ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ ಸೀಸನ್ 11 ಫಿನಾಲೆಗೆ ಎದುರು ನೋಡುತ್ತಿದೆ. ಈಗಾಗಲೇ 75 ದಿನಗಳನ್ನು ಪೂರ್ಣಗೊಳಿಸಿರುವ ಶೋನಲ್ಲಿ ಉಳಿದುಕೊಂಡಿರುವ ಸ್ಪರ್ಧಿಗಳು ಆಟದ ಜೊತೆ ಪಾಠವನ್ನೂ ಕಲಿಯುತ್ತಿದ್ದಾರೆ. 'ಇದು ವ್ಯಕ್ತಿತ್ವಗಳ ಅನಾವರಣ' ಎನ್ನುವ ಕಾರ್ಯಕ್ರಮದಲ್ಲಿ ಸ್ಪರ್ಧಿಗಳ ಜೊತೆಗೆ ವೀಕ್ಷಕರೂ ಕೂಡಾ ಒಂದಿಷ್ಟು ವಿಷಯಗಳನ್ನು ಅರಿತುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
ಇದೀಗ ಮೋಕ್ಷಿತಾ ಮನಸ್ಸಲ್ಲಿದ್ದ ಗೌತಮಿ ಜಾಧವ್ ಮೇಲಿನ ಅಸಮಧಾನ ಬಹಿರಂಗವಾಗಿ ವ್ಯಕ್ತವಾಗಿದೆ. ಆರಂಭದಲ್ಲಿ ಆಪ್ತ ಸ್ನೇಹಿತೆಯರಂತೆ ಗುರುತಿಸಿಕೊಂಡಿದ್ದ ಗೌತಮಿ ಮತ್ತು ಮೋಕ್ಷಿತಾ ಅವರು ಹೀಗೂ ಆಗಬಹುದಾ ಎಂದು ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇದರ ಒಂದು ಸುಳಿವು ಬಿಗ್ ಬಾಸ್ ಅನಾವರಣಗೊಳಿಸಿರುವ ಪ್ರೋಮೋದಲ್ಲಿ ಸಿಕ್ಕಿದೆ. ಹೌದು, 'ಇದು ಆಟ ಅಲ್ಲ ಪಾಠ!' ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನಡಿ ಇಂದಿನ ಸಂಚಿಕೆಯ ಪ್ರೋಮೋ ಬಿಡುಗಡೆ ಆಗಿದೆ.
ಪಕ್ಷಪಾತಿ, ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಅಶಕ್ತ, ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಅಶಕ್ತ, ಜನ ನಿರ್ವಹಣೆಯಲ್ಲಿ ಅಶಕ್ತ - ಹೀಗೆ ನಾಲ್ಕು ಶೀರ್ಷಿಕೆಯ ಬೋರ್ಡ್ಗಳನ್ನು ಇಡಲಾಗಿದೆ. ಇದಕ್ಕೆ ಸೂಕ್ತ ಎನಿಸುವವರ ಹೆಸರನ್ನು ಸೂಚಿಸಿ, ಅದಕ್ಕೆ ಸೂಕ್ತ ಕಾರಣಗಳನ್ನು ಕೊಟ್ಟು, ಅವರನ್ನು ಸ್ವಿಮ್ಮಿಂಗ್ ಪೂಲ್ಗೆ ದೂಡಬೇಕೆಂದು ಬಿಗ್ ಬಾಸ್ ಸೂಚಿಸಿದ್ದಾರೆ. ಹೀಗೆ ಸ್ಪರ್ಧಿಗಳು ಹೆಸರು ಸೂಚಿಸಿಲು ಶುರು ಮಾಡಿದ್ದಾರೆ. ಮೋಕ್ಷಿತಾ ಅವರು ಗೌತಮಿ ಜಾಧವ್ ಅವರ ಹೆಸರನ್ನು ಪಕ್ಷಪಾತಿಗೆ ಸೂಚಿಸಿದ್ದಾರೆ. ಇವರು ಒಂದು ಸಮಯದಲ್ಲಿ ಆಪ್ತ ಸ್ನೇಹಿತರಾಗಿ ಗುರುತಿಸಿಕೊಂಡಿದ್ದವರು ಎಂಬುದನ್ನು ನಾವಿಲ್ಲಿ ಮರೆಯುವಂತಿಲ್ಲ.
ನಮ್ಮ ಮೂರು ಜನರ (ಮೋಕ್ಷಿತಾ, ಗೌತಮಿ, ಮಂಜು) ಸ್ನೇಹವನ್ನು ಕಾಪಾಡಿತ್ತೀನಿ ಎಂದು ಹೇಳಿದ್ರಿ, ಮಂಜಣ್ಣನಿಗೆ ಬೇಜಾರ್ ಆದ್ರೆ ನಿಮಗೆ ಫೀಲ್ ಆಗುತ್ತೆ. ಆದ್ರೆ ಮೋಕ್ಷಿತಾಗೆ ಬೇಜಾರ್ ಆದಾಗ ಆ ಗೌತಮಿ ಇರುತ್ತಿರಲಿಲ್ಲ - ಹೀಗೆ ತಮ್ಮ ಕಾರಣಗಳನ್ನು ಕೊಟ್ಟು ಗೌತಮಿ ಅವರನ್ನು ನೀರಿಗೆ ತಳ್ಳಿದ್ದಾರೆ.