ETV Bharat / entertainment

ಹುತಾತ್ಮ ಯೋಧ ಮುಕುಂದ್ ವರದರಾಜನ್ ಕಥೆ ಹೇಳಲಿದೆ 'ಅಮರನ್​​': ಇಂಧು ಪಾತ್ರದಲ್ಲಿ ಸಾಯಿ ಪಲ್ಲವಿ - Amaran

ಹುತಾತ್ಮ ಯೋಧ ಮುಕುಂದ್ ವರದರಾಜನ್ ಜೀವನಾಧಾರಿತ ಚಿತ್ರ ''ಅಮರನ್‌''. ಸಾಯಿ ಪಲ್ಲವಿ ಮುಕುಂದ್ ವರದರಾಜನ್ ಅವ ಪತ್ನಿ ಇಂಧು ರೆಬೆಕಾ ವರ್ಗೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಯಿ ಪಲ್ಲವಿ ಅವರ ಪಾತ್ರವನ್ನು ಪ್ರದರ್ಶಿಸುವ ವಿಡಿಯೋವನ್ನು ಚಿತ್ರತಂಡ ಇಂದು ಹಂಚಿಕೊಂಡಿದೆ.

Amaran
ಅಮರನ್ ಪೋಸ್ಟರ್ (Photo: Teaser screengrab)
author img

By ETV Bharat Karnataka Team

Published : Sep 27, 2024, 6:53 PM IST

ಹೈದರಾಬಾದ್: ದಕ್ಷಿಣ ಚಿತ್ರರಂಗದ ಚೆಲುವೆ, ಪ್ರತಿಭಾನ್ವಿತ ನಟಿ ಸಾಯಿ ಪಲ್ಲವಿ ಹಾಗೂ ಶಿವಕಾರ್ತಿಕೇಯನ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ ''ಅಮರನ್‌''. ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮದೇ ಸ್ಟಾರ್​ಡಮ್​​ ಹೊಂದಿರುವ ಇವರು ಆಕರ್ಷಕ ಅಭಿನಯ ಪ್ರದರ್ಶಿಸಲು ಸಜ್ಜಾಗಿದ್ದಾರೆ.

ಈ ಜೀವನಚರಿತ್ರೆ ಹುತಾತ್ಮ ಯೋಧ ಮುಕುಂದ್ ವರದರಾಜನ್ ಅವರಿಗೆ ಸಲ್ಲುತ್ತಿರುವ ಗೌರವ. ಸಾಯಿ ಪಲ್ಲವಿ ಮುಕುಂದ್ ವರದರಾಜನ್ ಅವ ಪತ್ನಿ ಇಂಧು ರೆಬೆಕಾ ವರ್ಗೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಜ್‌ಕುಮಾರ್ ಪೆರಿಯಾಸ್ವಾಮಿ ನಿರ್ದೇಶನದ ಈ ಚಿತ್ರವನ್ನು ಕಮಲ್ ಹಾಸನ್ ನಿರ್ಮಾಣ ಮಾಡಿದ್ದು, ಅಮರನ್‌ ಬರುವ ತಿಂಗಳು ಅಕ್ಟೋಬರ್ 31ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

ಇಂದು ಸಿನಿಮಾದ ಹಿಂದಿರುವ ಚಲನಚಿತ್ರ ನಿರ್ಮಾಣ ಸಂಸ್ಥೆ 'ರಾಜ್ ಕಮಲ್ ಫಿಲ್ಮ್ಸ್' ಸಾಯಿ ಪಲ್ಲವಿ ಅವರ ಪಾತ್ರವನ್ನು ಪ್ರದರ್ಶಿಸುವ ವಿಡಿಯೋವನ್ನು ಹಂಚಿಕೊಂಡಿದೆ. ಮೊದಲ ನೋಟದಲ್ಲೇ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಾಯಿ ಪಲ್ಲವಿ ಪಾತ್ರ ಯಶಸ್ವಿಯಾಗಿದೆ. ನಿರ್ಮಾಪಕರು ನಟಿಯ ಪಾತ್ರವನ್ನು 'ಹಾರ್ಟ್ ಆಫ್ ಅಮರನ್​​' ಎಂದು ಉಲ್ಲೇಖಿಸಿದ್ದಾರೆ. ಇದು ಕಥೆಯ ಭಾವನಾತ್ಮಕ ತಿರುಳನ್ನು ಎತ್ತಿ ಹಿಡಿದಿದೆ.

ಮೇಜರ್ ಮುಕುಂದ್ ವರದರಾಜನ್ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಸಂದರ್ಭ ತಮ್ಮ ಧೈರ್ಯದಿಂದ ಗುರುತಿಸಲ್ಪಟ್ಟರು, ಗೌರವಿಸಲ್ಪಟ್ಟರು. ಕರ್ತವ್ಯದ ಸಂದರ್ಭ ಕೊನೆಯುಸಿರೆಳೆದರು. ಅವರ ಧೈರ್ಯಕ್ಕೆ ಅಶೋಕ ಚಕ್ರ ಕೂಡಾ ಸಂದಿತ್ತು. ಅವರ ಪತ್ನಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ 2015ರ ಜನವರಿ 26ರಂದು ಸ್ವೀಕರಿಸಿದರು.

ಇದನ್ನೂ ಓದಿ: 'ಕೊರಗಜ್ಜ'ನ ಅದ್ಭುತ ಕಥೆ ಹೇಳುತ್ತಿದ್ದೇನೆ, ದೈವಾರಾಧನೆ ಅಣಕಿಸುವ ಉದ್ದೇಶವಿಲ್ಲ: ನಿರ್ದೇಶಕ ಸುಧೀರ್ ಅತ್ತಾವರ್ - Koragajja Film

''ಅಮರನ್'' ತಮಿಳು ಚಲನಚಿತ್ರೋದ್ಯಮದೊಳಗಿನ ವಾರ್​ ಹೀರೋನ ವಿಶಿಷ್ಟ ಸಿನಿಮೀಯ ಚಿತ್ರಣ ಎಂದೇ ಹೇಳಬಹುದು. ಇದು ಶಿವಕಾರ್ತಿಕೇಯನ್ ನಟನೆಯ 21ನೇ ಚಿತ್ರ. ಅವರು ದಿವಂಗತ ಮೇಜರ್ ಮುಕುಂದ್​ ವರದರಾಜನ್ ಅವರ ಪಾತ್ರ ನಿರ್ವಹಿಸಿದ್ದಾರೆ. ಇದು ನಟನ ಖ್ಯಾತಿ ಹೆಚ್ಚಿಸುವ ನಿರಿಕ್ಷೆಯಿದೆ. ಶಿವಕಾರ್ತಿಕೇಯನ್, ಸಾಯಿ ಪಲ್ಲವಿ ಜೊತೆಗೆ ಭುವನ್ ಅರೋರಾ, ರಾಹುಲ್ ಬೋಸ್, ಗೌರವ್ ವೆಂಕಟೇಶ್ ಮತ್ತು ಶ್ರೀಕುಮಾರ್ ಕೂಡಾ ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ: 'ದೇವರ' ಮೊದಲ ದಿನವೇ 125 ಕೋಟಿಗೂ ಹೆಚ್ಚು ಗಳಿಕೆ ನಿರೀಕ್ಷೆ: ಸಿನಿಮಾ ವೀಕ್ಷಿಸಲು ಜಪಾನ್​ನಿಂದ ಅಮೆರಿಕಕ್ಕೆ ಹಾರಿದ ಫ್ಯಾನ್ - Japan Fan Travels To LA

ಸಾಯಿ ಪಲ್ಲವಿ ಹಾಗೂ ಶಿವಕಾರ್ತಿಕೇಯನ್ ದಕ್ಷಿಣ ಚಿತ್ರರಂಗದಲ್ಲಿ ಹೆಸರು ಮಾಡಿರುವ ಹಿನ್ನೆಲೆ, ಅವರ ಮುಂದಿನ ಚಿತ್ರಗಳ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಅಮರನ್‌ ಕೂಡಾ ಬಹುನಿರೀಕ್ಷೆಗಳೊಂದಿಗೆ ಅತಿ ಶೀಘ್ರದಲ್ಲಿ ಚಿತ್ರಮಂದಿರ ಪ್ರವೇಶಿಸಲಿದೆ. ಸಿನಿಮಾ ಎಷ್ಟರ ಮಟ್ಟಿಗೆ ಗೆಲುವು ಕಾಣಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.