ETV Bharat / bharat

ಗೆಳತಿಯ ವರಿಸಲು ಹಿಂದು ಧರ್ಮಕ್ಕೆ ಮತಾಂತರವಾದ ಮುಸ್ಲಿಂ ಯುವಕ - MUSLIM MAN CONVERTS TO HINDU

ಕಳೆದ 10 ವರ್ಷಗಳಿಂದ ಪ್ರೀತಿಸುತ್ತಿದ್ದ ಗೆಳತಿಯನ್ನು ವರಿಸಲು ಹಿಂದು ಧರ್ಮಕ್ಕೆ ಮುಸ್ಲಿಂ ಯುವಕ ಮತಾಂತರವಾದ ಪ್ರಕರಣ ಬೆಳಕಿಗೆ ಬಂದಿದೆ.

ಗೆಳತಿಯ ವರಿಸಲು ಹಿಂದು ಧರ್ಮಕ್ಕೆ ಮತಾಂತರವಾದ ಮುಸ್ಲಿಂ ಯುವಕ
ಗೆಳತಿಯ ವರಿಸಲು ಹಿಂದು ಧರ್ಮಕ್ಕೆ ಮತಾಂತರವಾದ ಮುಸ್ಲಿಂ ಯುವಕ (ETV Bharat)
author img

By PTI

Published : Jan 20, 2025, 7:02 PM IST

ಬಸ್ತಿ (ಉತ್ತರ ಪ್ರದೇಶ) : ಮುಸ್ಲಿಮ್​ ಯುವಕ ತನ್ನ ಹಿಂದು ಪ್ರೇಯಸಿಗಾಗಿ ತಾನೇ ಸನಾತನ ಧರ್ಮಕ್ಕೆ ಮತಾಂತರವಾದ ಅಪರೂಪದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

34 ವರ್ಷದ ಮುಸ್ಲಿಮ್​ ಯುವಕ ಸದ್ದಾಂ ಮತ್ತು 30 ವರ್ಷದ ಹಿಂದು ಯುವತಿ ಕಳೆದ 10 ವರ್ಷಗಳಿಂದ ಪರಸ್ಪರ ಸಂಬಂಧ ಹೊಂದಿದ್ದರು. ಮೊದಲು ವಿವಾಹಕ್ಕೆ ನಿರಾಕರಿಸಿದ್ದ ಸದ್ದಾಂ ಇದೀಗ, ಒಪ್ಪಿಕೊಂಡು ತನ್ನಾಕೆಗಾಗಿ ಹಿಂದು ಧರ್ಮಕ್ಕೆ ಮತಾಂತರಗೊಂಡಿದ್ದಾನೆ. ತನ್ನ ಹೆಸರಿನ್ನು ಶಿವಶಂಕರ್​​ ಸೋನಿ ಎಂದು ಬದಲಿಸಿಕೊಂಡಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಇಲ್ಲಿನ ನಗರ ಬಜಾರ್​ ನಿವಾಸಿಯಾಗಿದ್ದ ಸದ್ದಾಂ (ಶಿವಶಂಕರ್​) ಅದೇ ಪ್ರದೇಶದ ಹಿಂದು ಯುವತಿಯನ್ನು ಪ್ರೀತಿಸುತ್ತಿದ್ದ. ಯುವತಿ ಹಲವು ಬಾರಿ ವಿವಾಹಕ್ಕೆ ಒತ್ತಾಯಿಸಿದ್ದಾಳೆ. ಆದರೆ, ಇಬ್ಬರೂ ಬೇರೆ ಬೇರೆ ಧರ್ಮಗಳಿಗೆ ಸೇರಿದ ಕಾರಣ, ಯುವಕನ ಕುಟುಂಬಸ್ಥರು ನಿರಾಕರಿಸಿದ್ದರು.

ಸ್ವಇಚ್ಛೆಯಿಂದ ಮತಾಂತರ, ವಿವಾಹ : ಇದರಿಂದ ಯುವತಿ ಕುಟುಂಬಸ್ಥರು ಮೂರು ದಿನಗಳ ಹಿಂದಷ್ಟೇ, ಸದ್ದಾಂ ಮತ್ತು ಆತನ ಕುಟುಂಬ ಸದಸ್ಯರ ವಿರುದ್ಧ ಮದುವೆಯ ನೆಪದಲ್ಲಿ ಅತ್ಯಾಚಾರ, ಗರ್ಭಪಾತ ಮಾಡಿಸಲು ಒತ್ತಾಯಿಸಿ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದರು. ಇದರ ಬೆನ್ನಲ್ಲೇ, ಅವರಿಬ್ಬರೂ ಸ್ವಇಚ್ಛೆಯಿಂದ ವಿವಾಹವಾಗಿದ್ದಾರೆ ಎಂದು ಕೊತ್ವಾಲಿ ಪೊಲೀಸ್ ಠಾಣೆ ಅಧಿಕಾರಿ ದೇವೇಂದ್ರ ಸಿಂಗ್ ಹೇಳಿದ್ದಾರೆ.

ಓದಿ: ದೇಶದ ಬಹುಸಂಖ್ಯಾತರು ಮುಂದೊಂದು ದಿನ ಅಲ್ಪಸಂಖ್ಯಾತರಾಗುವ ದಿನ ಬರುತ್ತದೆ: ಅಲಹಾಬಾದ್‌ ಹೈಕೋರ್ಟ್‌ ಕಳವಳ - Religious Conversions

ಮುಸ್ಲಿಮನಾಗಿದ್ದ ಸದ್ದಾಂ ಹಿಂದು ಧರ್ಮಕ್ಕೆ ಮತಾಂತರವಾಗಿ ಶಿವಶಂಕರ್​ ಸೋನಿ ಎಂದು ನಾಮಕರಣ ಮಾಡಿಕೊಂಡಿದ್ದಾನೆ. ಹಿಂದೂ ಪದ್ಧತಿಗಳ ಪ್ರಕಾರ ಭಾನುವಾರ ನಗರದ ಮಾರುಕಟ್ಟೆಯಲ್ಲಿರುವ ದೇವಾಲಯದಲ್ಲಿ ವಿವಾಹವಾದರು. ಇಬ್ಬರೂ ಸಪ್ತಪದಿ ತುಳಿದು, ಜೀವನವನ್ನು ಒಟ್ಟಿಗೆ ಕಳೆಯಲು ಪ್ರತಿಜ್ಞೆ ಮಾಡಿದ್ದಾರೆ ಎಂದರು.

ಹಿಂದು ಧರ್ಮಕ್ಕೆ ಮತಾಂತರ ಮತ್ತು ವಿವಾಹಕ್ಕೆ ಸ್ವಇಚ್ಛೆಯಿಂದ ನಿರ್ಧಾರ ಮಾಡಿದ್ದೇವೆ. ತಾವಿಬ್ಬರೂ ಕಳೆದ 10 ವರ್ಷಗಳಿಂದ ಪ್ರೀತಿಸುತ್ತಿದ್ದೆವು ಎಂದು ನವದಂಪತಿ ಪೊಲೀಸರೆದುರು ಹೇಳಿಕೆ ದಾಖಲಿಸಿದ್ದಾರೆ.

ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ತಾಯಿಯಿಂದಲೇ ಪುತ್ರನ ಧರ್ಮ ಬದಲು: ಪೊಲೀಸರಿಗೆ ಬಂತು ವಿಚಿತ್ರ ದೂರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.