ಹೈದರಾಬಾದ್:ಪ್ರೇಮಿಗಳ ದಿನದ ಹಿನ್ನೆಲೆ ನಟಿ ಇಲಿಯಾನಾ ಡಿಕ್ರೂಜ್ ತನ್ನ ಸೀಕ್ರೆಟ್ ಬಾಯ್‌ಫ್ರೆಂಡ್ ಮೈಕೆಲ್ ಡೋಲನ್ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಕಪ್ಪು ಬಿಳುಪು ಫೋಟೋ ಇದಾಗಿದ್ದು ಇಲಿಯಾನಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. "ನನ್ನ ಸ್ಟಡ್‌ಮಫಿನ್ ಮತ್ತು ನನ್ನ ಮೊದಲ ನಿಜವಾದ ವ್ಯಾಲೆಂಟೈನ್‌ಗೆ ಪ್ರೇಮಿಗಳ ದಿನದ ಶುಭಾಶಯಗಳು" ಎಂದು ಸುಂದರ ಶೀರ್ಷಿಕೆ ಕೂಡ ಬರೆದಿದ್ದಾರೆ. ಫೋಟೋದಲ್ಲಿ ಇಲಿಯಾನಾ ಕಪ್ಪು ಗೌನ್ ಧರಿಸಿ ಸ್ಮೈಲ್ ನೀಡಿದ್ದರೆ, ಮೈಕೆಲ್ ಕೂಡ ಸೂಟ್‌ನಲ್ಲಿ ಸ್ಟೈಲಿಶ್ ಆಗಿ ಕಾಣುತ್ತಿರುವುದನ್ನು ಗಮನಿಸಬಹುದು. ನೆಟ್ಟಿಗರಿಂದ ಜೋಡಿಯ ಫೋಟೋಗೆ ಮೆಚ್ಚುಗೆ ವ್ಯಕ್ತವಾಗಿದೆ.
'ನೀವು ಎಷ್ಟು ಖುಷಿಯಾಗಿದ್ದೀರಿ ಎಂಬುದಕ್ಕೆ ನಿಮ್ಮ ಮುಖದಲ್ಲಿರುವ ಈ ನಗುವೇ ಸಾಕ್ಷಿ' ಎಂದು ನೆಟ್ಟಿಗರೊಬ್ಬರು ನಟಿಯ ಮುಗುಳುನಗೆಯನ್ನು ಹಾಡಿ ಹೊಗಳಿದ್ದಾರೆ. 'ತಮ್ಮ ಜೀವನದ ಮಧುರ ಕ್ಷಣಗಳ ಒಳನೋಟವನ್ನು ನೀಡಿದ್ದಕ್ಕೆ ತುಂಬಾ ಧನ್ಯವಾದಗಳು' ಎಂದು ಮತ್ತೊಬ್ಬ ನೆಟಿಜನ್ ಹೃದಯದ ಎಮೋಜಿ ಸಹಿಯ ಕಾಮೆಂಟ್ ಮಾಡಿದ್ದಾನೆ. ಇನ್ನು ಕೆಲವರು ಜೋಡಿಯ ಅಪರೂಪದ ಫೋಟೋ ಕಂಡು ಅಚ್ಚರಿ ಕೂಡ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಕಾರಣ ನಟಿಯ ಖಾಸಗಿ ಜೀವನ ಮತ್ತು ಸೀಕ್ರೆಟ್ ಬಾಯ್‌ಫ್ರೆಂಡ್.
ಇಲಿಯಾನಾ ಮದುವೆ, ಮಕ್ಕಳು ಸೇರಿದಂತೆ ಸೆಲೆಬ್ರಿಟಿಗಳ ಖಾಸಗಿ ವಿಚಾರಗಳು ರಹಸ್ಯವಾಗಿರುವುದು ಒಳಿತು ಎಂಬ ಮಾತನ್ನು ಅನುಸರಿಸಿಕೊಂಡು ಬರುತ್ತಿರುವ ನಟಿ. ಕೆಲವು ದಿನಗಳ ಹಿಂದೆಯಷ್ಟೇ ಕಾರ್ಯಕ್ರಮವೊಂದರಲ್ಲಿ ಮದುವೆ ಬಗ್ಗೆ ಕೇಳಿದಾಗ ವಿಷಯವನ್ನು ವಿಷಯಾಂತರ ಮಾಡಿದ್ದರು. ಆದರೆ, ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ಇದ್ದಕ್ಕಿದ್ದಂತೆ ತಾವು ತಾಯಿ ಆಗುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಮಗುವಿನ ತಂದೆಯ ಬಗ್ಗೆಯೂ ಹೇಳಿಕೊಂಡಿರಲಿಲ್ಲ. ಹಲವು ದಿನಗಳ ಕಾಲ ಈ ರಹಸ್ಯವನ್ನು ಕಾಪಾಡಿಕೊಂಡು ಬಂದಿದ್ದರಿಂದ ನೆಟಿಜನ್ ಕೂಡ ಸೀಕ್ರೆಟ್ ಬಾಯ್‌ಫ್ರೆಂಡ್ ಬಗ್ಗೆ ಬಲೆ ಬಿಸಿ ಮಾಡಿಕೊಂಡಿದ್ದರು. ಇತ್ತೀಚೆಗಷ್ಟೇ ಇಲಿಯಾನಾ ಮಗುವಿಗೆ ಜನ್ಮ ನೀಡಿದ್ದು ಚಿಕ್ಕದೊಂದು ಹಿಂಟ್ ಮೂಲಕ ತಮ್ಮ ಸೀಕ್ರೆಟ್ ಬಾಯ್‌ಫ್ರೆಂಡ್ ಬಗ್ಗೆ ಬಹಿರಂಗಪಡಿಸಿದ್ದರು.