ETV Bharat / state

ನಾಳಿನ ಜೆಡಿಎಸ್‌ ಸಭೆಯಲ್ಲಿ ಭಾಗವಹಿಸುವುದಿಲ್ಲ : ಶಾಸಕ ಜಿ. ಟಿ. ದೇವೇಗೌಡ - GT DEVEGOWDA JDS MEETING

ನನಗೆ ವಯಸ್ಸಾದ ಕಾರಣ ಓಡಾಟ ಮಾಡಲು ಕಷ್ಟ ಆಗುತ್ತಿದೆ. ಆರೋಗ್ಯ ಸರಿಯಿಲ್ಲದ ಕಾರಣ ನಾಳಿನ ಸಭೆಗೆ ಹೋಗುತ್ತಿಲ್ಲ ಎಂದು ಶಾಸಕ ಜಿ ಟಿ ದೇವೇಗೌಡ ತಿಳಿಸಿದರು.

GT DEVEGOWDA says He will not Attend Bengaluru JDS Meeting
ಜಿ ಟಿ ದೇವೇಗೌಡ (ETV Bharat)
author img

By ETV Bharat Karnataka Team

Published : Jan 11, 2025, 3:05 PM IST

ಮೈಸೂರು: ಭಾನುವಾರದಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಜೆಡಿಎಸ್​ ಪಕ್ಷ ಸಂಘಟನಾ ಸಭೆಯಿಂದ ದೂರ ಉಳಿಯಲು ನಿರ್ಧರಿಸಿದ್ದು, ಕ್ಷೇತ್ರದ ಕೆಲಸದಿಂದ ಸಭೆಯಲ್ಲಿ ಭಾಗಿಯಾಗುವುದಿಲ್ಲ ಎಂದು ಜೆಡಿಎಸ್​ ಶಾಸಕ ಜಿಟಿ ದೇವೇಗೌಡ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ನನಗೆ ಯಾರ ಮೇಲೂ ಯಾವುದೇ ಕೋಪ, ಬೇಸರ ಇಲ್ಲ. ತಾಳ್ಮೆಯಿಂದ ಇದ್ದೇನೆ. ನನಗೆ 75 ವರ್ಷ ವಯಸ್ಸಾಗಿದ್ದು, ನನಗೆ ವಯಸ್ಸಾದ ಕಾರಣ ಓಡಾಟ ಮಾಡಲು ಕಷ್ಟ ಆಗುತ್ತಿದೆ. ಆ ಹಿನ್ನೆಲೆಯಲ್ಲಿ ಹಾಗೂ ಆರೋಗ್ಯ ಸರಿಯಿಲ್ಲದ ಕಾರಣ ನಾಳಿನ ಸಭೆಗೆ ಹೋಗುತ್ತಿಲ್ಲ. ಇದೇ ವೇಳೆ ಮೈಸೂರು ದಿನೆ ದಿನೇ ಬೃಹದಾಕಾರವಾಗಿ ಬೆಳೆಯುತ್ತಿದ್ದು, ಬೃಹತ್‌ ಮೈಸೂರು ಮಹಾನಗರ ಪಾಲಿಕೆ ಮಾಡಬೇಕೆಂದು ಮನವಿಯನ್ನು ಮುಖ್ಯಮಂತ್ರಿಯವರಿಗೆ ಸಲ್ಲಿಸಿದ್ದೇನೆ ಎಂದು ತಿಳಿಸಿದರು.

ಶಾಸಕ ಜಿ. ಟಿ. ದೇವೇಗೌಡ (ETV Bharat)

ಪಕ್ಷದ ರಾಜ್ಯಧ್ಯಕ್ಷರ ವಿಚಾರದಲ್ಲಿ ಹೆಚ್. ಡಿ. ದೇವೇಗೌಡರು ಹಾಗೂ ಕುಮಾರಸ್ವಾಮಿ ತೀರ್ಮಾನ ಮಾಡುತ್ತಾರೆ. ನನ್ನ ಮಗ ಜಿ. ಟಿ. ಹರೀಶ್‌ ಗೌಡ ಹಾಗೂ ನಿಖಿಲ್‌ ಕುಮಾರಸ್ವಾಮಿ ಒಳ್ಳೆಯ ಸ್ನೇಹಿತರು. ಹಾಗಾಗಿ ನಿಖಿಲ್‌ ರಾಜ್ಯಾ‍ಧ್ಯಕ್ಷರು ಆಗಲಿ ಎಂದು ನನ್ನ ಮಗ ಶಾಸಕ ಜಿ. ಟಿ. ಹರೀಶ್‌ ಗೌಡ ಹೇಳಿರುವುದರಲ್ಲಿ ತಪ್ಪಿಲ್ಲ ಎಂದು ಜಿಟಿಡಿ ಸಮರ್ಥಿಸಿಕೊಂಡರು.

2028ಕ್ಕೆ ಯಾರು ಸಿಎಂ ಆಗುತ್ತಾರೆ ಎಂದು ಹೇಳಲು ನಾನು ಜ್ಯೋತಿಷಿ ಅಲ್ಲ. ಜನರಿಂದ ಗೆದ್ದು ಬಂದವರು ಸಿಎಂ ಆಗುತ್ತಾರೆ. ಸದ್ಯ ಸಿಎಂ ಆಗುವ ಆಸೆ ನನ್ನಲ್ಲಿ ಇಲ್ಲ. ಅಷ್ಟು ಶಕ್ತಿ ನನ್ನಲ್ಲಿ ಇಲ್ಲ ಎಂದು ತಿಳಿಸಿದರು.

ಮುಡಾ ವಿಚಾರದಲ್ಲಿ ತನಿಖೆಯಾಗಲಿ : ತಮ್ಮ ವಿರುದ್ಧ ಕೂಡ ಸ್ನೇಹಮಯಿ ಕೃಷ್ಣ ದೂರು ಸಲ್ಲಿಕೆ ವಿಚಾರ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ತಪ್ಪು ಮಾಡಿದ್ದರೆ ತನಿಖೆ ಮಾಡಲಿ, ಕ್ರಮ ಕೈಗೊಳ್ಳಲಿ ನಾನು ಯಾರ ಮೇಲೂ ಪ್ರಭಾವ ಬೀರಿಲ್ಲ. ನನ್ನ ಮಗಳು ಅಳಿಯ ಹಣ ಕೊಟ್ಟು ನಿವೇಶನ ಖರೀದಿ ಮಾಡಿದ್ದಾರೆ ಎಂದು ನನಗೆ ಹೇಳಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: ಮೈಸೂರು: ಚರಂಡಿಯಲ್ಲಿ ಸಿಕ್ಕ ಜೀವಂತ ನವಜಾತ ಶಿಶುವಿನ ತಾಯಿ ಪತ್ತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.