Mohammed Siraj Champions Trophy: ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ದಿನಗಣನೆ ಪ್ರಾರಂಭವಾಗಿದೆ. ಮುಂದಿನ ವಾರ ಅಂದರೆ ಫೆಬ್ರವರಿ 19 ರಿಂದ 9ನೇ ಆವೃತ್ತಿ ಶುರುವಾಗಲಿದೆ. ಈ ಟೂರ್ನಿಯಲ್ಲಿ ಭಾರತ ಸೇರಿ ಒಟ್ಟು 8 ತಂಡಗಳು ಭಾಗಿಯಾಗುತ್ತಿವೆ. ಆದರೆ ಈ ಬಾರಿ ಜಸ್ಪ್ರಿತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಇಲ್ಲದೆ ಭಾರತ ತಂಡ ಕಣಕ್ಕಿಳಿಯುತ್ತಿದೆ.
ತಂಡದ ಪ್ರಮುಖ ಬೌಲರ್ ಆಗಿದ್ದ ಬುಮ್ರಾ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಗಾಯಕ್ಕೆ ತುತ್ತಾಗಿದ್ದರು. ಆ ಬಳಿಕ ಇಂಗ್ಲೆಂಡ್ ವಿರುದ್ಧ ನಡೆದ ಏಕದಿನ ಮತ್ತು ಟಿ20 ಸರಣಿಯಿಂದಲೂ ಹೊರಗುಳಿದಿದ್ದರು. ಸದ್ಯ ಗಾಯದಿಂದ ಚೇತರಿಸಿಕೊಂಡು ಫಿಟ್ ಆಗಿದ್ದರು ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿಲ್ಲ. ಮತ್ತೊಂದೆಡೆ ಅನುಭವಿ ಆಟಗಾರ ಮೊಹಮ್ಮದ್ ಸಿರಾಜ್ ಅವರನ್ನೂ ಆಯ್ಕೆ ಮಾಡದೆ ಇರುವುದು ಅಚ್ಚರಿಗೆ ಕಾರಣವಾಗಿದೆ.
![CHAMPIONS TROPHY 2025 SIRAJ CHAMPIONS TROPHY INDIA SQUAD ಮೊಹಮ್ಮದ್ ಸಿರಾಜ್ JASPRIT BUMRAH](https://etvbharatimages.akamaized.net/etvbharat/prod-images/15-02-2025/23549095_thum.jpg)
ಬುಮ್ರಾ ಆಯ್ಕೆ ಮಾಡದಿರಲು ಕಾರಣ ಏನು ? ಗಾಯಕ್ಕೆ ತುತ್ತಾಗಿ ಚೇತರಿಸಿಕೊಂಡಿದ್ದ ಬುಮ್ರಾ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮುನ್ನ ಚೇತರಿಸಿಕೊಂಡಿದ್ದಾರೆ ಎಂದು ಮೆಡಿಕಲ್ ರಿಪೋರ್ಟ್ ಬಂದಿದ್ದರು ಅವರನ್ನು ಕೈಬಿಡಲಾಗಿದೆ. ಕಾರಣ ಬುಮ್ರಾ ಚೇತರಿಸಿಕೊಂಡಿದ್ದರು ಅವರು ಬೌಲಿಂಗ್ ಮಾಡುವ ಮತ್ತು ಟೂರ್ನಿಯ ಎಲ್ಲಾ ಪಂದ್ಯಗಳನ್ನು ಆಡುವ ಸಾಮರ್ಥ್ಯ ಹೊಂದಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಮುಂಬರುವ ಪಂದ್ಯಾವಳಿಗಳನ್ನು ಗಮನದಲ್ಲಿಟ್ಟು ಕನಿಷ್ಠ 5 ವಾರಗಳ ಕಾಲ ಅವರನ್ನು ಕೆಲಸದ ಹೊರೆಯಿಂದ ಹೊರಗಿಡಲು ತೀರ್ಮಾನಿಸಲಾಗಿದೆ. ಇದೇ ಕಾರಣಕ್ಕೆ ಆಯ್ಕೆ ಸಮಿತಿ ಕೂಡ ರಿಸ್ಕ್ ತೆದುಕೊಳ್ಳಲು ಮುಂದಾಗಲಿಲ್ಲ ಎಂದು ಪಿಟಿಐ ವರದಿ ಮಾಡಿದೆ.
![CHAMPIONS TROPHY 2025 SIRAJ CHAMPIONS TROPHY INDIA SQUAD ಮೊಹಮ್ಮದ್ ಸಿರಾಜ್ JASPRIT BUMRAH](https://etvbharatimages.akamaized.net/etvbharat/prod-images/15-02-2025/23549095_thum2.jpg)
ಸಿರಾಜ್ ಕೈ ಬಿಡಲು ಕಾರಣ ಏನು ? ಮತ್ತೊಂದೆಡೆ ತಂಡ ಬದಲಾವಣೆಗೆ ಫೆ.12ರ ರವೆಗೆ ಸಮಯವಿತ್ತು. ಈ ವೇಳೆ ಬುಮ್ರಾ ಟೂರ್ನಿಯಿಂದ ಹೊರಬಿದ್ದ ಕಾರಣ ಅವರ ಸ್ಥಾನಕ್ಕೆ ಅನುಭವೆ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಅಚ್ಚರಿ ಎಂಬಂತೆ ಯುವ ವೇಗಿ ಹರ್ಷಿತ್ ರಾಣಾ ಅವರನ್ನು ಆಯ್ಕೆ ಮಾಡಲಾಗಿದೆ. ಆದರೆ ಸಿರಾಜ್ ಅವರನ್ನು ಹೊರಗಿಡಲು ಕಾರಣ ಏನು ಎಂದು ಹಲವಾರು ಕ್ರಿಕೆಟಿಗರು ಪ್ರಶ್ನೆ ಎತ್ತಿದ್ದಾರೆ.
ರೋಹಿತ್ ಸ್ಪಷ್ಟನೆ : ನಾಯಕ ರೋಹಿತ್ ಶರ್ಮಾ ಇದಕ್ಕೆ ಉತ್ತರ ನೀಡಿದ್ದಾರೆ. ವಾಸ್ತವವಾಗಿ ರಾಣಾಗೆ ಹೋಲಿಕೆ ಮಾಡಿದ್ರೆ ಸಿರಾಜ್ ಹೆಚ್ಚು ಅನುಭವ ಹೊಂದಿದ್ದಾರೆ. ಆದರೆ ಸಿರಾಜ್ ಕೇವಲ ಹೊಸ ಬೌಲ್ನೊಂದಿಗೆ ಮಾತ್ರ ಉತ್ತಮ ಪ್ರದರ್ಶನ ನೀಡುತ್ತಾರೆ.
ಬಳಿಕ ಬೌಲ್ ಶೈನ್ ಕಳೆದುಕೊಳ್ಳುತ್ತಿದ್ದಂತೆ ದುಬಾರಿ ಬೌಲರ್ ಆಗಿ ಬಿಡುತ್ತಾರೆ ಎಂದು ಮಾಧ್ಯಮಗೋಷ್ಟಿಯಲ್ಲಿ ಸ್ಪಷನೆ ನೀಡಿದ್ದಾರೆ. ಮತ್ತೊಂದೆಡೆ ಹರ್ಷಿತ್ ರಾಣಾ ಚೆಂಡು ಹಳೆಯದಾದಂತೆ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಹಲವು ಪಂದ್ಯಗಳಲ್ಲಿ ಇದನ್ನು ಸಾಬೀತು ಮಾಡಿದ್ದಾರೆ ಎಂದರು.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಆಸೀಸ್ಗೆ ಭಾರೀ ಮುಖಭಂಗ; ದಾಖಲೆ ಬರೆದ ಲಂಕಾ