ಹೈದರಾಬಾದ್: ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಸಂಭವಿಸಿದ ಕಾಳ್ಗಿಚ್ಚು ಭಾರೀ ಪ್ರಮಾಣದಲ್ಲಿ ನಷ್ಟವನ್ನುಂಟು ಮಾಡಿದೆ. ಸಾವಿರಾರು ಜನರು ತಮ್ಮ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಹಲವು ಗಣ್ಯರು, ರಾಜಕಾರಣಿಗಳ ಮನೆಗಳೂ ಬೆಂಕಿಗಾಹುತಿಯಾಗಿವೆ. ಅಲ್ಲದೇ ಈ ಘಟನೆಯಲ್ಲಿ ಅಮೆರಿಕದ ಮಾಜಿ ಈಜುಗಾರ ಗ್ಯಾರಿ ಹಾಲ್ ಜೂನಿಯರ್ ಕೂಡ ತಾವು ಒಲಿಂಪಿಕ್ಸ್‌ನಲ್ಲಿ ಗೆದ್ದಿದ್ದ ಎಲ್ಲಾ ಪದಕಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.
ಹೌದು, ಗ್ಯಾರಿ ಹಾಲ್ ಪೆಸಿಫಿಕ್ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆದ್ರೆ ಇಲ್ಲಿ ಸಂಭವಿಸಿದ ಕಾಡ್ಗಿಚ್ಚಿನಿಂದಾಗಿ ಇವರ ಮನೆ ಸುಟ್ಟು ಭಸ್ಮವಾಗಿದೆ. ಮನೆಯಲ್ಲಿದ್ದ ಹತ್ತು ಒಲಂಪಿಕ್ ಪದಕಗಳು ಮತ್ತು ಗೃಹೋಪಯೋಗಿ ವಸ್ತುಗಳನ್ನು ಬೆಂಕಿಗಾಹುತಿಯಾಗಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ನಾನು ನನ್ನ ಸಾಕು ನಾಯಿ ಬೆಂಕಿಯಿಂದ ಬದುಕುಳಿದೆವು. ಘಟನೆಯನ್ನು ನೇರವಾಗಿ ಕಂಡ ನನಗೆ, ಇದು ಅಪೋಕ್ಯಾಲಿಪ್ಸ್ ಚಲನಚಿತ್ರಕ್ಕಿಂತಲೂ ಸಾವಿರ ಪಟ್ಟು ಭಯಾನಕವಾಗಿ ಕಂಡಿತು. ಇದರಿಂದ ನಾನು ಬದುಕುಳಿದಿದ್ದೇನೆ ಆದ್ರೆ ನನ್ನೆಲ್ಲ ಒಲಿಂಪಿಕ್ ಮಡೆಲ್ಗಳು ಬೆಂಕಿಗಾಹುತಿಯಾಗಿದ್ದು, ಅವುಗಳನ್ನು ಮರಳಿ ಪಡೆಯುವುದು ಅಸಾಧ್ಯ ಎಂದು ಅಸಮಾಧಾನ ಹೊರಹಾಕಿದರು.
🚨🇺🇸 OLYMPIC LEGEND GARY HALL JR. LOSES MEDALS TO PALISADES WILDFIRE
— Info Room (@InfoR00M) January 11, 2025
🔹Gary Hall Jr., a 10-time Olympic medalist, lost his home and medals in a massive wildfire near Los Angeles.
🔹Hall called the fire “worse than any apocalypse movie” and fled with no time to save possessions.… pic.twitter.com/59v7QjRMcE
ಮುಂದುವರೆದು ಮಾತನಾಡುತ್ತ, ನನ್ನ ಮನೆ ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿದ್ದಾಗ ನಾನು ಪದಕಗಳ ಬಗ್ಗೆ ಯೋಚಿಸುತ್ತಿದ್ದೆ. ಆದರೆ ಅವುಗಳನ್ನು ಹೊರತರಲು ಸಾಧ್ಯವಾಗಲಿಲ್ಲ. ನನ್ನ ಕಣ್ಣೆದುರೇ ಎಲ್ಲಾ ಒಲಿಂಪಿಕ್ ಪದಕಗಳು ಸುಟ್ಟುಹೋದವು. ಅವುಗಳಿಲ್ಲದೇ ಬದುಕು ನಡೆಸುವುದು ತುಂಬ ಕಷ್ಟ ಎಂದು ಹೇಳಿದರು.
ಗ್ಯಾರಿ ಹಾಲ್ 2000 ಸಿಡ್ನಿ ಮತ್ತು 2004ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ಸತತ ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದರು. ಆದರೇ 1996ರ ಅಟ್ಲಾಂಟಾ ಒಲಿಂಪಿಕ್ಸ್ ಒಂದರಲ್ಲೇ ಮೂರು ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದರು. ಇದಷ್ಟೇ ಅಲ್ಲದೇ ಒಲಿಂಪಿಕ್ ಕ್ರೀಡಾಕೂಟದಲ್ಲಿ ಮೂರು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಜಯಿಸಿದ್ದಾರೆ.
ಇದನ್ನೂ ಓದಿ: ಕನ್ನಡಿಗ ದ್ರಾವಿಡ್ ಹುಟ್ಟುಹಬ್ಬ: ಇವರ ಹೆಸರಲ್ಲಿರುವ ಆ ಒಂದು ದಾಖಲೆ ಮುರಿಯುವುದು ಅಸಾಧ್ಯವೇ ಸರಿ!