ETV Bharat / lifestyle

ಅನ್ನದಿಂದ ಹತ್ತೇ ನಿಮಿಷದಲ್ಲಿ ಕ್ರಿಸ್ಪಿಯಾದ ಕುರ್​ಕುರೆ ಮಾಡೋದು ಹೇಗೆ ಗೊತ್ತೇ? - HOMEMADE CRISPY KURKURE RECIPE

Crispy Kurkure Recipe: ಹತ್ತೇ ನಿಮಿಷದಲ್ಲಿ ಅನ್ನದಿಂದ ಕ್ರಿಸ್ಪಿಯಾದ ಕುರ್​ಕುರೆ ಮಾಡಬಹುದು. ಇವುಗಳನ್ನು ಒಂದು ವರ್ಷಕ್ಕೂ ಹೆಚ್ಚು ಕಾಲ ವಾಸನೆ ಬರದಂತೆ ಸಂಗ್ರಹಿಸಬಹುದು. ಟೇಸ್ಟಿ ಮತ್ತು ಕ್ರಿಸ್ಪಿಯಾದ ಕುರ್​ಕುರೆ ಸಿದ್ಧಪಡಿಸುವುದು ಹೇಗೆ ಎಂಬುದನ್ನು ತಿಳಿಯೋಣ.

KURKURE RECIPE  HOW TO MAKE KURKURE  CRISPY KURKURE RECIPE  ಕುರ್​ಕುರೆ
ಕುರ್​ಕುರೆ (ETV Bharat, freepik)
author img

By ETV Bharat Lifestyle Team

Published : Feb 22, 2025, 9:12 PM IST

Crispy Kurkure Recipe : ಅನ್ನದ ಜೊತೆಗೆ ಕರಿ ಅಥವಾ ಸಾಂಬಾರ್​ ಸಖತ್​ ರುಚಿಯಾಗಿರುತ್ತದೆ. ಚಕ್ಕಲಿ ಇಲ್ಲವೇ ಇತರೆ ಕುರುಕಲು ತಿಂಡಿಗಳನ್ನು ಸೈಡ್ ಡಿಶ್ ಆಗಿ ಸೇವಿಸಿದರೆ ಅದರ ರುಚಿ ಅದ್ಭುತವಾಗಿರುತ್ತದೆ. ಅನೇಕ ಜನರು ಬೇಸಿಗೆ ಬಂದರೆ ಸಾಕು ಅಕ್ಕಿ ಹಿಟ್ಟಿನಿಂದ ವಿವಿಧ ಸಂಡಿಗೆಗಳನ್ನು ಸಿದ್ಧಪಡಿಸಿ ಡಬ್ಬಿಯಲ್ಲಿ ಸಂಗ್ರಹಿಸಿ ಇಡುತ್ತಾರೆ. ಈ ಸಂಡಿಗೆಗಳನ್ನು ಹಾಕಿ ವರ್ಷಪೂರ್ತಿ ಸಂಗ್ರಹಿಸಿ ಇಟ್ಟು ಆಗಾಗ ಅಂದ್ರೆ, ಹಬ್ಬ ಹರಿದಿನಗಳು ಬಂದಾಗ ಎಣ್ಣೆಯಲ್ಲಿ ಕರಿದು ಸೇವಿಸುತ್ತಾರೆ.

ಯಾವಾಗಲೂ ಒಂದೇ ರೀತಿ ಸಂಡಿಗೆಗಳನ್ನು ತಯಾರಿಸಿದರೆ ಯಾರಿಗೂ ಇಷ್ಟವಾಗುವುದಿಲ್ಲ. ಅದಕ್ಕೆ ನಾವು ಈ ಬಾರಿ ಮಕ್ಕಳು ಹೆಚ್ಚು ಇಷ್ಟಪಡುವ ಕುರ್​ಕುರೆ ರೆಸಿಪಿಯನ್ನು ತಂದಿದ್ದೇವೆ. ಇದನ್ನು ಅನ್ನದಿಂದ ಸಿದ್ಧಪಡಿಸಿದರೆ ಸಖತ್​ ರುಚಿಯಾಗಿರುತ್ತವೆ. ಇವುಗಳನ್ನು ಅತ್ಯಂತ ಸುಲಭವಾಗಿ ಮಾಡಬಹುದು. ನೀವು ಈ ಕುರ್​ಕುರೆ ಒಮ್ಮೆ ಮಾಡಿದರೆ ಸಾಕು, ಅವು ಒಂದು ವರ್ಷದವರೆಗೆ ಯಾವುದೇ ವಾಸನೆಯಿಲ್ಲದೆ ತಾಜಾವಾಗಿರುತ್ತವೆ. ಊಟದಲ್ಲಿ ಇವುಗಳನ್ನು ಸೈಡ್ ಡಿಶ್ ಆಗಿ ಮಾತ್ರವಲ್ಲದೆ ಸಂಜೆಯ ತಿಂಡಿಯಾಗಿ ಸೇವಿಸಿದರೂ ರುಚಿಕರವಾಗಿರುತ್ತವೆ. ಸರಳ ಹಾಗೂ ರುಚಿಕರವಾದ ರೆಸಿಪಿಯನ್ನು ತಯಾರಿಸಲು ಬೇಕಾಗುವ ಪದಾರ್ಥಗಳೇನು? ತಯಾರಿಸುವ ವಿಧಾನ ಹೇಗೆ ಎಂಬುದನ್ನು ನೋಡೋಣ.

KURKURE RECIPE  HOW TO MAKE KURKURE  CRISPY KURKURE RECIPE  ಕುರ್​ಕುರೆ
ಕುರ್​ಕುರೆ (freepik)

ಕುರ್​ಕುರೆ ಸಿದ್ಧಪಡಿಸಲು ಅಗತ್ಯವಿರುವ ಪದಾರ್ಥಗಳೇನು?

  • ಅಕ್ಕಿ - 2 ಕಪ್ (400 ಗ್ರಾಂ)
  • ಉಪ್ಪು - ರುಚಿಗೆ ಬೇಕಾಗುಷ್ಟು
  • ಅಜವಾನ - 1 ಟೀಸ್ಪೂನ್
  • ಚಿಲ್ಲಿ ಫ್ಲೇಕ್ಸ್ - 1 ಟೀಸ್ಪೂನ್
  • ಅಡಿಗೆ ಸೋಡಾ - ಅರ್ಧ ಟೀಸ್ಪೂನ್
  • ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು - ಸ್ವಲ್ಪ

ಕುರ್​ಕುರೆ ತಯಾರಿಸುವ ವಿಧಾನ ಹೇಗೆ ?

  • ಹಿಂದಿನ ರಾತ್ರಿ ಒಂದು ಪಾತ್ರೆಯಲ್ಲಿ ಪಡಿತರ ಅಕ್ಕಿಯನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆದು ನೆನೆಸಿ ಇಡಬೇಕು. ನೀವು ಪಡಿತರ ಅಕ್ಕಿಯನ್ನು ಮಾತ್ರವಲ್ಲದೆ, ಲಭ್ಯವಿರುವ ಯಾವುದೇ ಅಕ್ಕಿಯನ್ನು ಬಳಸಬಹುದು.
  • ಮರುದಿನ ನೆನೆಸಿದ ಅಕ್ಕಿಯನ್ನು ಒಂದು ಅಥವಾ ಎರಡು ಬಾರಿ ಚೆನ್ನಾಗಿ ತೊಳೆದುಕೊಳ್ಳಿ.
  • ಬಳಿಕ ಕುಕ್ಕರ್ ಅನ್ನು ಒಲೆಯ ಮೇಲೆ ಇಟ್ಟು, ನೆನೆಸಿದ ಅಕ್ಕಿಯನ್ನು ಸೋಸಿಕೊಳ್ಳಿ. ಅದರೊಳಗೆ 8 ಕಪ್ ನೀರು, ಉಪ್ಪು, ಅರಿಶಿನ, ಚಿಲ್ಲಿ ಫ್ಲೇಕ್ಸ್ ಮತ್ತು ಅಡುಗೆ ಸೋಡಾ ಸೇರಿಸಿ ಎಲ್ಲವನ್ನೂ ಒಟ್ಟಿಗೆ ಮಿಶ್ರಣ ಮಾಡಿ.
  • ನಂತರ ಕುಕ್ಕರ್​ನ್ನು ಮುಚ್ಚಿಟ್ಟು ಹೆಚ್ಚಿನ ಉರಿಯಲ್ಲಿ ಒಂದು ಸೀಟಿ ಬರುವವರೆಗೆ ಬೇಯಿಸಿ. ನಂತರ ಒಲೆಯನ್ನು ಮಧ್ಯಮ ಉರಿಯಲ್ಲಿ ಹಾಕಿ 5 ರಿಂದ 6 ನಿಮಿಷ ಬೇಯಿಸಿ.
  • ಕುಕ್ಕರ್‌ನಲ್ಲಿ ಅಡುಗೆ ಮಾಡುವವರು 1 ಕಪ್ ಅನ್ನಕ್ಕೆ 4 ಕಪ್ ನೀರು ಬಳಸಬೇಕು. ಅದೇ ರೀತಿ, ನೀವು ಸಾಮಾನ್ಯ ಪಾತ್ರೆಯಲ್ಲಿ ಅಡುಗೆ ಮಾಡುತ್ತಿದ್ದರೆ 1 ಕಪ್‌ಗೆ 5 ಕಪ್ ನೀರು ಹಾಕಿ ಬೇಯಿಸಿ.
  • ಈ ರೀತಿ ಬೇಯಿಸಿದ ಬಳಿಕ ಕುಕ್ಕರ್‌ನಲ್ಲಿರುವ ಎಲ್ಲಾ ಒತ್ತಡ ಹೋದ ನಂತರ, ಮುಚ್ಚಳವನ್ನು ತೆಗೆದು ಒಮ್ಮೆ ಬೆರೆಸಿಕೊಳ್ಳಬೇಕು. ಬಳಿಕ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದರರ್ಥ ಅನ್ನವ​ನ್ನು ಒಂದು ಚಮಚದಿಂದ ಮೃದು ಹಾಗೂ ಹಿಟ್ಟಿನಂತಾಗುವವರೆಗೆ ಕಿವುಚಬೇಕು. ಬಳಿಕ ಚೆನ್ನಾಗಿ ಮಿಶ್ರಣ ಮಾಡಬೇಕು.
  • ಬಳಿಕ ಮಿಶ್ರಣವನ್ನು ತಣ್ಣಗಾಗಿಸಬೇಕು. ಇದಾದ ನಂತರ ಒಂದು ಪೈಪಿಂಗ್ ಬ್ಯಾಗ್ ಅಥವಾ ಹಾಲಿನ ಪ್ಯಾಕೆಟ್ ತೆಗೆದುಕೊಂಡು ಅದನ್ನು ಸ್ವಚ್ಛಗೊಳಿಸಿ ತಣ್ಣಗಾದ ಹಿಟ್ಟಿನ ಮಿಶ್ರಣ ಅದರಲ್ಲಿ ಸುರಿಯಿರಿ.
  • ಬಳಿಕ ಒಂದು ತುದಿಯಲ್ಲಿ ಸಣ್ಣ ತುಂಡನ್ನು ಕತ್ತರಿಸಿ, ಅದರ ಮೇಲೆ ಹತ್ತಿ ಬಟ್ಟೆಯನ್ನು ಹರಡಿ, ಹಿಟ್ಟನ್ನು ನಾಲ್ಕು ಇಂಚು ಉದ್ದದ ಉಂಡೆಯಾಗಿ ಸುತ್ತಿಕೊಳ್ಳಿ. ಅದನ್ನು ತುಂಬಾ ತೆಳ್ಳಗಾಗಿ ಮಾಡಬೇಡಿ, ಮಧ್ಯಮ ದಪ್ಪವಾಗಿರಲಿ.
  • ನೀವು ಬಯಸಿದರೆ ಅದನ್ನು ಕುರ್​ಕುರೆಯಂತೆ ಮಾಡುವ ಬದಲು, ಚಕ್ರದಂತೆ ದುಂಡಾಗಿ ಕೂಡ ಮಾಡಬಹುದು.

  • ಮಧ್ಯದಲ್ಲಿ ಸ್ವಲ್ಪ ಅಂತರ ಬಿಟ್ಟು, ಬಟ್ಟೆಯ ಮೇಲೆ ನಿಮ್ಮ ಆಯ್ಕೆಯ ಆಕಾರದಲ್ಲಿ ಹಿಟ್ಟನ್ನು ಹೊರಳಿಸಿ.
  • ಈ ರೀತಿ ಎಲ್ಲವನ್ನೂ ಮಾಡಿದ ನಂತರ, ಸೂರ್ಯನ ರಣ ಬಿಸಿಲಿನಲ್ಲಿ ಇಲ್ಲದಿದ್ದರೆ, ನೀವು ಅವುಗಳನ್ನು ಒಂದು ದಿನ ಫ್ಯಾನ್ ಅಡಿಯಲ್ಲಿ ಒಣಗಿಸಿದರೂ ಅವು ಚೆನ್ನಾಗಿ ಒಣಗುತ್ತವೆ.
  • ಇವು ಸಂಪೂರ್ಣವಾಗಿ ಒಣಗಿದ ನಂತರ ಬಟ್ಟೆಯನ್ನು ಒಳಗೆ ತಿರುಗಿಸಿ ಮತ್ತು ಅವುಗಳ ಮೇಲೆ ಸ್ವಲ್ಪ ನೀರು ಸಿಂಪಡಿಸಿ. ಹೀಗೆ ಮಾಡುವುದರಿಂದ ಕುರ್​ಕುರೆಗಳು ಬಟ್ಟೆಯಿಂದ ಸುಲಭವಾಗಿ ಹೊರಬರುತ್ತವೆ. ನೀವು ಅವುಗಳನ್ನು ಹೊರತೆಗೆದಾಗ ಮುರಿಯುವುದಿಲ್ಲ.
  • ಈಗ ನೀವು ಎಲ್ಲವನ್ನೂ ಇದೇ ರೀತಿ ಸಿದ್ಧಪಡಿಸಬೇಕಾಗುತ್ತದೆ. ನೀವು ಅವುಗಳನ್ನು ಮತ್ತೆ ಒಣಗಿಸಬೇಕು. ನಾವು ನೀರನ್ನು ಚಿಮುಕಿಸಿದ ನಂತರ ಅದನ್ನು ತೆಗೆದುಕೊಳ್ಳುವುದರಿಂದ, ತೇವಾಂಶ ಒಣಗುವವರೆಗೆ ಅದನ್ನು ಒಣಗಿಸಬೇಕಾಗುತ್ತದೆ.
  • ಸಂಪೂರ್ಣವಾಗಿ ಒಣಗಿದ ನಂತರ ನೀವು ಅವುಗಳನ್ನು ಪಾತ್ರೆಯಲ್ಲಿ ಸಂಗ್ರಹಿಸಿದರೆ, ಅವು ಒಂದು ವರ್ಷಕ್ಕೂ ಹೆಚ್ಚು ಕಾಲ ಯಾವುದೇ ವಾಸನೆ ಬರದ ರೀತಿ ತಾಜಾವಾಗಿರುತ್ತವೆ.
  • ನಿಮಗೆ ಈ ಕುರ್​ಕುರೆ ತಿನ್ನಬೇಕೆಂದು ಅನಿಸಿದಾಗಲೆಲ್ಲಾ ಎಣ್ಣೆಯಲ್ಲಿ ಎಷ್ಟು ಬೇಕೋ ಅಷ್ಟು ಹುರಿದು ಸೇವಿಸಬಹುದು. ಇದೀಗ ಸೂಪರ್ ಟೇಸ್ಟಿ, ಕ್ರಿಸ್ಪಿಯಾದ ಕುರ್​ಕುರೆ ಸವಿಯಲು ಸಿದ್ಧವಾಗುತ್ತವೆ.

ಇವುಗಳನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.