ನವದೆಹಲಿ: ಕೇಂದ್ರ ಬಜೆಟ್ನಲ್ಲಿ ಮಧ್ಯಮ ವರ್ಗಕ್ಕೆ ವೈಯಕ್ತಿಕ ಆದಾಯ ತೆರಿಗೆ ಮಿತಿಯಲ್ಲಿ ಮಹತ್ವದ ಘೋಷಣೆ ಮಾಡಲಾಗಿದೆ. ವೈಯಕ್ತಿಕ ಆದಾಯ ತೆರಿಗೆದಾರರು 12 ಲಕ್ಷ ಆದಾಯ ಹೊಂದಿದ್ದರೆ ಇನ್ಮುಂದೆ ಯಾವುದೇ ತೆರಿಗೆ ಕಟ್ಟಬೇಕಾಗಿಲ್ಲ. ಇದರಿಂದ 12 ಲಕ್ಷದವರೆಗೂ ಆದಾಯ ಹೊಂದಿರುವರಿಗೆ ವಾರ್ಷಿಕವಾಗಿ 80 ಸಾವಿರ ರೂಪಾಯಿ ಉಳಿತಾಯವಾಗಲಿದೆ ಎಂದು ಸೀತಾರಾಮನ್ ತಿಳಿಸಿದ್ದಾರೆ.
ಹೊಸ ತೆರಿಗೆ ಪದ್ಧತಿ ಅನ್ವಯ ತೆರಿಗೆ ಪಾವತಿ ಮಾಡಲು ಇಚ್ಚಿಸುವವರು 12 ಲಕ್ಷದ ಆದಾಯ ತೆರಿಗೆ ರಿಯಾಯಿತಿ ಜೊತೆಗೆ 75 ಸಾವಿರ ರೂ ಸ್ಟ್ಯಾಡಂರ್ಡ್ ಡಿಡಕ್ಷನ್ ಸಿಗಲಿದೆ. ಇದರಿಂದ 12.75 ಸಾವಿರ ರೂವರೆಗೆ ಜಿರೋ ತೆರಿಗೆ ಇರಲಿದೆ. ಆದಾಯ ತೆರಿಗೆ ಪಾವತಿದಾರರಿಗೂ ಸ್ಲ್ಯಾಬ್ ಗಳಲ್ಲಿ ಬದಲಾವಣೆ ಮಾಡಲಾಗಿದೆ. ಅದು ಈ ಕೆಳಗಿನಂತಿದೆ.
![INCOME TAX SLABS](https://etvbharatimages.akamaized.net/etvbharat/prod-images/01-02-2025/23450076_budget.jpeg)
ಹೊಸ ತೆರಿಗೆ ಸ್ಲ್ಯಾಬ್ ಹೀಗಿದೆ:
4,00,000 ಲಕ್ಷದ ವರೆಗೆ ಯಾವುದೇ ತೆರಿಗೆ ಇಲ್ಲ
4,00,000ರೂ. ದಿಂದ 8,00,000 ರೂ -ಶೇ 5
8,00,0001 ರೂ - 12,00,000ರೂ. - ಶೇ10
12,00,001 ದಿಂದ 16 ಲಕ್ಷದವರೆಗೆ - ಶೇ 15
16,00,001 ದಿಂದ 20 ಲಕ್ಷ ರೂ - ಶೇ 20
20,00,001 ದಿಂದ 24ಲಕ್ಷದವರೆಗೆ ಶೇ 25%
24 ಲಕ್ಷದ ಮೇಲ್ಪಟ್ಟು - ಶೇ 30ರಷ್ಟು
📢 Zero Income Tax till ₹12 Lakh Income under New Tax Regime
— PIB India (@PIB_India) February 1, 2025
▶️ Slabs and rates being changed across the board to benefit all tax-payers
▶️ New structure to substantially reduce taxes of middle class and leave more money in their hands, boosting household consumption, savings… pic.twitter.com/AUkE76nG8K
ಮಧ್ಯಮ ವರ್ಗವು ಭಾರತದ ಬೆಳವಣಿಗೆಗೆ ಬಲ ತುಂಬಲಿದೆ. ಜೊತೆಗೆ ರಾಷ್ಟ್ರ ನಿರ್ಮಾಣದಲ್ಲಿ ಮಧ್ಯಮ ವರ್ಗದ ಶಕ್ತಿ ಮತ್ತು ಸಾಮರ್ಥ್ಯ ಅತ್ಯಗತ್ಯ ಎಂದು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ನಂಬಿದೆ. ಆದ್ದರಿಂದ ಅವರ ಕೊಡುಗೆ ಗುರುತಿಸಿ, ಮಧ್ಯಮ ವರ್ಗದವರಿಗೆ ತೆರಿಗೆ ಹೊರೆಯನ್ನು ಕ್ರಮೇಣವಾಗಿ ಕಡಿಮೆ ಮಾಡಿದ್ದೇವೆ. 2014 ರ ನಂತರ, 'ಜಿರೋ' ಸ್ಲ್ಯಾಬ್ ಅನ್ನು 2.5 ಲಕ್ಷ ರೂ.ಗೆ ಹೆಚ್ಚಿಸಿದ್ದೆವು. ಬಳಿಕ 2019 ರಲ್ಲಿ ಇದನ್ನು 5 ಲಕ್ಷಕ್ಕೆ ಮತ್ತು 2023 ರಲ್ಲಿ ಈ ಮಿತಿಯನ್ನು 5 ರಿಂದ 7 ಲಕ್ಷಕ್ಕೆ ಏರಿಸಿದ್ದೆವು. ಈಗ ಹೊಸ ತೆರಿಗೆ ಪದ್ಧತಿ ಅಡಿ 12 ಲಕ್ಷ ರೂ.ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಕಟ್ಟಬೇಕಿಲ್ಲ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.