ETV Bharat / entertainment

10 ವರ್ಷ, 4,000 ಸ್ಕ್ರಿಪ್ಟ್​​ಗಳೊಂದಿಗೆ ಸ್ಪರ್ಧೆ: ಆಸ್ಕರ್​ ಪ್ರವೇಶಿಸಿದ 'ಲಾಪತಾ ಲೇಡೀಸ್'​ ಕಥೆಗಾರನ ಕಥೆಯಿದು; ಬಿಪ್ಲಬ್ ಗೋಸ್ವಾಮಿ ವಿಶೇಷ ಸಂದರ್ಶನ - Biplab Goswami Exclusive Interview - BIPLAB GOSWAMI EXCLUSIVE INTERVIEW

ಬಿಪ್ಲಬ್ ಗೋಸ್ವಾಮಿ ಸಿನಿಮಾ ಕಥೆ ಒಂದನ್ನು ಬರೆದಿದ್ದರು. 2018ರಲ್ಲಿ ನಡೆದ ಪ್ರಮುಖ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. ಇವರ ಕಥೆ ದ್ವಿತೀಯ ಸ್ಥಾನ ಪಡೆದು ಬಹುತೇಕರ ಮನ ಮುಟ್ಟುವಲ್ಲಿ ಯಶಸ್ವಿಯಾಯಿತು. ಸದ್ಯ 'ಲಾಪತಾ ಲೇಡೀಸ್'​ ಸಿನಿಮಾವಾಗಿ ಮೂಡಿಬಂದಿದ್ದು, ಪ್ರತಿಷ್ಠಿತ ಆಸ್ಕರ್ ವೇದಿಕೆ ತಲುಪಿದೆ.

Interview With Laapataa Ladies Writer Biplab Goswami
ಬಿಪ್ಲಬ್ ಗೋಸ್ವಾಮಿ ವಿಶೇಷ ಸಂದರ್ಶನ (Photo: Film poster/ETV Bharat)
author img

By ETV Bharat Karnataka Team

Published : Sep 27, 2024, 7:53 PM IST

ಹೈದರಾಬಾದ್: ವಿಶ್ವ ಪ್ರತಿಷ್ಠಿತ 97ನೇ ಅಕಾಡೆಮಿ ಪ್ರಶಸ್ತಿಗಳಿಗೆ ಭಾರತದಿಂದ ''ಲಾಪತಾ ಲೇಡೀಸ್'' ಅಧಿಕೃತ ಪ್ರವೇಶ ಪಡೆದುಕೊಂಡಿದೆ. ಕಿರಣ್ ರಾವ್ ನಿರ್ದೇಶನದ ಈ ಚಿತ್ರಕ್ಕೆ ಚಿತ್ರಕಥೆಗಾರ ಬಿಪ್ಲಬ್ ಗೋಸ್ವಾಮಿ ಅವರು ತಾವು ರಚಿಸಿರುವ ಕಥೆ ಒದಗಿಸಿದ್ದಾರೆ. ಕಡಿಮೆ ಬಜೆಟ್​​ನ ಬಾಲಿವುಡ್ ಚಿತ್ರ ಒಂದೇ ರೈಲಿನಲ್ಲಿ ಆಕಸ್ಮಿಕವಾಗಿ ಭೇಟಿಯಾಗುವ ಇಬ್ಬರು ಯುವ ವಧುಗಳ ದುಸ್ಸಾಹಸವನ್ನು ಚಿತ್ರಿಸಿದೆ.

ತ್ರಿಪುರಾದ ಅಗರ್ತಲಾ ಮೂಲದ ಬಿಪ್ಲಬ್ ಗೋಸ್ವಾಮಿ ಅವರು ಸಿನಿಮಾ ಜಗತ್ತಿನಲ್ಲಿ ತಮ್ಮದೇ ಆದ ನವ ಖ್ಯಾತಿಯನ್ನು ಸಂಪಾದಿಸುತ್ತಿದ್ದಾರೆ. ತಮ್ಮ ಕಥೆ ಹೇಳುವ ಶೈಲಿಯಿಂದ ಜಾಗತಿಕವಾಗಿ ಪ್ರೇಕ್ಷಕರನ್ನು ಆಕರ್ಷಿಸುತ್ತಿದ್ದಾರೆ.

ತ್ರಿಪುರಾದಿಂದ ಬಾಲಿವುಡ್‌ನ ರೋಮಾಂಚಕ ಕ್ಷೇತ್ರಕ್ಕೆ ಗೋಸ್ವಾಮಿಯವರ ಪ್ರಯಾಣ ಒಂದು ಫೇರಿಟೇಲ್​ ಅಂತಲೇ ಹೇಳಬಹುದು. ಪೂರ್ವ-ತಂತ್ರಜ್ಞಾನದ ಯುಗದಲ್ಲಿ ಹೊಂದಿಸಲಾದ 'ಲಾಪತಾ ಲೇಡೀಸ್' ಬಿಪ್ಲಬ್ ಗೋಸ್ವಾಮಿ ಅವರ 'ಟು ಬ್ರೈಡ್ಸ್' ಕಥೆಯ ರೂಪಾಂತರವಾಗಿದೆ. ಇಬ್ಬರು ವಧು ಮತ್ತು ವರನ ಜೀವನದ ಸುತ್ತ ಸುತ್ತುವ ಕಥೆಯಿದು. ವರನು ಬೈ ಮಿಸ್ಟೇಕ್​ ಬೇರೆ ವಧುವನ್ನು ಮನೆಗೆ ಕರೆತರುತ್ತಾನೆ, ಅದು ಅವರ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಸಿನಿಮಾದಲ್ಲಿ ಹೇಳಲಾಗಿದೆ. ಚಿಕ್ಕ ಸಿನಿಮಾ ದೊಡ್ಡ ಉದ್ದೇಶವನ್ನು ಹೊಂದಿದೆ. ಗೊಂದಲ, ಕಳಂಕಗಳು ಮತ್ತು ಸಾಮಾಜಿಕ ವ್ಯವಸ್ಥೆಯಂತಹ ಅಂಶಗಳನ್ನು ಈ ಸಿನಿಮಾ ಒಳಗೊಂಡಿದೆ.

ಬಿಪ್ಲಬ್ ಗೋಸ್ವಾಮಿ ಸಿನಿಮಾ ಕಥೆ ಒಂದನ್ನು ಬರೆದಿದ್ದರು. 2018ರ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. ಇವರ ಕಥೆ ದ್ವಿತೀಯ ಬಹುಮಾನ ಗೆದ್ದುಕೊಂಡಿತು. ಕಾಂಪಿಟೇಶನ್​ನ ಜ್ಯೂರಿಯಾಗಿ ಅಮೀರ್​ ಖಾನ್​ ಭಾಗವಹಿಸಿದ್ದರು. ಬಹುತೇಕರಿಗೆ ಹಿಡಿಸಿದ ಇವರ ಕಥೆ ಅಮೀರ್​ ಅವರ ಮನಮುಟ್ಟುವಲ್ಲಿ ಯಶ ಕಂಡಿತು. ನಂತರ, ಸಿನಿಮಾ ಕೆಲಸಗಳು ಶುರುವಾದವು.

ಈಟಿವಿ ಭಾರತ್ ಖಾಸಗಿ ಸಂಭಾಷಣೆ ಮೂಲಕ ಬಿಪ್ಲಬ್ ಗೋಸ್ವಾಮಿ ಅವರನ್ನು ಸಂಪರ್ಕಿಸಿದೆ.

ಈಟಿವಿ ಭಾರತ್: ಲಾಪತಾ ಲೇಡೀಸ್ ಆಸ್ಕರ್‌ಗೆ ಎಂಟ್ರಿ ಕೊಟ್ಟ ವಿಷಯ ನಿಮಗೆ ತಿಳಿದ ನಂತರ ಏನನಿಸಿತು?

ಬಿಪ್ಲಬ್ ಗೋಸ್ವಾಮಿ: ಆಸ್ಕರ್ ಪ್ರವೇಶದ ಬಗ್ಗೆ ಕೇಳಿದ ನಂತರ ನನಗೆ ತುಂಬಾನೇ ಖುಷಿಯಾಯಿತು. ಈ ಚಿತ್ರ ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ ಎಂಬ ವಿಶ್ವಾಸ ನನಗಿತ್ತು. ಅದಕ್ಕೆ ಪ್ರಮುಖ ಕಾರಣ ಎಂದರೆ ಕಥಾವಸ್ತು, ಕಥೆ ಹೇಳಿದ ಶೈಲಿ. ಚಿತ್ರದ ಆಸಕ್ತಿದಾಯಕ ವಿಷಯವು ಪ್ರೇಕ್ಷಕರನ್ನು ಸಂಪರ್ಕಿಸಲಿದೆ ಎಂಬುದು ನನಗೆ ಖಚಿತವಾಗಿತ್ತು. ಇದೀಗ ಬಹಳ ಸಂತೋಷವಾಗಿದೆ ಎಂದು ತಿಳಿಸಿದರು.

  • ಈಟಿವಿ ಭಾರತ್: ನೀವು ಲಾಪತಾ ಲೇಡೀಸ್‌ ಕಥೆಯನ್ನು ಯಾವಾಗ ಬರೆಯಲು ಪ್ರಾರಂಭಿಸಿದ್ರಿ?

ಬಿಪ್ಲಬ್ ಗೋಸ್ವಾಮಿ: ನಾನು ಸುಮಾರು 10 ವರ್ಷಗಳ ಹಿಂದೆ ಸಿನಾಪ್ಸಿಸ್ ಬರೆದೆ. ಚಿತ್ರಕಥೆ ಬರೆದ ನಂತರ, ನಾನು ಅದನ್ನು ಉತ್ತಮಗೊಳಿಸಲು ಒಂದಿಷ್ಟು ಸಮಯ ತೆಗೆದುಕೊಂಡೆ. ನಾನು ಹಲವು ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ. ಗ್ರಾಮೀಣ ಜೀವನದ ಪ್ರತೀ ಘಟನೆಗಳನ್ನು ಗಮನಿಸಿದ್ದೇನೆ. ಗ್ರಾಮೀಣ ಜನರ ಉಡುಗೆ, ಮಾತು ಮತ್ತು ಅವರು ಭಾವನೆಗಳನ್ನು ವ್ಯಕ್ತಪಡಿಸುವ ರೀತಿ ಹೀಗೆ ಎಲ್ಲದರ ಬಗ್ಗೆ ಸಂಶೋಧನೆ ಮಾಡಿದ್ದೇನೆ ಎಂದು ತಿಳಿಸಿದರು.

  • ಈಟಿವಿ ಭಾರತ್: ಕಿರಣ್ ರಾವ್ ಮತ್ತು ಅಮೀರ್ ಖಾನ್ ಅವರಿಗೆ ಲಾಪತಾ ಲೇಡೀಸ್ ಕಥೆ ಸಿಕ್ಕಿದ್ದೇಗೆ?

ಬಿಪ್ಲಬ್ ಗೋಸ್ವಾಮಿ: ಸುಮಾರು 5-6 ವರ್ಷಗಳ ಹಿಂದೆ ಸ್ಪರ್ಧೆಯೊಂದರಲ್ಲಿ ಭಾಗವಹಿಸಿದ್ದೆ. ಗ್ಲೋಬಲ್​​ ಸರ್ಚ್ ಫಾರ್​ ಇಂಡಿಯನ್​​ ಸ್ಕ್ರಿಪ್ಟ್​ರೈಟರ್​​ ಕಾಂಪಿಟೇಶನ್​​ 2018ರ ಕೊನೆಯಲ್ಲಿ ನಡೆದಿತ್ತು. ಈ ಕಥೆಯ 25 ದೃಶ್ಯಗಳನ್ನು ಸಿದ್ಧಪಡಿಸಿದ್ದೆ. ಸುಮಾರು 4,000 ಸ್ಕ್ರಿಪ್ಟ್‌ಗಳಲ್ಲಿ ನನ್ನ ಸ್ಕ್ರಿಪ್ಟ್ ಎರಡನೇ ಸ್ಥಾನ ಪಡೆದುಕೊಂಡಿತು. ಜ್ಯೂರಿ ಸದಸ್ಯರಾಗಿದ್ದ ಅಮೀರ್ ಖಾನ್, ಜೂಹಿ ಚತುರ್ವೇದಿ, ಅಂಜುಮ್ ರಾಜಬಾಲಿ ಮತ್ತು ರಾಜಕುಮಾರ್ ಹಿರಾನಿ ಅವರು ಈ ನನ್ನ ಚಿತ್ರಕಥೆಯನ್ನು ಇಷ್ಟಪಟ್ಟರು.

  • ಈಟಿವಿ ಭಾರತ್: ಆಮೇಲೆ ಆದ ಬೆಳವಣಿಗೆಗಳೇನು?

ಬಿಪ್ಲಬ್ ಗೋಸ್ವಾಮಿ: ನಂತರ ನಟ - ನಿರ್ಮಾಪಕ ಅಮೀರ್ ಖಾನ್ ಅವರು ನನ್ನನ್ನು ಅವರ ಮನೆಗೆ ಕರೆಸಿ, ಕಿರಣ್ ರಾವ್ ಅವರೊಂದಿಗೆ ಸ್ಕ್ರಿಪ್ಟ್ ಅನ್ನು ಬಹಳ ಸೂಕ್ಷ್ಮವಾಗಿ ಆಲಿಸಿದರು. ಅಮೀರ್ ಚಿತ್ರವನ್ನು ನಿರ್ಮಿಸಲು ಬಯಸಿದ್ದರು. ಆದರೆ, ಕಿರಣ್ ರಾವ್​ ಅದನ್ನು ನಿರ್ದೇಶಿಸಲು ಆದ್ಯತೆ ನೀಡಿದರು. ಅಮೀರ್ ಅವರ ಸಿನಿಮಾಗಳ ಅಭಿಮಾನಿಯಾಗಿರುವ ನನಗೆ ಅವರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಬಹಳ ಖುಷಿಯಾಯಿತು.

  • ಈಟಿವಿ ಭಾರತ್: ಇಬ್ಬರು ಮಹಿಳೆಯರ ಮೂಲಕ ಭಾರತದ ಹುಡುಗಿಯರು, ಮಹಿಳೆಯರ ಸ್ಥಿತಿಯನ್ನು ಚಿತ್ರಿಸುವ ಬಗ್ಗೆ ನೀವು ಮೊದಲೇ ಯೋಚಿಸಿದ್ದೀರಾ?

ಬಿಪ್ಲಬ್ ಗೋಸ್ವಾಮಿ: ಹೌದು. ನಾನು ಸತ್ಯಜಿತ್ ರೇ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್‌ನಲ್ಲಿ (ಎಸ್‌ಆರ್‌ಎಫ್‌ಟಿಐ) ಅಧ್ಯಯನ ಮಾಡಲು ಪ್ರಾರಂಭಿಸುವ ಮೊದಲೇ ಈ ಬಗ್ಗೆ ಯೋಚಿಸಿದ್ದೆ. ಪುರುಷ ಮತ್ತು ಮಹಿಳೆಯ ನಡುವಿನ ತಾರತಮ್ಯ ಸಮಾಜದಲ್ಲಿದೆ. ಬರಹಗಾರರು ಮತ್ತು ಚಲನಚಿತ್ರ ನಿರ್ಮಾಪಕರು ಈ ಬಗ್ಗೆ ಮಾತನಾಡಬೇಕು. ಅದರಂತೆ, ಲಾಪತಾ ಲೇಡೀಸ್ ಕಥೆ ಮೂಲಕ ವಿವಿಧ ಸ್ಥಳಗಳಲ್ಲಿನ ಪಿತೃಪ್ರಭುತ್ವದ ಛಾಯೆಗಳನ್ನು ಮತ್ತು ಲಿಂಗ ಅಸಮಾನತೆಯ ವಿವಿಧ ಅಂಶಗಳನ್ನು ಚಿತ್ರಿಸಲು ಪ್ರಯತ್ನಿಸಿದೆ ಎಂದು ಹೇಳಿದರು.

  • ಈಟಿವಿ ಭಾರತ್: ದೇವಿ ಮತ್ತು ಮಹಾನಗರದಂತಹ ಚಿತ್ರಗಳಲ್ಲಿ ಸತ್ಯಜಿತ್ ರೇ ಅವರು ಮಹಿಳೆಯರ ಕುರಿತು ಆಳವಾಗಿ ಚಿತ್ರಿಸಿದ್ದಾರೆ. ಅದರಂತೆ, ಎಸ್‌ಆರ್‌ಎಫ್‌ಟಿಐನಲ್ಲಿ ನೀವು ಕಳೆದ ಕ್ಷಣಗಳು ಮಹಿಳಾ ಕಥೆಗಳ ಬಗ್ಗೆ ನಿಮ್ಮ ಆಸಕ್ತಿ, ಸಂವೇದನೆಯನ್ನು ಹೆಚ್ಚಿಸಿತೇ?

ಬಿಪ್ಲಬ್ ಗೋಸ್ವಾಮಿ: ನಾನು ಅವರ ಚಲನಚಿತ್ರಗಳಿಂದ ಪ್ರಭಾವಿತನಾಗಿದ್ದೇನೆ, ಸ್ಫೂರ್ತಿ ಪಡೆದಿದ್ದೇನೆ. ಬಾಲ್ಯದಿಂದಲೂ ನಾನು ಕಲೆ ಮತ್ತು ಸಂಸ್ಕೃತಿಯ ಪ್ರೇಮಿ. ನಾನು ವಿವಿಧ ರೀತಿಯ ಸಿನಿಮಾಗಳನ್ನು ನೋಡಲು ಇಷ್ಟಪಟ್ಟೆ. ಎಸ್‌ಆರ್‌ಎಫ್‌ಟಿಐನಲ್ಲಿನ ಕಲಿಕೆ ನನ್ನ ಆಲೋಚನೆಗಳಿಗೆ ರೂಪ ನೀಡಲು ಸಹಾಯವಾಯಿತು ಎಂದರು.

  • ಈಟಿವಿ ಭಾರತ್: ನಿಮ್ಮ ಕಥೆ, ಪಾತ್ರಗಳಲ್ಲಿ ಲಾಪತಾ ಲೇಡಿಸ್​​ ತಯಾರಕರು ಯಾವುದೇ ಕಲಾತ್ಮಕ ಬದಲಾವಣೆ ಮಾಡಿದ್ದಾರೆಯೇ?

ಬಿಪ್ಲಬ್ ಗೋಸ್ವಾಮಿ: ಹೌದು. ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ಸ್ನೇಹಾ ದೇಸಾಯಿ ಮತ್ತು ದಿವ್ಯನಿಧಿ ಶರ್ಮಾ ಚಿತ್ರಕಥೆ ಮತ್ತು ಸಂಭಾಷಣೆಯಲ್ಲಿ ಕೆಲಸ ಮಾಡಿದ್ದಾರೆ. ಎಲ್ಲರೂ ಅತ್ಯುತ್ತಮ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

  • ಈಟಿವಿ ಭಾರತ್: ಚಿತ್ರದಲ್ಲಿ ನಿಮಗೆ ಹೆಚ್ಚು ಇಷ್ಟವಾದ ಪಾತ್ರಗಳು ಯಾವುವು?

ಬಿಪ್ಲಬ್ ಗೋಸ್ವಾಮಿ: ಪೊಲೀಸ್ ಇನ್ಸ್‌ಪೆಕ್ಟರ್ ಶ್ಯಾಮ್ ಮನೋಹರ್ ( ನಟ ರವಿ ಕಿಶನ್) ಪಾತ್ರವು ನನಗೆ ಹೆಚ್ಚು ಇಷ್ಟವಾದ ಪಾತ್ರಗಳಲ್ಲಿ ಒಂದಾಗಿದೆ. ದಿವ್ಯನಿಧಿ ಶರ್ಮಾ ಸುಂದರ ಡೈಲಾಗ್ಸ್​​ ಸೇರಿಸಿದ್ದಾರೆ. ಪರಿಣಾಮವಾಗಿ, ಪಾತ್ರ ಹೆಚ್ಚು ಸೂಕ್ಷ್ಮವಾಗಿ, ಆಕರ್ಷಕವಾಗಿ ಮೂಡಿಬಂದಿದೆ. ಮಂಜು ಮಾಯ್ (ಛಾಯಾ ಕದಂ) ನನಗೆ ಇಷ್ಟವಾದ ಮತ್ತೊಂದು ಪಾತ್ರ. ಆ ಪಾತ್ರದಲ್ಲೂ ಕೆಲ ಬದಲಾವಣೆ ಮಾಡಲಾಗಿದೆ. ಕೆಲವನ್ನು ಅಮೀರ್ ಖಾನ್​​ ಸೂಚಿಸಿದ್ದರು, ಕೆಲವನ್ನು ಕಿರಣ್ ರಾವ್​ ಮತ್ತು ದಿವ್ಯನಿಧಿ ಬದಲಾವಣೆ ಮಾಡಿದ್ದಾರೆ. ಬಹಳ ಅತ್ಯುತ್ತಮವಾಗಿ ಚಿತ್ರ ಮೂಡಿ ಬಂದಿದೆ ಎಂದು ಹರ್ಷ ಹಂಚಿಕೊಂಡರು.

ಇದನ್ನೂ ಓದಿ: 'ಕೊರಗಜ್ಜ'ನ ಅದ್ಭುತ ಕಥೆ ಹೇಳುತ್ತಿದ್ದೇನೆ, ದೈವಾರಾಧನೆ ಅಣಕಿಸುವ ಉದ್ದೇಶವಿಲ್ಲ: ನಿರ್ದೇಶಕ ಸುಧೀರ್ ಅತ್ತಾವರ್ - Koragajja Film

ವಿಶ್ವ ಪ್ರತಿಷ್ಠಿತ ಆಸ್ಕರ್​​ ವೇದಿಕೆಯಲ್ಲಿ ನಮ್ಮ ಭಾರತವನ್ನು ಲಾಪತಾ ಲೇಡೀಸ್​​ ಪ್ರತಿನಿಧಿಸಲಿದೆ. ಸಿನಿಮಾ ಗೆದ್ದು ಬರಲಿ ಅನ್ನೋದು ಪ್ರತೀ ಭಾರತೀಯರ ಹಾರೈಕೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.