ETV Bharat / business

ಕೇಂದ್ರ ಬಜೆಟ್​ 2025-26: ಕೃಷಿ, ಎಂಎಸ್​ಎಂಇ, ಹೂಡಿಕೆ: ರಫ್ತಿಗೆ ಬಜೆಟ್​ನಲ್ಲಿ ಹೆಚ್ಚಿನ ಒತ್ತು - BUDGERT 2025 26

ಜಾಗತಿಕ ಪ್ರಮುಖ ಆರ್ಥಿಕತೆಯಲ್ಲಿ ಭಾರತದ ಆರ್ಥಿಕತೆ ವೇಗದ ಬೆಳೆವಣಿಗೆ ಕಾಣುತ್ತಿದ್ದು, ಆ ನಿಟ್ಟಿನಲ್ಲಿ ಎಲ್ಲ ವಲಯಗಳಿಗೆ ಒತ್ತು ನೀಡಿ ಮುಂದೆ ಸಾಗಲಾಗುವುದು ಎಂದು ನಿರ್ಮಲಾ ಸೀತಾರಾಮನ್​ ತಿಳಿಸಿದರು.

fm-sitharaman-charts-growth-roadmap-with-focus-on-agri-msmes-investment-and-exports
ಕೇಂದ್ರ ಬಜೆಟ್​​ (ಈಟಿವಿ ಭಾರತ್​​)
author img

By ANI

Published : Feb 1, 2025, 12:05 PM IST

ನವದೆಹಲಿ: 2025-26ನೇ ಸಾಲಿನ ಕೇಂದ್ರ ಬಜೆಟ್​ ಮಂಡಿಸುತ್ತಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ದೇಶದ ಆರ್ಥಿಕ ವಿಸ್ತರಣೆಯ ವಿವರವಾದ ಮಾರ್ಗಸೂಚಿಯನ್ನು ಪ್ರಕಟಿಸಿ, ಕೃಷಿ, ಸೂಕ್ಷ್ಮ, ಸಣ್ಣ ಮತ್ತು ಮಧ್ಯ ಉದ್ಯಮಗಳು, ಹೂಡಿಕೆ ಮತ್ತು ರಫ್ತಿಗೆ ಒತ್ತು ನೀಡಲಾಗುವುದು ಎಂದರು

ಉದ್ಯೋಗ ಸೃಷ್ಟಿ, ಸ್ವಾವಲಂಬನೆ ಮತ್ತು ಜಾಗತಿಕ ಸ್ಪರ್ಧೆ ವೃದ್ಧಿಗೆ ಸುಧಾರಣೆ ನಡೆಸುವುದು. ಭಾರತದ ಆಕಾಂಕ್ಷಿತ ವಿಕಸಿತ ಭಾರತದ ಬೆಳವಣಿಗೆಗೆ ಈ ಬಜೆಟ್​ ವೇಗ ನೀಡಲಿದೆ ಎಂದು ಒತ್ತು ನೀಡಿದರು.

ಜಾಗತಿಕ ಪ್ರಮುಖ ಆರ್ಥಿಕತೆಯಲ್ಲಿ ಭಾರತದ ಆರ್ಥಿಕತೆ ವೇಗದ ಬೆಳೆವಣಿಗೆ ಹೊಂದುತ್ತಿದ್ದು, ಇದು ವಿಶ್ವ ವೇದಿಕೆಯಲ್ಲಿ ದೇಶದ ಸ್ಥಿತಿಸ್ಥಾಪಕತ್ವ ಮತ್ತು ಸಾಮರ್ಥ್ಯ ಬಲಪಡಿಸುತ್ತದೆ. ತೆರಿಗೆ, ಶಕ್ತಿ, ನಗರ ಅಭಿವೃದ್ಧಿ, ಗಣಿ ಮತ್ತು ಆರ್ಥಿಕವಲಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸುಧಾರಣೆಯ ಪರಿವರ್ತಕ ಉಪಕ್ರಮದ ಗುರಿಯನ್ನು ಬಜೆಟ್​ ಹೊಂದಿದೆ. ಕಳೆದ ದಶಕದಲ್ಲಿ ಭಾರತದ ಆರ್ಥಿಕ ರಚನಾತ್ಮಕ ಸುಧಾರಣೆಯನ್ನು ಕಾಣುವ ಮೂಲಕ ಜಗತ್ತಿನ ಗಮನ ಸೆಳೆದಿದೆ. ಹೂಡಿಕೆದಾರರ ನಂಬಿಕೆಯನ್ನು ಹೆಚ್ಚಿಸಿದ್ದು, ಜಾಗತಿಕ ಸಹಭಾಗಿತ್ವ ಹೆಚ್ಚಳ ಕಂಡಿದೆ ಎಂದು ಸಚಿವರು ಹೇಳಿದ್ದಾರೆ.

ಮುಂದಿನ ಐದು ವರ್ಷ ಎಲ್ಲರ ಅಭಿವೃದ್ಧಿ (ಸಬ್ಕಾ ವಿಕಾಸ್​) ಅವಕಾಶ ಹೊಂದಿದ್ದು, ಎಲ್ಲಾ ವಲಯ ಮತ್ತು ಪ್ರದೇಶದೆಲ್ಲೆಡೆ ಸಮತೋಲಿತ ಅಭಿವೃದ್ಧಿಯ ಭರವಸೆ ನೀಡಲಾಗುವುದು. ನಮ್ಮ ಆರ್ಥಿಕತೆ ಎಲ್ಲ ಪ್ರಮುಖ ಜಾಗತಿಕ ಆರ್ಥಿಕತೆಗಿಂತ ವೇಗದಾಯಕ ಬೆಳವಣಿಗೆ ಹೊಂದಿದೆ. ಕಳೆದ 10 ವರ್ಷದ ನಮ್ಮ ಅಭಿವೃದ್ಧಿಯ ಟ್ರಾಕ್​ ರೇಕಾರ್ಡ್​ ಮತ್ತು ರಚನಾತ್ಮಕ ಸುಧಾರಣೆ ಜಾಗತಿಕ ಗಮನ ಸೆಳೆದಿದೆ ಎಂದರು.

ತೆಲುಗು ಪದ್ಯದ ಉಲ್ಲೇಖ: ಬಜೆಟ್​ನಲ್ಲಿ ತೆಲುಗು ಕಥೆಗಾರರಾದ ಗುರಜಡ ಅಪ್ಪರಾವ್​ ಅವರ ಪದ್ಯ ಉಲ್ಲೇಖಿಸಿದ ಸಚಿವರು, ದೇಶವೂ ಕೇವಲ ಭೂಮಿಯಲ್ಲ ಅದು ಅಲ್ಲಿಯ ಜನರು ಜೊತೆಗೆ ತತ್ವಗಳು ಎಂದರು.

ಸರ್ಕಾರದ ವಿಕಸಿತ ಗುರಿ ಬಡತನ ನಿರ್ಮೂಲನೆ, ಮಕ್ಕಳಿಗೆ ಶೇ 100ರಷ್ಟು ಗುಣಮಟ್ಟದ ಶಿಕ್ಷಣ, ಕೈಗೆಟುಕುವ ಮತ್ತು ಸಮಗ್ರ ಆರೋಗ್ಯ ಸೇವೆ, ಕೌಶಲ್ಯಭರಿತ ಕೆಲಸಗಾರರ ಅಭಿವೃದ್ಧಿ ಜೊತೆಗೆ ಅರ್ಥಪೂರ್ಣ ಉದ್ಯೋಗ, ಆರ್ಥಿಕತೆಯಲ್ಲಿ ಮಹಿಳೆಯರ ಭಾಗಿತ್ವ ಶೇ 70ರಷ್ಟು, ಜಗತ್ತಿನ ಆಹಾರದ ಪುಟ್ಟಿಯಾಗಿರುವ ಕೃಷಿ ವಲಯವನ್ನು ಬಲಗೊಳಿಸುವಿಕೆ ಗುರಿ ಹೊಂದಿದೆ.

ಆರ್ಥಿಕ ಸಬಲೀಕರಣದ ಗುರಿಯೊಂದಿಗೆ ಭಾರತದ ಬೆಳವಣಿಗೆ ಪಥವೂ ಸ್ಪಷ್ಟವಾಗಿದ್ದು, ಕೈಗಾರಿಕ ಪ್ರಗತಿ, ಸಾಮಾಜಿಕ ಯೋಗಕ್ಷೇಮ ಹೊಂದಿದೆ. ಮಹತ್ವಾಕಾಂಕ್ಷೆಯ ಗುರಿಗಳೊಂದಿಗೆ, ಮುಂದಿನ ವರ್ಷಗಳಲ್ಲಿ ದೇಶವನ್ನು ಸಮೃದ್ಧಿಯತ್ತ ಕೊಂಡೊಯ್ಯಲು ಸರ್ಕಾರ ನಿರ್ಧರಿಸಿದೆ ಎಂದರು.

ಇದನ್ನೂ ಓದಿ: ದುಲಾರಿ ದೇವಿ ನೀಡಿದ ಬಿಹಾರದ ಮಧುಬನಿ ಕಲೆಯ ಸೀರೆಯುಟ್ಟ ಸೀತಾರಾಮನ್: 8 ಬಜೆಟ್‌ಗಳಲ್ಲಿ 8 ಸಾಂಪ್ರದಾಯಿಕ ಸೀರೆಗಳ ಸಿಂಗಾರ!

ಇದನ್ನೂ ಓದಿ: ಗುಡ್​ ನ್ಯೂಸ್: 2025ರಲ್ಲಿ ಚಿನ್ನದ ಬೆಲೆ ಇಳಿಕೆ, ಬೆಳ್ಳಿ ಬೆಲೆ ಏರಿಕೆ: ಆರ್ಥಿಕ ಸಮೀಕ್ಷೆ ವರದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.