ಕರ್ನಾಟಕ

karnataka

ETV Bharat / entertainment

25 ವರ್ಷಗಳ ಬಳಿಕ ಚಿತ್ರಮಂದಿರಗಳಲ್ಲಿ 'ಕಹೋ ನಾ ಪ್ಯಾರ್ ಹೈ' ರೀ ರಿಲೀಸ್​​ - KAHO NAA PYAAR HAI

ಹೃತಿಕ್ ರೋಷನ್ ಹಾಗೂ ಅಮೀಶಾ ಪಟೇಲ್ ಅಭಿನಯದ ಸೂಪರ್​ ಹಿಟ್​​ ಚಿತ್ರ ಕಹೋ ನಾ ಪ್ಯಾರ್ ಹೈ ಜನವರಿ 10 ರಂದು ಮರು ಬಿಡುಗಡೆ ಆಗಲಿದೆ.

Kaho Naa Pyaar Hai
ಕಹೋ ನಾ ಪ್ಯಾರ್ ಹೈ (Photo: Film Poster)

By ETV Bharat Entertainment Team

Published : Jan 7, 2025, 6:50 PM IST

ಇದೇ ಜನವರಿ 10 ರಂದು ಬಾಲಿವುಡ್​ ಸೂಪರ್​ ಸ್ಟಾರ್ ಹೃತಿಕ್ ರೋಷನ್ ತಮ್ಮ 51ನೇ ಜನ್ಮದಿನ ಆಚರಿಸಿಕೊಳ್ಳಲಿದ್ದಾರೆ. ಅದಕ್ಕೂ ಮುನ್ನ ತಮ್ಮ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ಹೌದು, ತಮ್ಮ ಐಕಾನಿಕ್ ಸಿನಿಮಾ ಕಹೋ ನಾ ಪ್ಯಾರ್ ಹೈ ಚಿತ್ರಮಂದಿರಗಳಲ್ಲಿ ಮರು-ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದು, ಸಿನಿಪ್ರಿಯರೂ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಸಂತಸಗೊಂಡಿದ್ದಾರೆ.

ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ಸ್ಟಾರ್​ಡಮ್​ ಹೊಂದಿರುವ ಹೃತಿಕ್ ರೋಷನ್ ಹಾಗೂ ಅಮೀಶಾ ಪಟೇಲ್ ಅಭಿನಯದ ಸೂಪರ್​ ಹಿಟ್​​ ಚಿತ್ರ ಕಹೋ ನಾ ಪ್ಯಾರ್ ಹೈ ನಾಯಕ ನಟನ ಜನ್ಮದಿನದಂದು ಅಂದರೆ ಜನವರಿ 10 ರಂದು ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಆಗಲಿದೆ.

ಸೂಪರ್​ ಸ್ಟಾರ್ ಹೃತಿಕ್ ರೋಷನ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿನಲ್ಲಿ ಚಿತ್ರದ ಒಂದು ನೋಟವನ್ನು ಹಂಚಿಕೊಂಡಿದ್ದಾರೆ ಮತ್ತು ಕಹೋ ನಾ ಪ್ಯಾರ್ ಹೈ ರೀ ರಿಲೀಸ್​ ಆಗುತ್ತಿದೆ ಎಂಬುದನ್ನು ತಿಳಿಸಿದ್ದಾರೆ. ಈ ಸಿನಿಮಾ 2000ರ ಜನವರಿ 14 ರಂದು ಬಿಡುಗಡೆ ಆಯಿತು. ಸಿನಿಮಾವನ್ನು ಹೃತಿಕ್​ ತಂದೆ ರಾಕೇಶ್ ರೋಷನ್ ನಿರ್ದೇಶಿಸಿದ್ದು, ಯಶ್ ರಾಜ್ ಫಿಲ್ಮ್ಸ್ ನಿರ್ಮಿಸಿದೆ. ರೋಹಿತ್ ಸೋನಿಯಾ ಪ್ರೇಮ್​ಕಹಾನಿಗೆ ಪ್ರೇಕ್ಷಕರು ಪ್ರೀತಿಯ ಧಾರೆಯೆರೆದಿದ್ದರು. ಇದೀಗ ಮತ್ತೊಮ್ಮೆ ಥಿಯೇಟರ್‌ಗಳಲ್ಲಿ ಮೋಡಿ ಮಾಡಲು ಸಜ್ಜಾಗಿದೆ.

ಇದನ್ನೂ ಓದಿ:ಬಾಕ್ಸ್​​ ಆಫೀಸ್​ನಲ್ಲಿ ಮುಗ್ಗರಿಸಿದ್ರೂ ಆಸ್ಕರ್​​ಗೆ ಎಂಟ್ರಿ; ಇದು ಸೂರ್ಯ ನಟನೆಯ 'ಕಂಗುವ' ಸಾಧನೆ

ಹೃತಿಕ್​​ ಮತ್ತು ಅಮೀಶಾ ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ಚಿತ್ರದ ಮರು-ಬಿಡುಗಡೆ ಬಗ್ಗೆ ತುಂಬಾನೇ ಖುಷಿಯಾಗಿದ್ದಾರೆ. ಹೃತಿಕ್ ತಮ್ಮ ಚಿತ್ರದ ವಿಶೇಷ ಪ್ರದರ್ಶನಕ್ಕೆ ಹಾಜರಾಗಲಿದ್ದಾರೆ. ತಮ್ಮ ಮೆಚ್ಚಿನ ನಟನ ಜೊತೆ ಕುಳಿತು ಅವರ ಸಿನಿಮಾ ನೋಡಲಿರುವುದರಿಂದ ಅಭಿಮಾನಿಗಳು ತಮ್ಮ ಉತ್ಸಾಹ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ಜನವರಿ 10 ರಿಂದ ಪಿವಿಆರ್​ ಐನಾಕ್ಸ್‌ನಲ್ಲಿ ಪ್ರದರ್ಶನಕ್ಕೆ ಲಭ್ಯವಿರುತ್ತದೆ.

ಇದನ್ನೂ ಓದಿ:ನ್ಯಾಯಾಲಯಕ್ಕೆ ಹಾಜರಾದ ನಟಿ ರಮ್ಯಾ: ಏನಿದು ಪ್ರಕರಣ?

ABOUT THE AUTHOR

...view details