ಲಖನೌ, ಉತ್ತರ ಪ್ರದೇಶ: ಸಾರಿಗೆ ಇಲಾಖೆಯ ಸಾರಥಿ ಪೋರ್ಟಲ್ನ ಮಾಹಿತಿಗಳನ್ನು ಪ್ರಾದೇಶಿಕ ಭಾಷೆಯಲ್ಲೂ ನೀಡಲು ಇಲಾಖೆ ಮುಂದಾಗಿದ್ದು, ಇನ್ಮುಂದೆ ಕೇವಲ ಇಂಗ್ಲಿಷ್ನಲ್ಲಿ ಮಾತ್ರವಲ್ಲದೇ, ಹಿಂದಿ, ಕನ್ನಡ, ತಮಿಳಿನಲ್ಲೂ ಮಾಹಿತಿಗಳು ಲಭ್ಯವಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಿಎಲ್ ಸೇರಿದಂತೆ ವಿವಿಧ ಆನ್‌ಲೈನ್ ಸೇವೆಗಳು ಕೇವಲ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಲಭ್ಯವಾಗುತ್ತಿರುವ ಹಿನ್ನೆಲೆಯಲ್ಲಿ, ಇದಕ್ಕೆ ಸಂಬಂಧಿಸಿದಂತೆ ಈಟಿವಿ ಭಾರತ್ ಸುದ್ದಿ ಪ್ರಕಟಿಸಿತ್ತು. ಈ ಸುದ್ದಿ ಬೆನ್ನಲ್ಲೇ ಈಗ ಸಾರಿಗೆ ಇಲಾಖೆಯ ಸಾರಥಿ ಪೋರ್ಟಲ್‌ನಲ್ಲಿ ಇಂಗ್ಲಿಷ್ ಜೊತೆಗೆ ಹಿಂದಿಯ ಆಯ್ಕೆಯನ್ನು ಸಹ ಪ್ರಾರಂಭಿಸಿದೆ. ಇದು ಜನರಿಗೆ ಡಿಎಲ್ ಸಂಬಂಧಿತ ಎಲ್ಲ ಮಾಹಿತಿ ಸೇರಿದಂತೆ ವಿವಿಧ ಆನ್‌ಲೈನ್ ಸೇವೆಗಳ ಲಾಭ ಪಡೆಯಲು ಅನುಕೂಲವಾಗಲಿದೆ. ಅರ್ಜಿದಾರರಿಗೆ ಹಿಂದಿ ಮಾತ್ರವಲ್ಲ, ಕನ್ನಡ ಮತ್ತು ತಮಿಳು ಭಾಷೆಗಳ ಆಯ್ಕೆಯನ್ನೂ ನೀಡಲು ಇಲಾಖೆ ಮುಂದಾಗಿದೆ.
ಪ್ರಾದೇಶಿಕ ಭಾಷೆಗೆ ಒತ್ತು ನೀಡುವ ಉದ್ದೇಶದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಎನ್ಐಸಿಗೆ ಸಾರಿಗೆ ಆಯುಕ್ತರು ತಿಳಿಸಿದ್ದಾರೆ. ಇಲಾಖೆಯ ಈ ತೀರ್ಮಾನದಿಂದ ಹಿಂದಿ ಮಾತ್ರವಲ್ಲದೇ ಅರ್ಜಿದಾರರು ಕನ್ನಡ ಮತ್ತು ತಮಿಳು ಆಯ್ಕೆಯ ಸೇವೆಗಳನ್ನು ಪಡೆಯಬಹುದಾಗಿದೆ.
ಉತ್ತರ ಪ್ರದೇಶ ಸಾರಿಗೆ ಇಲಾಖೆಯ ವೆಬ್‌ಸೈಟ್ ಇಂಗ್ಲಿಷ್‌ನಲ್ಲಿರುವುದರಿಂದ ಅರ್ಜಿದಾರರು ಸಮಸ್ಯೆ ಎದುರಿಸುತ್ತಿದ್ದರು. ಇಂಗ್ಲಿಷ್ನ ಹೆಚ್ಚಿನ ಜ್ಞಾನವಿಲ್ಲದ ಅರ್ಜಿದಾರರು ಸೈಬರ್ ಕೆಫೆಗಳಿಗೆ ಹೋಗಬೇಕಾದ ಪರಿಸ್ಥಿತಿ ಇತ್ತು. ಇಲ್ಲಿ ದಲ್ಲಾಳಿಗಳು ಹಣ ವಸೂಲಿ ಮಾಡುತ್ತಿದ್ದರು. ಈ ಸಂಬಂಧ ಹಲವು ದೂರುಗಳು ಕೇಳಿ ಬಂದಿದ್ದವು.
ಇದರಿಂದಾಗಿ ಮೊದಲಿಗೆ ಉತ್ತರ ಪ್ರದೇಶದ ಸಾರಿಗೆ ಆಯುಕ್ತ ಬಿ.ಎನ್.ಸಿಂಗ್ ಹಿಂದಿಯಲ್ಲಿ ವೆಬ್ ಸೈಟ್ ಮಾಡುವ ಕಸರತ್ತು ಆರಂಭಿಸಿದ್ದರು . ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಮತ್ತು ಎನ್ಐಸಿಯೊಂದಿಗೆ ಈ ಕುರಿತು ಪತ್ರ ಬರೆದಿದ್ದರು. ಇದರ ಫಲವಾಗಿ ಇದೀಗ ಕೇವಲ ಹಿಂದಿ ಮಾತ್ರವಲ್ಲದೇ, ಕನ್ನಡ ಮತ್ತು ತಮಿಳಿನ ಆಯ್ಕೆಯನ್ನೂ ನೀಡಲಾಗುತ್ತಿದೆ.
ಇಂಗ್ಲಿಷ್ನಲ್ಲಿ ಮಾಹಿತಿ ಭರ್ತಿ: ಅರ್ಜಿ ಭರ್ತಿ ಮಾಡುವಾಗ, ರಾಷ್ಟ್ರೀಯ ಮಾಹಿತಿ ಕೇಂದ್ರಕ್ಕೆ ಸಂಬಂಧಿಸಿದ ಆಯ್ಕೆಗಳು ಹಿಂದಿಯಲ್ಲಿ ಕಂಡರೂ, ಅರ್ಜಿ ದಾರರು ಇಂಗ್ಲಿಷ್ನಲ್ಲಿಯೇ ಇವುಗಳನ್ನು ಭರ್ತಿ ಮಾಡಬೇಕು. ಡಿಎಲ್ ಲೈಸೆನ್ಸ್ ಪರೀಕ್ಷೆಯಲ್ಲಿ ಇಂಗ್ಲಿಷ್ನಲ್ಲಿ ಇದ್ದ ಕಾರಣ ಅರ್ಜಿದಾರರು ಹೆಚ್ಚಿನ ಸಮಸ್ಯೆ ಅನುಭವಿಸುತ್ತಿದ್ದರು. ಆದ್ದರಿಂದ ಆಗಾಗ್ಗೆ ತಪ್ಪು ಉತ್ತರಗಳನ್ನು ನೀಡುತ್ತಿದ್ದರು. ಈಗ ಅದು ಹಿಂದಿಯಲ್ಲಿರುವುದರಿಂದ, ಹೇಗೆ ಉತ್ತರಿಸಬೇಕೆಂದು ಅವರಿಗೆ ಅರ್ಥವಾಗುತ್ತದೆ.
ಹಲವು ಸೇವೆಗಳು : ಕಲಿಕಾ ಚಾಲನಾ ಪರವಾನಗಿ, ವಿಳಾಸ ಬದಲಾವಣೆ, ಫೋಟೋ ಬದಲಾವಣೆ ಮತ್ತು ಕಲಿಕಾ ಪರವಾನಗಿ ನೀಡುವುದು, ನಕಲು ಕಲಿಕಾ ಪರವಾನಗಿ ನೀಡಿಕೆ, ಡಿಎಲ್ ನವೀಕರಣ, ಡಿಎಲ್‌ನಲ್ಲಿ ಬಯೋಮೆಟ್ರಿಕ್‌ಗಳನ್ನು ಬದಲಾವಣೆ, ಡಿಎಲ್‌ನಲ್ಲಿ ಫೋಟೋ ಮತ್ತು ಸೈನ್ ಇನ್ ಬದಲಾವಣೆ, ಡಿಎಲ್‌ನಿಂದ ವಾಹನದ ವರ್ಗೀಕರಣ, ಡಿಎಲ್‌ನಿಂದ ಸರೆಂಡರ್ ಮಾಡುವುದು, ನಕಲು ಸಾರ್ವಜನಿಕ ಸೇವಾ ವಾಹನದ ಬ್ಯಾಡ್ಜ್, ಡ್ಯೂಪ್ಲಿಕೇಟ್ ಸಾರ್ವಜನಿಕ ಸೇವಾ ವಾಹನದ ಬ್ಯಾಡ್ಜ್ ಸೇರಿದಂತೆ ಹಲವು ಸೇವೆಗಳು ಇದೀಗ ಆನ್‌ಲೈನ್ ಮೂಲಕವೇ ಲಭ್ಯವಿದ್ದು, ಇದು ಹೆಚ್ಚಿನ ಅನುಕೂಲವನ್ನು ಅರ್ಜಿದಾರರಿಗೆ ನೀಡಲಿದೆ.
ಈ ಕುರಿತು ಮಾತನಾಡಿದ ಉತ್ತರ ಪ್ರದೇಶದ ಸಾರಿಗೆ ಕಮಿಷನರ್ ಬಿಎನ್ ಸಿಂಗ್, ಹಿಂದಿಯಲ್ಲಿ ಮಾಹಿತಿ ಪ್ರಕಟವಾಗುವುದರಿಂದ ಅರ್ಜಿದಾರರಿಗೆ ಅರ್ಥಮಾಡಿಕೊಳ್ಳಲು ಸಹಾಯಕವಾಗುತ್ತದೆ. ಇದು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸುಲಭಗೊಳಿಸುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ತಿರುಪತಿ ವೆಂಕಟೇಶ್ವರನ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಟಿಟಿಡಿ ಹೊಸ ಸೂಚನೆ
ಇದನ್ನೂ ಓದಿ: 'ಮಹಿಳಾ ಮೀಸಲು ಜಾರಿಗೆ ಡಿಲಿಮಿಟೇಶನ್ ಷರತ್ತು ಕಾನೂನು ಬಾಹಿರ': ಪಿಐಎಲ್ ದಾಖಲು, ಕೇಂದ್ರಕ್ಕೆ ನೋಟಿಸ್