ಕರ್ನಾಟಕ

karnataka

By ETV Bharat Karnataka Team

Published : Jun 18, 2024, 5:45 PM IST

ETV Bharat / entertainment

ಅಪರೂಪದ ಶ್ರವಣ ದೋಷದಿಂದ ಬಳಲುತ್ತಿದ್ದಾರೆ ಖ್ಯಾತ ಗಾಯಕಿ ಅಲ್ಕಾ ಯಾಗ್ನಿಕ್ - Alka Yagnik

ಅಪರೂಪದ ಶ್ರವಣ ದೋಷ (rare sensory hearing loss)ದಿಂದ ಬಳಲುತ್ತಿರುವುದಾಗಿ ಖ್ಯಾತ ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್ ಹೇಳಿಕೊಂಡಿದ್ದಾರೆ.

Alka Yagnik
ಅಲ್ಕಾ ಯಾಗ್ನಿಕ್ (ANI/ETV Bharat)

ಖ್ಯಾತ ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್ ಅಪರೂಪದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸ್ವತಃ ಅಲ್ಕಾ ಅವರೇ ತಮ್ಮ ಅಭಿಮಾನಿಗಳೊಂದಿಗೆ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಅಪರೂಪದ ಶ್ರವಣ ದೋಷ(rare sensory hearing loss)ದಿಂದ ಬಳಲುತ್ತಿರುವ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಕಠಿಣ ಸಂದರ್ಭ ನಿಮ್ಮ ಪ್ರಾರ್ಥನೆ ಇರಲಿ ಎಂದು ಕೂಡ ಅಭಿಮಾನಿ ಬಳಗದಲ್ಲಿ ಕೇಳಿಕೊಂಡಿದ್ದಾರೆ.

ಕಳೆದ ದಿನ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಶೇರ್ ಮಾಡಿದ ಗಾಯಕಿ, ಕೆಲ ವಾರಗಳ ಹಿಂದೆ ಕಿವಿ ಕೇಳದ ಅನುಭವವಾಯ್ತು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಈ ಅನಿರೀಕ್ಷಿತ ಘಟನೆಯನ್ನು ಎದುರಿಸಿದ ಬಗ್ಗೆ ಪೋಸ್ಟ್​​ನಲ್ಲಿ ಬರೆದುಕೊಂಡಿದ್ದಾರೆ.

"ಕೆಲ ವಾರಗಳ ಹಿಂದೆ, ನಾನು ವಿಮಾನದಿಂದ ಹೊರಬರುತ್ತಿದ್ದಂತೆ ಇದ್ದಕ್ಕಿದ್ದಂತೆ ನನಗೇನೂ ಕೇಳಿಸದ ಅನುಭವವಾಯ್ತು. ನಂತರದ ದಿನಗಳಲ್ಲಿ ಧೈರ್ಯದಿಂದ ಈ ಸಮಸ್ಯೆಯನ್ನು ಎದುರಿಸಿದೆ. ಇದೀಗ ನನ್ನ ಎಲ್ಲಾ ಸ್ನೇಹಿತರಿಗಾಗಿ ಮೌನ ಮುರಿಯಲು ಬಯಸಿದ್ದೇನೆ. ರೇರ್ ಸೆನ್ಸರಿ ನ್ಯೂರಲ್ ನರ್ವ್ ಹಿಯರಿಂಗ್ ಲಾಸ್ (rare sensory neural nerve hearing loss) ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದೇನೆ'' ಎಂದು ಬರೆದುಕೊಂಡಿದ್ದಾರೆ. ಅಲ್ಕಾ ತಮ್ಮ ಸಹೋದ್ಯೋಗಿಗಳು ಮತ್ತು ಅಭಿಮಾನಿಗಳಿಗೆ ಜಾಗೃತೆ ವಹಿಸುವಂತೆಯೂ ಕೇಳಿಕೊಂಡಿದ್ದಾರೆ. ಜೋರಾಗಿ ಸಂಗೀತ ಕೇಳುವುದು ಮತ್ತು ಹೆಡ್‌ಫೋನ್‌ಗಳನ್ನು ಹೆಚ್ಚು ಬಳಸದಂತೆ ಗಮನ ಹರಿಸಲು ಸಲಹೆ ನೀಡಿದರು.

ಇದನ್ನೂ ಓದಿ:'ಕೊಲೆ ಪ್ರಕರಣದಲ್ಲಿ ದರ್ಶನ್​ ಭಾಗಿಯಾಗಿದ್ದಾರೆಂಬುದನ್ನು ನಂಬಲು ಕಷ್ಟ': ರಚಿತಾ ರಾಮ್ - Rachita Ram on Darshan case

"ದಯವಿಟ್ಟು ನಿಮ್ಮ ಪ್ರಾರ್ಥನೆಯಲ್ಲಿ ನನ್ನನ್ನು ನೆನಪಿಸಿಕೊಳ್ಳಿ. ನಿಮ್ಮ ಎಲ್ಲಾ ಪ್ರೀತಿ ಮತ್ತು ಬೆಂಬಲದೊಂದಿಗೆ ನನ್ನ ಆರೋಗ್ಯ ಸುಧಾರಿಸಿಕೊಳ್ಳಲು ಆಶಿಸುತ್ತಿದ್ದೇನೆ. ಈ ಕಠಿಣ ಸಂದರ್ಭ ನಿಮ್ಮ ಬೆಂಬಲ ಮತ್ತು ತಿಳುವಳಿಕೆ ಬಹಳ ಮಹತ್ವದ್ದು'' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಪುಷ್ಪ 2 vs ಛಾವಾ: ರಶ್ಮಿಕಾರ ಎರಡೂ ಸಿನಿಮಾಗಳು ಒಂದೇ ದಿನ ತೆರೆಗೆ; ಬಾಕ್ಸ್ ಆಫೀಸ್ ಫೈಟ್​ ಪಕ್ಕಾ - Pushpa 2 Vs Chhava

ಬಾಲಿವುಡ್ ಹಿನ್ನೆಲೆ ಗಾಯನದಲ್ಲಿನ ಅಸಾಧಾರಣ ಕೊಡುಗೆಗಾಗಿ ಹೆಸರುವಾಸಿಯಾದ ಅಲ್ಕಾ ಯಾಗ್ನಿಕ್, 16 ಭಾಷೆಗಳಲ್ಲಿ 2,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ತಮ್ಮ 6ನೇ ವಯಸ್ಸಿನಲ್ಲಿ ಕೊಲ್ಕತ್ತಾದ ಆಕಾಶವಾಣಿ ರೇಡಿಯೋದಲ್ಲಿ ತಮ್ಮ ಸಂಗೀತ ಪ್ರಯಾಣ ಪ್ರಾರಂಭಿಸಿದರು. ಮಾಧುರಿ ದೀಕ್ಷಿತ್ ಮತ್ತು ಅನಿಲ್ ಕಪೂರ್ ಅಭಿನಯದ ತೇಜಾಬ್ (1988) ಚಿತ್ರದ ಏಕ್ ದೋ ತೀನ್‌ ಗೀತೆ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡು, ನಂತರ ಸಾಕಷ್ಟು ಸೂಪರ್​​ ಹಿಟ್​ ಸಾಂಗ್​ಗಳಲ್ಲಿ ಕೆಲಸ ಮಾಡಿದರು. ಅಲ್ಕಾ ಯಾಗ್ನಿಕ್ ಅವರ ಶೀಘ್ರ ಚೇತರಿಕೆಗೆ ಪ್ರಾರ್ಥಿಸುತ್ತೇವೆ. ಶೀಘ್ರದಲ್ಲೇ ಗಾಯನಕ್ಕೆ ಮರಳುವುದನ್ನು ನೋಡಲಿಚ್ಛಿಸುತ್ತೇವೆ ಎಂದು ಅಭಿಮಾನಿಗಳು ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ABOUT THE AUTHOR

...view details