ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಕೆಲವು ನಿರ್ದೇಶಕರು ಹಾಗು ನಿರ್ಮಾಪಕರು ತಮ್ಮ ಸಿನಿಮಾವನ್ನು ಜನರು ಹೆಚ್ಚಾಗಿ ನೋಡಲೆಂದು ಲಕ್ಕಿ ಡ್ರಾ ಕೂಪನ್ಗಳನ್ನು ಮಾಡಿರುವ ಉದಾಹರಣೆಗಳಿವೆ. ಆದರೆ, ಯುವ ನಟ ಅಜಯ್ ಪೃಥ್ವಿ ಹಾಗು ಲವ್ ಮಾಕ್ಟೇಲ್ ಸಿನಿಮಾ ಖ್ಯಾತಿಯ ರಚನಾ ಇಂದರ್ ಅಭಿನಯಿಸಿರುವ 'ನಾಟ್ ಔಟ್' ತಂಡ ಸಿನಿಮಾಪ್ರೇಮಿಗಳಿಗೆ ಹೊಸ ಆಫರ್ ನೀಡಿ ಗಮನ ಸೆಳೆದಿದೆ.
ಅಂಬರೀಶ್ ಎಂ. ನಿರ್ದೇಶನದ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ನಟ ಶ್ರೀನಗರ ಕಿಟ್ಟಿ, ನಿರ್ದೇಶಕ ಸಿಂಪಲ್ ಸುನಿ ಹಾಗೂ ಮಂಗಳೂರಿನಿಂದ ಬೆಂಗಳೂರಿಗೆ ಕೇವಲ ನಾಲ್ಕು ಗಂಟೆಗಳಲ್ಲಿ ಮಗುವನ್ನು ಆಂಬ್ಯುಲೆನ್ಸ್ನಲ್ಲಿ ಕರೆತಂದ ಚಾಲಕ ಹನೀಫ್ ಸೇರಿ ಟ್ರೇಲರ್ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ಚಿತ್ರತಂಡ ಪ್ರೇಕ್ಷಕರಿಗೆ ಸಿನಿಮಾದ ಗುಣಮಟ್ಟವನ್ನು ತಿಳಿಸುವ ಉದ್ದೇಶದಿಂದ ಫಸ್ಟ್ ಆಫ್ ಸಿನಿಮಾವನ್ನು ಉಚಿತವಾಗಿ ಪ್ರೇಕ್ಷಕರಿಗೆ ನೋಡಲು ಅವಕಾಶ ನೀಡಿದೆ. ಆದರೆ ಸೆಕೆಂಡ್ ಹಾಫ್ ಸಿನಿಮಾ ನೋಡುವ ಕುತೂಹಲವಿದ್ದರೆ ಮಧ್ಯಂತರದಲ್ಲಿ ಟಿಕೆಟ್ ಖರೀದಿಸಬೇಕು.
ನಾಟ್ ಔಟ್ ಸಿನಿಮಾ ನಾಯಕ ಅಜಯ್ ಪೃಥ್ವಿ, ನಾಯಕಿ ರಚನಾ ಇಂದರ್ (ETV Bharat) ನಿರ್ದೇಶಕ ಅಂಬರೀಶ್ ಮಾತನಾಡಿ, "ನಾಟ್ ಔಟ್ ಲಾಕ್ ಡೌನ್ನಲ್ಲಿ ನಾನು ಬರೆದ ಕಥೆ. ನನ್ನ ಕಥೆಯನ್ನು ಮೆಚ್ಚಿ ರಾಷ್ಟ್ರಕೂಟ ಪಿಕ್ಚರ್ಸ್ ನಿರ್ಮಾಣಕ್ಕೆ ಮುಂದಾದರು. ಟೊರೊಂಟೊದಲ್ಲಿ ಅಭಿನಯ ಕಲಿತು ಬಂದಿರುವ ಅಜಯ್ ಪೃಥ್ವಿ, ರಚನಾ ಇಂದರ್, ರವಿಶಂಕರ್, ಕಾಕ್ರೋಜ್ ಸುಧೀ ಮುಖ್ಯಪಾತ್ರಗಳಲ್ಲಿ ನಟಿಸಿರುವ ಈ ಚಿತ್ರ ಡಾರ್ಕ್ ಹ್ಯೂಮರ್ ಕಾಮಿಡಿ ಜಾನರ್ ಹೊಂದಿದೆ" ಎಂದು ತಿಳಿಸಿದರು.
ಪುರುಷೋತ್ತಮ ಪ್ರಸಂಗ ಚಿತ್ರದ ಬಳಿಕ ಮತ್ತೆ ಅದೃಷ್ಟ ಪರೀಕ್ಷೆಗಳಿದಿರುವ ಅಜಯ್ ಪೃಥ್ವಿ ಮಾತನಾಡಿ, "ನನ್ನದು ಆ್ಯಂಬುಲೆನ್ಸ್ ಚಾಲಕನ ಪಾತ್ರ. ಚಿತ್ರ ಚೆನ್ನಾಗಿ ಮೂಡಿಬಂದಿದೆ. ನನ್ನ ಪಾತ್ರವನ್ನು ಎಲ್ಲಾ ಆ್ಯಂಬುಲೆನ್ಸ್ ಚಾಲಕರಿಗೆ ಅರ್ಪಿಸುತ್ತಿದ್ದೇನೆ" ಎಂದರು.
ಚಿತ್ರಕ್ಕೆ ರಚನಾ ಇಂದರ್ ನಾಯಕಿ. ಗೋಪಾಲಕೃಷ್ಣ ದೇಶಪಾಂಡೆ, ಗೋವಿಂದೇಗೌಡ, ಕಾಕ್ರೋಜ್ ಸುಧೀ, ಅಶ್ವಿನ್ ಹಾಸನ್, ಪ್ರಶಾಂತ್ ಸಿದ್ದಿ, ಸಲ್ಮಾನ್ ಮುಂತಾದವರು ತಾರಾಗಣದಲ್ಲಿದ್ದಾರೆ. ರಾಷ್ಟ್ರಕೂಟ ಪಿಕ್ಚರ್ಸ್ ಲಾಂಛನದಲ್ಲಿ ವಿ.ರವಿಕುಮಾರ್ ಹಾಗೂ ಶಂಶುದ್ದೀನ್ ನಿರ್ಮಾಣ ಮಾಡಿದ್ದು, ಜೂಡಾ ಸ್ಯಾಂಡಿ ಅವರ ಸಂಗೀತ ಮತ್ತು ಹಾಲೇಶ್ ಛಾಯಾಗ್ರಹಣವಿದೆ. ಜುಲೈ 19ರಂದು ಸಿನಿಮಾ ರಿಲೀಸ್ ಆಗಲಿದೆ.
ಇದನ್ನೂ ಓದಿ:ಕಿರಣ್ ರಾಜ್ಗೆ ಹುಟ್ಟುಹಬ್ಬದ ಸಂಭ್ರಮ: 'ರಾನಿ' ಚಿತ್ರತಂಡದಿಂದ ವಿಶೇಷ ಗಿಫ್ಟ್ - Kiran Raj Birthday