ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್ ಕನ್ನಡ ಸೀಸನ್ 11'ರ ಗ್ರ್ಯಾಂಡ್ ಫಿನಾಲೆಗೆ ದಿನಗಣನೆ ಆರಂಭವಾಗಿದೆ. ಆದ್ರೆ ಫಿನಾಲೆ ವೀಕ್ ರೋಷಾವೇಷದಲ್ಲೇ ಶುರುವಾಗಿದೆ. ಹೌದು, ರಜತ್ ಕಿಶನ್ ಮತ್ತು ಉಗ್ರಂ ಮಂಜು ನಡುವೆ ಮಾತಿಗೆ ಮಾತು ಬೆಳೆದು, ದೊಡ್ಡ ಜಗಳವೇ ನಡೆದು ಹೋಗಿದೆ. ಇನ್ನೇನು ಕೈ ಕೈ ಮಿಲಾಯಿಸಿಕೊಳ್ತಾರಾ ಅನ್ನೋವಷ್ಟರ ಮಟ್ಟಿಗೆ ಟಾಕ್ ವಾರ್ ನಡೆದಿದೆ.
ರಜತ್ ಕಿಶನ್ ಮತ್ತು ಉಗ್ರಂ ಮಂಜು ನಡುವಿನ ಗಲಾಟೆಯ ಒಂದು ನೋಟವನ್ನು ಬಿಗ್ ಬಾಸ್ ತಮ್ಮ ಪ್ರೋಮೋದಲ್ಲಿ ಒದಗಿಸಿದ್ದಾರೆ. 'ರೋಷಾವೇಷದಲ್ಲೇ ಶುರುವಾಯ್ತಾ ಫಿನಾಲೆ ವಾರ?' ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನಡಿ ಪ್ರೋಮೋ ಅನಾವರಣಗೊಂಡಿದೆ.
ಮನದಲ್ಲಿರುವ ಕೋಪ, ಬೇಸರ, ಹತಾಷೆಯನ್ನು ಹೊಡೆಯುತ್ತಾ ಮನದೊಳಗಿರುವ ಭಾರವನ್ನು ಇಳಿಸಬೇಕು ಎಂದು ಬಿಗ್ ಬಾಸ್ ತನ್ನ ಫೈನಲಿಸ್ಟ್ಗಳಿಗೆ ತಿಳಿಸಿದ್ದಾರೆ. ಮಣ್ಣಿನ ಮಡಕೆ ಮೇಲೆ ಸ್ಪರ್ಧಿಗಳ ಫೋಟೋ ಅಂಟಿಸಲಾಗಿದ್ದು, ಕೋಲಿನಿಂದ ಅದನ್ನು ಒಡೆಯಬೇಕಿದೆ. ಈ ಮೂಲಕ ಸ್ಪರ್ಧಿಗಳು ತಮ್ಮ ಆಕ್ರೋಶವನ್ನು ಹೊರಹಾಕಬೇಕಿದೆ.
ಅದರಂತೆ, ಮೊದಲು ಉಗ್ರಂ ಮಂಜು ಅವರು ರಜತ್ ಕಿಶನ್ ಹೆಸರು ತೆಗೆದುಕೊಂಡಿದ್ದಾರೆ. ಗ್ಯಾಂಗ್ಗಳನ್ನೆಲ್ಲಾ ಹೊಡೆದಾಕ್ತೀನಿ ಅಂದಿದ್ರಿ, ಏನೂ ಮಾಡೋಕ್ಕಾಗ್ಲಿಲ್ಲ ನನ್ನ ಗೌತಮಿ ಫ್ರೆಂಡ್ಶಿಪ್ ನಾ ಎಂದಿದ್ದಾರೆ. ಅದಕ್ಕೆ ವ್ಯಂಗ್ಯವಾಡಿದ ರಜತ್, ಏಳೆಂಟ್ ವಾರ ಗುಳ್ಳೇ ನರಿ ತರ ಇದ್ದೆ ಎಂದಿದ್ದಾರೆ. ಭವ್ಯಾ ಜೊತೆ ಸೇರಿ ಮಂಜುನನ್ನು ಅಣಕಿಸಿದ್ದಾರೆ. ಅಲ್ಲದೇ, ಬರ್ತೀಯಾ ಎಂದು ಫೈಟ್ಗೆ ಆಹ್ವಾನಿಸಿದ್ದಾರೆ. ಮತ್ತದೇ ಅವಾಚ್ಯ ಶಬ್ದವನ್ನೂ ಬಳಸಿದ್ದಾರೆ.
ಇದನ್ನೂ ಓದಿ: 'ಹೋಸ್ಟ್ ಆಗಿ ಕೊನೆಯ ಎಪಿಸೋಡ್': ಬಿಗ್ ಬಾಸ್ಗೆ ಮರೆಯಲಾಗದ ಪಯಣವೆಂದ ಸುದೀಪ್
ಹಿಂದೊಮ್ಮೆ, ಗೋಲ್ಡ್ ಸುರೇಶ್ ಅವರೊಂದಿಗಿನ ಗಲಾಟೆಯಲ್ಲಿ ರಜತ್ ಅವಾಚ್ಯ ಪದಗಳನ್ನು ಬಳಕೆ ಮಾಡಿದ್ದರು. ಇದು ವೀಕೆಂಡ್ ಎಪಿಸೋಡ್ನಲ್ಲಿ ಚರ್ಚೆಗೆ ಬಂದು ಸುದೀಪ್ ಕ್ಲಾಸ್ ಕೊಟ್ಟಿದ್ದರು. ಇನ್ಮುಂದೆ ಈ ರೀತಿ ಮಾತನಾಡೋದಿಲ್ಲ ಎಂದು ರಜತ್ ಅವರು ಸುದೀಪ್ ಅವರಲ್ಲಿ ಪ್ರಾಮಿಸ್ ಮಾಡಿದ್ರು. ಅದ್ರೀಗ ತಮ್ಮ ತಾಳ್ಮೆ ಕಳೆದುಕೊಂಡಿದ್ದಾರೆ. ಮಂಜು ಅವರನ್ನು ಫೈಟ್ಗೆ ಆಹ್ವಾನಿಸಿದ್ದು, ಮುಂದೇನಾಗಲಿದೆ ಎಂದು ಪ್ರೇಕ್ಷಕರು ಕುತೂಹಲ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 'ಸ್ಟ್ರೆಚರ್ ತನ್ನಿ, ನಾನು ಸೈಫ್ ಅಲಿ ಖಾನ್': ರಕ್ತಸಿಕ್ತಗೊಂಡಿದ್ದ ನಟನನ್ನು ಆಸ್ಪತ್ರೆಗೆ ಕರೆದೊಯ್ದ ಆಟೋ ಚಾಲಕ ಹೇಳಿದ್ದಿಷ್ಟು
ಫಿನಾಲೆಗೆ ಇನ್ನೊಂದು ಹೆಜ್ಜೆ ಇದೆ ಅನ್ನೋವಾಗ, ಧನರಾಜ್ ಆಚಾರ್ ಎಲಿಮಿನೇಟ್ ಆಗಿದ್ದಾರೆ. ಧನರಾಜ್ಗೂ ಮುನ್ನ ಗೌತಮಿ ಜಾಧವ್ ಮನೆಯಿಂದ ಹೊರ ನಡೆದಿದ್ದಾರೆ. ಈ ಇಬ್ಬರೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದರು. ಫಿನಾಲೆಗೆ ಹನುಮಂತು, ತ್ರಿವಿಕ್ರಮ್, ಭವ್ಯಾ, ಮೋಕ್ಷಿತಾ, ಮಂಜು ಮತ್ತು ರಜತ್ ಎಂಟ್ರಿ ಕೊಟ್ಟಿದ್ದಾರೆ.