ETV Bharat / state

ಬೆಂಗಳೂರಲ್ಲಿ ಏರ್ ಟ್ಯಾಕ್ಸಿ! ಅಗ್ಗದ ಬೆಲೆಯಲ್ಲಿ ಏರ್ ಟ್ರಾವೆಲ್: ಈ ಎಲೆಕ್ಟ್ರಿಕ್ ಹೆಲಿಕಾಪ್ಟರ್ ವಿಶೇಷತೆಗಳೇನು? - AIR TAXI HELICOPTER

ಬೆಂಗಳೂರಲ್ಲಿ 2028ರ ವೇಳೆಗೆ ಏರ್ ಟ್ಯಾಕ್ಸಿ ಹೆಲಿಕಾಪ್ಟರ್​ ಹಾರಾಡಲು ಸಜ್ಜಾಗಿವೆ. ಈ ಮೂಲಕ ವೇಗದ ಜೊತೆಗೆ ಟ್ರಾಫಿಕ್ ಜಾಮ್​ ಕಿರಿಕಿರಿ ತಪ್ಪಲಿದೆ.

ಹೂಡಿಕೆದಾರರ ಸಮಾವೇಶ,ಏರ್ ಟ್ಯಾಕ್ಸಿ, Air Taxi, EV Helicopter
ಹೂಡಿಕೆದಾರರ ಸಮಾವೇಶದಲ್ಲಿ ಏರ್ ಟ್ಯಾಕ್ಸಿ ಪ್ರದರ್ಶನ (ETV Bharat)
author img

By ETV Bharat Karnataka Team

Published : Feb 13, 2025, 7:10 AM IST

ಬೆಂಗಳೂರು: ಎಲ್ಲವೂ ಅಂದು ಕೊಂಡಂತೆ ಆದರೆ, 2028ಕ್ಕೆ ಬೆಂಗಳೂರಿನ ಬಾನಂಗಳದಲ್ಲಿ ಹಾರಾಡಲಿವೆ ಏರ್ ಟ್ಯಾಕ್ಸಿ! ಹೌದು.. ಬೆಂಗಳೂರಿಗರು ಅಭಿವೃದ್ಧಿಪಡಿಸಿರುವ ವಿದ್ಯುತ್ ಚಾಲಿತ ಏರ್ ಟ್ಯಾಕ್ಸಿ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಎಲ್ಲರ ಕೇಂದ್ರ ಬಿಂದುವಾಗಿದೆ‌.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಇನ್ವೆಸ್ಟ್ ಕರ್ನಾಟಕದಲ್ಲಿ ಇವಿ ಏರ್ ಟ್ಯಾಕ್ಸಿ ಹೆಲಿಕಾಪ್ಟರ್ ಪ್ರೊಟೊ ಟೈಪ್ ಎಲ್ಲರ ಗಮನ ಸೆಳೆಯುತ್ತಿದೆ. ಬಂಡವಾಳ ಹೂಡಿಕೆದಾರರ ಸಮಾವೇಶದ ಪ್ರದರ್ಶನ ಮಳಿಗೆಯಲ್ಲಿ ಆರು ಸೀಟರ್​ನ ಇವಿ ಏರ್ ಟ್ಯಾಕ್ಸಿ ಪ್ರೊಟೊ ಟೈಪ್ ಬೆರಗು ಮೂಡಿಸುತ್ತಿದೆ. ಎಲ್ಲವೂ ಅಂದು ಕೊಂಡಂತೆ ಆದರೆ ಬೆಂಗಳೂರಲ್ಲಿ 2028ರ ವೇಳೆಗೆ ಏರ್ ಟ್ಯಾಕ್ಸಿ ಓಡಾಡಲಿದೆ. ಸರ್ಲಾ ಏವಿಯೇಷನ್ ಸಂಸ್ಥೆ ಈ ಶುನ್ಯ ಹೆಸರಿನ ಏರ್ ಟ್ಯಾಕ್ಸಿ ಹೆಲಿಕಾಪ್ಟರ್ ಅಭಿವೃದ್ಧಿಪಡಿಸಿದೆ.

ಇನ್ವೆಸ್ಟ್ ಕರ್ನಾಟಕದಲ್ಲಿ ಇವಿ ಏರ್ ಟ್ಯಾಕ್ಸಿ ಹೆಲಿಕಾಪ್ಟರ್ (ETV Bharat)

ಅಗ್ಗದ ಬೆಲೆಗೆ ಏರ್ ಟ್ಯಾಕ್ಸಿ ಪ್ರಯಾಣ?: ಓಲಾ, ಉಬರ್ ಟ್ಯಾಕ್ಸಿ ತರ ನೀವು ಈ ಏರ್ ಟ್ಯಾಕ್ಸಿಯನ್ನು ಬುಕ್ ಮಾಡಬಹುದಾಗಿದೆ. ನಿಯೋಜಿತ ಸ್ಥಳದಿಂದ ನಿಮಗೆ ಏರ್ ಟ್ಯಾಕ್ಸಿ ಸೇವೆ ಲಭ್ಯವಾಗುತ್ತದೆ. ಅದರಂತೆ ಉದಾಹರಣೆಗೆ ಜಕ್ಕೂರಿನಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಈ ಏರ್ ಟ್ಯಾಕ್ಸಿಯಲ್ಲಿ ಹೋಗಬೇಕಾದರೆ ಅಂದಾಜು 900 ರೂ. ತಗುಲಲಿದೆ ಎಂದು ಸಹ ಸಂಸ್ಥಾಪಕ ದಿನೇಶ್ ಅವರು ತಿಳಿಸಿದ್ದಾರೆ. ಈ ಮೂಲಕ ಕ್ಷಿಪ್ರವಾಗಿ ಮತ್ತು ಟ್ರಾಫಿಕ್ ಜಾಮ್ ಕಿರಿಕಿರಿಯಿಂದ ತಪ್ಪಿಸಿಕೊಂಡು ಏರ್ ಟ್ಯಾಕ್ಸಿ ಮೂಲಕ ಬೆಂಗಳೂರಲ್ಲಿ ಸಂಚಾರ ಕೈಗೊಳ್ಳಬಹುದಾಗಿದೆ. ಬೆಂಗಳೂರಲ್ಲಿ ರಸ್ತೆ ಮೂಲಕ ಗಂಟೆಗಟ್ಟಲೆ ತೆಗೆದುಕೊಳ್ಳುವ ಸಂಚಾರ ಈ ಏರ್ ಟ್ಯಾಕ್ಸಿಯಿಂದ ನಿಮಿಷದಲ್ಲಿ ಪೂರೈಸಬಹುದಾಗಿದೆ.

ಏರ್ ಟ್ಯಾಕ್ಸಿ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರಕವಾಗಿ ಕಾರ್ಯನಿರ್ವಹಿಸಲಿದೆ. ಈಗಾಗಲೇ DGCAಯಿಂದ ಸರ್ಲಾ ಏವಿಯೇಷನ್ ಸಂಸ್ಥೆ ಈ ಇವಿ ಏರ್ ಟ್ಯಾಕ್ಸಿಗೆ ಅನುಮತಿ ಕೋರಿದ್ದಾರೆ. ಸುಮಾರು ಮೂರು ತಿಂಗಳ ಹಿಂದೆ ಅನುಮತಿ ಕೋರಿದ್ದಾರೆ. ಅನುಮತಿ ಸಿಕ್ಕ ಬಳಿಕ ಏರ್ ಪೋರ್ಟ್ ಆಫ್ ಇಂಡಿಯಾದಿಂದ ಅನುಮತಿ ಪಡೆದು ಕಾರ್ಯಾಚರಣೆಗೆ ಇಳಿಯಲು ಏರ್ ಟ್ಯಾಕ್ಸಿ ಸನ್ನದ್ಧವಾಗಿದೆ. ಅಂದುಕೊಂಡಂತೆ ಆದರೆ 2028ಕ್ಕೆ ಏರ್ ಟ್ಯಾಕ್ಸಿ ಸೇವೆ ಲಭ್ಯವಾಗಲಿದೆ ಎಂದು ಸಹ ಸಂಸ್ಥಾಪಕ ದಿನೇಶ್ ಮಾಹಿತಿ ನೀಡಿದ್ದಾರೆ.

ಇವಿ ಏರ್ ಟ್ಯಾಕ್ಸಿ ವಿಶೇಷತೆ ಏನು?: ವಿದ್ಯುತ್ ಚಾಲಿತ ಏರ್ ಟ್ಯಾಕ್ಸಿ ಪೂರ್ಣವಾಗಿ ಚಾರ್ಜ್ ಆಗಲು 3 ತಾಸು ತೆಗೆದುಕೊಳ್ಳುತ್ತದೆ. ಕನಿಷ್ಠ 20 ನಿಮಿಷ ಚಾರ್ಜ್ ಮಾಡಿದರೆ ಸಾಕು ಈ ಏರ್ ಟ್ಯಾಕ್ಸಿ ಹೆಲಿಕಾಪ್ಟರ್ ಮೂಲಕ ಬ್ಯಾಕ್ ಟು ಬ್ಯಾಕ್ ಟ್ರಿಪ್ ಮಾಡಬಹುದಾಗಿದೆ. ಪ್ರತಿ ಗಂಟೆಗೆ 250 ಕಿ.ಮೀ. ವೇಗದಲ್ಲಿ ಸಂಚಾರ ನಡೆಸುತ್ತದೆ. ಆ ಮೂಲಕ ತಾಸುಗಟ್ಟಲೇ ತೆಗೆದುಕೊಳ್ಳುವ ಸಂಚಾರವನ್ನು ನಿಮಿಷಗಳಲ್ಲಿ ಕ್ರಮಿಸಬಹುದಾಗಿದೆ.

ಈ ಏರ್ ಟ್ಯಾಕ್ಸಿ 6 ಪ್ರಯಾಣಿಕರ ಸೀಟ್ ಹೊಂದಿದ್ದು, ಒಬ್ಬ ಪೈಲಟ್ ಹಾಗೂ ಲಗೇಜ್​​ಗೂ ಸ್ಥಳಾವಕಾಶ ಹೊಂದಿರಲಿದೆ. ಈ ಇವಿ ಹೆಲಿಕಾಪ್ಟರ್ ಟ್ಯಾಕ್ಸಿಯಲ್ಲಿ ನಾಲ್ಕು ಡಬಲ್ ಐಸೊಲೇಟೆಡ್ ಬ್ಯಾಟರಿಗಳು ಇದೆ. ಈ ಇವಿ ಏರ್ ಟ್ಯಾಕ್ಸಿ 20 ಮೀಟರ್ ವರ್ಟಿಕಲ್ ಲಿಫ್ಟ್ ಪಡೆದು ಬಳಿಕ ಹೊರಿಸಾಂಟಲ್ ಆಗಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಒಂದು ಬಾರಿಗೆ 160 ಕಿ.ಮೀ. ವರೆಗೆ ಹಾರಾಡುವ ಹಾಗೂ 20-30 ಕಿ.ಮೀ. ಟ್ರಿಪ್ಸ್ ಮಾಡುವ ಸಾಮರ್ಥ್ಯ ಹೊಂದಿದೆ.

ಈಗಾಗಲೇ ಸಂಸ್ಥೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಜೊತೆ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಿದೆ. ತಡೆರಹಿತ ವೈಮಾನಿಕ ಸಂಚಾರ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಏರ್ ಪೋರ್ಟ್ ಜೊತೆ ಒಡಂಬಡಿಕೆ ಮಾಡಿರುವುದು ಪ್ರಮುಖ ಘಟ್ಟವಾಗಿದೆ. ಪ್ರಸಕ್ತ ಇರುವ ಸಂಚಾರ ಮೂಲಸೌಕರ್ಯ ಜೊತೆ ಸಂಯೋಜನೆ ಮಾಡಿ ಭವಿಷ್ಯದ ಸಂಚಾರ ವ್ಯವಸ್ಥೆಯನ್ನು ನಿರ್ಮಿಸುತ್ತಿದ್ದೇವೆ. ಈ ಏರ್ ಟ್ಯಾಕ್ಸಿ ವೇಗ ಮಾತ್ರವಲ್ಲ, ಪರಿಸರ ಸ್ನೇಹಿಯೂ ಆಗಿದೆ ಎಂದು ಸಹ ಸಂಸ್ಥಾಪಕ ರಾಕೇಶ್ ಗೋಯ್ಕರ್ ತಿಳಿಸಿದ್ದಾರೆ.

ಇದನ್ನೂ ಓದಿ: ಸ್ಕೂಬಾ ಡೈವಿಂಗ್​ ಪರ್ಯಾಯವಾಗಿ ಅಂಡರ್ ವಾಟರ್ ಬೈಕ್ ಅಭಿವೃದ್ಧಿಪಡಿಸಿದ ಗೋಪಾಲನ್ ಏರೋಸ್ಪೇಸ್ ಕಂಪೆನಿ

ಇದನ್ನೂ ಓದಿ: 350 ಕಿ.ಮೀ ದೂರದಲ್ಲಿದ್ದರೂ ಶತ್ರುದೇಶದ ವಿಮಾನ ಪತ್ತೆ ಹಚ್ಚಲಿದೆ ವಿಹೆಚ್​​ಎಫ್ ಸೂರ್ಯ ರಾಡಾರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.