ETV Bharat / bharat

ಗ್ರಾಮೀಣ ಪ್ರದೇಶದಲ್ಲಿ 1.5 ಲಕ್ಷ ಅಂಚೆ ಕಚೇರಿ ಸೇವೆ : ನಿರ್ಮಲಾ ಸೀತಾರಾಮನ್​ - RURAL POST OFFICES

ಗ್ರಾಮೀಣ ಆರ್ಥಿಕತೆಗೆ ವೇಗವರ್ಧಕವಾಗಿ ಮಾಡಲು 1.5 ಲಕ್ಷ ಗ್ರಾಮಾಂತರ ಅಂಚೆ ಕಚೇರಿ ಸ್ಥಾಪಿಸುವ ಮೂಲಕ ದೊಡ್ಡ ಲಾಜಿಸ್ಟಿಕ್​ ಸೇವಾ ಸಂಸ್ಥೆಯಾಗಿ ರೂಪಿಸಲಾಗುವುದು ಎಂದು ವಿತ್ತ ಸಚಿವರು ತಿಳಿಸಿದರು

india-post-to-be-turned-into-large-logistic-body-with-1-dot-5-lakh-rural-post-offices-fm
ನಿರ್ಮಲಾ ಸೀತಾರಾಮನ್​ ಬಜೆಟ್​ ಮಂಡನೆ (ಈಟಿವಿ ಭಾರತ್​)
author img

By ETV Bharat Karnataka Team

Published : Feb 1, 2025, 12:26 PM IST

ನವದೆಹಲಿ: ಗ್ರಾಮೀಣ ಪ್ರದೇಶದಲ್ಲಿ 1.5 ಲಕ್ಷ ಸ್ಥಾಪನೆಯೊಂದಿಗೆ ಭಾರತೀಯ ಅಂಚೆಯನ್ನು ದೇಶದ ಅತಿ ದೊಡ್ಡ ಲಾಜಿಸ್ಟಿಕ್​ ಸಂಸ್ಥೆಯಾಗಿ ರೂಪಾಂತರಗೊಳಿಸುವ ಯೋಜನೆಯನ್ನು ಹೊಂದಲಾಗಿದೆ ಎಂದು ನಿರ್ಮಲಾ ಸೀತಾರಾಮನ್​ ಬಜೆಟ್​ನಲ್ಲಿ ಘೋಷಿಸಿದರು.

ಸಂಸತ್ತಿನಲ್ಲಿ ಏಂಟನೇ ಬಾರಿ ಬಜೆಟ್​ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮನ್​, ಹಲವು ಯೋಜನೆಗಳನ್ನು ಘೋಷಿಸಿದ್ದು, ಇದರಲ್ಲಿ ದೇಶದ ಅತಿ ದೊಡ್ಡ ಅಂಚೆ ಸೇವೆಯಾಗಿರುವ ಭಾರತೀಯ ಅಂಚೆಯನ್ನು ಗ್ರಾಮೀಣ ಆರ್ಥಿಕತೆಗೆ ವೇಗವರ್ಧಕವಾಗಿ ಮಾಡಲು 1.5 ಲಕ್ಷ ಗ್ರಾಮಾಂತರ ಅಂಚೆ ಕಚೇರಿ ಸ್ಥಾಪಿಸುವ ಮೂಲಕ ದೊಡ್ಡ ಲಾಜಿಸ್ಟಿಕ್​ ಸೇವಾ ಸಂಸ್ಥೆಯಾಗಿ ರೂಪಿಸಲಾಗುವುದು ಎಂದರು.

  • ಇದೇ ವೇಳೆ ಅಸ್ಸಾಂನಲ್ಲಿ 12.7 ಲಕ್ಷ ಟನ್​ ಸಾಮರ್ಥ್ಯದ ಯೂರಿಯಾ ಘಟಕ ಸ್ಥಾಪಿಸುವ ಕುರಿತು ಘೋಷಿಸಿದರು.
  • ಹಣಕಾಸು ಸಚಿವರು ಹೂಡಿಕೆ ಮತ್ತು ವಹಿವಾಟು ಮಿತಿ ಹೆಚ್ಚಿಸುವುದಾಗಿ ಘೋಷಿಸಿದರು.
  • ಗುಣಮಟ್ಟದ ಉತ್ಪನ್ನಗಳೊಂದಿಗೆ ಎಂಎಸ್​ಎಂಇ ಶೇ 45ರಷ್ಟು ನಮ್ಮ ರಫ್ತಿನ ಜವಾಬ್ದಾರಿ ಹೊಂದಿರುತ್ತದೆ ಎಂದರು.
  • ಎಂಎಸ್​ಎಂಇಗಳಿಗೆ ಸಾಲದ ಸೌಲಭ್ಯ ಸುಧಾರಣೆಗೆ ಕ್ರೆಡಿಟ್​ ಗ್ಯಾರಂಟಿ ಕವರ್​ಗೆ ಉತ್ತೇಜಿಸಲಾಗುವುದು ಎಂದರು.
  • ಗ್ರಾಮೀಣ ಆರ್ಥಿಕತೆಗೆ ಸಾಲ ನೀಡುವ ಕಾರ್ಯಾಚರಣೆಗಳಿಗಾಗಿ ಕೇಂದ್ರವು ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮಕ್ಕೆ ಬೆಂಬಲವನ್ನು ನೀಡುತ್ತದೆ.

ಇದನ್ನೂ ಓದಿ: 5 ಲಕ್ಷ ಮಹಿಳೆಯರು, SC, ST ಉದ್ಯಮಿಗಳಿಗೆ 2 ಕೋಟಿ ರೂಪಾಯಿಗಳ ಸಾಲ: ನಿರ್ಮಲಾ ಸೀತಾರಾಮನ್

ಇದನ್ನೂ ಓದಿ: ಕೇಂದ್ರ ಬಜೆಟ್​ 2025-26: ಕೃಷಿ, ಎಂಎಸ್​ಎಂಇ, ಹೂಡಿಕೆ: ರಫ್ತಿಗೆ ಬಜೆಟ್​ನಲ್ಲಿ ಹೆಚ್ಚಿನ ಒತ್ತು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.