ಹೈದರಾಬಾದ್: ಭಾರತೀಯ ಚಿತ್ರರಂಗದ ಹಿರಿಯ ನಿರ್ದೇಶಕ ಶ್ಯಾಮ್ ಬೆನಗಲ್ (90) ಅವರು ಇಂದು ಇಹಲೋಕ ತ್ಯಜಿಸಿದರು. ದೀರ್ಘಕಾಲದಿಂದ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ಬೆನಗಲ್ ಮುಂಬೈನ ವೊಕಾರ್ಡ್ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ಅವರ ಪುತ್ರಿ ಪಿಯಾ ಬೆನಗಲ್ ತಿಳಿಸಿದ್ದಾರೆ. ಮೃತರು ಪತ್ನಿ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.
"ಹಲವು ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ನನ್ನ ತಂದೆಯ ಆರೋಗ್ಯ ಇತ್ತೀಚೆಗೆ ತೀರಾ ಹದಗೆಟ್ಟಿತ್ತು. ಹೀಗಾಗಿ, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಂಜೆ 6:38ಕ್ಕೆ ನಿಧನರಾದರು" ಎಂದು ಸುದ್ದಿಸಂಸ್ಥೆಗೆ ಪಿಯಾ ಬೆನಗಲ್ ತಿಳಿಸಿದ್ದಾರೆ.
#WATCH | Pia Benegal, Shyam Benegal's daughter at Wockhardt Hospital in Mumbai Central as Indian film director and screenwriter Shyam Benegal's body taken from the hospital
— ANI (@ANI) December 23, 2024
The film director was admitted there for treatment of chronic kidney disease and breathed his last, this… pic.twitter.com/bUidt6A5pM
ಶ್ಯಾಮ್ ಬೆನಗಲ್ ಅವರನ್ನು ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ.
The passing of Shri Shyam Benegal marks the end of a glorious chapter of Indian cinema and television. He started a new kind of cinema and crafted several classics. A veritable institution, he groomed many actors and artists. His extraordinary contribution was recognised in the…
— President of India (@rashtrapatibhvn) December 23, 2024
ಭಾರತೀಯ ಸಿನಿಮಾ ಚಳವಳಿಗೆ ನಾಂದಿ ಹಾಡಿದ್ದ ಶ್ಯಾಮ್ ಬೆನಗಲ್ ಪ್ರಸಿದ್ಧ ನಿರ್ದೇಶಕ ಮತ್ತು ಸಾಕ್ಷ್ಯಚಿತ್ರ ತಯಾರಕರಾಗಿದ್ದರು. 1970 ಮತ್ತು 80ರ ದಶಕದಲ್ಲಿ ಪ್ಯಾರಲಲ್ ಸಿನಿಮಾ ಪ್ರವರ್ತಕರಾಗಿ ಇವರು ಹೆಸರು ಮಾಡಿದ್ದರು. ವಿವಿಧ ಬಗೆಯ ಸಿನಿಮಾಗಳನ್ನು ನಿರ್ದೇಶಿಸಿದ್ದರು. ಜೊತೆಗೆ ಸಂಕೀರ್ಣವಾದ ಸಾಮಾಜಿಕ ವಿಷಯಗಳನ್ನು ಪರದೆಯ ಮೇಲೆ ತರುತ್ತಿದ್ದ ಖ್ಯಾತಿ ಇವರದ್ದು. 'ಅಂಕುರ್', 'ನಿಶಾಂತ್' ಮತ್ತು 'ಮಂಥನ್' ಚಿತ್ರಗಳಿಂದ ಇವರು ಭಾರತೀಯ ಚಿತ್ರರಂಗದಲ್ಲಿ ಪ್ರಮುಖ ನಿರ್ದೇಶಕರಾಗಿ ಬೆಳೆಯಲು ಕಾರಣವಾಯಿತು.
Some of his actors with Shyam Benegal’s on his 90th birthday Mashallah pic.twitter.com/cnDrjAphf2
— Azmi Shabana (@AzmiShabana) December 15, 2024
ಸಿನಿಮಾ ಅಷ್ಟೇ ಅಲ್ಲದೇ, ಸಾಕ್ಷ್ಯಚಿತ್ರಗಳನ್ನೂ ಮಾಡಿದ್ದರು. 'ಭಾರತ್ ಏಕ್ ಖೋಜ್' ಮತ್ತು 'ಸಂವಿಧಾನ'ದಂತಹ ಖ್ಯಾತ ಟಿವಿ ಧಾರವಾಹಿಗಳನ್ನು ನಿರ್ದೇಶಿಸಿದ್ದರು. ಕೇವಲ ನಿರ್ದೇಶಕರಾಗಷ್ಟೇ ಅಲ್ಲದೇ ಹಲವರಿಗೆ ಮಾರ್ಗದರ್ಶಕರಾಗಿ ಅವರನ್ನು ನಿರ್ದೇಶಕರಾಗಿ ಬೆಳೆಸಿದ್ದರು. ಇತ್ತೀಚೆಗೆ 2023ರಲ್ಲಿ 'ಮುಜಿಬ್: ದಿ ಮೇಕಿಂಗ್ ಆಫ್ ಎ ನೇಷನ್' ಎಂಬ ಬಯೋಗ್ರಫಿಯನ್ನು ನಿರ್ದೇಶಿಸಿದ್ದರು.
Renowned and highly respected film maker, pioneer of parallel cinema, Shyam Benegal passed away today. The film industry has lost another doyen who has won national recognition with Padma Shri and later Padma Bhushan and brought Indian cinema to global fame. 🙏 pic.twitter.com/zLbnKLEtrW
— Hema Malini (@dreamgirlhema) December 23, 2024
ಶ್ಯಾಮ್ ಬೆನಗಲ್ ಅವರ ಚಲನಚಿತ್ರಗಳಿಗಾಗಿ ಅನೇಕ ರಾಷ್ಟ್ರೀಯ ಪ್ರಶಸ್ತಿಗಳು ಮತ್ತು ಫಿಲ್ಮ್‌ಫೇರ್ ಪ್ರಶಸ್ತಿಗಳು ಬಂದಿವೆ. ಭಾರತ ಸರ್ಕಾರ ಇವರಿಗೆ 'ಪದ್ಮಶ್ರೀ', 'ಪದ್ಮಭೂಷಣ' ಪುರಸ್ಕಾರ ನೀಡಿ ಗೌರವಿಸಿತ್ತು. ಅಷ್ಟೇ ಅಲ್ಲದೇ, ಭಾರತೀಯ ಚಿತ್ರರಂಗದ ಅತ್ಯುನ್ನತ 'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿಗೂ ಭಾಜನರಾಗಿದ್ದರು.
He created ‘the new wave’ cinema. #shyambenegal will always be remembered as the man that changed the direction of Indian Cinema with films like Ankur, Manthan and countless others. He created stars out great actors like Shabama Azmi and Smita Patil. Farewell my friend and guide pic.twitter.com/5r3rkX48Vx
— Shekhar Kapur (@shekharkapur) December 23, 2024
14 ಡಿಸೆಂಬರ್, 1934ರಂದು ಹೈದರಾಬಾದ್‌ನಲ್ಲಿ ಜನಿಸಿದ್ದ ಇವರು 12ನೇ ವಯಸ್ಸಿನಲ್ಲಿ ತಮ್ಮ ತಂದೆ ಶ್ರೀಧರ್ ಬೆನಗಲ್ ಅವರು ನೀಡಿದ ಕ್ಯಾಮೆರಾದಲ್ಲಿ ತಮ್ಮ ಮೊದಲ ಚಲನಚಿತ್ರ ತಯಾರಿಸಿದ್ದರು. ಬಳಿಕ ಹೈದರಾಬಾದ್ನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಎಂಎ ಪದವಿ ಪಡೆದಿದ್ದರು. ಇತ್ತೀಚೆಗಷ್ಟೇ ತಮ್ಮ 90ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದರು.
A heartbreaking loss for Indian cinema. Shyam Benegal wasn’t just a legend, he was a visionary who redefined storytelling and inspired generations. Working with him in Zubeidaa was a transformative experience for me, exposing me to his unique style of storytelling & nuanced… pic.twitter.com/EH0eosqkAR
— manoj bajpayee (@BajpayeeManoj) December 23, 2024