ISRO Spadex Mission: ಇನ್ನು ಕೆಲವೇ ದಿನಗಳಲ್ಲಿ ಇಸ್ರೋ ಮತ್ತೊಂದು ಮಿಷನ್ ಆರಂಭಿಸಲಿದೆ. ಡಿಸೆಂಬರ್ 30 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭಾರತದ 'ಸ್ಪ್ಯಾಡೆಕ್ಸ್' ಮಿಷನ್ ಅನ್ನು ಇಸ್ರೋ ಪ್ರಾರಂಭಿಸಲಿದೆ.
ಮಿಷನ್ ಅಡಿ, PSLV-C60 ರಾಕೆಟ್‌ನಿಂದ ಎರಡು ಸಣ್ಣ ಬಾಹ್ಯಾಕಾಶ ನೌಕೆಗಳನ್ನು ಏಕಕಾಲದಲ್ಲಿ ಉಡಾವಣೆ ಮಾಡಲಾಗುತ್ತದೆ. ಈ ಬಾಹ್ಯಾಕಾಶ ನೌಕೆಗಳು ಒಟ್ಟಿಗೆ ಕಕ್ಷೆಗೆ ಹೋಗಿ ಡಾಕಿಂಗ್ ಪ್ರಕ್ರಿಯೆಯನ್ನು ನಿರ್ವಹಿಸುತ್ತವೆ. ಎರಡೂ ಬಾಹ್ಯಾಕಾಶ ನೌಕೆಗಳ ತೂಕ ಸುಮಾರು 220 ಕೆ.ಜಿ. ಆಗಿದೆ. ಮುಂದಿನ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ಸಾಧಿಸಲು ಬಾಹ್ಯಾಕಾಶದಲ್ಲಿ ಡಾಕಿಂಗ್ ತಂತ್ರಜ್ಞಾನವು ಅತ್ಯಗತ್ಯ. ಈ ಮಿಷನ್ ಯಶಸ್ವಿಯಾದರೆ, ಭಾರತವು ಅಮೆರಿಕ, ರಷ್ಯಾ ಮತ್ತು ಚೀನಾದ ನಂತರ ಬಾಹ್ಯಾಕಾಶ 'ಡಾಕಿಂಗ್' ತಂತ್ರಜ್ಞಾನದ ಸಾಮರ್ಥ್ಯವನ್ನು ಹೊಂದಿರುವ ವಿಶ್ವದ ನಾಲ್ಕನೇ ರಾಷ್ಟ್ರವಾಗಲಿದೆ.
🚀 Enjoy the fast time-lapse video!
— ISRO (@isro) December 23, 2024
PSLV-C60, fully integrated up to PS4 at the PIF facility for the first time, was moved to the MST at the First Launch Pad—over 3 hours captured in just a few seconds. 🛰️#ISRO #PSLVC60 #SPADEX pic.twitter.com/eaje72wFDD
PS4 ನೊಂದಿಗೆ PIF ಸೌಲಭ್ಯ: ಡಿಸೆಂಬರ್ 21 ರಂದು ಉಡಾವಣಾ ವಾಹನವನ್ನು ಸಂಪೂರ್ಣವಾಗಿ ಜೋಡಿಸಲಾಗಿದೆ. ಮೊದಲ ಉಡಾವಣಾ ಪ್ಯಾಡ್‌ನಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸಲಾಯಿತು ಎಂದು ಇಸ್ರೋ ಸೋಮವಾರ ತಿಳಿಸಿದೆ. PS4 ನೊಂದಿಗೆ PIF ಸೌಲಭ್ಯದಲ್ಲಿ ಈ ಪ್ರಕ್ರಿಯೆಯನ್ನು ಮೊದಲ ಬಾರಿಗೆ ಮಾಡಲಾಗಿದೆ. ಇಸ್ರೋ ತನ್ನ X ಖಾತೆಯಲ್ಲಿ ಈ ಪ್ರಕ್ರಿಯೆಯ ವಿಡಿಯೋವನ್ನು ಸಹ ಹಂಚಿಕೊಂಡಿದೆ. ಸ್ಪ್ಯಾಡೆಕ್ಸ್ ಮಿಷನ್ ಎರಡು ಸಣ್ಣ ಬಾಹ್ಯಾಕಾಶ ನೌಕೆಗಳನ್ನು ಒಳಗೊಂಡಿರುತ್ತದೆ, ಇದನ್ನು 55 ಡಿಗ್ರಿ ಇಳಿಜಾರಿನೊಂದಿಗೆ 470 ಕಿಮೀ ವೃತ್ತಾಕಾರದ ಕಕ್ಷೆಗೆ ಉಡಾಯಿಸಲಾಗುತ್ತದೆ.
ಐತಿಹಾಸಿಕ ಕ್ಷಣದ ವೀಕ್ಷಣೆಗೆ ಜನರಿಗೂ ಆಹ್ವಾನ: ಈ ಐತಿಹಾಸಿಕ ಕ್ಷಣವನ್ನು ವೀಕ್ಷಿಸಲು ಇಸ್ರೋ ಜನರನ್ನು ಆಹ್ವಾನಿಸಿದೆ. ಇಸ್ರೋದ ಲಾಂಚ್ ವ್ಯೂ ಗ್ಯಾಲರಿಗೆ ಹೋಗುವ ಮೂಲಕ ಜನರು ಇದನ್ನು ಲೈವ್ ಆಗಿ ವೀಕ್ಷಿಸಬಹುದು. ಇದಕ್ಕಾಗಿ ಸೋಮವಾರ ಸಂಜೆ 6 ಗಂಟೆಯಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಇಸ್ರೋ ವೆಬ್‌ಸೈಟ್‌ನಲ್ಲಿ ಈ ಕುರಿತು ಮಾಹಿತಿ ಲಭ್ಯವಾಗಿದೆ. ಈ ಉಡಾವಣೆಯು ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ತಾಂತ್ರಿಕ ಸಾಮರ್ಥ್ಯಗಳನ್ನು ಹೆಚ್ಚಿಸಲು ಮತ್ತು ಯುವ ವಿಜ್ಞಾನಿಗಳು ಮತ್ತು ಸಾರ್ವಜನಿಕರಲ್ಲಿ ಬಾಹ್ಯಾಕಾಶದಲ್ಲಿ ಆಸಕ್ತಿಯನ್ನು ಜಾಗೃತಗೊಳಿಸುವ ಪ್ರಯತ್ನವಾಗಿದೆ. PSLV-C60 ರಾಕೆಟ್ ಅನ್ನು ಪ್ಯಾಡ್‌ಗೆ ಕೊಂಡೊಯ್ಯುವ ವಿಡಿಯೋವನ್ನು ಇಸ್ರೋ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
🛰 PSLV-C60/SPADEX Mission Update 🛰
— ISRO (@isro) December 23, 2024
🚀 Launch scheduled on 30th December 2024, 21:58 IST from SDSC SHAR, Sriharikota.
👀 Witness the launch live at the Launch View Gallery!
🔗 Register here: https://t.co/J9jd8ylRcC
Registration starts: 23rd December 2024, 18:00 IST.#ISRO… pic.twitter.com/s05CHZCzrL
ಡಾಕಿಂಗ್ ಟೆಕ್ನಾಲಾಜಿ ಎಂದರೇನು?: ಬಾಹ್ಯಾಕಾಶದಲ್ಲಿ ಬಾಹ್ಯಾಕಾಶ ನೌಕೆಯನ್ನು 'ಡಾಕ್' ಮತ್ತು 'ಅನ್‌ಡಾಕ್' ಮಾಡುವ ಸಾಮರ್ಥ್ಯವನ್ನು ಪ್ರದರ್ಶಿಸುವುದು ಈ ಕಾರ್ಯಾಚರಣೆಯ ಉದ್ದೇಶವಾಗಿದೆ. ಒಂದು ಬಾಹ್ಯಾಕಾಶ ನೌಕೆಯು ಇನ್ನೊಂದಕ್ಕೆ ಸೇರುವುದನ್ನು ಡಾಕಿಂಗ್ ಎಂದು ಕರೆಯಲಾಗುತ್ತದೆ ಮತ್ತು ಬಾಹ್ಯಾಕಾಶದಲ್ಲಿ ಸಂಪರ್ಕಗೊಂಡಿರುವ ಎರಡು ಬಾಹ್ಯಾಕಾಶ ನೌಕೆಗಳನ್ನು ಬೇರ್ಪಡಿಸುವುದನ್ನು ಅನ್‌ಡಾಕಿಂಗ್ ಎಂದು ಕರೆಯಲಾಗುತ್ತದೆ. ಚಂದ್ರನಿಂದ ಮಾದರಿಗಳನ್ನು ಮರಳಿ ತರುವುದು, ಭಾರತೀಯ ಬಾಹ್ಯಾಕಾಶ ನಿಲ್ದಾಣ (ಬಿಎಎಸ್) ನಿರ್ಮಾಣದಂತಹ ಭಾರತದ ಮಹತ್ವಾಕಾಂಕ್ಷೆಯ ಕಾರ್ಯಾಚರಣೆಗಳಿಗೆ ಈ ತಂತ್ರಜ್ಞಾನವು ಬಹಳಷ್ಟು ಮುಖ್ಯವಾಗಿದೆ.
ಓದಿ: ನಾಸಾ - ಇಸ್ರೋ ಸಿಂಥೆಟಿಕ್ ಅಪರ್ಚರ್ ರಾಡಾರ್ ಮಿಷನ್ ಉಡಾವಣೆಗೆ ಸಿದ್ಧ: ಯಾವಾಗ ಎನ್ನುವ ಕುತೂಹಲವೇ?