ETV Bharat / entertainment

ಪೃಥ್ವಿ ಅಂಬಾರ್, ಧನ್ಯಾ ರಾಮ್​​ಕುಮಾರ್ 'ಚೌಕಿದಾರ್' ಶೂಟಿಂಗ್​ ಕಂಪ್ಲೀಟ್​: ರಿಲೀಸ್​ ಯಾವಾಗ? - CHOWKIDAR SHOOTING COMPLETE

'ಚೌಕಿದಾರ್' ಚಿತ್ರೀಕರಣ ಪೂರ್ಣಗೊಂಡಿದೆ. ಚಿತ್ರದ ಬಿಡುಗಡೆ ದಿನಾಂಕ, ಟೀಸರ್ ರಿಲೀಸ್ ಬಗ್ಗೆ ತಂಡ ಮಾಹಿತಿ ಹಂಚಿಕೊಂಡಿದೆ.

Chowkidar film team
'ಚೌಕಿದಾರ್' ಚಿತ್ರತಂಡ (Photo: ETV Bharat)
author img

By ETV Bharat Entertainment Team

Published : Dec 23, 2024, 5:01 PM IST

'ದಿಯಾ' ಖ್ಯಾತಿಯ ಪೃಥ್ವಿ ಅಂಬಾರ್ ಹಾಗೂ ಧನ್ಯಾ ರಾಮ್‌ ಕುಮಾರ್ ತೆರೆಹಂಚಿಕೊಂಡಿರುವ 'ಚೌಕಿದಾರ್' ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಬೆಂಗಳೂರಿನ ಬಂಡೆ ಮಹಾಕಾಳಿ ದೇಗುಲದಲ್ಲಿ ನಿನ್ನೆ ಚಿತ್ರಕ್ಕೆ ಕುಂಬಳಕಾಯಿ ಒಡೆಲಾಯಿತು‌. ಈ ವೇಳೆ ಇಡೀ ಚಿತ್ರತಂಡ ಭಾಗಿಯಾಗಿತ್ತು. ಬಳಿಕ ಸುದ್ದಿಗೋಷ್ಠಿಯಲ್ಲಿ ಚೌಕಿದಾರ್ ಕಲಾವಿದರು ತಮ್ಮ ಶೂಟಿಂಗ್ ಅನುಭವ ಹಂಚಿಕೊಂಡರು.

ನಾಯಕ ಪೃಥ್ವಿ ಅಂಬಾರ್ ಮಾತನಾಡಿ, "ಈ ಚಿತ್ರದಿಂದ ಬಹಳಷ್ಟು ಕಲಿಯಲು ಸಿಕ್ಕಿದೆ. ನುರಿತ ನಿರ್ದೇಶಕರು ಚಿತ್ರ ಹೇಗೆ ಬೇಕು, ಯಾವ ರೀತಿ ಬೇಕು ಅನ್ನೋದನ್ನು ಹೇಳಿಕೊಟ್ಟಿದ್ದಾರೆ. ಮನುಷ್ಯನ ಭಾವನೆಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಫ್ಯಾಮಿಲಿ ಎಮೋಷನ್ ತುಂಬಾ ಚೆನ್ನಾಗಿ ಅಳವಡಿಸಿದ್ದಾರೆ. ಸಾಯಿ ಸರ್ ಸೆಟ್​​ನಲ್ಲಿದ್ದ ರೀತಿ ನಮ್ಮಂತಹ ಕಲಾವಿದರಿಗೆ ಪುಸ್ತಕ ಇದ್ದಂತೆ. ನಿರ್ಮಾಪಕರು ನನಗೆ ಸ್ಫೂರ್ತಿ" ಎಂದು ತಿಳಿಸಿದರು.

Chowkidar film team
'ಚೌಕಿದಾರ್' ಚಿತ್ರತಂಡ (Photo: ETV Bharat)

ನಿರ್ದೇಶಕ‌ ಚಂದ್ರಶೇಖರ್ ಬಂಡಿಯಪ್ಪ ಮಾತನಾಡಿ, "ನಾವು ನಿರ್ದೇಶಕರಾಗಿ ನಿರ್ಮಾಪಕರ ನಂಬಿಕೆ ಉಳಿಸಿಕೊಳ್ಳಬೇಕು. ನಿರ್ಮಾಪಕರಿಗೆ ಪ್ರೊಫೆಷನಲಿಸಂ ಇದೆ. ಇಡೀ ಕಲಾವಿದರು ಅತ್ಯದ್ಭುತವಾಗಿ ಅಭಿನಯಿಸಿದ್ದಾರೆ. ಮೇ ತಿಂಗಳ ಆಸುಪಾಸಿನಲ್ಲಿ ಸಿನಿಮಾ ರಿಲೀಸ್ ಮಾಡಲು ಪ್ಲ್ಯಾನ್ ಮಾಡುತ್ತಿದ್ದೇವೆ. ಸಂಕ್ರಾಂತಿಗೆ ಟೀಸರ್ ರಿಲೀಸ್ ಮಾಡಲಿದ್ದೇವೆ. ನಾಲ್ಕು ಹಾಡುಗಳಿವೆ. ಪ್ರತಿಯೊಬ್ಬ ಮನೆಯಲ್ಲಿಯೂ ಚೌಕಿದಾರ್ ಇರುತ್ತಾರೆ, ಅವರ ಕಥೆಯನ್ನು ನಾವು ಇಲ್ಲಿ ಹೇಳಿದ್ದೇವೆ. ಗ್ರಾಮಾಂತರ ಪ್ರದೇಶದಿಂದಲೇ ಚಿತ್ರ ಶುರುವಾಗುತ್ತದೆ. ಸಾಯಿ ಕುಮಾರ್ ಹಾಗೂ ಪೃಥ್ವಿ ಅಂಬಾರ್​ ತಂದೆ ಮಗನ ಪಾತ್ರದಲ್ಲಿ ನಟಿಸಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಚಿತ್ರ ಏಕಕಾಲದಲ್ಲಿ ಬಿಡುಗಡೆಯಾಗಲಿದೆ" ಎಂದು ಮಾಹಿತಿ ನೀಡಿದರು.

ನಾಯಕಿ ಧನ್ಯಾ ರಾಮ್​​ಕುಮಾರ್ ಮಾತನಾಡಿ, "ಚಿತ್ರದಲ್ಲಿ ಪಾತ್ರ ಸಿಕ್ಕಿರುವುದಕ್ಕೆ ಖುಷಿಯ ಜೊತೆಗೆ ಹೆಮ್ಮೆ ಇದೆ. ಈ ಸಿನಿಮಾದಿಂದ ಕಲಿಯಲು ತುಂಬಾನೇ ಸಿಕ್ತು. ಜರ್ನಿ ಚಾಲೆಂಜಿಂಗ್ ಆಗಿತ್ತು. ಈ ಚಿತ್ರದ ಮೂಲಕ ಒಳ್ಳೆ ನಟಿಯಾಗಿ ಬಂದಿದ್ದೇನೆ ಎನಿಸಿತು. ಸಾಯಿಕುಮಾರ್ ಸರ್, ಧರ್ಮ ಸರ್, ಸುಧಾ ರಾಣಿ ಮೇಡಂ, ಶ್ವೇತಾ ಮೇಡಂ, ಪೃಥ್ವಿ ಇವರ ಜೊತೆ ಕೆಲಸ ಮಾಡಿರುವುದು ಖುಷಿಯಾಗಿದೆ. ನಿರ್ಮಾಪಕರು ನಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ" ಎಂದು ಹೇಳಿದರು.

ಹಿರಿಯ ನಟ ಸಾಯಿಕುಮಾರ್ ಮಾತನಾಡಿ, "ನನ್ನ ಜೀವನದಲ್ಲಿ ಇದೇ ಮೊದಲ ಬಾರಿಗೆ ಇದೇ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನಡೆದಿದ್ದು, ಕುಂಬಳಕಾಯಿ ಕೂಡಾ ಇಲ್ಲೇ ಒಡೆಯಲಾಗಿದೆ. ಯಾವ ಸಿನಿಮಾಗೂ ಇದು ಇಲ್ಲ. ಮಹಾನ್ ಕಾಳಿ ಆಶೀರ್ವಾದ ನಮ್ಮ‌ ಚಿತ್ರಕ್ಕಿದೆ ಅನ್ನುವುದು ಗೊತ್ತಾಗುತ್ತಿದೆ. ಚೌಕಿದಾರ್ ಸಿನಿಮಾದಲ್ಲಿ ಒಂದೊಳ್ಳೆ ಕಲಾವಿದರು ಹಾಗೂ ತಂತ್ರಜ್ಞರ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. ಎಲ್ಲಾ ಕಲಾವಿದರು ಅದ್ಭುತವಾಗಿ ನಟಿಸಿದ್ದಾರೆ. ಇದೊಂದು ಫ್ಯಾಮಿಲಿ ಡ್ರಾಮಾ, ಎಮೋಷನಲ್ ಡ್ರಾಮಾ. ತೆಲುಗಿನಲ್ಲಿ ಹ್ಯಾಟ್ರಿಕ್ ಕೊಟ್ಟೆ. ಸರಿಪೋದ ಶನಿವಾರ, ಲಕ್ಕಿ ಭಾಸ್ಕರ್ ನೂರು ಕೋಟಿ ಕೊಟ್ಟಿವೆ. ಮುಂದಿನ ವರ್ಷ ಕನ್ನಡದಲ್ಲಿ ಹ್ಯಾಟ್ರಿಕ್ ಆಗಲಿ" ಎಂದು ತಿಳಿಸಿದರು.

ಇದನ್ನೂ ಓದಿ: ತ್ರಿವಿಕ್ರಮ್​ ಎಲಿಮಿನೇಟ್ ಆದ್ರಾ​? ಚೈತ್ರಾ ಕುಂದಾಪುರ-ಐಶ್ವರ್ಯಾ ನಡುವೆ ಅಗ್ಲಿ ವಾರ್​

ರಥಾವರ ಸಿನಿಮಾ ನಿರ್ದೇಶಿಸಿದ್ದ ಚಂದ್ರಶೇಖರ್ ಬಂಡಿಯಪ್ಪ 'ಚೌಕಿದಾರ್' ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, 'ಡೈಲಾಗ್ ಕಿಂಗ್' ಸಾಯಿಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪೃಥ್ವಿ ಅಂಬಾರ್, ಧನ್ಯಾ ರಾಮ್‌ಕುಮಾರ್ ಹಾಗೂ ಸಾಯಿಕುಮಾರ್ ಕಾಂಬಿನೇಷನ್ ಸಿನಿಪ್ರಿಯರಿಗೆ ಗಮನವನ್ನಂತೂ ಸೆಳೆದಿದೆ. ಶ್ವೇತಾ, ಸುಧಾರಾಣಿ, ಧರ್ಮ ಸೇರಿದಂತೆ ಮತ್ತಿತರ ತಾರಾಬಳಗ ಚಿತ್ರದಲ್ಲಿದೆ.

ಇದನ್ನೂ ಓದಿ: ಅಬ್ಬಬ್ಬಾ! ಉಪೇಂದ್ರ ಸಾರಥ್ಯದ 'ಯುಐ' ಗಳಿಸಿದ್ದಿಷ್ಟು: ಸಿನಿಮಾ ಬಗ್ಗೆ ನಿಮ್ಮ ಅಭಿಪ್ರಾಯವೇನು?

'ಚೌಕಿದಾರ್' ಸಿನಿಮಾವನ್ನು ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದಾರೆ. ವಿದ್ಯಾದೇವಿ ನಿರ್ಮಾಣದಲ್ಲಿ ಸಾಥ್ ಕೊಡುತ್ತಿದ್ದಾರೆ. ಸಚಿನ್‌ ಬಸ್ರೂರು ಸಂಗೀತವಿದ್ರೆ, ವಿ.ನಾಗೇಂದ್ರ ಪ್ರಸಾದ್‌, ಪ್ರಮೋದ್‌ ಮರವಂತೆ, ಸಂತೋಷ್ ನಾಯಕ್ ಸಾಹಿತ್ಯ ಬರೆದಿದ್ದಾರೆ. ಸಿದ್ದು ಕಂಚನಹಳ್ಳಿ ಛಾಯಾಗ್ರಹಣ, ರವಿ ವರ್ಮಾ ಸಾಹಸ ನಿರ್ದೇಶನ ಸಿನಿಮಾಗಿದೆ. 'ಚೌಕಿದಾರ್' ಬಹುಭಾಷೆಯಲ್ಲಿ ಮೂಡಿ ಬರುತ್ತಿದ್ದು, ಲವರ್‌ ಬಾಯ್‌ ಆಗಿದ್ದ ಪೃಥ್ವಿ ಅಂಬಾರ್ ಮಾಸ್ ಲುಕ್​ನಲ್ಲಿ ಎಂಟ್ರಿ ಕೊಡಲಿದ್ದಾರೆ. ಪೃಥ್ವಿರಾಜ್ ಧಘಾರಿ ಸಹ ನಿರ್ದೇಶನದಲ್ಲಿ ಚೌಕಿದಾರ್ ಮೂಡಿಬರುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.