ETV Bharat / entertainment

'ದೇವರ' ಮೊದಲ ದಿನವೇ 125 ಕೋಟಿಗೂ ಹೆಚ್ಚು ಗಳಿಕೆ ನಿರೀಕ್ಷೆ: ಸಿನಿಮಾ ವೀಕ್ಷಿಸಲು ಜಪಾನ್​ನಿಂದ ಅಮೆರಿಕಕ್ಕೆ ಹಾರಿದ ಫ್ಯಾನ್ - Japan Fan Travels To LA - JAPAN FAN TRAVELS TO LA

ಜನಪ್ರಿಯ ನಟ ಜೂನಿಯರ್ ಎನ್‌ಟಿಆರ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ದೇವರ: ಭಾಗ 1' ಇಂದು ಜಾಗತಿಕ ಮಟ್ಟದಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಸಿನಿಮಾಗೆ ಬಹುತೇಕ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ.

Jr NTR's Devara
ಜೂನಿಯರ್​ ಎನ್​ಟಿಅರ್​ 'ದೇವರ' ಪೋಸ್ಟರ್ (Photo: IANS, Film Poster)
author img

By ETV Bharat Karnataka Team

Published : Sep 27, 2024, 5:01 PM IST

ಹೈದರಾಬಾದ್: ಟಾಲಿವುಡ್​​ ಸೂಪರ್‌ ಸ್ಟಾರ್ ಜೂನಿಯರ್ ಎನ್‌ಟಿಆರ್ ಹಾಗೂ ಕೊರಟಾಲ ಶಿವ ಕಾಂಬಿನೇಶನ್​ನ ಆ್ಯಕ್ಷನ್ ಡ್ರಾಮಾ 'ದೇವರ: ಭಾಗ 1' ಇಂದು ಜಾಗತಿಕ ಮಟ್ಟದಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಿದೆ. 2022ರ ಮಾರ್ಚ್​​ನಲ್ಲಿ ಬಿಡುಗಡೆ ಆದ ಬ್ಲಾಕ್‌ಬಸ್ಟರ್ ಆರ್​ಆರ್​ಆರ್​ ನಂತರ ತೆರೆಕಂಡ ಜೂನಿಯರ್ ಎನ್​ಟಿಆರ್​​ ಮುಖ್ಯಭೂಮಿಕೆಯ ಮೊದಲ ಚಿತ್ರವಿದು. ಹಾಗಾಗಿ ಬಾಕ್ಸ್​ ಆಫೀಸ್​ ಕಲೆಕ್ಷನ್​ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದೆ.

ದೇವರ ಬಾಕ್ಸ್ ಆಫೀಸ್​​ ಕಲೆಕ್ಷನ್​​ (ಸಾಧ್ಯತೆ): ದೇವರ: ಭಾಗ 1 ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹಳ ಅದ್ಧೂರಿಯಾಗಿ ಬಿಡುಗಡೆ ಆಗಿದೆ. ಸಿನಿಪಂಡಿತರ ಅಂದಾಜಿನ ಪ್ರಕಾರ, ಅಡ್ವಾನ್ಸ್ ಟಿಕೆಟ್​​ ಬುಕಿಂಗ್‌ನಲ್ಲಿ ಪ್ರೇಕ್ಷಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆನ್​​ಲೈನ್, ಆಫ್​ಲೈನ್​ ಟಿಕೆಟ್​ ಮಾರಾಟ ವ್ಯವಹಾರದಲ್ಲಿ 'ದೇವರ' ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನವೇ ಸರಿ ಸುಮಾರು 125 ಕೋಟಿ ರೂಪಾಯಿ ಗಳಿಸುವ ನಿರೀಕ್ಷೆಯಿದೆ.

ಆನ್​​ಲೈನ್​ ವ್ಯವಹಾರ: ದೇವರ ಅಡ್ವಾನ್ಸ್ ಟಿಕೆಟ್​​ ಬುಕಿಂಗ್‌ ವ್ಯವಹಾರ ಅತ್ಯುತ್ತಮವಾಗಿ ನಡೆದಿದೆ. ಭಾರತದಲ್ಲಿ (ಬ್ಲಾಕ್ ಸೀಟ್‌ಗಳನ್ನು ಒಳಗೊಂಡಂತೆ) 40 ಕೋಟಿ ರೂಪಾಯಿಗೂ ಅಧಿಕ ವ್ಯವಹಾರ ನಡೆದಿದೆ. ಜಾಗತಿಕವಾಗಿ 75 ಕೋಟಿ ರೂಪಾಯಿಗಳನ್ನು ಮೀರಿದೆ ಎಂದು ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಹೇಳಿದೆ.

ಅಮೆರಿಕಕ್ಕೆ ಹಾರಿದ ಜಪಾನ್​ ಫ್ಯಾನ್​: ಇನ್ನೂ ಜಪಾನ್‌ ಮೂಲದ ಅಭಿಮಾನಿಯೊಬ್ಬರು ದೇವರ ವೀಕ್ಷಿಸುವ ಸಲುವಾಗಿ ಲಾಸ್ ಏಂಜಲೀಸ್‌ಗೆ ಪ್ರಯಾಣ ಕೈಗೊಂಡಿದ್ದಾರೆ. ಜೂನಿಯರ್ ಎನ್‌ಟಿಆರ್ ನಟನೆಯ ಸಿನಿಮಾ ಇಂದು ಬಹು ಭಾಷೆಗಳಲ್ಲಿ ತೆರೆಗಪ್ಪಳಿಸಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆ ನಾಯಕ ನಟ ಅಭಿಮಾನಿಗಳು ಮತ್ತು ದೇವರ ತಂಡಕ್ಕೆ ತಮ್ಮ ಕೃತಜ್ಞತೆ ಅರ್ಪಿಸಿದ್ದಾರೆ.

ಚಿತ್ರತಂಡ ಜೂನಿಯರ್ ಎನ್​ಟಿಆರ್​​ ಮತ್ತು ಅಭಿಮಾನಿಗಳನ್ನೊಳಗೊಂಡ ಒಂದು ಸುಂದರ ವಿಡಿಯೋ ಹಂಚಿಕೊಂಡಿದೆ. ಹೃದಯಸ್ಪರ್ಶಿ ಕ್ಷಣವನ್ನು ಈ ವಿಡಿಯೋ ಸೆರೆಹಿಡಿದಿದೆ. ವಿಶ್ವಾದ್ಯಂತ ಜನರನ್ನು ಸಂಪರ್ಕಿಸುವ ಶಕ್ತಿಯನ್ನು ಸಿನಿಮಾ ಹೊಂದಿದೆ ಎಂಬುದನ್ನು ಈ ವಿಡಿಯೋ ತಿಳಿಸಿದೆ.

ಇದನ್ನೂ ಓದಿ: 'ಕೊರಗಜ್ಜ'ನ ಅದ್ಭುತ ಕಥೆ ಹೇಳುತ್ತಿದ್ದೇನೆ, ದೈವಾರಾಧನೆ ಅಣಕಿಸುವ ಉದ್ದೇಶವಿಲ್ಲ: ನಿರ್ದೇಶಕ ಸುಧೀರ್ ಅತ್ತಾವರ್ - Koragajja Film

ದೇವರ ಸಿನಿಮಾ ನಿರ್ಮಿಸಿರುವ ಯುವಸುಧಾ ಆರ್ಟ್ಸ್, ಇನ್​​​ಸ್ಟಾಗ್ರಾಮ್​ನಲ್ಲಿ ವಿಡಿಯೋ ಹಂಚಿಕೊಂಡಿದೆ. "ಎ ಪ್ರೈಸ್​ಲೆಸ್​​​ ರಿಯಾಕ್ಷನ್​​​​ ಫಾರ್ ಅ ಪ್ರೈಸ್​ಲೆಸ್​​ ಮೂಮೆಂಟ್. ಅಭಿಮಾನಿಯೊಬ್ಬರು ಜೂನಿಯರ್​ ಎನ್​ಟಿಆರ್​ ಅವರೊಂದಿಗೆ ದೇವರ ಸಿನಿಮಾ ವೀಕ್ಷಿಸಲು ಟೋಕಿಯೋದಿಂದ ಲಾಸ್ ಏಂಜಲೀಸ್‌ಗೆ ಪ್ರಯಾಣಿಸಿದರು'' ಎಂದು ಬರೆದುಕೊಂಡಿದೆ.

ಇದನ್ನೂ ಓದಿ: ಫಸ್ಟ್ ಡೇ, ಫಸ್ಟ್ ಶೋ: ಜೂ.ಎನ್​​​ಟಿಆರ್ ನಟನೆಯ 'ದೇವರ' ವೀಕ್ಷಿಸಿದ ರಾಜಮೌಳಿ - Rajamouli Watches Devara

ವಿಶ್ವಾದ್ಯಂತ ಅದರಲ್ಲೂ ವಿಶೇಷವಾಗಿ ತೆಲುಗು ರಾಜ್ಯಗಳಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಜೂನಿಯರ್​ ಎನ್​​​ಟಿಆರ್​ ಸೋಷಿಯಲ್​ ಮೀಡಿಯಾ ಮೂಲಕ ತಮ್ಮ ಅಭಿಮಾನಿಗಳಿಗೆ ಕೃತಜ್ಞತೆ ಅರ್ಪಿಸಿದ್ದಾರೆ. "ನನ್ನ ಅಭಿಮಾನಿಗಳೇ, ದೇವರ ಸಿನಿಮಾದ ನಿಮ್ಮ ಸೆಲೆಬ್ರೇಶನ್​​ ನೋಡುವುದು ಬಹಳ ಖುಷಿ ಕೊಟ್ಟಿದೆ. ನಿಮ್ಮ ಪ್ರೀತಿಗೆ ಎಂದೆಂದಿಗೂ ಋಣಿಯಾಗಿರುವೆ. ಸಿನಿಮಾವನ್ನು ನಾನು ಎಂಜಾಯ್​ ಮಾಡಿದಂತೆ ನೀವೂ ಆನಂದಿಸುತ್ತಿರುವುದನ್ನು ನೋಡಲು ಸಂತೋಷವಾಗಿದೆ. ನಿಮ್ಮೆಲ್ಲರನ್ನು ಮನರಂಜಿಸುವುದನ್ನು ಮುಂದುವರಿಸುತ್ತೇನೆಂದು ನಾನು ಭರವಸೆ ನೀಡುತ್ತೇನೆ'' ಎಂದು ಬರೆದುಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.