ಖ್ಯಾತ ಹಾಸ್ಯ ನಟ ಟಿಕು ತಲ್ಸಾನಿಯಾ ಹೃದಯಾಘಾತಕ್ಕೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ. ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿತ್ತು. ಆದ್ರೆ, ಅವರ ಆರೋಗ್ಯದ ಬಗ್ಗೆ ಅವರ ಕುಟುಂಬಸ್ಥರು ಆರಂಭದಲ್ಲಿ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡರಲಿಲ್ಲ. ಸದ್ಯ ಅವರ ಆಪ್ತ ಕಾರ್ಯದರ್ಶಿ ಮಾಹಿತಿ ನೀಡಿದ್ದು, ಇದೊಂದು ಮೈಲ್ಡ್ ಹಾರ್ಟ್ ಅಟ್ಯಾಕ್. ಹಾಗಾಗಿ ಸದ್ಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಅವರಂತಹ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್‌ಗಳೊಂದಿಗೆ ಕೆಲಸ ಮಾಡಿರುವ ಟಿಕು ತಲ್ಸಾನಿಯಾ ಜನವರಿ 10, ಶುಕ್ರವಾರ ಹೃದಯಾಘಾತಕ್ಕೆ ಒಳಗಾಗಿರುವುದನ್ನು ಈಟಿವಿ ಭಾರತ್‌ನ ಮುಂಬೈ ವರದಿಗಾರರು ದೃಢಪಡಿಸಿದ್ದಾರೆ. ವರದಿಗಳ ಪ್ರಕಾರ, ನಟ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಈಗಾಗಲೇ ಚಿಕಿತ್ಸೆ ಪಡೆದಿದ್ದಾರೆ.
ಟಿಕು ತಲ್ಸಾನಿಯಾ ಕಿರುತೆರೆಯಿಂದ ಹಿರಿತೆರೆವರೆಗೂ ತಮ್ಮ ವೃತ್ತಿಜೀವನವನ್ನು ವಿಸ್ತರಿಸಿಕೊಂಡಿದ್ದಾರೆ. 'ಸಜನ್ ರೆ ಫಿರ್ ಜೂಟ್ ಮತ್ ಬೋಲೋ', 'ಯೇ ಚಂದಾ ಕಾನೂನ್ ಹೈ', 'ಏಕ್ ಸೆ ಬಡ್ಕರ್ ಏಕ್' ಮತ್ತು 'ಜಮಾನಾ ಬಾದಲ್ ಗಯಾ ಹೈ' ನಂತಹ ಅನೇಕ ಜನಪ್ರಿಯ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: ವಿಡಿಯೋ: ವೃಂದಾವನ ಆಶ್ರಮಕ್ಕೆ ಮಕ್ಕಳೊಂದಿಗೆ ಭೇಟಿ ಕೊಟ್ಟ ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ
ಟಿಕು ತಲ್ಸಾನಿಯಾ 1984ರಲ್ಲಿ 'ಯೇ ಜೋ ಹೈ ಜಿಂದಗಿ' ಎಂಬ ಟಿವಿ ಕಾರ್ಯಕ್ರಮದ ಮೂಲಕ ನಟನಾ ವೃತ್ತಿಜೀವನ ಆರಂಭಿಸಿದರು. ಎರಡು ವರ್ಷಗಳ ಬಳಿಕ, ಪ್ಯಾರ್ ಕೆ ದೋ ಪಲ್, ಡ್ಯೂಟಿ ಮತ್ತು ಅಸ್ಲಿ ನಕ್ಲಿ ಮೂಲಕ ಬಾಲಿವುಡ್ ಪ್ರವೇಶಿಸಿದ ಇವರ ವೃತ್ತಿಜೀವನದ ಯಶಸ್ಸು ಉತ್ತುಂಗಕ್ಕೇರಿತು, ನಂತರ ಹಿಂತಿರುಗಿ ನೋಡಲೇ ಇಲ್ಲ. ಇದಾದ ನಂತರ, ಬೋಲ್ ರಾಧಾ ಬೋಲ್, ಕೂಲಿ ನಂ1, ರಾಜಾ ಹಿಂದೂಸ್ತಾನಿ, ಹೀರೋ ನಂ.1, ಹಂಗಾಮಾ ಮತ್ತು ಬಡೇ ಮಿಯಾ ಚೋಟೆ ಮಿಯಾದಂತಹ ಚಿತ್ರಗಳಲ್ಲಿನ ಅದ್ಭುತ ಪಾತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದರು. ಅಮೋಘ ಅಭಿನಯದಿಂದಾಗಿ ಮನೆ ಮನೆಮಾತಾದರು.
ಇದನ್ನೂ ಓದಿ: 'ಆ ವಧುವನ್ನು ಪ್ರಭಾಸ್ ವರಿಸಲಿದ್ದಾರೆ': ನಟ ರಾಮ್ ಚರಣ್ ಕೊಟ್ರು ಹಿಂಟ್
ಟಿಕು ದೀಪ್ತಿ ಅವರೊಂದಿಗೆ ದಾಂಪತ್ಯ ಜೀವನ ಸಾಗಿಸುತ್ತಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳು. ಮಗನ ಹೆಸರು ರೋಹನ್ ತಲ್ಸಾನಿಯಾ. ಸಂಗೀತಗಾರನಾಗಿ ಗುರುತಿಸಿಕೊಂಡಿದ್ದಾರೆ. ಮಗಳ ಹೆಸರು ಶಿಖಾ ತಲ್ಸಾನಿಯಾ 'ವೀರೆ ದಿ ವೆಡ್ಡಿಂಗ್' ಚಿತ್ರದ ಪಾತ್ರಕ್ಕೆ ಹೆಸರುವಾಸಿಯಾಗಿದ್ದಾರೆ.