ. ಪಕ್ಷದೊಳಗೆ ಏನೇ ಇದ್ದರೂ ಚರ್ಚೆ ಮಾಡಲು ಹಲವು ವೇದಿಕೆಗಳಿವೆ. ಯಡಿಯೂರಪ್ಪನವರು ಹಲವು ವರ್ಷಗಳಿಂದ ಪಕ್ಷ ಕಟ್ಟಿದ್ದಾರೆ. ಅವರಿಗೆ ಅವಹೇಳನ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ ಎಂದರು.

ಹಗುರವಾಗಿ ಮಾತನಾಡಿದರೆ ನಾವು ಮಾತನಾಡಬೇಕಾಗುತ್ತದೆ; ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ರಮೇಶ್ ಜಾರಕಿಹೊಳಿ ಎಂದೂ ಹಗುರವಾಗಿ ಮಾತನಾಡಿದವರಲ್ಲ. ಯಾರೋ ಅವರಿಗೆ ಯಡಿಯೂರಪ್ಪ ಮತ್ತು ಅವರ ಕುಟುಂಬದ ವಿರುದ್ಧ ಮಾತನಾಡಿ ಎಂದು ಹೇಳಿಕೊಟ್ಟಿರಬೇಕು. ಹೀಗಾಗಿ ಬಿಎಸ್‍ವೈ ವಿರುದ್ಧ ಹಗುರವಾಗಿ ಮಾತನಾಡಿದ್ದಾರೆ. ಇದೇ ರೀತಿ ಮಾತನಾಡಿದರೆ ನಾವು ಕೂಡ ಮಾತನಾಡಲೇಬೇಕಾಗುತ್ತದೆ. ಬಿಜೆಪಿಗೆ ರಮೇಶ್ ಜಾರಕಿಹೊಳಿಯನ್ನು ಕರೆತಂದಿದ್ದು ಯಡಿಯೂರಪ್ಪ. ಅನಗತ್ಯವಾಗಿ ಅವರನ್ನು ಟೀಕೆ ಮಾಡಿದರೆ ನಾವು ಸಹಿಸುವುದಿಲ್ಲ. ಇನ್ನು ಮುಂದೆ ಯಡಿಯೂರಪ್ಪ ಅವರ ಬಗ್ಗೆ ಮಾತಾಡಿದರೆ ತಕ್ಕ ಪಾಠ ಕಲಿಸುತ್ತೇವೆ ಎಂದು ವಾಗ್ದಾಳಿ ನಡೆಸಿದರು.

ರಮೇಶ್ ಜಾರಕಿಹೊಳಿ ಅವರು ಎರಡು ಪಕ್ಷ ಸುತ್ತಿ ಬಿಜೆಪಿಗೆ ಬಂದಿದ್ದೀರಿ. ಯಡಿಯೂರಪ್ಪ ಬಗ್ಗೆ ಹಗುರವಾಗಿ ಮಾತಾಡಿರುವುದು ನಮಗೆ, ಕಾರ್ಯಕರ್ತರಿಗೆ ನೋವು ತಂದಿದೆ. ನಿಮ್ಮ ಹೋರಾಟ ಕಾಂಗ್ರೆಸ್ ವಿರುದ್ಧ ಇರಬೇಕು, ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಅಲ್ಲ. ನಿಮ್ಮ ಹೇಳಿಕೆ ವಿರುದ್ಧ ಶಿಸ್ತುಕ್ರಮ ಜರುಗಿಸಲು ಹೈಕಮಾಂಡ್‍ಗೂ ತಿಳಿಸುತ್ತೇವೆ. ಮುಂದಿನ ವಾರ ಮತ್ತೊಂದು ಸಭೆ ನಡೆಸಿ ಒಂದು ತೀರ್ಮಾನ ಮಾಡುತ್ತೇವೆ ಎಂದರು.

ರಾಜ್ಯದಲ್ಲಿ ಪಕ್ಷ ಕಟ್ಟಿದ ಮಹಾನ್ ನಾಯಕ ಯಡಿಯೂರಪ್ಪನವರು. ಅಂಬಾಸಿಡರ್ ಕಾರ್, ಕೆಎಸ್ ಆರ್ ಟಿಸಿ ಬಸ್, ಸೈಕಲ್‍ನಲ್ಲಿ ಓಡಾಡಿ ಪಕ್ಷವನ್ನು ಸಂಘಟಿಸಿದ್ದಾರೆ. 46 ನೇ ವಯಸ್ಸಿನಲ್ಲಿ ಯಡಿಯೂರಪ್ಪ ಅಧ್ಯಕ್ಷರಾದವರು. ಒಬ್ಬರೇ ಶಾಸಕರಿದ್ದರೂ ಪಕ್ಷ ಕಟ್ಟಲು ಹೋರಾಟ ನಡೆಸಿದ್ದಾರೆ. ಯಡಿಯೂರಪ್ಪ ಹಾಗೂ ಅನಂತಕುಮಾರ್ ನಡುವೆ ಮನಸ್ತಾಪ ಇದ್ದರೂ ಎಂದಿಗೂ ಬೀದಿಗೆ ತರಲಿಲ್ಲ. ಅದನ್ನು ಪಕ್ಷದೊಳಗೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಿದ್ದರು. ಬಿಎಸ್‍ವೈ ಒಬ್ಬ ಪ್ರಶ್ನಾತೀತ ನಾಯಕ. ರಾಜ್ಯದ ಜನ ಬಯಸಿ ಸಿಎಂ ಮಾಡಿದ್ದರು ಎಂದು ತಿಳಿಸಿದರು.

ಸೋತವರು ಮತ್ತು ಗೆದ್ದವರ ಸಭೆ ಮಾಡಲು ವಿಜಯೇಂದ್ರ ಅವರಿಗೆ ಹಕ್ಕಿದೆ. ಅಧ್ಯಕ್ಷರು ಸಮರ್ಥರಿದ್ದಾರೆ, ದುರ್ಬಲರಲ್ಲ ಎಂದು ಸಮರ್ಥಿಸಿದರು.
ಪಕ್ಷದ ಸಂಘಟಿತ ದೃಷ್ಟಿಯಿಂದ ರಾಜ್ಯಾಧ್ಯಕ್ಷರು 150 ಕ್ಕೂ ಹೆಚ್ಚು ಮಾಜಿ ಶಾಸಕರ ಜೊತೆಗೆ ಸಭೆ ನಡೆಸಿದ್ದಾರೆ. ಅವರೊಬ್ಬ ರಾಜ್ಯಾಧ್ಯಕ್ಷರು. ಯಾರ ಜೊತೆಗೆ ಸಭೆ ನಡೆಸಬೇಕು ಎಂಬುದನ್ನು ಅವರೇ ತೀರ್ಮಾನಿಸುತ್ತಾರೆ. ಅದನ್ನು ಪ್ರಶ್ನೆ ಮಾಡಲು ಇವರ್ಯಾರು ಎಂದು ಪರೋಕ್ಷವಾಗಿ ಬಸನಗೌಡ ಪಾಟೀಲ್ ಯತ್ನಾಳ್ ಹೆಸರು ಹೇಳದೇ ವಾಗ್ದಾಳಿ ನಡೆಸಿದರು.

ರಮೇಶ್ ಜಾರಕಿಹೊಳಿ ಮತ್ತು ಬಸನಗೌಡ ಪಾಟೀಲ್ ಯತ್ನಾಳ್​ ನನ್ನ ಸ್ನೇಹಿತರು. ಆದರೆ ಅನಗತ್ಯವಾಗಿ ಯಾಕೆ ಯಡಿಯೂರಪ್ಪ ಬಗ್ಗೆ ಟೀಕೆ ಮಾಡುತ್ತಾರೋ ಗೊತ್ತಿಲ್ಲ. ಇದರಿಂದಾಗಿ ಪಕ್ಷ ಮತ್ತು ವರಿಷ್ಠರಿಗೆ ಅಪಮಾನ ಮಾಡುತ್ತಿದ್ದಾರೆ. ಪಕ್ಷದ ನಿಯಮದಂತೆ ವಿಜಯೇಂದ್ರ ಅಧ್ಯಕ್ಷರಾಗಿ ಮುಂದುವರೆಯುತ್ತಾರೆ ಎಂದು ಹೇಳಿದರು.

ಇದನ್ನು ಓದಿ: ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಆಗಲ್ಲ, ಯಾವುದೇ ಕ್ಷಣದಲ್ಲಿ ರಾಜೀನಾಮೆ ಕೊಡಬಹುದು: ಬಿ.ವೈ.ವಿಜಯೇಂದ್ರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.