ETV Bharat / state

'ನಾನು ಧರ್ಮವಿರೋಧಿಯಲ್ಲ, ಆದ್ರೆ ಕುಂಭ ಮೇಳಕ್ಕೆ ಹೋಗಲ್ಲ' : ನಟ ಪ್ರಕಾಶ್ ರಾಜ್​ - ACTOR PRAKASH RAJ

ಧಾರ್ಮಿಕ ವಿಚಾರದಲ್ಲಿ ರಾಜಕಾರಣ ಮಾಡುವವರು ನಿಜವಾದ ಹಿಂದೂಗಳಲ್ಲ ಎಂದು ನಟ ಪ್ರಕಾಶ್​ ರಾಜ್​ ಹೇಳಿದ್ದಾರೆ.

ACTOR PRAKASH RAJ
ನಟ ಪ್ರಕಾಶ್ ರಾಜ್​ (ETV Bharat)
author img

By ETV Bharat Karnataka Team

Published : Feb 15, 2025, 8:30 PM IST

ಮಂಗಳೂರು : "ನಾನು ಧರ್ಮವಿರೋಧಿಯಲ್ಲ. ಆದ್ರೆ ಕುಂಭ ಮೇಳಕ್ಕೆ ಹೋಗಲ್ಲ. ಎಲ್ಲವೂ ಅವರವರ ನಂಬಿಕೆಗೆ ಬಿಟ್ಟಿದ್ದು" ಎಂದು ನಟ ಪ್ರಕಾಶ್ ರೈ ಹೇಳಿದ್ದಾರೆ.

"ಕುಂಭಮೇಳಕ್ಕೆ ಹೋಗುವ ಎಂದು ನನ್ನ ಕೆಲ ಸ್ನೇಹಿತರು ಪರ್ಮಿಷನ್‌ಗೆ ಕಾಲ್ ಮಾಡಿದ್ದರು. ನನಗೆ‌ ಅದರಲ್ಲಿ ನಂಬಿಕೆ‌ಯಿಲ್ಲ. ನಾನು ಸೌಹಾರ್ದಕ್ಕೆ ಬೆಲೆ‌ ಕೊಡುವವನು. ಹಾಗಾಗಿ ಹೋಗಿಲ್ಲ" ಎಂದರು.

ನಾನು ಧರ್ಮವಿರೋಧಿಯಲ್ಲ, ಆದ್ರೆ ಕುಂಭ ಮೇಳಕ್ಕೆ ಹೋಗಲ್ಲ ಎಂದ ನಟ ಪ್ರಕಾಶ್​ ರಾಜ್​ (ETV Bharat)

"ಧಾರ್ಮಿಕ ವಿಚಾರದಲ್ಲಿ ರಾಜಕಾರಣ ಮಾಡುವವರು ನಿಜವಾದ ಹಿಂದೂಗಳಲ್ಲ. ಧಾರ್ಮಿಕ ಆಚರಣೆ, ಪೂಜೆಯಲ್ಲೂ ರಾಜಕಾರಣ ಎಳೆ ತರಲಾಗುತ್ತಿದೆ. ಒಂದು ಸರಕಾರವನ್ನು ಒಬ್ಬ ವ್ಯಕ್ತಿಯನ್ನು ಪ್ರಶ್ನಿಸಿದ್ದೇನೆ ಎಂದ ಮಾತ್ರಕ್ಕೆ ವಾಟ್ಸ್‌ಆ್ಯಪ್ ಯುನಿವರ್ಸಿಟಿಗಳಲ್ಲಿ ತಪ್ಪು ಮಾಹಿತಿ ಹರಡಲಾಗುತ್ತದೆ. ಅಂತಹದನ್ನೆಲ್ಲಾ ಪ್ರಶಾಂತ ಸಂಬರ್ಗಿಯವರು ಮಾಡುತ್ತಿದ್ದಾರೆ. ಅವರ ಮೇಲೆ ಕೇಸ್ ಫೈಲ್ ಮಾಡಿದ್ದೇವೆ. ಎಐ ಮೂಲಕ ತಪ್ಪನ್ನು ಹರಡಲಾಗುತ್ತಿದೆ. ಅದು ಅಕ್ಷಮ್ಯ ಅಪರಾಧ. ಅದು ಅವರ ಮಾನಸಿಕತೆಯನ್ನು ಬಿಂಬಿಸುತ್ತದೆ" ಎಂದರು.

ರಾಜ್ಯದಲ್ಲಿ ದಲಿತ ಸಿಎಂ ಚರ್ಚೆ ವಿಚಾರವಾಗಿ ಮಾತನಾಡಿದ ಪ್ರಕಾಶ್ ರಾಜ್​, "ಅಂಬೇಡ್ಕರ್ ಅವರನ್ನು ಹೇಗೆ ಕೊಲ್ಲಬೇಕೆಂದು ಬಿಜೆಪಿ ಯೋಚನೆ ಮಾಡುತ್ತದೆ. ಅತ್ತ ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಹೇಗೆ ಉಪಯೋಗಿಸಬೇಕೆಂದು ಯೋಚನೆ ಮಾಡುತ್ತದೆ. ಇವರಿಬ್ಬರ ಮಾತಿನ ನಡುವಿನ ಮೌನವನ್ನು ನಾವು ಪ್ರಜೆಗಳಾಗಿ ಅರ್ಥ ಮಾಡ್ಕೋಬೇಕು. ಜನರಿಗೆ ಈಗ ಅರ್ಥವಾಗುತ್ತಿದೆ. ಆಶ್ವಾಸನೆಗಳು ಎಷ್ಟು ಸುಳ್ಳು ಮಾತುಗಳು ಅನ್ನೋದು ಜನರಿಗೆ ಅರ್ಥವಾಗುತ್ತದೆ. ಯಾರದೋ ಮಾತು ಕೇಳಿ ವೋಟ್ ಮಾಡುವುದರಿಂದ ಏನಾಗುತ್ತಿದೆ ಅನ್ನೋದು ಗೊತ್ತಾಗುತ್ತಿದೆ" ಎಂದು ಹೇಳಿದರು.

ಇದನ್ನೂ ಓದಿ: ಕುಂಭಮೇಳದಲ್ಲಿ ಪ್ರಕಾಶ್ ರಾಜ್ ಪವಿತ್ರ ಸ್ನಾನದ ನಕಲಿ ಫೋಟೋ: ಹರಿಬಿಟ್ಟವರ ವಿರುದ್ಧ ದೂರು ದಾಖಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.