ತಿರುಮಲ: ತಿರುಪತಿ ವೆಂಕಟೇಶ್ವರ ದರ್ಶನಕ್ಕೆ ನಿತ್ಯ ಜನ ಸಾಗರ ಹರಿದು ಬರುತ್ತದೆ. ದೇಶ ವಿದೇಶಗಳಿಂದ ಬರುವ ಈ ಭಕ್ತರ ನಿರ್ವಹಣೆ ಟಿಟಿಡಿಗೆ ಅತಿ ದೊಡ್ಡ ಸವಾಲು ಕೂಡ ಹೌದು. ಇದೇ ಕಾರಣಕ್ಕೆ ಕಾಲ ಕಾಲಕ್ಕೆ ಹಲವು ನಿಯಮಗಳನ್ನು ಮಾರ್ಪಡು ಮಾಡಿ ಈ ಕುರಿತು ಭಕ್ತರಿಗೆ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಸೂಚನೆ ನೀಡುತ್ತಿರುತ್ತದೆ. ಇದೀಗ ಅದೇ ರೀತಿಯಲ್ಲಿ ಕಟ್ಟುನಿಟ್ಟಿನ ಸೂಚನೆಯನ್ನು ಮತ್ತೊಮ್ಮೆ ಭಕ್ತರಿಗಾಗಿ ಹೊರಡಿಸಿದೆ.
ಟೋಕನ್ ಅಥವಾ ಟಿಕೆಟ್ ಪಡೆದು ಆಗಮಿಸುವ ಭಕ್ತರಿಗೆ ದೇವರ ದರ್ಶನಕ್ಕೆ ಅನುಕೂಲಕರ ವಾತಾವರಣ ಕಲ್ಪಿಸುವ ದೃಷ್ಟಿಯಿಂದ ನಿಗದಿತ ಸಮಯವನ್ನು ನೀಡಲಾಗುತ್ತಿದೆ. ಆದರೆ, ಭಕ್ತರು ಈ ನಿಗದಿತ ಸಮಯಕ್ಕೆ ಮೊದಲೇ ಬಂದು ದರ್ಶನದ ಭಕ್ತರ ಸಾಲಿನಲ್ಲಿ ಸೇರುತ್ತಿದ್ದಾರೆ. ಇದರಿಂದ ಭಕ್ತರ ನಿರ್ವಹಣೆ ಸವಾಲಾಗಿದೆ. ಹಾಗೂ ಜನದಟ್ಟಣೆ ಉಂಟಾಗುತ್ತಿದೆ. ಈ ಹಿನ್ನಲೆ ಈ ಸೂಚನೆ ಹೊರಡಿಸಲಾಗಿದೆ.
![TTDs key appeal to devotees coming for Srivari Darshan](https://etvbharatimages.akamaized.net/etvbharat/prod-images/13-02-2025/23530732-_ttd_1302newsroom_1739418859_321.jpg)
ಟೋಕನ್ ಅಥವಾ ಟಿಕೆಟ್ ಪಡೆದವರಿಗೆ ನಿಗದಿಪಡಿಸಿದ ಸಮಯಕ್ಕೆ ದೇವರ ದರ್ಶನದ ಪ್ರವೇಶದ ದ್ವಾರಕ್ಕೆ ಆಗಮಿಸಿಬೇಕು ಎಂದು ಸ್ಪಷ್ಟವಾಗಿ ತಿಳಿಸಿದೆ. ಈ ಸಂಬಂಧ ಈಗಾಗಲೇ ಮಾಧ್ಯಮಗಳಲ್ಲೂ ಭಕ್ತರಿಗೆ ಮನವಿ ಮಾಡಲಾಗಿದೆ.
ನಿಗದಿತ ಸಮಯಕ್ಕೆ ಮೊದಲೇ ಬಂದರು, ದರ್ಶನದ ಸಾಲಿಗೆ ನುಗ್ಗುವುದು ಸರಿಯಲ್ಲ. ಇದರಿಂದ ಇತರರಿಗೆ ತೊಂದರೆಯಾಗುವ ಜೊತೆಗೆ ಈ ಸಂಬಂಧ ಕೆಲ ಭಕ್ತರು ವ್ಯವಸ್ಥೆ ನಿರ್ವಹಣೆ ಮತ್ತು ಜನದಟ್ಟಣೆ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪದೇ ಪದೇ ಈ ಕುರಿತು ನಾವು ಭಕ್ತರಿಗೆ ಮನವಿ ಮಾಡುತ್ತಿದ್ದೇವೆ. ಸಮಯ ಪಾಲನೆ ಮಾಡುವುದರಿಂದ ವ್ಯವಸ್ಥೆಗಳು ಸರಾಗವಾಗಿ ಸಾಗಲಿದೆ. ಭಕ್ತರು ಇದಕ್ಕೆ ಸಹಕಾರ ನೀಡಬೇಕು ಎಂದು ತನ್ನ ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದೆ.
ಇದನ್ನೂ ಓದಿ: ಆರ್ಥಿಕ ಅಭಿವೃದ್ಧಿಗೆ ಸಾಕ್ಷ್ಯಿಯಾದ ಮಹಾ ಕುಂಭಮೇಳ: ಹಲವು ಉದ್ಯೋಗಗಳ ಸೃಷ್ಟಿ- ಹೀಗೆ ಹೇಳುತ್ತಿವೆ ಅಂಕಿ - ಅಂಶಗಳು! -
ಇದನ್ನೂ ಓದಿ: ಟೆಂಪಲ್ ರನ್ಗೆ ಮುಂದಾದ ಪವನ್ ಕಲ್ಯಾಣ್: ಕೇರಳ - ತಮಿಳುನಾಡು ದೇಗುಲಗಳಿಗೆ ಭೇಟಿ