ಹೈದರಾಬಾದ್: ಹೈದರಾಬಾದ್ನಲ್ಲಿ ಎರಡು ಮೆಟ್ರೋ ರೈಲುಗಳು ಒಂದೇ ಹಳಿಯ ಮೇಲೆ ಎದುರು ಬದರು ಸಮೀಸುತ್ತಿರುವ ಅಪಾಯಕಾರಿ ದೃಶ್ಯ ವೈರಲ್ ಆಗಿದೆ. ಆದರೆ ಇತ್ತೀಚಿನ ಸಿಬಿಟಿಸಿ ತಂತ್ರಜ್ಞಾನ ಎಂದರೆ ಸಂವಹನ ಆಧಾರಿತ ರೈಲುಗಳ ನಿಯಂತ್ರಣ ವ್ಯವಸ್ಥೆ ಮೂಲಕ ಈ ಅವಘಡವನ್ನು ಯಶಸ್ವಿಯಾಗಿ ತಡೆಯಲಾಗಿದೆ. ಪ್ರಯಾಣಿಕರ ಸುರಕ್ಷತೆ ಬಗ್ಗೆ ಎದ್ದಿರುವ ಎಲ್ಲ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನವನ್ನು ಅಧಿಕಾರಿಗಳು ಮಾಡಿದ್ದು, ಈ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯ ಇಲ್ಲ ಎಂದಿದ್ದಾರೆ.
ಏನಿದು ಸಿಬಿಟಿಸಿ ತಂತ್ರಜ್ಞಾನ: ಭಾರತದಲ್ಲೇ ಮೊದಲ ಬಾರಿಗೆ ಹೈದರಾಬಾದ್ ಮೆಟ್ರೋದಲ್ಲಿ ಸುಧಾರಿತ ಸಂಪರ್ಕ ಆಧಾರಿತ ಟ್ರೈನ್ ನಿಯಂತ್ರಣ (ಸಿಬಿಟಿಸಿ) ತಂತ್ರಜ್ಞಾನವನ್ನು ಪರಿಚಯಿಸಲಾಗಿದೆ. ಇದು ಮೆಟ್ರೋ ನಿರ್ವಹಣೆಯಲ್ಲಿ ಕ್ರಾಂತಿಕಾರಕ ಹೆಜ್ಜೆಯಾಗಿದೆ. ಈ ತಂತ್ರಜ್ಞಾನದ ಕಾರ್ಯಾಚರಣೆ ನಿಯಂತ್ರಣ ಕೇಂದ್ರ ಉಪ್ಪಲ್ನಲ್ಲಿದೆ. ಇದು ಮೂರು ಕಾರ್ಯಾಚರಣೆ ಕಾರಿಡಾರ್ನಲ್ಲಿ ಮೆಟ್ರೋ ಟ್ರೈನ್ ಗಳ ಚಲನ- ವಲನಗಳ ನಿರ್ವಹಣೆ ಮಾಡುತ್ತಿದೆ.
ಸಿಬಿಟಿಸಿ ತಂತ್ರಜ್ಞಾನ ಒಸಿಸಿ ನೈಜ ಸಮಯದೊಂದಿಗೆ ಮೆಟ್ರೊ ರೈಲುಗಳೊಂದಿಗೆ ಸಂಪರ್ಕ ಸಾಧಿಸಲು ಅವಕಾಶ ನೀಡುತ್ತದೆ. ಹಾಗೇ ಅದರ ಚಲನೆಗಳ ಮೇಲೆ ಕೂಡ ನಿಯಂತ್ರಣ ಹೊಂದಿದ್ದು, ಯಾವುದೇ ಅಪಾಯವನ್ನು ಯಶಸ್ವಿಯಾಗಿ ತಡೆಯುವ ಭರವಸೆ ನೀಡುತ್ತದೆ. ಈ ವ್ಯವಸ್ಥೆಯು 30 ಮೀಟರ್ವರೆಗಿನ ಹತ್ತಿರದ ಅಂತರದಲ್ಲೂ ರೈಲು ಕಾರ್ಯಾಚರಣೆಯನ್ನು ನಿಯಂತ್ರಿಸುವಲ್ಲಿ ಇದು ಯಶಸ್ವಿಯಾಗಿದೆ. ಗಾರ್ಡೈಲ್ ಟೆಕ್ನಾಲಜಿ ಮೂಲಕ ಈ ಅವಘಡಗಳನ್ನು ತಡೆಯುವ ಕೆಲಸವನ್ನು ಮಾಡಲಾಗುತ್ತಿದೆ. ರೈಲುಗಳು ಎದುರು ಬದರು, ಅಥವಾ ಹಿಂದಿನಿಂದ ತೀರಾ ಹತ್ತಿರಕ್ಕೆ ಬಂದಾಗ ಕಣ್ಗಾವಲು ತಂತ್ರಜ್ಞಾನ ಎಂದು ಕರೆಯಿಸಿಕೊಳ್ಳುವ ಗಾರ್ಡ್ರೈಲ್ ಟೆಕ್ನಾಲಜಿ ತಕ್ಷಣಕ್ಕೆ ರೈಲನ್ನು ತಡೆದು ನಿಲ್ಲಿಸಿ, ಪರಸ್ಪರ ಡಿಕ್ಕಿಯಾಗುವುದನ್ನು ತಪ್ಪಿಸುತ್ತದೆ.
ಮೆಟ್ರೋ ರೈಲು ಅಧಿಕಾರಿಗಳಿಂದ ಭರವಸೆ: ಈ ಕುರಿತು ಮಾತನಾಡಿರುವ ಮೈಟ್ರೋ ರೈಲಿನ ಎಂಡಿ ಎನ್ವಿಎಸ್ ರೆಡ್ಡಿ, ಸಿಬಿಟಿಸಿ ತಂತ್ರಜ್ಞಾನವೂ ಹೆಚ್ಚು ನೈಜವಾಗಿದ್ದು, ಸಮರ್ಪಕವಾಗಿದೆ. ಮೊದಲ ಬಾರಿಗೆ ಯುರೋಪ್ನಲ್ಲಿ ಈ ಸಿಬಿಟಿಸಿ ತಂತ್ರಜ್ಞಾನವನ್ನು ನೋಡಿದೆ. ಎಲ್ ಅಂಡ್ ಟಿ ಮೆಟ್ರೋ ರೈಲ್ಗೆ ಈ ಸುಧಾರಿತ ತಂತ್ರಜ್ಞಾನವನ್ಜು ಭಾರತಕ್ಕೆ ತರುವ ಕುರಿತು ಮಾತುಕತೆ ನಡೆಸಲಾಗಿತ್ತು. ಅದರಂತೆ ಇದೇ ಮೊದಲ ಬಾರಿಗೆ ಈ ತಂತ್ರಜ್ಞಾನವನ್ನು ದೇಶಕ್ಕೆ ಪರಿಚಯಿಸಲಾಗಿದೆ. ಬಳಿಕ ಇದೇ ತಂತ್ರಜ್ಞಾನವೂ ದೇಶದೆಲ್ಲೆಡೆ ಬಳಕೆ ಮಾಡಲಾಗುತ್ತಿದೆ . ರೈಲ್ವೆಯಲ್ಲಿ ರೈಲುಗಳು ಮುಂದೆ ಇದ್ದಲ್ಲಿ, ಇದು ಕಿಲೋ ಮೀಟರ್ ದೂರದಲ್ಲೇ ರೈಲನ್ನು ತಡೆದು ನಿಲ್ಲಿಸುತ್ತದೆ. ಮೆಟ್ರೋದಲ್ಲಿ ಇದು 30 ಮೀಟರ್ ಅಂತರವನ್ನು ಹೊಂದಿದೆ. ಪೀಕ್ ಅವರ್ನಲ್ಲಿ ರೈಲುಗಳು ಒಂದಕ್ಕೊಂದು ಹತ್ತಿರ ಬಂದರೂ ಚಿಂತಿಸುವ ಅಗತ್ಯವಿಲ್ಲ ಎಂದರು.
ಇದೇ ವೇಳೆ, ಒಸಿಸಿಯ ವೈಶಿಷ್ಟ್ಯತೆಯನ್ನು ತಿಳಿಸಿದ ಅವರು, ಇದು ರೈಲು ನಿರ್ವಹಣೆಯನ್ನು ಪ್ರತಿ ಕ್ಷಣವೂ ನಿರ್ವಹಣೆ ಮಾಡುತ್ತದೆ. ಇದು ಸರಾಗ ಮತ್ತು ಸುರಕ್ಷಿತ ಪ್ರಯಾಣವನ್ನು ಪ್ರಯಾಣಿಕರಿಗೆ ನೀಡುತ್ತದೆ ಎಂದು ಅವರು ವಿವರಿಸಿದರು.
ಹೈದರಾಬಧ್ನಲ್ಲಿನ ಮೆಟ್ರೋ ಸೇವೆ ಸಾಮರ್ಥ್ಯ ಮತ್ತು ಸುರಕ್ಷತೆಯ ಭರವಸೆ ನೀಡುವಲ್ಲಿ ಸಿಬಿಟಿಸಿ ತಂತ್ರಜ್ಞಾನ ಮಹತ್ವದ ಹೆಜ್ಜೆಯಾಗಿದೆ. ಇದು ಹಲವು ರೈಲುಗಳನ್ನು ಒಂದೇ ಹಳಿಯ ಮೇಲೆ ಸುರಕ್ಷಿತವಾಗಿ ನಿರ್ವಹಣೆ ಮಾಡುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾವು