ನವದೆಹಲಿ: ಸೋಮವಾರ ನಿಧನ ಹೊಂದಿದ ಭಾರತೀಯ ಚಿತ್ರರಂಗದ ಅಪ್ರತಿಮ ನಿರ್ದೇಶಕ ಶ್ಯಾಮ್ ಬೆನಗಲ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ನಿರ್ದೇಶಕರಾದ ಶೇಖರ್ ಕಪೂರ್, ಹನ್ಸಲ್ ಮೆಹ್ತಾ, ಮತ್ತು ಸಿನಿ ತಾರೆಯರಾದ ಮನೋಜ್ ಬಾಜಪೇಯಿ, ಅಕ್ಷಯ್ ಕುಮಾರ್ ಮತ್ತು ಕಾಜೋಲ್ ಸೇರಿದಂತೆ ರಾಜಕೀಯ ನಾಯಕರು ಮತ್ತು ಚಿತ್ರರಂಗದ ಹಾಗೂ ಇತರ ಕ್ಷೇತ್ರಗಳ ಗಣ್ಯರು ಶ್ರದ್ಧಾಂಜಲಿ ಸಲ್ಲಿಸಿದರು.
ಹೊಸ ರೀತಿಯ ಸಿನಿಮಾಗಳಿಗೆ ನಾಂದಿ ಹಾಡಿದ ನಿರ್ದೇಶಕ ಶ್ಯಾಮ್ ಬೆನಗಲ್. ಅವರ ಸಿನಿಮಾಗಳು ಎಲ್ಲ ಕಾಲಘಟ್ಟಗಳ ಜನರಿಂದಲೂ ಮೆಚ್ಚುಗೆ ಗಳಿಸಿವೆ ಎಂದು ಬೆನಗಲ್ ಅವರನ್ನು ಸ್ಮರಿಸಿಕೊಂಡಿದ್ದಾರೆ.
1970 ಮತ್ತು 1980ರ ದಶಕದಲ್ಲಿ ಭಾರತೀಯ ಸಮಾನಾಂತರ ಸಿನಿಮಾ ಚಳವಳಿಯ ಪ್ರವರ್ತಕರಲ್ಲಿ ಒಬ್ಬರಾಗಿದ್ದ ಬೆನಗಲ್ ಅವರು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಮುಂಬೈನ ವೊಕಾರ್ಡ್ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು.
"ಅಂಕುರ್", "ಮಂಡಿ", "ನಿಶಾಂತ್" ಮತ್ತು "ಜುಬೇದಾ" ಸಿನಿಮಾಗಳು, "ಭಾರತ್ ಏಕ್ ಖೋಜ್" ಮತ್ತು "ಸಂವಿಧಾನ್" ಟಿವಿ ಶೋಗಳಿಗೆ ಹೆಸರುವಾಸಿಯಾದ ನಿರ್ದೇಶಕ ಒಂಬತ್ತು ದಿನಗಳ ಹಿಂದೆ ಡಿ.14 ರಂದು ತಮ್ಮ 90ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.
The passing of Shri Shyam Benegal marks the end of a glorious chapter of Indian cinema and television. He started a new kind of cinema and crafted several classics. A veritable institution, he groomed many actors and artists. His extraordinary contribution was recognised in the…
— President of India (@rashtrapatibhvn) December 23, 2024
ಹೊಸ ರೀತಿಯ ಸಿನಿಮಾಗಳಿಗೆ ನಾಂದಿ: ರಾಷ್ಟ್ರಪತಿ: ರಾಷ್ಟ್ರಪತಿ ಮುರ್ಮು ಅವರು, "ಬೆನಗಲ್ ಅವರ ನಿಧನವು ಭಾರತೀಯ ಸಿನಿಮಾ ಮತ್ತು ದೂರದರ್ಶನದ ಅದ್ಭುತ ಅಧ್ಯಾಯದ ಅಂತ್ಯವನ್ನು ಸೂಚಿಸುತ್ತದೆ. ಹೊಸ ರೀತಿಯ ಸಿನಿಮಾಗಳಿಗೆ ನಾಂದಿ ಹಾಡಿದ ಅವರು ಹಲವಾರು ಕ್ಲಾಸಿಕ್ ಸಿನಿಮಾಗಳನ್ನು ನೀಡಿದ್ದಾರೆ. ಅನೇಕ ಕಲಾವಿದರನ್ನು ಪರಿಚಯಿಸಿ, ಬೆಳೆಸಿದವರು. ಅವರ ಅಸಾಧಾರಣ ಕೊಡುಗೆಯನ್ನು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಮತ್ತು ಪದ್ಮಭೂಷಣ ಸೇರಿದಂತೆ ಹಲವಾರು ಪ್ರಶಸ್ತಿಗಳ ರೂಪದಲ್ಲಿ ಗುರುತಿಸಲಾಗಿದೆ. ಅವರ ಕುಟುಂಬದ ಸದಸ್ಯರು ಹಾಗೂ ಅವರ ಅಸಂಖ್ಯಾತ ಅಭಿಮಾನಿಗಳಿಗೆ ನನ್ನ ಸಂತಾಪಗಳು" ಎಂದು ಸಾಮಾಜಿಕ ಜಾಲತಾಣ ಎಕ್ಸ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.
Deeply saddened by the passing of Shri Shyam Benegal Ji, whose storytelling had a profound impact on Indian cinema. His works will continue to be admired by people from different walks of life. Condolences to his family and admirers. Om Shanti.
— Narendra Modi (@narendramodi) December 23, 2024
ಚಿತ್ರರಂಗದ ಮೇಲೆ ಗಾಢವಾದ ಪ್ರಭಾವ ಬೀರಿದ ಬೆನಗಲ್ - ಪ್ರಧಾನಿ: "ಭಾರತೀಯ ಚಿತ್ರರಂಗದ ಮೇಲೆ ಗಾಢವಾದ ಪ್ರಭಾವ ಬೀರಿದ ಬೆನಗಲ್ ಅವರ ಸಾವು ತೀವ್ರ ದುಃಖ ತಂದಿದೆ. ಅವರ ಸಿನಿಮಾಗಳು ಸಮಾಜದ ವಿವಿಧ ಕ್ಷೇತ್ರಗಳ ಜನರ ಮೆಚ್ಚುಗೆಗೆ ಪಾತ್ರವಾಗುತ್ತಲೇ ಇರುತ್ತವೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ," ಎಂದು ಪ್ರಧಾನಿ ಮೋದಿ ಹೇಳಿದರು.
Saddened by the passing of Shyam Benegal ji, a visionary filmmaker who brought India’s stories to life with depth and sensitivity.
— Rahul Gandhi (@RahulGandhi) December 23, 2024
His legacy in cinema and commitment to social issues will inspire generations. Heartfelt condolences to his loved ones and admirers worldwide. pic.twitter.com/J6ARdNiVNV
ದೂರದೃಷ್ಟಿಯ ಚಲನಚಿತ್ರ ನಿರ್ಮಾಪಕ - ರಾಹುಲ್ ಗಾಂಧಿ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, "ಬೆನಗಲ್ ಅವರು ಭಾರತದ ಕಥೆಗಳನ್ನು ಆಳ ಮತ್ತು ಸೂಕ್ಷ್ಮತೆಯಿಂದ ಜೀವಂತಗೊಳಿಸಿದ ದೂರದೃಷ್ಟಿಯ ಚಲನಚಿತ್ರ ನಿರ್ಮಾಪಕ. ಸಿನಿಮಾದಲ್ಲಿನ ಅವರ ಪರಂಪರೆ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಬದ್ಧತೆಯು ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ. ಅವರ ಪ್ರೀತಿಪಾತ್ರರಿಗೆ ಮತ್ತು ವಿಶ್ವಾದ್ಯಂತ ಇರುವ ಅಭಿಮಾನಿಗಳಿಗೆ ಸಂತಾಪಗಳು" ಎಂದು ಎಕ್ಸ್‌ನಲ್ಲಿ ಬರೆದಿದ್ದಾರೆ.
ಹೊಸ ಅಲೆಯ ಸೃಷ್ಟಿಕಾರ: ಸ್ನೇಹಿತ ಹಾಗೂ ಮಾರ್ಗದರ್ಶಿಗೆ ಎಕ್ಸ್ ಮೂಲಕ ವಿದಾಯ ಹೇಳಿರುವ ನಿರ್ದೇಶಕ ಕಪೂರ್, "ಸಿನಿಮಾ ಕ್ಷೇತ್ರದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದವರು. ಅಂಕುರ್, ಮಂಥನ್ ಮತ್ತು ಅಸಂಖ್ಯಾತ ಇತರ ಚಿತ್ರಗಳ ಮೂಲಕ ಭಾರತೀಯ ಚಿತ್ರರಂಗದ ದಿಕ್ಕನ್ನು ಬದಲಿಸಿದ ವ್ಯಕ್ತಿ #ಶ್ಯಾಮ್ಬೆನೆಗಲ್ ಎಂದೆಂದಿಗೂ ನೆನಪಿನಲ್ಲಿ ಉಳಿಯುತ್ತಾರೆ. ಅವರು ಶಬಾಮಾ ಅಜ್ಮಿ ಮತ್ತು ಸ್ಮಿತಾ ಪಾಟೀಲ್ ಅವರಂತಹ ಮಹಾನ್ ನಟರನ್ನು ಪರಿಚಯಿಸಿದವರು" ಎಂದು ಎಕ್ಷ್ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.
ಶ್ಯಾಮ್ ಬಾಬು ಎಂದು ಸಂಬೋಧಿಸಿರುವ ಮೆಹ್ತಾ, ಸಿನಿಮಾಗಳಿಗಾಗಿ, ಕಠಿಣ ಕಥೆಗಳು, ಹಾಗೂ ಅದ್ಭುತ ನಟನೆ ಬೇಡುವಂತಹ ಪಾತ್ರಗಳನ್ನು ನೀಡಿದಕ್ಕಾಗಿ, ತಮಗೆ ಸ್ಫೂರ್ತಿಯಾಗಿದ್ದಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ನಿಜವಾಗಿಯೂ ನಮ್ಮ ಶ್ರೇಷ್ಠರಲ್ಲಿ ಕೊನೆಯವರು ಎಂದು ಹೇಳಿದ್ದಾರೆ.
ಜುಬೇದಾ ಸಿನಿಮಾದಲ್ಲಿ ಬೆನಗಲ್ ಜೊತೆಗೆ ಕೆಲಸ: 2001ರಲ್ಲಿ ಜುಬೇದಾ ಸಿನಿಮಾದಲ್ಲಿ ಬೆನಗಲ್ ಜೊತೆಗೆ ಕೆಲಸ ಮಾಡಿದ್ದ ಬಾಜಪೇಯಿ, "ಬೆನಗಲ್ ಅವರ ಸಾವು ಭಾರತೀಯ ಚಿತ್ರರಂಗಕ್ಕೆ ಹೃದಯ ವಿದ್ರಾವಕ ನಷ್ಟವಾಗಿದೆ. ಶ್ಯಾಮ್ ಬೆನಗಲ್ ಕೇವಲ ದಂತಕಥೆಯಾಗಿರಲಿಲ್ಲ, ಅವರು ಕಥೆ ಹೇಳುವಿಕೆಯನ್ನು ಮರುವ್ಯಾಖ್ಯಾನಿಸಿದ ಮತ್ತು ಪೀಳಿಗೆಗೆ ಸ್ಫೂರ್ತಿ ನೀಡಿದ ದಾರ್ಶನಿಕರಾಗಿದ್ದರು. ಜುಬೇದಾದಲ್ಲಿ ಅವರೊಂದಿಗೆ ಕೆಲಸ ಮಾಡುವುದು ನನಗೆ ಪರಿವರ್ತಕ ಅನುಭವವಾಗಿದೆ. ಅವರ ವಿಶಿಷ್ಟ ಶೈಲಿಯ ಕಥಾನಿರೂಪಣೆ ಮತ್ತು ಪ್ರದರ್ಶನಗಳ ಸೂಕ್ಷ್ಮ ತಿಳುವಳಿಕೆಗೆ ನನ್ನನ್ನು ಒಡ್ಡಿಕೊಂಡೆ. ಅವರ ನಿರ್ದೇಶನದಲ್ಲಿ ನಾನು ಕಲಿತ ಪಾಠಗಳಿಗೆ ಎಂದೆಂದಿಗೂ ಕೃತಜ್ಞನಾಗಿದ್ದೇನೆ" ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ನಟ ಅಕ್ಷಯ್ ಕುಮಾರ್, "ಬೆನಗಲ್ ಸಾವಿನ ಸುದ್ದಿ ತಿಳಿದು ತುಂಬಾ ನೋವಾಯಿತು. ನಮ್ಮ ದೇಶದ ಅತ್ಯುತ್ತಮ ಚಲನಚಿತ್ರ ನಿರ್ದೇಶಕರಲ್ಲಿ ಒಬ್ಬರು, ನಿಜವಾಗಿಯೂ ದಂತಕಥೆ." ಎಂದಿದ್ದಾರೆ.
ನಟಿ ಕಾಜೋಲ್, "ಭಾರತೀಯ ಚಿತ್ರರಂಗಕ್ಕೆ ಬೆನಗಲ್ ಅವರ ಕೊಡುಗೆಗಳು ಅಸಾಧಾರಣ ಹಾಗೂ ಅವುಗಳು ಅಚ್ಚಳಿಯದೆ ಉಳಿಯುತ್ತವೆ." ಎಂದು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಸ್ಟೋರಿ ಹಂಚಿಕೊಂಡಿರುವ ನಿರ್ಮಾಪಕ ಕರಣ್ ಜೋಹರ್, "ನಿಮ್ಮ ಸಿನಿಮಾಗಳಿಗಾಗಿ, ಅಪ್ರತಿಮ ಪ್ರತಿಭೆಗಳನ್ನು ರೂಪಿಸಿದ ಕಥೆಗಳಿಗಾಗಿ ಹಾಗೂ ಗಡಿಗಳಾಚೆಯೂ ಭಾರತೀಯ ಚಿತ್ರರಂಗ ಬಗ್ಗೆ ಹೆಮ್ಮೆ ಪಡುವಂತೆ ಮಾಡಿದಕ್ಕಾಗಿ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ.
ಬೆನಗಲ್ ಜೊತೆಗಿನ ತಮ್ಮ ಹಳೆಯ ಫೋಟೋ ಹಂಚಿಕೊಂಡ ಇಲಾ ಅರುಣ್: ಬೆನಗಲ್ ಅವರೊಂದಿಗೆ "ಮಂಡಿ", "ಸೂರಜ್ ಕಾ ಸತ್ವನ್ ಘೋಡಾ" ಮತ್ತು "ವೆಲ್‌ಕಮ್ ಟು ಸಜ್ಜನ್‌ಪುರ್" ಸೇರಿದಂತೆ ಆರು ಚಿತ್ರಗಳಲ್ಲಿ ಕೆಲಸ ಮಾಡಿದ ಇಲಾ ಅರುಣ್, "ಸಾವಿನ ಸುದ್ದಿ ತಿಳಿದು ಬೇಸರವಾಯಿತು. ನನಗೆ ನನ್ನ ತಂದೆಯನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ. ಈ ತಿಂಗಳ ಆರಂಭದಲ್ಲಿ ಅವರ ಜನ್ಮದಿನದಂದು, ಬೆಂಗಳೂರು ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದಕ್ಕಾಗಿ ನಾನು ಅವರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ, ಆದರೆ ನಾನು ಅವರಿಗೆ ಫೋನ್‌ನಲ್ಲಿ ವಿಶ್ ಮಾಡಿದ್ದೆ. ಅವರ ಧ್ವನಿ ಇನ್ನೂ ನನ್ನ ಕಿವಿಯಲ್ಲಿ ಪ್ರತಿಧ್ವನಿಸುತ್ತಿದೆ. ಸುವರ್ಣ ಸಿನಿಮಾ ಯುಗ ಅಂತ್ಯವಾಗಿದೆ" ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬೆನಗಲ್ ಜೊತೆಗಿನ ತಮ್ಮ ಹಳೆಯ ಫೋಟೋ ಹಂಚಿಕೊಂಡಿದ್ದಾರೆ.
ತೆಲುಗು ಸೂಪರ್ ಸ್ಟಾರ್ ಚಿರಂಜೀವಿ ಅವರು ಬೆನಗಲ್ ಅವರಿಗೆ ಸಂತಾಪ ಸೂಚಿಸಿದ್ದು, "ನಮ್ಮ ದೇಶದ ಅತ್ಯುತ್ತಮ ಚಲನಚಿತ್ರ ನಿರ್ದೇಶಕ ಮತ್ತು ಶ್ರೇಷ್ಠ ಬುದ್ಧಿಜೀವಿಗಳಲ್ಲಿ ಒಬ್ಬರಾದ ಶ್ಯಾಮ್ ಬೆನಗಲ್ ಅವರ ನಿರ್ಗಮನದ ಬಗ್ಗೆ ತೀವ್ರ ದುಃಖವಾಗಿದೆ. ಅವರು ಭಾರತದ ಕೆಲವು ಅದ್ಭುತ ಕಲಾವಿದ ಪ್ರತಿಭೆಗಳನ್ನು ಕಂಡುಹಿಡಿದು, ಪೋಷಿಸಿದವರು. ಅವರ ಸಿನಿಮಾಗಳು, ಬಯೋಗ್ರಫಿಗಳು, ಸಾಕ್ಷ್ಯಚಿತ್ರಗಳು ಭಾರತದ ಶ್ರೇಷ್ಠ ಸಾಂಸ್ಕೃತಿಕ ಸಂಪತ್ತಿನ ಭಾಗವಾಗಿದೆ" ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ಉಳಿದಂತೆ ನಟ ಬೊಮನ್ ಇರಾನಿ, ಬರಹಗಾರ ವರುಣ್ ಗ್ರೋವರ್, ನಿರ್ದೇಶಕ ಸುಧೀರ್ ಮಿಶ್ರಾ, ಬೆಂಗಾಲಿ ಸ್ಟಾರ್ ಪ್ರೊಸೆನ್‌ಜಿತ್ ಚಟರ್ಜಿ ದುಃಖ ವ್ಯಕ್ತಪಡಿಸಿದ್ದಾರೆ.
ಶ್ಯಾಮ್ ಬೆನಗಲ್ ನನಗೆ ಗುರು ಇದ್ದಂತೆ: ಶ್ಯಾಮ್ ಬೆನಗಲ್ ಅವರು ನಿರ್ದೇಶಕರಾಗಿ ಪದಾರ್ಪಣೆ ಮಾಡಿದ ಅಂಕುರ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಶಬಾನಾ ಅಜ್ಮಿ ಅವರು ಶ್ಯಾಮ್ ಬೆನೆಗಲ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಸಮಾನಾಂತರ ಸಿನಿಮಾದ ಪ್ರವರ್ತಕ ಶ್ಯಾಮ್ ಬೆನಗಲ್ ಅವರು ಶಬಾನಾ ಅಜ್ಮಿ ಅವರ ವೃತ್ತಿಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದವರು. "ನನ್ನ ನಟನೆಯ ಕಡೆಗೆ ಮಾತ್ರವಲ್ಲದೆ, ಜೀವನದ ಬಗ್ಗೆಯೂ ಮಾರ್ದರ್ಶನ ನೀಡಿದ, ಪ್ರಭಾವ ಬೀರಿದ ಗುರು ಅವರು." ಎಂದಿದ್ದಾರೆ.
"ಶ್ಯಾಮ್ ಬೆನಗಲ್ ನಟನೆಯಲ್ಲಿ ಮಾತ್ರವಲ್ಲದೆ ನಾನು ಜಗತ್ತನ್ನು ನೋಡುವ ರೀತಿಯಲ್ಲಿ ಎಲ್ಲದರಲ್ಲೂ ನನ್ನ ಗುರು. ನಾನು ಅಂಕುರ್ ಸಿನಿಮಾಗಾಗಿ ಬರ್ಲಿನ್ ಫಿಲ್ಮ್ ಫೆಸ್ಟಿವಲ್‌ಗೆ ವಿದೇಶಕ್ಕೆ ಹೋದಾಗ, ನಾನು ಮೊದಲು ಶಾಪಿಂಗ್ಗೆ ಹೋಗಲು ಬಯಸಿದ್ದೆ. ಆದರೆ ಅವರು ಟ್ಯಾಕ್ಸಿ ಡ್ರೈವರ್ ಬಳಿ ಎಲ್ಲ ರೀತಿಯ ಪ್ರಶ್ನೆಗಳನ್ನು ಕೇಳಿ, ಉದ್ಯಾನ ಮತ್ತು ಇತಿಹಾಸದ ಬಗ್ಗೆ ತಿಳಿದುಕೊಳ್ಳಲು ಬಯಸಿದ್ದರು." ಎಂದು ಅಜ್ಮಿ ಇತ್ತೀಚಿನ ಸಂದರ್ಶನದಲ್ಲಿ ಹೇಳಿದ್ದರು.
ಶ್ಯಾಮ್ ಬೆನಗಲ್ ಹಾಗೂ ಶಬಾನಾ ಅಜ್ಮಿ ಅಂಕುರ್ ನಂತರದಲ್ಲಿ "ನಿಶಾಂತ್" (1975), "ಜುನೂನ್" (1978), "ಸುಸ್ಮಾನ್" (1978) ಮತ್ತು "ಅಂತರ್ನಾಡ್" (1992) ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಜೊತೆಗೆ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: ಭಾರತದ ಪ್ರಸಿದ್ಧ ಸಿನಿಮಾ ನಿರ್ದೇಶಕ ಶ್ಯಾಮ್ ಬೆನಗಲ್ ವಿಧಿವಶ