ETV Bharat / bharat

FDI ನಿಯಮ ಉಲ್ಲಂಘನೆ; ಬಿಬಿಸಿ ವರ್ಲ್ಡ್ ಸರ್ವೀಸ್ ಇಂಡಿಯಾಗೆ 3.44ಕೋಟಿರೂ ದಂಡ ವಿಧಿಸಿದ ಇಡಿ - ED SLAPS PENALTY ON BBC WS INDIA

ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ ಫೆಮಾ ನಿಯಮ ಉಲ್ಲಂಘನೆ ಆರೋಪದಡಿ ಬ್ರಿಟಿಷ್ ಬ್ರಾಡ್ ಕಾಸ್ಟರ್ ಸಂಸ್ಥೆಯ ಮೂವರು ನಿರ್ದೇಶಕರಿಗೆ, ED ತಲಾ ರೂ. 1. 14 ಕೋಟಿ ದಂಡ ವಿಧಿಸಿದೆ.

ED Slaps Penalty On BBC WS India
FDI ನಿಯಮ ಉಲ್ಲಂಘನೆ; ಬಿಬಿಸಿ ವರ್ಲ್ಡ್ ಸರ್ವೀಸ್ ಇಂಡಿಯಾಗೆ 3.44ಕೋಟಿರೂ ದಂಡ ವಿಧಿಸಿದ ಇಡಿ (Representational Image (Getty Images))
author img

By ETV Bharat Karnataka Team

Published : Feb 22, 2025, 9:26 AM IST

ನವದೆಹಲಿ: ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಾವಳಿಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಬಿಬಿಸಿ ವರ್ಲ್ಡ್ ಸರ್ವಿಸ್ ಇಂಡಿಯಾಗೆ ಜಾರಿ ನಿರ್ದೇಶನಾಲಯವು 3.44 ಕೋಟಿ ರೂ.ಗೂ ಹೆಚ್ಚು ದಂಡವನ್ನು ವಿಧಿಸಿದೆ ಎಂದು ಏಜೆನ್ಸಿ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಬ್ರಿಟಿಷ್ ಬ್ರಾಡ್‌ಕಾಸ್ಟರ್‌ನ ಮೂವರು ನಿರ್ದೇಶಕರಿಗೆ, ಜಾರಿ ನಿರ್ದೇಶನಾಲಯವು ತಲಾ 1.14 ಕೋಟಿ ರೂ.ಗಿಂತ ಹೆಚ್ಚು ದಂಡ ವಿಧಿಸಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (FEMA) ಅಡಿ ಬಿಬಿಸಿ ಇಂಡಿಯಾ ವಿರುದ್ಧ ಆದೇಶ ನೀಡಿದೆ.

ಆಗಸ್ಟ್ 4, 2023 ರಂದು BBC WS ಇಂಡಿಯಾ, ಅದರ ಮೂವರು ನಿರ್ದೇಶಕರು ಮತ್ತು ಈ ಕಾನೂನಿನ ಅಡಿ ವಿವಿಧ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ಹಣಕಾಸು ಮುಖ್ಯಸ್ಥರಿಗೆ ಶೋಕಾಸ್ ನೋಟಿಸ್ ನೀಡಿತ್ತು. ಆ ಬಳಿಕ ಪ್ರಕ್ರಿಯೆಗಳನ್ನು ಆರಂಭಿಸಿ ಈ ತೀರ್ಮಾನ ಕೈಗೊಂಡಿದೆ.

100 ಪ್ರತಿಶತ ಎಫ್‌ಡಿಐ ಕಂಪನಿಯಾಗಿರುವ ಬಿಬಿಸಿ ಡಬ್ಲ್ಯುಎಸ್ ಇಂಡಿಯಾ ಡಿಜಿಟಲ್ ಮಾಧ್ಯಮದ ಮೂಲಕ ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಅಪ್‌ಲೋಡ್/ಸ್ಟ್ರೀಮಿಂಗ್ ಮಾಡುವಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ.

ಸೆಪ್ಟೆಂಬರ್ 18, 2019 ರಂದು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ (ಡಿಪಿಐಐಟಿ) ಹೊರಡಿಸಿದ ಪತ್ರಿಕಾ ಟಿಪ್ಪಣಿ 4, ಸರ್ಕಾರದ ಅನುಮೋದನೆ ಮಾರ್ಗದ ಅಡಿ ಡಿಜಿಟಲ್ ಮಾಧ್ಯಮಕ್ಕೆ ಶೇಕಡಾ 26 ರಷ್ಟು ಎಫ್‌ಡಿಐ ಮಿತಿಯನ್ನು ನಿಗದಿಪಡಿಸಿದೆ. BBC WS ಇಂಡಿಯಾದಲ್ಲಿ ವಿಧಿಸಲಾದ ಒಟ್ಟು ದಂಡವು 3,44,48,850 ರೂಪಾಯಿಗಳಾಗಿದ್ದು, 15.10.2021 ರ ನಂತರ FEMA, 1999 ರ ನಿಬಂಧನೆಗಳನ್ನು ಉಲ್ಲಂಘಿಸಿದ ದಿನಾಂಕದವರೆಗೆ ಪ್ರತಿ ದಿನಕ್ಕೆ 5,000 ರೂಪಾಯಿಗಳ ದಂಡ ವಿಧಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

BBCಯ ಮೂವರು ನಿರ್ದೇಶಕರಾದ ಗೈಲ್ಸ್ ಆಂಟೋನಿ ಹಂಟ್, ಇಂದು ಶೇಖರ್ ಸಿನ್ಹಾ ಮತ್ತು ಪಾಲ್ ಮೈಕೆಲ್ ಗಿಬ್ಬನ್ಸ್ ಅವರಿಗೆ ತಲಾ 1,14,82,950 ರೂ.ದಂಡ ವಿಧಿಸಲಾಗಿದೆ.

ಇದನ್ನು ಓದಿ: ಈಶಾ ವಿರುದ್ಧ ನಿಯಮ ಉಲ್ಲಂಘನೆ ಆರೋಪ: ವರದಿ ಸಲ್ಲಿಸುವಂತೆ TNPCBಗೆ ಹೈಕೋರ್ಟ್ ಸೂಚನೆ

ಸಂಭಾಜಿ ಮಹಾರಾಜರ ಬಗ್ಗೆ ಆಕ್ಷೇಪಾರ್ಹ ಬರಹ: ವಿಕಿಪೀಡಿಯಾದ ನಾಲ್ವರು ಸಂಪಾದಕರ ವಿರುದ್ಧ FIR

ETV Bharat Logo

Copyright © 2025 Ushodaya Enterprises Pvt. Ltd., All Rights Reserved.