ಬೆಂಗಳೂರು: ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಹಿನ್ನೆಲೆಯಲ್ಲಿ ಬೆಂಗಳೂರು ಯಲಹಂಕ ವಾಯು ನೆಲೆಯ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ. ಪರಿಣಾಮವಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲು ಪ್ರಯಾಣಿಕರು ಬದಲಿ ಮಾರ್ಗಗಳನ್ನು ಬಳಸುವಂತೆ ವಿಮಾನ ನಿಲ್ದಾಣ ಪ್ರಾಧಿಕಾರ ಸೂಚಿಸಿದೆ.
ಫೆ.12 ರಿಂದ 14ರವರೆಗೂ ಹೆಬ್ಬಾಳ ಮೇಲ್ಸೇತುವೆಯಿಂದ ಏರ್ಪೋರ್ಟ್ವರೆಗೂ ಹೆಚ್ಚು ಸಂಚಾರ ದಟ್ಟಣೆಯುಂಟಾಗುವ ಸಾಧ್ಯತೆಯಿದೆ. ಆದ್ದರಿಂದ ಏರ್‌ಪೋರ್ಟ್ ತಲುಪುವ ಪ್ರಯಾಣಿಕರಿಗೆ ಬದಲಿ ಮಾರ್ಗಗಳನ್ನ ಬಳಸುವಂತೆ ಸೂಚಿಸಲಾಗಿದೆ.
ಈ ಕುರಿತು ಎಕ್ಸ್ ಆ್ಯಪ್‌ನಲ್ಲಿ ಪ್ರಕಟಿಸಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಾಧಿಕಾರ, ಬೆಂಗಳೂರು ಸಂಚಾರ ಪೊಲೀಸರು ಸೂಚಿಸಿದಂತೆ ಪರ್ಯಾಯ ಮಾರ್ಗಗಳನ್ನು ಬಳಸುವುದನ್ನು ಪರಿಗಣಿಸಲು ಪ್ರಯಾಣಿಕರನ್ನ ವಿನಂತಿಸಿದ್ದು, "ಏರೋ ಇಂಡಿಯಾ ಪ್ರದರ್ಶನದ ಕಾರಣದಿಂದಾಗಿ NH 44ರಲ್ಲಿ ಭಾರೀ ಮತ್ತು ನಿಧಾನವಾಗಿ ಚಲಿಸುವ ಸಂಚಾರ ದಟ್ಟಣೆಯನ್ನು ತಪ್ಪಿಸಲು ಫೆಬ್ರವರಿ 12 - 14ರ ನಡುವೆ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿರುವ ಪ್ರಯಾಣಿಕರು ಪರ್ಯಾಯ ಮಾರ್ಗಗಳನ್ನು ಪರಿಗಣಿಸಿ" ಎಂದು ತಿಳಿಸಿದೆ.
ಇದನ್ನೂ ಓದಿ: ಅಸಹಜ ಮೆಟ್ರೋ ಟಿಕೆಟ್ ದರ ಹೆಚ್ಚಳವಾಗಿರುವ ಕಡೆ ಕೂಡಲೇ ಕಡಿತಗೊಳಿಸಿ: ಸಿಎಂ ಸೂಚನೆ
ಇದನ್ನೂ ಓದಿ: ಬೆಂಗಳೂರಲ್ಲಿ ಏರೋ ಇಂಡಿಯಾ ಶೋ: ಈ ರಸ್ತೆಗಳಲ್ಲಿ ಸಂಚಾರ ನಿಷೇಧ - ಬದಲಿ ಮಾರ್ಗ, ಪಾರ್ಕಿಂಗ್ ಸ್ಥಳದ ವಿವರ ಹೀಗಿದೆ