ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ ಸೀಸನ್ 11 ಗ್ರ್ಯಾಂಡ್ ಫಿನಾಲೆ ಹೊಸ್ತಿಲಿನಲ್ಲಿದೆ. ಇದೇ ಶನಿವಾರ ಮತ್ತು ಭಾನುವಾರ ಅದ್ಧೂರಿ ಫಿನಾಲೆ ಜರುಗಲಿದೆ. ಬಿಗ್ ಬಾಸ್ ಟ್ರೋಫಿಯನ್ನು ಯಾರು ಹಿಡಿಯಲಿದ್ದಾರೆ ಅನ್ನೋ ಕುತೂಹಲ ಕನ್ನಡಿಗರಲ್ಲಿದೆ. ಕಳೆದೆರಡು ಸಂಚಿಕೆಗಳಾದ ವಾರದ ಕಥೆ ಕಿಚ್ಚನ ಜೊತೆ ಮತ್ತು ಸೂಪರ್ ಸಂಡೇ ವಿತ್ ಸುದೀಪ, ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಬಂದ ಕೊನೆ ವೀಕೆಂಡ್ ಎಪಿಸೋಡ್ಗಳು. ಈ ವಾರಾಂತ್ಯದ ಪ್ರಸಾರ ಕಾಣಲಿರುವ ಗ್ರ್ಯಾಂಡ್ ಫಿನಾಲೆ ಕೂಡಾ ಅಭಿನಯ ಚಕ್ರವರ್ತಿ ಸುದೀಪ್ ನಿರೂಪಣೆಯ ಕೊನೆಯ ಬಿಗ್ ಬಾಸ್ ಎಪಿಸೋಡ್ಗಳಾಗಿರಲಿವೆ. ಈ ಬಗ್ಗೆ ಸ್ವತಃ ಸುದೀಪ್ ಅವರೇ ಟ್ವೀಟ್ ಮಾಡಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಬಿಗ್ ಬಾಸ್ ಮರೆಯಲಾಗದ ಒಂದು ಪಯಣ: ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ ನಿರೂಪಕ ಸುದೀಪ್, ಬಿಗ್ ಬಾಸ್ ಕಳೆದ 11 ಸೀಸನ್‌ಗಳಿಂದ ನಾನು ಎಂಜಾಯ್ ಮಾಡಿದ ಕಾರ್ಯಕ್ರಮ. ನೀವು ತೋರಿದ ಪ್ರೀತಿಗೆ ಧನ್ಯವಾದಗಳು. ಮುಂಬರುವ ಫಿನಾಲೆ ಕಾರ್ಯಕ್ರಮ ಹೋಸ್ಟ್ ಆಗಿ ನನ್ನ ಕೊನೆಯ ಎಪಿಸೋಡ್. ನಿಮ್ಮೆಲ್ಲರನ್ನೂ ಮನರಂಜಿಸುವ ಭರವಸೆ ಹೊಂದಿದ್ದೇನೆ. ಬಿಗ್ ಬಾಸ್ ಮರೆಯಲಾಗದ ಒಂದು ಪಯಣ. ಅದನ್ನು ಅತ್ಯುತ್ತಮ ರೀತಿಯಲ್ಲಿ ನಿರ್ವಹಿಸಿದ್ದಕ್ಕೆ ನನಗೆ ಸಂತೋಷವಾಗಿದೆ. ಈ ಅವಕಾಶಕ್ಕಾಗಿ ಧನ್ಯವಾದಗಳು. ಲವ್ ಯೂ ಎಂದು ಬರೆದುಕೊಂಡಿದ್ದಾರೆ.
BB is smthn I have enjoyed from past 11 seasons. Thank u all for all the love you have shown. Coming finale is my last as a host, and I hope to entertain u all to my best.
— Kichcha Sudeepa (@KicchaSudeep) January 19, 2025
It's an unforgettable journey, I'm glad to have handled it to my best.
Thank you, @ColorsKannada, for this…
ಅಕ್ಟೋಬರ್ 15ರಂದೇ ಅಧಿಕೃತ ವಿದಾಯ ಘೋಷಿಸಿದ್ದ ಸುದೀಪ್: ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭವಾದ ಕೆಲವೇ ದಿನಗಳಲ್ಲಿ, ಅಕ್ಟೋಬರ್ 15ರಂದು ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ 'ಬಿಗ್ ಬಾಸ್' ನಿರೂಪಣೆಗೆ ನಟ ಸುದೀಪ್ ವಿದಾಯ ಘೋಷಿಸಿದ್ದರು. ಮುಂದಿನ ಸೀಸನ್ಗಳನ್ನು ನಾನು ನಡೆಸಿಕೊಡುವುದಿಲ್ಲ ಎಂದು ಮಾಹಿತಿ ನೀಡಿದ್ದರು. ಇದೀಗ, ಮತ್ತೊಮ್ಮೆ ಟ್ವೀಟ್ ಮಾಡಿ ಮುಂಬರುವ ಫಿನಾಲೆ ಕಾರ್ಯಕ್ರಮ ಹೋಸ್ಟ್ ಆಗಿ ಬಿಗ್ ಬಾಸ್ನಲ್ಲಿ ನನ್ನ ಕೊನೆಯ ಎಪಿಸೋಡ್ ಎಂದು ತಿಳಿಸಿದ್ದಾರೆ. ಅಭಿಮಾನಿಗಳು ಈ ಬಗ್ಗೆ ತಮ್ಮ ಬೇಸರ ಹೊರಹಾಕಿದ್ದಾರೆ.
ಇದನ್ನೂ ಓದಿ: 'ಬಿಗ್ ಬಾಸ್ ಹಿಂದಿ 18'ರ ಟ್ರೋಫಿ ಗೆದ್ದುಕೊಂಡ ಕರಣ್ ವೀರ್ ಮೆಹ್ರಾ: ವಿವಿಯನ್ ಡಿಸೆನಾ ರನ್ನರ್ ಅಪ್
I appreciate all the love and support coming my way regarding my tweet; it truly makes me feel cherished. However, I kindly ask those creating comments and videos to refrain from making assumptions about any conflicts between the channel and myself. We have shared a long and…
— Kichcha Sudeepa (@KicchaSudeep) October 15, 2024
ಕಮೆಂಟ್ಗಳ ಪೈಕಿ ಒಂದರಲ್ಲಿ, ''ಕೆಲವೊಮ್ಮೆ ಸಿನಿಮಾ ವಿಚಾರವಾಗಿ ಗಮನಿಸಿದರೆ ಇದೊಂದು ಒಳ್ಳೆ ನಿರ್ಧಾರ ಅನಿಸುತ್ತದೆ. ಅದೇ ಸಮಯದಲ್ಲಿ, ಪ್ರತೀ ವಾರಾಂತ್ಯದಲ್ಲಿ ನಿಮ್ಮನ್ನು ಟಿವಿಯುಲ್ಲಿ ನೋಡಲು ಸಾಧ್ಯವಾಗುವುದಿಲ್ಲ ಅನ್ನೋದು ಬಹಳ ಬೇಸರ ತರಿಸುತ್ತಿದೆ. ಸುದೀಪ್ ಅಣ್ಣಾ, ಕಳೆದ 11 ವರ್ಷಗಳಿಂದ ನೀವು ಇತಿಹಾಸ ಸೃಷ್ಟಿಸಿದ್ದಕ್ಕೆ ಧನ್ಯವಾದಗಳು'' ಎಂದು ಬರೆಯಲಾಗಿದೆ.
ಇದನ್ನೂ ಓದಿ: ಬೆಂಗಳೂರಿನ ಶಾಲಾ ದಿನಗಳ ಬಗ್ಗೆ ಅಚ್ಚಕನ್ನಡದಲ್ಲಿ ಮೆಲುಕು ಹಾಕಿದ ರಜನಿಕಾಂತ್: ತಲೈವಾ ಕನ್ನಡ ಬಲು ಸೂಪರ್ - ವಿಡಿಯೋ
ಮತ್ತೋರ್ವರ ಪ್ರತಿಕ್ರಿಯೆಯಲ್ಲಿ, 'ರಿಯಾಲಿಟಿಟ್ ಶೋಗಳಿಗೆ, ಇವರೇ ಸೂಕ್ತ: ಕನ್ನಡದ ಕೋಟ್ಯಧಿಪತಿ = ಅಪ್ಪು, ವೀಕೆಂಡ್ ವಿತ್ ರಮೇಶ್ = ರಮೇಶ್ ಸರ್, ಕಾಮಿಡಿ ಖಿಲಾಡಿಗಳು = ಜಗ್ಗೇಶ್ ಸರ್, ಬಿಗ್ ಬಾಸ್ = ಸುದೀಪ್ ಸರ್. 11 ವರ್ಷಗಳ ನಿರೂಪಣೆ ಅದ್ಭುತವಾಗಿತ್ತು, ದಯವಿಟ್ಟು ಮತ್ತೆ ಬನ್ನಿ ಎಂದು ಆಶಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.