'ಬಾಹುಬಲಿ' ಖ್ಯಾತಿಯ ಪ್ರಭಾಸ್ ಅವರ ಸಂಭಾವ್ಯ ವಿವಾಹದ ಸುದ್ದಿ ಮತ್ತೆ ಸದ್ದು ಮಾಡತೊಡಗಿದೆ. 45ರ ಹರೆಯದ ನಟನ ಮದುವೆ ಸುತ್ತಲಿನ ಉತ್ಸಾಹ ಬಹಳಾನೇ ಇದೆ. ಅಪಾರ ಸಂಖ್ಯೆಯ ಅಭಿಮಾನಿಗಳು, ಸಿನಿಪ್ರೇಮಿಗಳು ಪ್ಯಾನ್ ಇಂಡಿಯಾ ಸ್ಟಾರ್ನ ಮದುವೆ ಕುರಿತಾದ ಅಧಿಕೃತ ಘೋಷಣೆಗಾಗಿ ಬಹಳ ಕಾತರದಿಂದ ಕಾಯುತ್ತಿದ್ದಾರೆ. ಆ ಅದೃಷ್ಟಶಾಲಿ ವಧು ಯಾರು? ಎಂದು ಊಹಿಸುತ್ತಿದ್ದಾರೆ. ಆಗಾಗ್ಗೆ ಸದ್ದು ಮಾಡುವ ಮದುವೆ ವಿಚಾರ ಮತ್ತೊಮ್ಮೆ ಚರ್ಚೆಗೆ ಬಂದಿದ್ದು, ಪ್ರಭಾಸ್ ಭವಿಷ್ಯದ ಸಂಗಾತಿ ಬಗ್ಗೆ ವಿವಿಧ ವದಂತಿಗಳು ಮತ್ತು ಊಹಾಪೋಹಗಳು ಹುಟ್ಟಿಕೊಂಡಿವೆ.
ಸಲಾರ್ ಸ್ಟಾರ್ನ ಆಪ್ತ ಸ್ನೇಹಿತ ಮತ್ತು ಗೇಮ್ ಚೇಂಜರ್ ಸಲುವಾಗಿ ಸದ್ದು ಮಾಡುತ್ತಿರುವ ನಟ ರಾಮ್ ಚರಣ್, ಜನಪ್ರಿಯ ಟಾಕ್ ಶೋ ಅನ್‌ಸ್ಟಾಪಬಲ್‌ನಲ್ಲಿ ಪ್ರಭಾಸ್ ಅವರ ಮದುವೆ ಸುಳಿವು ನೀಡಿದ್ದಾರೆ. ಕಾರ್ಯಕ್ರಮದಲ್ಲಿ, ನಟ ನಂದಮೂರಿ ಬಾಲಕೃಷ್ಣ ಅವರು ಪ್ರಭಾಸ್ ಅವರ ಮದುವೆ ಬಗ್ಗೆ ಗೇಮ್ ಚೇಂಜರ್ ನಟನ ಬಳಿ ವಿಚಾರಿಸಿದಾಗ, ರಾಮ್ ಚರಣ್ಗೆ ತಮ್ಮ ನಗು ತಡೆಯಲು ಸಾಧ್ಯವಾಗಲಿಲ್ಲ. ಪ್ರಶ್ನೆಗೆ ಪ್ರತಿಕ್ರಿಯೆಯಾಗಿ, ಆಂಧ್ರಪ್ರದೇಶದ ಗಣಪವರಂನ ಹುಡುಗಿಯನ್ನು ಪ್ರಭಾಸ್ ಮದುವೆಯಾಗಲಿದ್ದಾರೆ ಎಂದು ತಮಾಷೆಯಾಗಿ ತಿಳಿಸಿದರು.
Mass elevation from balayya💥🔥#GameChanger#UnstoppableWithNBKS4 pic.twitter.com/5gFBih2wiI
— 🆎🚁 (@ab__tweetz) January 8, 2025
ಪೂರ್ಣ ಸಂಚಿಕೆಗಾಗಿ ಅಭಿಮಾನಿಗಳು ಕಾಯುತ್ತಿದ್ದು, ರಾಮ್ ಚರಣ್ ಅವರ ಈ ಸುಳಿವು ನೆಟ್ಟಿಗರ ಕುತೂಹಲ ಕೆರಳಿಸಿದೆ. ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದು, ಸ್ಟೇಟ್ಮೆಂಟ್ನ ಸತ್ಯಾನುಸತ್ಯತೆ ಕುರಿತು ಚರ್ಚೆ ನಡೆಯುತ್ತಿದೆ. ಪ್ರಭಾಸ್ ಅವರ ಭವಿಷ್ಯದ ವಧುವಿನ ಬಗ್ಗೆ ಮತ್ತಷ್ಟು ಊಹಾಪೋಹಗಳೆದ್ದಿವೆ. ಮದುವೆಯ ವದಂತಿಗಳು ಹೆಚ್ಚಾಗುತ್ತಲೇ ಇರುವ ಹಿನ್ನೆಲೆ, ಹಾಗೂ ಆಪ್ತ ಸ್ನೇಹಿತರು ಮತ್ತು ಸಿನಿಗಣ್ಯರು ಸಂಭಾವ್ಯ ಮದುವೆ ಬಗ್ಗೆ ಸುಳಿವು ನೀಡುತ್ತಿರುವುದರಿಂದ ಅಭಿಮಾನಿಗಳು ಹೆಚ್ಚಿನ ವಿವರಗಳಿಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ: ಸ್ಯಾಂಡಲ್ವುಡ್ ಸೆಲೆಬ್ರಿಟಿಗಳನ್ನು ಮದುವೆಗೆ ಆಹ್ವಾನಿಸಿದ ಡಾಲಿ ಧನಂಜಯ್: ವಿಡಿಯೋ ನೋಡಿ
2022ರ ಮಾರ್ಚ್ನಲ್ಲಿ ಬಂದ ಆರ್ಆರ್ಆರ್ ಬ್ಲಾಕ್ಬಸ್ಟರ್ ಹಿಟ್ ಆಗಿ ಆಸ್ಕರ್ ವೇದಿಕೆ ಏರಿತ್ತು. ಆರ್ಆರ್ಆರ್ ಭರ್ಜರಿ ಯಶಸ್ಸಿನ ಬಳಿಕ ಟಾಲಿವುಡ್ ಸೂಪರ್ ಸ್ಟಾರ್ ರಾಮ್ ಚರಣ್ ಮುಖ್ಯಭೂಮಿಕೆಯ ಪೊಲಿಟಿಕಲ್ ಡ್ರಾಮಾ 'ಗೇಮ್ ಚೇಂಜರ್' ಕಳೆದ ದಿನ ಅದ್ಧೂರಿಯಾಗಿ ತೆರೆಗಪ್ಪಳಿಸಿತು. ವರದಿಗಳ ಪ್ರಕಾರ 450 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ನಿರ್ಮಿಸಲಾಗಿರುವ ಸಿನಿಮಾ ಮಿಶ್ರ ಪ್ರತಿಕ್ರಿಯೆಗಳೊಂದಿಗೆ ಆರಂಭವಾಯಿತು. ಇದು ನಿರ್ದೇಶಕ ಮತ್ತು ನಟರಿಗಿಬ್ಬರಿಗೂ ಪ್ರಮುಖ ಬಿಡುಗಡೆಯಾಗಿದ್ದು, ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ಬರೋಬ್ಬರಿ 186 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಪವರ್ಫುಲ್ ಅಂಕಿ ಅಂಶಗಳೊಂದಿಗೆ ಗಲ್ಲಾಪೆಟ್ಟಿಗೆ ಪ್ರಯಾಣ ಆರಂಭಿಸಿರೋ ಸಿನಿಮಾ ವಾರಾಂತ್ಯ ಮತ್ತು ಸಂಕ್ರಾತಿ ರಜೆಯನ್ನು ಸದುಪಯೋಗ ಪಡಿಸಿಕೊಳ್ಳೋ ಭರವಸೆ ಇದೆ.
Prabhas💒👰🏻
— Manobala Vijayabalan (@ManobalaV) January 10, 2025
ಇದನ್ನೂ ಓದಿ: ವಿಡಿಯೋ: ವೃಂದಾವನ ಆಶ್ರಮಕ್ಕೆ ಮಕ್ಕಳೊಂದಿಗೆ ಭೇಟಿ ಕೊಟ್ಟ ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ
ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿ ದಿಲ್ ರಾಜು ಸಿನಿಮಾವನ್ನು ನಿರ್ಮಿಸಿದ್ದಾರೆ. ರಾಮ್ ಚರಣ್ ಜೊತೆ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ತೆರೆ ಹಂಚಿಕೊಂಡಿದ್ದಾರೆ. ಶಂಕರ್ ನಿರ್ದೇಶನದ ಚಿತ್ರದಲ್ಲಿ ಎಸ್.ಜೆ.ಸೂರ್ಯ, ನಾಸರ್, ಬ್ರಹ್ಮಾನಂದಂ, ವೆನ್ನೆಲ ಕಿಶೋರ್, ಅಂಜಲಿ, ಮುರಳಿ ಶರ್ಮಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.