ಟಾಲಿವುಡ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ 2: ದಿ ರೂಲ್' ಸಿನಿಮಾ ಸುತ್ತಲಿರುವ ಸದ್ದು ಮುಂದುವರಿದಿದೆ. ಪ್ರಮುಖ ಪಾತ್ರಗಳ ಅಮೋಘ ಅಭಿನಯದಿಂದ ಹಿಡಿದು ಆ್ಯಕ್ಷನ್ ಸೀಕ್ವೆನ್ಸ್, ಜಾತ್ರಾ ದೃಶ್ಯ ಮತ್ತು ಆಕರ್ಷಕ ಹಾಡುಗಳಿಂದ ಪುಷ್ಪ 2 ಪ್ರೇಕ್ಷಕರ ಚರ್ಚೆಯ ವಿಷಯವಾಗಿದೆ. ಹೆಚ್ಚು ಸದ್ದು ಮಾಡಿದ ಸಿನಿಮಾದ ಕಂಟೆಂಟ್ ಅಂದ್ರೆ ಅದು ಪೀಲಿಂಗ್ಸ್ ಹಾಡು. ಕೊನೆಗೆ ಚಿತ್ರೀಕರಿಸಲ್ಪಟ್ಟ ಮತ್ತು ಸಿನಿಮಾ ಬಿಗ್ ಸ್ಕ್ರೀನ್ಗೆ ಎಂಟ್ರಿಕೊಡುವ ಕೆಲವೇ ದಿನಗಳ ಮುನ್ನ ಬಿಡುಗಡೆಯಾದ ಹಾಡಿದು.
ಶೀರ್ಷಿಕೆಯೇ ಸೂಚಿಸುವಂತೆ, ಈ ಹಾಡು ಭಾವನೆಗಳ ಬಗ್ಗೆಯಾಗಿದೆ. ಶ್ರೀವಲ್ಲಿ ಪಾತ್ರದಲ್ಲಿ ರಶ್ಮಿಕಾ ಅವರು ಅಲ್ಲು ಅರ್ಜುನ್ ಅವರ ಜೊತೆ ಸಖತ್ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಲೈಟ್ ಸೆನ್ಸುವಲ್ ಟೋನ್ ಹೊಂದಿರುವ ಹಾಡಿಗೆ ನೃತ್ಯ ಮಾಡೋದು ಸುಲಭದ ಕೆಲಸವಲ್ಲ ಎಂಬುದನ್ನು ನಟಿ ಒಪ್ಪಿಕೊಂಡಿದ್ದಾರೆ.
ಹಾಡಿನ ರಿಹರ್ಸಲ್ ಮತ್ತು ತಮ್ಮ ಕಂಫರ್ಟ್ ಝೋನ್‌ನಿಂದ ಹೊರಬಂದ ಅನುಭವದ ಬಗ್ಗೆ ನಟಿಗೆ ಪ್ರಶ್ನೆ ಎದುರಾಯಿತು. ಪ್ರತಿಕ್ರಿಯಿಸಿದ ನ್ಯಾಶನಲ್ ಕ್ರಶ್, ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳ ಮೊದಲು ಈ ಹಾಡನ್ನು ಚಿತ್ರೀಕರಿಸಲಾಗಿತ್ತು ಎಂಬುದನ್ನು ಬಹಿರಂಗಪಡಿಸಿದರು. ಜೊತೆಗೆ, ಈ ಹಾಡಿನ ಚಿತ್ರೀಕರಣ ನಾಲ್ಕೈದು ದಿನಗಳಲ್ಲಿ ನಡೆದಿದೆ ಎಂದು ತಿಳಿಸಿದರು. "ಇದು ಆಶ್ಚರ್ಯಕರವಾಗಿತ್ತು. ಏಕೆಂದರೆ, ನಾನು ರಿಹರ್ಸಲ್ ವಿಡಿಯೋವನ್ನು ನೋಡಿದ ಕ್ಷಣ, 'ಭೂಮಿಯ ಮೇಲೆ ಏನಾಗುತ್ತಿದೆ? ಏನು ನಡೆಯುತ್ತಿದೆ?' ಎಂದು ನಾನು ಭಾವಿಸಿದೆ" ಎಂದು ನಟಿ ನಗುತ್ತಾ ತಿಳಿಸಿದರು. ಹೆಚ್ಚಿನ ಭಾಗದಲ್ಲಿ ಅಲ್ಲು ಅರ್ಜುನ್ ಅವರ ಮೇಲೆ (ಮೇಲೇರಿ) ಡ್ಯಾನ್ಸ್ ಮಾಡಿದ್ದೇನೆ, ಅದು ಇನ್ನಷ್ಟು ಸವಾಲಾಗಿ ಪರಿಣಮಿಸಿತು ಎಂದು ವಿವರಿಸಿದರು.
ಇದನ್ನೂ ಓದಿ: 'ಕೆಜಿಎಫ್ 2' ಯಶಸ್ಸಿನ ನಂತರ ಬಂದ 'ಸಲಾರ್' ರಿಸಲ್ಟ್ನಿಂದ ಸ್ವಲ್ಪ ನಿರಾಶೆಯಾಯ್ತು: ಪ್ರಶಾಂತ್ ನೀಲ್
ಜನಪ್ರಿಯ ನಟಿ ತಮಗಿದ್ದ ಬಾಲ್ಯದ ಫೋಬಿಯಾ ಬಗ್ಗೆಯೂ ಬಹಿರಂಗಪಡಿಸಿದರು. "ನನ್ನನ್ನು ಎತ್ತುವುದು ನನಗೆ ಕಂಫರ್ಟ್ ಆಗೋದಿಲ್ಲ. ಇಲ್ಲಿ, ಈ ಹಾಡಿನಲ್ಲಿ ನನ್ನನ್ನು ಎತ್ತಲಾಗಿದೆ ಎಂದು ತಿಳಿಸಿದರು. ಇದನ್ನು ಹೇಗೆ ನಿರ್ವಹಿಸುತ್ತೇನೆ ಎಂಬುದರ ಕುರಿತು ಅನುಮಾನವಿತ್ತು ಎಂಬುದನ್ನು ಸಹ ಒಪ್ಪಿಕೊಂಡರು. ಆದರೆ, ಒಮ್ಮೆ ಮನಸ್ಸು ಮಾಡಿದರೆ, ನಿರ್ದೇಶಕರು ಮತ್ತು ಸಹ-ನಟನಿಗೆ ಸಂಪೂರ್ಣವಾಗಿ ಶರಣಾಗುತ್ತೇನೆ ಅನ್ನೋದನ್ನು ಒಪ್ಪಿಕೊಂಡರು. "ನಾನು ಶಕ್ತಿಯನ್ನು ಓದುತ್ತೇನೆ ಮತ್ತು ಅದಕ್ಕೆ ಅನುಗುಣವಾಗಿ ತಲುಪಿಸುತ್ತೇನೆ. ನನ್ನಲ್ಲಿ ಒಂದು ರೀತಿಯ ಬದಲಾವಣೆ ಆಗಿದೆ ಎಂದು ಭಾವಿಸುತ್ತೇನೆ" ಎಂದು ತಿಳಿಸಿದರು. ತಮ್ಮ ಬಾಲ್ಯದ ಫೋಬಿಯಾವನ್ನು ಹೋಗಲಾಡಿಸಲು ಮತ್ತು ತನ್ನ ಮಿತಿಗಳನ್ನು ಮೀರಿ ನಟಿಸಲು ಸಹಾಯ ಮಾಡಿದ್ದಕ್ಕಾಗಿ ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಸುಕುಮಾರ್ ಅವರಿಗೆ ಕ್ರೆಡಿಟ್ ನೀಡಿದ್ದಾರೆ. ಜೊತೆಗೆ ಧನ್ಯವಾದ ಅರ್ಪಿಸಿದ್ದಾರೆ.
ಇದನ್ನೂ ಓದಿ: ತ್ರಿವಿಕ್ರಮ್ ಎಲಿಮಿನೇಟ್ ಆದ್ರಾ? ಚೈತ್ರಾ ಕುಂದಾಪುರ-ಐಶ್ವರ್ಯಾ ನಡುವೆ ಅಗ್ಲಿ ವಾರ್
ಪುಷ್ಪ 2: ದಿ ರೂಲ್ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಮುಂದುವರೆಸಿದೆ. ಬಿಡುಗಡೆಯಾದ ಕೇವಲ ಎರಡು ವಾರಗಳಲ್ಲಿ ಭಾರತದಲ್ಲಿ 1000 ಕೋಟಿ ರೂ.ಗೂ ಹೆಚ್ಚು ಗಳಿಸಿದೆ. ಚಿತ್ರದ ಯಶಸ್ಸಿನಲೆಯಲ್ಲಿ ಮುಳುಗಿರುವ ರಶ್ಮಿಕಾ, ವಿಕ್ಕಿ ಕೌಶಲ್ ಜೊತೆಗೆ ಛಾವಾ ಚಿತ್ರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಪ್ರಸ್ತುತ ಸಲ್ಮಾನ್ ಖಾನ್ ಅವರೊಂದಿಗೆ ಸಿಕಂದರ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೇ ತೆಲುಗಿನ ದಿ ಗರ್ಲ್‌ಫ್ರೆಂಡ್ ಮತ್ತು ರೈನ್ಬೋ ಬಿಡುಗಡೆಗೆ ಎದುರು ನೋಡುತ್ತಿದೆ.