ಕರ್ನಾಟಕ

karnataka

ETV Bharat / entertainment

ಚಲನಚಿತ್ರ ವಸ್ತ್ರಾಲಂಕಾರ ಕಲಾವಿದರ ಸಂಘದ ನೂತನ ಕಚೇರಿ ಉದ್ಘಾಟಿಸಿದ ನಟಿ ರಾಗಿಣಿ - ACTRESS RAGINI DWIVEDI

ಬೆಂಗಳೂರಿನ ಲಗ್ಗೆರೆಯಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ವಸ್ತ್ರಾಲಂಕಾರ ಕಲಾವಿದರ ಸಂಘದ ನೂತನ ಕಚೇರಿ ಉದ್ಘಾಟನೆಯಾಯಿತು.

ವಸ್ತ್ರಾಲಂಕಾರ ಕಲಾವಿದರ ಸಂಘದ ನೂತನ ಕಚೇರಿ ಉದ್ಘಾಟಿಸಿದ ನಟಿ ರಾಗಿಣಿ
ವಸ್ತ್ರಾಲಂಕಾರ ಕಲಾವಿದರ ಸಂಘದ ನೂತನ ಕಚೇರಿ ಉದ್ಘಾಟಿಸಿದ ನಟಿ ರಾಗಿಣಿ (ETV Bharat)

By ETV Bharat Karnataka Team

Published : Oct 18, 2024, 7:52 PM IST

ಕರ್ನಾಟಕ ರಾಜ್ಯ ಚಲನಚಿತ್ರ ವಸ್ತ್ರಾಲಂಕಾರ ಕಲಾವಿದರ ಸಂಘದ ನೂತನ ಕಚೇರಿಯನ್ನು ನಟಿ ರಾಗಿಣಿ ದ್ವಿವೇದಿ ಇತ್ತೀಚಿಗೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶಿವರಾಜ್, ಗೌರವಾಧ್ಯಕ್ಷರಾದ ರವಿಶಂಕರ್, ಸಂಘದ ಪದಾಧಿಕಾರಿಗಳು ಹಾಗೂ ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟದ ವಿವಿಧ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಬಳಿಕ ಮಾತನಾಡಿದ ನಟಿ ರಾಗಿಣಿ ದ್ವಿವೇದಿ, ಕಲಾವಿದರು ಅಂದವಾಗಿ ಕಾಣಲು ಅವರು ಹಾಕುವ ಉಡುಗೆಯೇ ಕಾರಣ. ಅಂತಹ‌ ವಸ್ತ್ರವನ್ನು ನಮಗೆ ಸರಿಹೊಂದುವ ಹಾಗೆ ಸಿದ್ಧಪಡಿಸಿಕೊಡುವಲ್ಲಿ ವಸ್ತ್ರಾಲಂಕಾರ ಕಲಾವಿದರ ಪಾತ್ರ ದೊಡ್ಡದು. ವಸ್ತ್ರಾಲಂಕಾರ ಹೊಸ ಕಚೇರಿಯನ್ನು ಉದ್ಘಾಟನೆ ಮಾಡಿದ್ದು ಬಹಳ ಖುಷಿಯಾಯಿತ್ತು. ನಾವು ಸಿನಿಮಾದಲ್ಲಿ ಚೆನ್ನಾಗಿ ಕಾಣಬೇಕು ಅಂದ್ರೆ ಇವರೇ ಕಾರಣ ಅಂತಾ ಮೆಚ್ಚುಗೆಯ ಮಾತುಗಳನ್ನಾಡಿದರು.

ವಸ್ತ್ರಾಲಂಕಾರ ಕಲಾವಿದರ ಸಂಘದ ನೂತನ ಕಚೇರಿ ಉದ್ಘಾಟನೆ (ETV Bharat)

ಸಂಘದಲ್ಲಿ 250ಕ್ಕೂ ಅಧಿಕ ಸದಸ್ಯರಿದ್ದಾರೆ. ಎಲ್ಲರ ಸಹಕಾರದಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಜನವರಿಯಲ್ಲಿ ಸಂಘದ 35ನೇ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಿದ್ದೇವೆ ಎಂದು ಕರ್ನಾಟಕ ರಾಜ್ಯ ಚಲನಚಿತ್ರ ವಸ್ತ್ರಾಲಂಕಾರ ಕಲಾವಿದರ ಸಂಘದ ಶಿವರಾಜ್ ತಿಳಿಸಿದರು.

ವಸ್ತ್ರಾಲಂಕಾರ ಕಲಾವಿದರ ಸಂಘದ ನೂತನ ಕಚೇರಿ ಉದ್ಘಾಟನೆ (ETV Bharat)

ಒಕ್ಕೂಟದ ಖಜಾಂಚಿ ಸೋಮು, ಹಿರಿಯ ನಿರ್ಮಾಣ ನಿರ್ವಾಹಕರಾದ ಪ್ರಕಾಶ್ ಮತ್ತು ಸಂಘದ ಸದಸ್ಯರು ಸೇರಿದಂತೆ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ:ನಿಜಕ್ಕೂ ಮನೆಯಿಂದ ಹೊರಬಿದ್ರಾ ಲಾಯರ್​ ಜಗದೀಶ್ ​- ರಂಜಿತ್​​; ಏನಿದು ಬಿಗ್​ಬಾಸ್​ ಟ್ವಿಸ್ಟ್​​​?

ABOUT THE AUTHOR

...view details