ಮಂಗಳೂರು(ದಕ್ಷಿಣ ಕನ್ನಡ): "ಜಾತಿಗಣತಿ ವರದಿಯನ್ನು ನಿನ್ನೆಯ ಸಚಿವ ಸಂಪುಟದಲ್ಲಿ ವಿಷಯ ಮಂಡಿಸಲು ಆಗಿಲ್ಲ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ವಿಷಯ ಮಂಡಿಸಿ ತೀರ್ಮಾನ ಕೈಗೊಳ್ಳಲಾಗುವುದು" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಾತಿಗಣತಿಗೆ ವಿರೋಧ ವ್ಯಕ್ತವಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, "ವರದಿಯಲ್ಲಿ ಏನಿದೆ ಎಂದು ತಿಳಿದಿಲ್ಲದೇ ವಿರೋಧ ಏಕೆ ಮಾಡುತ್ತಾರೆ. ವರದಿ ಇನ್ನೂ ಬಹಿರಂಗಗೊಳ್ಳದಿರುವುದರಿಂದ ಈ ಬಗ್ಗೆ ನನಗೂ ತಿಳಿದಿಲ್ಲ‘‘ ಎಂದರು.
ಪ್ರಣಾಳಿಕೆಯಲ್ಲಿ ಭರವಸೆ: "ನಮ್ಮ ಜಾತಿಗಣತಿ ಮಂಡಿಸಲಾಗುವುದು ಎಂದು ಜನತೆಗೆ ಭರವಸೆ ನೀಡಲಾಗಿದೆ" ಎಂದು ಹೇಳಿದರು.
ದರೋಡೆಕೋರರನ್ನು ಕೂಡಲೇ ಪತ್ತೆ ಹಚ್ಚಲು ಸೂಚನೆ: ಕೋಟೆಕಾರ್ನಲ್ಲಿ ನಡೆದಿರುವ ದರೋಡೆ ಪ್ರಕರಣದ ಬಗ್ಗೆ ಮಾತನಾಡಿ, "ದರೋಡೆಕೋರರನ್ನು ಕೂಡಲೇ ಪತ್ತೆ ಹಚ್ಚಿ ಶಿಕ್ಷೆ ನೀಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ" ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಇದನ್ನೂ ಓದಿ: ತಮ್ಮ ರಕ್ಷಣೆಗಾಗಿ ಜಾತಿಗಣತಿ ಕಾರ್ಡ್ ಇಟ್ಟಿಕೊಂಡಿರುವ ಸಿದ್ದರಾಮಯ್ಯ: ಎಂಎಲ್ಸಿ ಹೆಚ್. ವಿಶ್ವನಾಥ್
ಇದನ್ನೂ ಓದಿ: ಊಹಾಪೋಹಗಳನ್ನಾಧರಿಸಿ ಜಾತಿಗಣತಿ ವರದಿ ವಿರೋಧಿಸುವುದು ಅನವಶ್ಯಕ: ಸಿದ್ದರಾಮಯ್ಯ